Udayavni Special

ರೈತರ ಬಿಕ್ಕಟ್ಟು ಪರಿಹಾರಕ್ಕೆ ರಾಜಿ ರಹಿತ ಹೋರಾಟ ಅಗತ್ಯ

The solution to the peasant crisis not requires compromise

Team Udayavani, May 22, 2019, 11:54 AM IST

hubali-tdy-2..

ಧಾರವಾಡ: ಕವಿಸಂನಲ್ಲಿ ನೀರಸಾಗರ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆಯಿಂದ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಎಸ್‌.ಆರ್‌. ಹಿರೇಮಠ ಮಾತನಾಡಿದರು.

ಧಾರವಾಡ: ರೈತರ ಬಿಕ್ಕಟ್ಟು ಪರಿಹಾರಕ್ಕೆ ರಾಜಿ ರಹಿತ ಹೋರಾಟ ಕಟ್ಟಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ಹೇಳಿದರು.

ಕವಿಸಂನಲ್ಲಿ ನೀರಸಾಗರ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆಯಿಂದ ಹಮ್ಮಿಕೊಂಡಿದ್ದ ರೈತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಸರ್ಕಾರಗಳೇ ತಮ್ಮ ಮೂಗಿನಡಿಯಲ್ಲಿ ಕೆರೆಗಳ ಒತ್ತುವರಿಗೆ ಕುಮ್ಮಕ್ಕು ಕೊಡುತ್ತಿವೆ. ನೀರಿನ ಮೂಲಗಳನ್ನು ಬರಡು ಮಾಡುವ ಹುನ್ನಾರದಲ್ಲಿವೆ. ಈ ಎಲ್ಲ ಹುನ್ನಾರಗಳನ್ನು ಸೋಲಿಸಬೇಕು. ನೀರಸಾಗರ ಕೆರೆಗೆ ನೀರು ತುಂಬಿಸುವ ವ್ಯಾಪಕವಾದ ಈ ಹೋರಾಟವನ್ನು ಎಲ್ಲರೂ ಸೇರಿ ಕಟ್ಟಿ ಬೆಳೆಸಬೇಕಿದೆ. ಆ ದಿಕ್ಕಿನಲ್ಲಿ ಎಲ್ಲರೂ ಸಜ್ಜಾಗಬೇಕು ಎಂದರು.

ಆರ್‌ಕೆಎಸ್‌ ರೈತ ಸಂಘಟನೆ ರಾಜ್ಯ ಖಜಾಂಚಿ ವಿ. ನಾಗಮ್ಮಾ ಮಾತನಾಡಿ, ಇಂದು ಕುಡಿಯುವ ನೀರಿಗೆ ತತ್ವಾರವಿದ್ದರೂ ಕಾರ್ಪೊರೇಟ್ ಕಂಪನಿಗಳಿಗೆ ನೀರಿನ ಪೂರೈಕೆ ಮಾಡಲಾಗುತ್ತಿದೆ. ಸರ್ಕಾರಗಳು ಜನಪರವಾಗಿ ಕೆಲಸ ಮಾಡಿದರೆ ನೀರಸಾಗರ ಕೆರೆಗೆ ಕೇವಲ ಒಂದು ವರ್ಷದಲ್ಲೇ ನೀರು ತುಂಬಿಸುವುದು ದೊಡ್ಡ ವಿಷಯವಲ್ಲ. ಆದರೆ ಈ ಸರ್ಕಾರಗಳು ಜನಪರವಾಗಿಲ್ಲ. ಆದ್ದರಿಂದ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಿದೆ. ಎಲ್ಲ ಗ್ರಾಮದ ರೈತರು ಪ್ರಬಲ ಹೋರಾಟ ಬೆಳೆಸಬೇಕು ಎಂದು ಹೇಳಿದರು.

ಎಸ್‌ಯುಸಿಐ(ಕಮ್ಯುನಿಸ್ಟ್‌) ಪಕ್ಷದ ರಾಜ್ಯ ಸಮಿತಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಹುಬ್ಬಳ್ಳಿ, ಕುಂದಗೋಳ ಹಾಗೂ ಕಲಘಟಗಿ ತಾಲೂಕಿನ ಸುಮಾರು 20-25 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಆಧಾರವಾಗಿದ್ದ ನೀರಸಾಗರ ಕೆರೆ ಇಂದು ಬತ್ತಿ ಬೆಂಗಾಡಾಗಿದೆ. ಕೃಷಿಯನ್ನೇ ನಂಬಿರುವ ರೈತರು ಹೊಲಗಳಲ್ಲಿ ಹೊಸ ಬೋರ್‌ವೆಲ್ಗಳನ್ನು 500 ಅಡಿ ಆಳ ಕೊರೆಸಿದರೂ ಅಲ್ಪ-ಸ್ವಲ್ಪ ನೀರು ಸಿಗುವುದು ಕಷ್ಟವಾಗಿದೆ. ಈ ಭಾಗದ ರೈತರ ಬದುಕು ಹಸನಾಗಬೇಕಾದರೆ ನೀರಸಾಗರ ಕೆರೆಗೆ ನೀರು ತುಂಬಬೇಕಾಗಿದೆ ಎಂದರು.

ಆರ್‌ಕೆಎಸ್‌ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ವೆಂಕನಗೌಡ ಪಾಟೀಲ, ಲಕ್ಷ್ಮಣ ಜಡಗನ್ನವರ, ಅಲ್ಲಾವುದ್ದಿನ ಅಡ್ಲಿ, ಸದಸ್ಯರಾದ ಕಲ್ಲಪ್ಪ ರಾಮನಾಳ, ಪಕ್ಕೀರಪ್ಪ ಕೋಟಿ ಇನ್ನಿತರರಿದ್ದರು.

ಹೋರಾಟಕ್ಕೆ ಸಮಿತಿ ರಚನೆ; ಗಡುವು ನೀಡಲು ತೀರ್ಮಾನ

ನೀರಸಾಗರ ಕೆರೆಗೆ ನೀರು ತುಂಬಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಮುಖ್ಯ ಗೊತ್ತುವಳಿಯನ್ನು ಸಮಾವೇಶದಲ್ಲಿ ಮಂಡಿಸಿ ಅಂಗೀಕರಿಸಲಾಯಿತು. ಕೆರೆಯ ಸುತ್ತಮುತ್ತಲಿನ ಹಳ್ಳಿಗಳ 30ಕ್ಕೂ ಹೆಚ್ಚು ರೈತರನ್ನೊಳಗೊಂಡ ನೀರಸಾಗರ ಕೆರೆ ಹೋರಾಟ ಸಮಿತಿ ರಚಿಸಲಾಯಿತು. ಮುಂದಿನ ದಿನಗಳಲ್ಲಿ ಸಮಿತಿ ನೇತೃತ್ವದಲ್ಲಿ ಹೋರಾಟ ಮುಂದುವರಿಸಲು ತೀರ್ಮಾನಿಸಲಾಯಿತು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಗಡುವು ನೀಡಲು ತೀರ್ಮಾನಿಸಲಾಯಿತು. ಆ ಗಡುವಿನೊಳಗೆ ಪ್ರತಿಕ್ರಿಯಿಸದಿದ್ದರೆ ಪ್ರಬಲ ಹೋರಾಟ ಕೈಗೆತ್ತಿಕೊಳ್ಳಲು ನಿರ್ಣಯಿಸಲಾಯಿತು.

ಟಾಪ್ ನ್ಯೂಸ್

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

grrtr

ಕುಖ್ಯಾತ ದರೋಡೆಕೋರ ಸೇರಿ ಮೂವರ ಸೆರೆ ­

ghfgytyt

ಬೆಂಬೆಲೆಯಡಿ ಕಡಲೆ ಖರೀದಿ ಗಣನೀಯ ಕುಸಿತ

jytt

ಧಾರವಾಡ : ಗ್ರಾಮಗಳ ತುಂಬಾ ಕೊರೊನಾಯಣ

dfytry

ಹುಬ್ಬಳ್ಳಿ: ಮಹಿಳಾ ಉದ್ಯೋಗಿಗಳಿಗೆ ಸಾರಿಗೆ ಸಂಕಷ್ಟ

ಮುಂದುವರಿದ ಮರಣ ಮೃದಂಗ: ಹುಬ್ಬಳ್ಳಿಯಲ್ಲಿ ವೆಂಟಿಲೇಟರ್ ಸಿಗದೆ ವ್ಯಕ್ತಿ ಸಾವು!

ಮುಂದುವರಿದ ಮರಣ ಮೃದಂಗ: ಹುಬ್ಬಳ್ಳಿಯಲ್ಲಿ ವೆಂಟಿಲೇಟರ್ ಸಿಗದೆ ವ್ಯಕ್ತಿ ಸಾವು!

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

6-22

ಆಮ್ಲಜನಕ ಲಭ್ಯತೆ ಸಮಸ್ಯೆ; ಶಾಸಕ ಹಾಲಪ್ಪ ಆತಂಕ

6-21

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

6-20

ಸೋಂಕು ತಡೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಯಾನಿಟೈಸ್‌

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.