ಹೊಂಡ ಪೂಜೆಯೊಂದಿಗೆ ನೀರೋಕುಳಿ ಸಂಭ್ರಮಕ್ಕೆ ಚಾಲನೆ 

Team Udayavani, May 20, 2018, 4:41 PM IST

20-may-22.jpg

ತೇರದಾಳ: ಪಟ್ಟಣದ ಕಲ್ಲಟ್ಟಿ ಗಲ್ಲಿಯ ಹನುಮಾನ ದೇವರ ಮೂರು ದಿನಗಳ ನೀರೋಕಳಿಯು ವಿಜೃಂಭನೆಯಿಂದ ಶನಿವಾರ ಪ್ರಾರಂಭಗೊಂಡಿತು.

ದೇವರಿಗೆ ಅಭಿಷೇಕ, ವೀಳ್ಯದೆಲೆ ಪೂಜೆ, ಅಲಂಕಾರಿಕ ಪೂಜೆ, ತುಪ್ಪದಾರುತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಭಕ್ತ ಜನರೊಂದಿಗೆ ಸಾಗಿ ಬಂದಿತು. ಶನಿವಾರ ನೀರೋಕುಳಿ ಕೊಂಡ(ಹೊಂಡ) ಪೂಜಾ ಕಾರ್ಯಕ್ರಮ ಕೊಂಡದ ಪೂಜೆ ನೆರವೇರಿಸಿ ಓಕುಳಿ ಪ್ರಾರಂಭಿಸಲಾಯಿತು.

ನೇತೃತ್ವ ವಹಿಸಿದ ಪಟ್ಟಣದ ಬಾಲಗಂಗಾಧರ ದೇವರು ಹಾಗೂ ಶೇಗುಣಸಿ ವಿರಕ್ತ ಮಠದ ಮಹಾಂತ ಶ್ರೀಗಳು ಆಶೀರ್ವಚನ ನೀಡಿ, ವಿವಿಧ ಮತಗಳನ್ನು ಒಳಗೊಂಡ ಭಾರತವು ಸರ್ವಧರ್ಮ ಸಹಿಷ್ಣುತೆಯೊಂದಿಗೆ ಸಾಗುತ್ತಿದೆ. ಧಾರ್ಮಿಕ ಆಚರಣೆಗಳಿಂದ ಯಾರ ಮನಸ್ಸಿಗೂ ನೋವಾಗದಂತೆ ಸೂಕ್ತ ಎಚ್ಚರಿಕೆಯಿಂದ ಸಂಭ್ರಮಿಸಬೇಕು. ಹಬ್ಬ-ಹರಿದಿನಗಳು, ಧಾರ್ಮಿಕ ಆಚರಣೆಗಳು ಪರಸ್ಪರರಲ್ಲಿ ವೃದ್ಧಿಸಿ, ಭಿನ್ನಾಭಿಪ್ರಾಯಗಳನ್ನು ದೂರಿಕರಿಸುತ್ತವೆ. ಆದ್ದರಿಂದ ಸ್ನೇಹಪೂರ್ಣವಾಗಿ ಹಬ್ಬಗಳನ್ನು ಆಚರಿಸಬೇಕು ಎಂದರು.

ನಂತರ ಮುತೈದೆಯರ ಆರುತಿ ಸೇವೆ ನಂತರ ವಾಡಿಕೆಯಂತೆ ನಾಡಗೌಡರ ವಾಡೆಯಿಂದ ಓಕುಳಿಯಾಟವಾಡುವ ಯುವಕರು ಚಡ್ಡಿ ಧರಿಸಿ, ಕೈಯಲ್ಲಿ ನೀರು ತುಂಬುವ ಬಟ್ಟೆಯ ಜೋಳುಗೆ ಹಿಡಿದು ಮಂಗಲವಾದ್ಯ ಸಮೇತ ಮಾರುತಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದರು.

ಅವರೊಂದಿಗೆ ನೀರಾಟದಲ್ಲಿ ಪಾಲ್ಗೊಳ್ಳುವ ಸ್ತ್ರೀ ವೇಷ ಹಾಕಿದ ಯುವಕರು ಸಹ ಕೈಯಲ್ಲಿ ಹಸಿ ಬೆತ್ತಗಳನ್ನು ಹಿಡಿದುಕೊಂಡು ಬಂದರು. ಅವರೆಲ್ಲರು ಮೆರವಣಿಗೆಯಲ್ಲಿ ಬರುವುದ ಕಂಡು ಕೂಡಿದ ಜನ ಕೇಕೇ ಹಾಕಿ ಅವರನ್ನು ಹುರಿದುಂಬಿಸಿದರು. ದೇವಸ್ಥಾನದ ಅಂಗಳದಲ್ಲಿ, ಮನೆಗಳ ಮೇಲೆ ಏರಿ ನಿಂತ ಮಹಿಳೆಯರು ಸೇರಿದಂತೆ ಸಾವಿರಾರು ಜನ ಸಂಭ್ರಮಿಸಿದರು.

ನಂತರ ಓಕುಳಿಯಾಡುವವರು ಹನುಮಾನ ದೇವರಿಗೆ ನಮಸ್ಕರಿಸಿ, ನೀರು ತುಂಬಿದ ಹೊಂಡಕ್ಕೆ ಹಾರಿ ದೇವರ ಮುಂದೆ ಐದು ಜೋಳಿಗೆ ನೀರು ಅರ್ಪಿಸಿ, ಸ್ತ್ರೀ ವೇಶ ಧರಿಸಿದ ಸ್ನೇಹಿತರಿಗೆ ಜೋಳಿಗೆಯಲ್ಲಿ ತಂದ ನೀರನ್ನು ಉಗ್ಗಿದರು. ನೀರು ಉಗ್ಗಿಸಿಕೊಂಡ ಸ್ತ್ರೀ ವೇಷಧಾರಿಗಳು ಅವರಿಗೆ ಹಸಿ ಬೆತ್ತದಿಂದ ಹೊಡೆಯುತ್ತಿದ್ದರು. ತಪ್ಪಿಸಿಕೊಂಡು ಓಡುವ ಯುವಕರು ಮತ್ತೆ ನೀರನ್ನು ತಂದು ಉಗ್ಗುತ್ತಿದ್ದರು. ಇದೆಲ್ಲವು ನೋಡುಗರ ಕಣ್ಣಿಗೆ ಹಬ್ಬದಂತಾಗಿತ್ತು. ಜೈಕಾರ ಹಾಕುತ್ತ ಮುಖಂಡರು ಯಾವ ಜಗಳ ತಂಟೆಗಳು ಬಾರದಂತೆ ಎಲ್ಲರನ್ನು ಸಮಾಧಾನಿಸುತ್ತಿದ್ದರು. ಹೀಗೆ ನೀರೋಕುಳಿಯು ಹೊಂಡ ಖಾಲಿಯಾಗುವವರೆಗೆ ಸಾಗಿತು.

ಟಾಪ್ ನ್ಯೂಸ್

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.