Udayavni Special

ಧಾರವಾಡ : ಕೋವಿಡ್‌ ತಡೆಗೆ ಔಷಧ ಕಿಟ್‌ ಆಂದೋಲನ

ಮನೆ ಮನೆಗೆ ತೆರಳಿ ವಿತರಣೆ ! ­ಆರೋಗ್ಯ ಇಲಾಖೆಗೆ ಸೂಚನೆ! ­ಅಧಿಕಾರಿ-ಸಿಬ್ಬಂದಿ ನಿಯೋಜನೆ

Team Udayavani, May 8, 2021, 5:24 PM IST

hytyt

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಮನೆ ಮನೆಗೆ ತೆರಳಿ ಕೋವಿಡ್‌ ನಿಯಂತ್ರಣಕ್ಕಿರುವ ಔಷ ಧಗಳ ಕಿಟ್‌ ತಲುಪಿಸಲು ಆಂದೋಲನ ಹಮ್ಮಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ಕೋವಿಡ್‌-19 ರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಜಿಲ್ಲೆಯಲ್ಲಿನ ಆರೋಗ್ಯ ಸೌಲಭ್ಯಗಳ ಕುರಿತು ಜಿಲ್ಲಾಮಟ್ಟದ ಅ ಧಿಕಾರಿಗಳೊಂದಿಗೆ ಸಭೆ ಕೈಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಿರುವ ಕೋವಿಡ್‌ ನಿರೋಧಕ ಔಷ ಧಗಳ ಕಿಟ್‌ ವಿತರಣೆಗೆ ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆ ಅಧಿಕಾರಿ ಅಜೀಜ್‌ ದೇಸಾಯಿ ಅವರನ್ನು ಹಾಗೂ ಗ್ರಾಮೀಣ ಭಾಗದ ಉಸ್ತುವಾರಿಗಾಗಿ ಜಿಪಂ ಉಪಕಾರ್ಯದರ್ಶಿಯನ್ನು ನೇಮಿಸಲಾಗುವುದು. ಆಂದೋಲನ ಯಶಸ್ವಿಗೊಳಿಸಲು ಗ್ರಾಪಂ ಸಿಬ್ಬಂದಿ, ಆಶಾ, ಬೀಟ್‌ ಪೊಲೀಸ್‌ ಮತ್ತು ಅಗತ್ಯವಿದ್ದಲ್ಲಿ ಸ್ಥಳೀಯ ಸ್ವಯಂ ಸೇವಾ ಸಂಘಟನೆಗಳ ಸಹಕಾರದೊಂದಿಗೆ ಕೆಲಸ ಮಾಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಹೆಚ್ಚಳದ ಜತೆಗೆ ನೆರೆಹೊರೆಯ ಜಿಲ್ಲೆಯ ಸೋಂಕಿತರು ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಎಲ್ಲವನ್ನೂ ಸರಿದೂಗಿಸಬೇಕು. ಇದು ಸವಾಲಿನ ಕೆಲಸವಾಗಿದ್ದರೂ ಜಿಲ್ಲಾಡಳಿತ, ಕಿಮ್ಸ್‌ ಆಸ್ಪತ್ರೆ, ಸಮರ್ಪಕವಾಗಿ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವಷ್ಟು ಬೆಡ್‌ಗಳು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ಅವರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್‌, ಆಕ್ಸಿಜನ್‌ ಅಗತ್ಯ ಬೀಳುತ್ತದೆ. ಈಗಾಗಲೇ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್‌ ಪೂರೈಸಲು ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರವೂ ಸಹಕಾರ ನೀಡುತ್ತಿದೆ ಎಂದರು.

ಹುಬ್ಬಳ್ಳಿಯ ಲೈಫ್‌ಲೈನ್‌ ಆಸ್ಪತ್ರೆಯಲ್ಲಿ ಜರುಗಿದ ಘಟನೆ ದುರದೃಷ್ಟಕರವಾಗಿದ್ದು, ಸಮರ್ಪಕವಾದ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸಚಿವರು ಜಿಲ್ಲಾ ಆರೋಗ್ಯಾಧಿಕಾರಿಗೆ ನಿರ್ದೇಶಿಸಿದರು. ಈ ತೊಂದರೆ ಮರುಕಳಿಸದಂತೆ ಎಲ್ಲಾ ಅ ಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಅಡಚಣೆ, ತೊಂದರೆ ಉಂಟಾದಾಗ ಅಧಿ  ಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಯಾವುದೇ ಖಾಸಗಿ ಆಸ್ಪತ್ರೆ ಈ ಸಂದರ್ಭದಲ್ಲಿ ಬಂದ್‌ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದೂ ಹೇಳಿದರು. ಶಾ

ಸಕ ಅರವಿಂದ ಬೆಲ್ಲದ ಮಾತನಾಡಿ, ಆಸ್ಪತ್ರೆಗಳಲ್ಲಿ ತಕ್ಷಣಕ್ಕೆ ಬೆಡ್‌ ಸಿಗುವಂತೆ, ರೆಮ್‌ಡೆಸಿವಿಯರ್‌ ಔಷಧ ಲಭಿಸುವಂತೆ ಮತ್ತು ಕೋವಿಡ್‌ ಚಿಕಿತ್ಸೆಗೆ ಬರುವ ಸೋಂಕಿತರು ಚಿಕಿತ್ಸೆಗಾಗಿ ಅಲೆದಾಡದಂತೆ ಕಿಮ್ಸ್‌ ವ್ಯವಸ್ಥೆ ಸ್ಪಂ ದಿಸಬೇಕು ಎಂದರು. ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಜಿಲ್ಲೆಯ ಅನೇಕ ತಾಲೂಕಾಸ್ಪತ್ರೆಗಳಲ್ಲಿ ಬಳಕೆ ಮಾಡದೇ ಖಾಲಿ ಉಳಿದಿರುವ ವೆಂಟಿಲೇಟರ್‌ ಗಳನ್ನು ಕಿಮ್ಸ್‌ ಹಾಗೂ ಜಿಲ್ಲಾಸ್ಪತ್ರೆಗಳಿಗೆ ನೀಡಬೇಕು. ಕೋವಿಡ್‌ ನಿಯಂತ್ರಣವಾದ ಮೇಲೆ ಮರಳಿ ಆಯಾ ಆಸ್ಪತ್ರೆಗಳಿಗೆ ತಲುಪಿಸಬೇಕು. ವಿವಿಧ ಸಂಘ-ಸಂಸ್ಥೆ, ಸಂಘಟನೆಗಳು ಸಾರ್ವಜನಿಕರಿಗೆ ನೆರವಾಗಲು ಉಚಿತವಾಗಿ ಹಣ್ಣುಹಂಪಲು, ಮಾಸ್ಕ್, ಸ್ಯಾನಿಟೈಸರ್‌, ಆಹಾರ ಸಾಮಗ್ರಿ ವಿತರಿಸಲು ಅವಕಾಶ ಕಲ್ಪಿಸುವಂತೆ ವಿನಂತಿಸುತ್ತಿದ್ದಾರೆ.

ನಗರ ಪೊಲೀಸ್‌ ಆಯುಕ್ತರು ಈ ಕುರಿತು ಪರಿಶೀಲಿಸಿ ಅವಕಾಶ ಕಲ್ಪಿಸುವಂತೆ ವಿನಂತಿಸಿದರು. ಡಿಸಿ ನಿತೇಶ್‌ ಪಾಟೀಲ ಅವರು ಜಿಲ್ಲೆಯಲ್ಲಿ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್‌ ಸೋಂಕಿತರು, ಅವರಿಗೆ ನೀಡುತ್ತಿರುವ ಚಿಕಿತ್ಸೆ, ಬೆಡ್‌ಗಳ ಲಭ್ಯತೆ, ಆಕ್ಸಿಜನ್‌, ವೆಂಟಿಲೇಟರ್‌ ಕುರಿತು ಸಚಿವರಿಗೆ ವಿವರಿಸಿದರು. ನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌, ಜಿಪಂ ಸಿಇಒ ಡಾ| ಬಿ. ಸುಶೀಲಾ, ಎಸ್‌ಪಿ ಪಿ. ಕೃಷ್ಣಕಾಂತ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಎಸಿ ಡಾ| ಗೋಪಾಲಕೃಷ್ಣ ಬಿ. ಮೊದಲಾದವರಿದ್ದರು. ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಅವರೊಂದಿಗೆ ಆಕ್ಸಿಜನ್‌ ರ್ಯಾಪಿಡ್‌ ಆ್ಯಕ್ಷನ್‌ ಟೀಂ ಕಾರ್ಯ ಪರಿಶೀಲಿಸಿದರು.

ಟಾಪ್ ನ್ಯೂಸ್

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

9654

ಜಿಂಕೆ ಬೇಟೆಯಾಡಿದ ವ್ಯಕ್ತಿಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

9875

ಹೆಣದಲ್ಲೂ, ಔಷಧಿಯಲ್ಲೂ ಹಣ ಲೂಟಿ : ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

hunasur

ಬೆಲೆಯೇರಿಕೆಯಾಗುತ್ತಿದ್ದರೂ ‘ಅಚ್ಚೇ ದಿನ್ ಆಯೇಗಾ’ ಎಂದು ಬಿಜೆಪಿ ಜಪ: ಕಾಂಗ್ರೆಸ್ ಆರೋಪ

chikkamagalore

ಚಿಕ್ಕಮಗಳೂರು: ಕೋವಿಡ್ ಸೋಂಕಿತ ಬಾಲಕಿ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ತರೀಕೆರೆ ಶಾಸಕ

khandre’

ತಾಳಮೇಳ ಇಲ್ಲದ ಬಿಜೆಪಿ ಸರ್ಕಾರ ಗೊಂದಲದ ಗೂಡಾಗಿದೆ: ಈಶ್ವರ್ ಖಂಡ್ರೆ

MUST WATCH

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

udayavani youtube

Article 370 ಕುರಿತು ಪಾಕಿಸ್ತಾನಿ ಪ್ರಜೆಗೆ ದಿಗ್ವಿಜಯ ಸಿಂಗ್ ಹೇಳಿದ ಮಾತು ಲೀಕ್

ಹೊಸ ಸೇರ್ಪಡೆ

11 bgk-4b

ಎಪ್ಪತ್ತೈದು ದಿನಗಳಿಂದ ಬೆಳಗುತ್ತಿದೆ ನಂದಾದೀಪ  

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

698

14ರಿಂದ ಅವಶ್ಯಕ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ

3000 ಮಂದಿಗೆ ಆಹಾರದ ಕಿಟ್‌

3000 ಮಂದಿಗೆ ಆಹಾರದ ಕಿಟ್‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.