ಮದ್ಯ ಸೇವಿಸಿ ಲಾರಿ ಚಾಲನೆ; ಚಾಲಕ ಪೊಲೀಸ್‌ ವಶಕ್ಕೆ

Team Udayavani, Jun 18, 2019, 1:33 PM IST

ಹುಬ್ಬಳ್ಳಿ: ಲಾರಿಯನ್ನು ಸಂಚಾರಿ ಪೊಲೀಸರೇ ಚಾಲನೆ ಮಾಡಿಕೊಂಡು ಹೋದರು.

ಹುಬ್ಬಳ್ಳಿ: ಮದ್ಯ ಸೇವಿಸಿ ಲಾರಿ ಚಾಲನೆ ಮಾಡುತ್ತಿದ್ದ್ದ ಚಾಲಕನು ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆ ಮಾತು ಕೇಳದೆ ಮುನ್ನುಗ್ಗಿದ್ದಲ್ಲದೆ, ಕೋರ್ಟ್‌ ವೃತ್ತದಲ್ಲಿ ಎರಡು ಬಾರಿ ರೌಂಡ್‌ ಚಲಾಯಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಬಾಗಲಕೋಟೆ ತಾಲೂಕು ರಾಮತಾಳ ಗ್ರಾಮದ ಯಮನೂರ ಕೆ. ಗೌಡರ ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಚನ್ನಮ್ಮ ವೃತ್ತದಿಂದ ಕ್ಲಬ್‌ ರಸ್ತ್ತೆ ಮಾರ್ಗವಾಗಿ ಬಾಗಲಕೋಟೆಗೆ ಹೊರಟಿದ್ದ. ಆದರೆ ದೇಸಾಯಿ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗ ಬಂದ್‌ ಆಗಿದೆ. ಕರ್ತವ್ಯದಲ್ಲಿದ್ದ ಮಹಿಳಾ ಸಂಚಾರ ಪೇದೆಯೊಬ್ಬರು ರಸ್ತೆ ಬಂದ್‌ ಆಗಿದೆ. ಸಾಯಿ ಮಂದಿರ ಮಾರ್ಗವಾಗಿ ಹೋಗಬೇಕು ಎಂದು ಹೇಳಿದರೂ ಕೇಳದೆ, ನೀವೆಲ್ಲ ರಸ್ತೆ ಬಂದ್‌ ಮಾಡಿಕೊಂಡರೆ ನಾವು ಹೋಗೋದು ಹೇಗೆ. ನಾನು ಹೀಗೆಯೇ ಹೋಗುತ್ತೇನೆ ಎಂದು ಕ್ಲಬ್‌ ರಸ್ತೆ ಮುಖಾಂತರ ಹೋಗಲುಮುಂದಾಗಿದ್ದಾನೆ. ಮತ್ತೆ ಮಹಿಳಾ ಪೇದೆಯು ವಾಹನ ತಡೆದಾಗ ಅಲ್ಲಿಯೇ ಕೋರ್ಟ್‌ ವೃತ್ತದಲ್ಲಿ ಲಾರಿಯನ್ನು ಎರಡು ರೌಂಡ್‌ ಸುತ್ತಾಡಿಸಿದ್ದಾನೆ. ಆಗ ಸ್ಥಳಕ್ಕೆ ಇನ್ನಿತರೆ ಸಂಚಾರ ಠಾಣೆ ಪೊಲೀಸರು ಆಗಮಿಸಿ ಆತನನ್ನು ತಡೆದಾಗ ಮದ್ಯ ಸೇವಿಸಿದ್ದು ಗೊತ್ತಾಗಿದೆ. ನಂತರ ಅವನನ್ನು ವಶಕ್ಕೆ ಪಡೆದು, ಲಾರಿಯನ್ನು ಹಿರಿಯ ಸಂಚಾರ ಪೇದೆ ಚಲವಾದಿ ಅವರು ಪೂರ್ವ ಸಂಚಾರ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಯಮನೂರ ವಿರುದ್ಧ ಕುಡಿದು ವಾಹನ ಚಾಲನೆ ಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ