ಕಲ್ಕತ್ತಾ ಬೀಡಾ ತಿನ್ನೋದೇ ಬೇಡಾ!

ಉತ್ಪಾದನೆ-ಪೂರೈಕೆ ಕೊರತೆ ಹಿನ್ನೆಲೆ , ಗಗನಮುಖಿ ಎಲೆ ಬೆಲೆ, ಒಂದಕ್ಕೆ 10-15 ರೂ.

Team Udayavani, Feb 24, 2021, 3:16 PM IST

ಕಲ್ಕತ್ತಾ ಬೀಡಾ ತಿನ್ನೋದೇ ಬೇಡಾ!

ಹುಬ್ಬಳ್ಳಿ: ಕಲ್ಕತ್ತಾ ಎಲೆಗೆ ಚಿನ್ನದ ಬೆಲೆ ಬಂದಿದೆ. ಅತಿವೃಷ್ಟಿ, ಪ್ರವಾಹ ಹಾಗೂ ರೋಗಬಾಧೆಯಿಂದಾಗಿ ಕಲ್ಕತ್ತಾ ಎಲೆ ಬೆಲೆ ಗಗನಮುಖೀಯಾಗಿದ್ದು, ಕಲ್ಕತ್ತಾ ಪಾನ್‌ ಪ್ರಿಯರ ಜೇಬು ಬಿಸಿಯಾಗುವಂತೆ ಮಾಡಿದೆ.

ಕಲ್ಕತ್ತಾ ಎಲೆಗಳ ಉತ್ಪಾದನೆ ಕುಂಠಿತವಾಗಿದ್ದರಿಂದ ಪೂರೈಕೆಯ ಕೊರತೆ ಎದುರಾಗಿದೆ. ಈ ಹಿಂದೆ 2-3 ರೂ.ಗೆ ಒಂದು ಎಲೆ ಸಿಗುತ್ತಿತ್ತು. ಇದೀಗ 10-15 ರೂ. ಆಗಿದೆ. ಇದರಿಂದಾಗಿ ಸಹಜವಾಗಿ ಪಾನ್‌ ಗಳ ಬೆಲೆಯೂ 5ರಿಂದ 8 ರೂ. ವರೆಗೆ ಹೆಚ್ಚಾಗಿದೆ. ಮೇ ವೇಳೆ ಸುರಿದ ಅಪಾರ ಮಳೆಯಿಂದಾಗಿ ಎಲೆತೋಟಗಳೇ ಕೊಚ್ಚಿಕೊಂಡು ಹೋಗಿದ್ದು, ಅಳಿದುಳಿದ ಎಲೆ ಬೆಳೆಗೆ ರೋಗ ಕಾಣಿಸಿಕೊಂಡಿದ್ದರಿಂದ ಕಲ್ಕತ್ತಾ ಎಲೆಗಳ ಫಸಲು ನಿರೀಕ್ಷಿತವಾಗಿ ಇಲ್ಲವಾಗಿದೆ.

ಹುಬ್ಬಳ್ಳಿ ನಗರವೊಂದಕ್ಕೆ ನಿತ್ಯ 50 ಸಾವಿರಕ್ಕೂ ಹೆಚ್ಚು ಕಲ್ಕತ್ತಾ ಎಲೆಗಳು ಪೂರೈಕೆ ಆಗುತ್ತಿತ್ತು. ಇದೀಗ ಕೇವಲ 15ರಿಂದ 20 ಸಾವಿರ ಎಲೆಗಳು ಮಾತ್ರ ಬರುತ್ತಿವೆ. ಇದರಿಂದ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಕೆಲವೊಂದುಪಾನ್‌ಶಾಪ್‌ಗಳ ಮಾಲೀಕರು ದರ ಏರಿಕೆಯಿಂದಾಗಿ ಎಲೆಗಳ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ಕಲ್ಕತ್ತಾ ಎಲೆಗಳ ದರ ಹೆಚ್ಚಳದಿಂದಾಗಿ ಬಹುತೇಕ ಪಾನ್‌ ಶಾಪ್‌ನವರು ಅಂಬಾಡಿ ಎಲೆ, ಗುಟ್ಕಾ,ಪಾನ್‌ ಮಸಾಲಾ, ಇನ್ನಿತರ ವಸ್ತುಗಳ ಮಾರಾಟಮಾಡುತ್ತಿದ್ದಾರೆ. ಕಲ್ಕತ್ತಾ ಎಲೆ ದರ ಹೆಚ್ಚಳದಿಂದ ಪಾನ್‌ ತಿನ್ನುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂಬುದು ಪಾನ್‌ ಶಾಪ್‌ನವರ ಅನಿಸಿಕೆ.

ಅಡಿಕೆಯೂ ಬಲುತುಟ್ಟಿ :

ಒಂದೆಡೆ ಕಲ್ಕತ್ತಾ ಎಲೆ ದರ ಗಗನಮುಖೀಯಾಗಿದ್ದರೆ, ಇನ್ನೊಂದೆಡೆ ಅಡಿಕೆ ದರ ಹೆಚ್ಚಳವೂ ಬೀಡಾ ಪ್ರಿಯರ ಜೇಬನ್ನು ಬಿಸಿ ಮಾಡುತ್ತಿದೆ. ಬಹುತೇಕ ಪಾನ್‌ ಶಾಪ್‌ಗಳಲ್ಲಿ ರೂಪಾಯಿ, 2 ರೂಪಾಯಿಗೆ ಅಡಿಕೆ ನೀಡುವುದನ್ನೇ ಬಂದ್‌ ಮಾಡಿದ್ದಾರೆ. ಪಾನ್‌ಗೆ ಬಳಸುವ ಇತರ ಎಲ್ಲ ವಸ್ತುಗಳ ಬೆಲೆಯೂ ಬಹು ಏರಿಕೆಯಾಗಿದ್ದು, ಸಹಜವಾಗಿಗ್ರಾಹಕರ ಮೇಲೆ ಬೀಳುತ್ತಿದೆ.ಹೀಗಾಗಿ ಪಾನ್‌ ತಿನ್ನುವವರ ಸಂಖ್ಯೆ ಗಣನೀಯವಾಗಿ ತಗ್ಗಿದೆ.

ಡ್ಯಾಮೇಜ್‌ ಎಲೆಗಳು :  ಈ ಹಿಂದೆ ರೈಲ್ವೆ ಮೂಲಕ ಕಲ್ಕತ್ತಾ ಎಲೆಗಳು ಆಗಮಿಸುತ್ತಿದ್ದವು. ರೈಲು ಸಂಪರ್ಕ ಸರಿಯಾಗಿ ಇರದೇ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆಆಗಮಿಸಿ ಅಲ್ಲಿಂದ ಟ್ರಾನ್ಸ್‌ಪೋರ್ಟ್‌ ಮೂಲಕ ನಗರಕ್ಕೆ ಆಗಮಿಸುತ್ತಿವೆ. ಬರುವ ಎಲೆಗಳು ಡ್ಯಾಮೇಜ್‌ ಆಗಿರುತ್ತವೆ. ಅದೆಲ್ಲವನ್ನು ತೆಗೆದು ಎಲೆಗಳ ಮಾರಾಟ ಮಾಡಬೇಕಾಗಿದೆ. ಇದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದು ಹಲವು ವ್ಯಾಪಾರಿಗಳ ಅಳಲು.

ಕಳೆದ ಬಾರಿ ಆದ ಪ್ರವಾಹದಿಂದ ಇಡೀ ಎಲೆ ತೋಟಗಳು ಕೊಚ್ಚಿಕೊಂಡು ಹೋಗಿದ್ದು, ಬೆಲೆ ಏರಿಕೆಯಾಗಿದೆ. ಎಲೆಗಳ ಸರಬರಾಜು ಸಹ ಆಗುತ್ತಿಲ್ಲ, ಬರುವ ಎಲೆಗಳಲ್ಲೂ ಡ್ಯಾಮೇಜ್‌ ಬರುತ್ತಿದ್ದು ಎಲ್ಲವನ್ನು ಸರಿಪಡಿಸಿಕೊಂಡು ಪಾನ್‌ ಶಾಪ್‌ಗಳಿಗೆ ನೀಡಿದರಾಯಿತು ಎನ್ನುವಷ್ಟರಲ್ಲಿಯೇ ಬೆಲೆ ಏರಿಕೆಯಿಂದ ಪಾನ್‌ ಶಾಪ್‌ ಮಳಿಗೆಯವರು ಎಲೆಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಇಳಿಕೆ ಯಾವಾಗ ಎನ್ನುವ ಚಿಂತೆ ಕಾಡುತ್ತಿದೆ. – ವಾಯಿದ್‌ ಶೇಖ್‌, ಕಲ್ಕತ್ತಾ ಎಲೆ ಸರಬರಾಜುದಾರ

ಕಲ್ಕತ್ತಾ ಪಾನ್‌ ತಿನ್ನಲೆಂದು ನಮ್ಮ ಅಂಗಡಿಗೆ ಬರುತ್ತಾರೆ. ಆದರೆ ಎಲೆಗಳ ಅಭಾವದಿಂದ ಜನರನ್ನು ಮರಳಿ ಕಳುಹಿಸುವಂತಾಗಿದೆ. ಬೆಲೆ ಏರಿಕೆ ಬಿಸಿ ಸಹ ತಟ್ಟಿದ್ದು, ಬೇಕಾದಷ್ಟು ಎಲೆಗಳ ಸರಬರಾಜು ಆಗುತ್ತಿಲ್ಲ. ಲಾಕ್‌ ಡೌನ್‌ ಮುನ್ನ 1 ಸಾವಿರಕ್ಕೂ ಹೆಚ್ಚು ಕಲ್ಕತ್ತಾ ಎಲೆ ಖರೀದಿ ಮಾಡಲಾಗುತ್ತಿತ್ತು. ಇದೀಗ 600 ಎಲೆ ಖರೀದಿ ಮಾಡಲಾಗುತ್ತಿದೆ. ಪಾನ್‌ಗಳ ದರವನ್ನೂ ಏರಿಕೆ ಮಾಡಲಾಗಿದೆ. –ಆರೂಣ ರಶೀದ್‌, ಪೀರಾ ಪಾನ್‌ ಶಾಪ್‌ ಮಾಲೀಕ

-ಬಸವರಾಜ ಹೂಗಾರ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.