Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

Team Udayavani, Jun 15, 2024, 8:16 AM IST

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

ಧಾರವಾಡ : ಗೋವು ರಕ್ಷಣೆಗಾಗಿ ತೆರಳಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರ ಮೇಲೆ ೩೦ ಕ್ಕು ಹೆಚ್ಚು ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿದ ಘಟನೆ ಶುಕ್ರವಾರ ಸಂಜೆ ಧಾರವಾಡದ ಎಪಿಎಂಸಿ ಬಳಿ ನಡೆದಿದೆ.

ಸೋಮಶೇಖರ್ ಚೆನ್ನಶೆಟ್ಟಿ ಎಂಬುವವರ ಮೇಲೆ ಮುಸ್ಲಿಂ ಹುಡುಗರ ಗುಂಪು ಹಲ್ಲೆ ನಡೆಸಿದ್ದು, ಈ ಆರೋಪಿಗಳನ್ನು ಬಂಧನ ಮಾಡುವಂತೆ ಆಗ್ರಹಿಸಿ ಧಾರವಾಡ ಉಪ ನಗರ ಪೊಲೀಸ್ ಎದುರು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಶುಕ್ರವಾರ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.

ಧಾರವಾಡ ಹಳೇ ಎಪಿಎಂಸಿಯಲ್ಲಿ ಅಕ್ರಮವಾಗಿ ಕಟ್ಟಿದ್ದ ಹಸುಗಳನ್ನು ರಕ್ಷಣೆ ಮಾಡಲು ಹೋಗಿದ್ದ ಸೋಮಶೇಖರ್ ಚನ್ನಶೆಟ್ಟಿ ಮೇಲೆ ೩೦ಕ್ಕೂ ಹೆಚ್ಚು ಮುಸ್ಲಿಂ ಯುವಕರಿಂದ ಹಲ್ಲೆ ಮಾಡಲಾಗಿದೆ. ಹೀಗಾಗಿ ಆರೋಪಗಳನ್ನು ಶೀಘ್ರವಾಗಿ ಬಂಧಿಸಿ, ಕ್ರಮ ಜರಿಗಿಸುವಂತೆ ಒತ್ತಾಯಿಸಿ ಧಾರವಾಡ ಉಪನಗರ ಪೊಲೀಸ್ ಠಾಣೆ ಎದುರು ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದರು.‌

ರಾಜ್ಯದಲ್ಲಿ ಗೋವು ಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೂ ಗೋವು ಹತ್ಯೆ ಮಾಡಲು ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ಪಡೆದುಕೊಂಡು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಗೋವುಗಳನ್ನು ರಕ್ಷಿಸಲು ಮುಂದಾದ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರ ಜಿಹಾದಿಗಳಿಗೆ ಹಾಗೂ ಗೋವು ಹತ್ಯೆ ನಡೆಸುವವರಿಗೆ ರಕ್ಷಣೆ ನೀಡುತ್ತಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡದೇ ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವೇ ನಾವು ಯಾವುದೇ ಕಾರಣಕ್ಕೂ ಹೋರಾಟ ಕೈಬಿಡುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೂ ಕಾರ್ಯಕರ್ತರು ಪಟ್ಟು ಸಡಿಲಿಸಲಿಲ್ಲ.

ಶಾಸಕ ಬೆಲ್ಲದ ದೌಡು : ಭಜರಂಗದಳ ಕಾರ್ಯಕರ್ತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಶಾಸಕ ಅರವಿಂದ ಬೆಲ್ಲದ ಅವರು, ಗೋವು ರಕ್ಷಣೆಗೆ ತೆರಳಿದ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ತಪ್ಪಿತಸ್ಥ ಎಲ್ಲ ಆರೋಪಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಶೀಘ್ರವಾಗಿ ಬಂಧಿಸಬೇಕು. ಇಲ್ಲವಾದಲ್ಲಿ ಶನಿವಾರ ಮತ್ತೆ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದರು.

ಶೀಘ್ರವಾಗಿ ಕ್ರಮ ಜರುಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದು ಅಲ್ಲಿಂದ ನಿರ್ಗಮಿಸಿದರು.

ಮಾಜಿ ಶಾಸಕರು ಅಮೃತ ದೇಸಾಯಿ, ಹಿಂದೂ ಕಾರ್ಯಕರ್ತ ಶಿವಾನಂದ ಸತ್ತಿಗೆರಿ, ಸಂಜಯ ಕಪಟಕರ, ಶಿವು ಹೀರೆಮಠ, ವಿಜಯಾನಂದ ಶಟ್ಟಿ, ಮೋಹನ ರಾಮದುರ್ಗ, ಸುರೇಶ ಬೆದರೆ, ಪ್ರಮೋದ ಕಾರಕುನ, ಜೋತಿ ಪಾಟೀಲ, ಗೀತಾ ಪಾಟಿಲ, ಇತರಿದ್ದರು.

ಗೋವು ರಕ್ಷಕರಿಗೆ ಪೊಲೀಸರಿಂದ ರಕ್ಷಣೆ ಇಲ್ಲವಾ ? : ಬೆಲ್ಲದ ಗರಂ
ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹಳೇ ಎಪಿಎಂಸಿಯಲ್ಲಿ ಅಕ್ರಮವಾಗಿ ಕಟ್ಟಿದ್ದ ಹಸುಗಳನ್ನು ರಕ್ಷಣೆ ಮಾಡಲು ಹೋಗಿದ್ದ ಗೋವು ರಕ್ಷಕ ಸೋಮಶೇಖರ್ ಚನ್ನಶೆಟ್ಟಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದು ಖಂಡನೀಯ. ಗೋವು ರಕ್ಷಕರಿಗೆ ಪೊಲೀಸರು ರಕ್ಷಣೆ ನೀಡಬೇಕು. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುವ ಮೂಲಕ ಗೋವು ಹತ್ಯೆ ಮಾಡುವರನ್ನು ರಕ್ಷಣೆ ಮಾಡುತ್ತಿದ್ದಾರೆ. ಹಲ್ಲೆ ಮಾಡಿದ ಆರೋಪಗಳನ್ನು ತಕ್ಷಣ ಬಂಧಿಸಬೇಕು. ಗೋವು ರಕ್ಷಣೆ ಮಾಡುವ ಕಾನೂನು ಇದ್ದರೂ ಇದನ್ನು ಏಕೆ ಮಾಡುತ್ತಿಲ್ಲ ? ಎಂದ ಬೆಲ್ಲದ ತಪ್ಪತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಶನಿವಾರ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Daily Horoscope: ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ, ಅಧ್ಯಯನಾಸಕ್ತಿ ವೃದ್ಧಿ

ಟಾಪ್ ನ್ಯೂಸ್

7-Hebri-2

Hebri ನಾಡ್ಪಾಲು: 2 ದಿನಗಳ ಹಿಂದೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

rishabh pant

Delhi Capitals ತಂಡ ತೊರೆಯುವತ್ತ ರಿಷಭ್ ಪಂತ್; ಕೀಪರ್ ಖರೀದಿಗೆ ಮುಂದಾದ ಯಶಸ್ವಿ ಟೀಮ್

6-ankola

Ankola:ಶಿರೂರು ಗುಡ್ಡ ಕುಸಿತ ಪ್ರಕರಣ:ಲಾರಿ ಚಾಲಕನ ಪತ್ತೆಗಾಗಿ ಮೆಟಲ್ ಡಿಟೆಕ್ಟರ್‌ ಬಳಸಿ ಶೋಧ

Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಓರ್ವ ಮಹಿಳೆ ಮೃತ್ಯು, ಹಲವರು ಸಿಲುಕಿರುವ ಶಂಕೆ

Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಮಹಿಳೆ ಮೃತ್ಯು, ಕಟ್ಟದಲ್ಲಿದ್ದವರ ರಕ್ಷಣೆ

Desi Swara: ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…..

Desi Swara: ಇಮೋಜಿ… ಭಾವನೆಗಳ ನವರೂಪವೋ ಅಥವಾ ಗತ ಕಾಲದ ಭಾಷೆಯೋ…

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

Bellary; ನಿಮ್ಮ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ..: ಸಿದ್ದರಾಮಯ್ಯಗೆ ವಿಜಯೇಂದ್ರ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

6-ankola

Ankola:ಶಿರೂರು ಗುಡ್ಡ ಕುಸಿತ ಪ್ರಕರಣ:ಲಾರಿ ಚಾಲಕನ ಪತ್ತೆಗಾಗಿ ಮೆಟಲ್ ಡಿಟೆಕ್ಟರ್‌ ಬಳಸಿ ಶೋಧ

emme

Heavy Rain: ಕಾಫಿನಾಡಲ್ಲಿ ಭಾರಿ ಮಳೆ… ಹಳ್ಳ ದಾಟಲು ಹೋಗಿ ಕಣ್ಣೆದುರೇ ನೀರು ಪಾಲಾದ ಎಮ್ಮೆ

Bellary; CM Siddaramaiah left alone in Valmiki Corporation scam: Govind Karajola

Bellary; ವಾಲ್ಮೀಕಿ ನಿಗಮ ಹಗರಣದಿಂದ ಸಿಎಂ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ: ಕಾರಜೋಳ

Charmadi Ghat: ರಸ್ತೆ ಸ್ಥಿತಿಗತಿ ಅವಲೋಕಿಸಿ ವಾಹನ ಸಂಚಾರಕ್ಕೆ ಅವಕಾಶ… ಮೀನಾ ನಾಗರಾಜ್

Charmadi Ghat: ರಸ್ತೆ ಸ್ಥಿತಿಗತಿ ಅವಲೋಕಿಸಿ ವಾಹನ ಸಂಚಾರಕ್ಕೆ ಅವಕಾಶ… ಮೀನಾ ನಾಗರಾಜ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

7-Hebri-2

Hebri ನಾಡ್ಪಾಲು: 2 ದಿನಗಳ ಹಿಂದೆ ನೀರು ಪಾಲಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

Thirthahalli: ಕ್ಷೇತ್ರಕ್ಕೆ ಒಳ್ಳೆಯ ಕೆಲಸ ಮಾಡುವುದು ನನ್ನ ಜವಾಬ್ದಾರಿ: ಆರಗ ಜ್ಞಾನೇಂದ್ರ

rishabh pant

Delhi Capitals ತಂಡ ತೊರೆಯುವತ್ತ ರಿಷಭ್ ಪಂತ್; ಕೀಪರ್ ಖರೀದಿಗೆ ಮುಂದಾದ ಯಶಸ್ವಿ ಟೀಮ್

6-ankola

Ankola:ಶಿರೂರು ಗುಡ್ಡ ಕುಸಿತ ಪ್ರಕರಣ:ಲಾರಿ ಚಾಲಕನ ಪತ್ತೆಗಾಗಿ ಮೆಟಲ್ ಡಿಟೆಕ್ಟರ್‌ ಬಳಸಿ ಶೋಧ

Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಓರ್ವ ಮಹಿಳೆ ಮೃತ್ಯು, ಹಲವರು ಸಿಲುಕಿರುವ ಶಂಕೆ

Mumbai: ಭಾರಿ ಮಳೆಗೆ ಕಟ್ಟಡ ಭಾಗ ಕುಸಿತ… ಮಹಿಳೆ ಮೃತ್ಯು, ಕಟ್ಟದಲ್ಲಿದ್ದವರ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.