Udayavni Special

ಕೈದಿಗಳ ಕಲೆ ಪ್ರದರ್ಶನಕ್ಕೆ ಶೀಘ್ರವೇ ವೇದಿಕೆ


Team Udayavani, Oct 7, 2019, 11:06 AM IST

huballi-tdy-2

ಧಾರವಾಡ: ಮುಂದಿನ ದಿನಗಳಲ್ಲಿ ಜಿಲ್ಲಾ ಕೋರ್ಟ್‌ ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೈದಿಗಳು ತಯಾರಿಸಿರುವ ವಸ್ತುಗಳ ಪ್ರದರ್ಶನ ಮೇಳ ಆಯೋಜಿಸಿ, ಅವರ ಕಲೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಈಶಪ್ಪ ಭೂತೆ ಹೇಳಿದರು.

ನಗರದ ಜೈಲು ಆವರಣದ ಕರೆಮ್ಮ ದೇವಸ್ಥಾನ ಆವರಣದಲ್ಲಿ ಧಾರವಾಡ ಕೇಂದ್ರ ಕಾರಾಗೃಹದ ಕೈದಿಗಳು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಕೈದಿಗಳು ರೂಪಿಸಿರುವ ವಿವಿಧ ಗೃಹೋಪಯೋಗಿ ವಸ್ತುಗಳು ಅತ್ಯಂತ ಆಕರ್ಷಕ ಮತ್ತು ಗುಣಮಟ್ಟದ್ದಾಗಿವೆ. ಅವರ ಕಲಾತ್ಮಕತೆ ನೋಡುಗರ ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ ಎಂದರು.

ಸೃಜನಶೀಲ ಕಾರ್ಯ ಚಟುವಟಿಕೆಗಳು ಮಾನಸಿಕ ಪರಿವರ್ತನೆ ಹಾಗೂ ನೆಮ್ಮದಿಗೆ ಸಹಕಾರಿ. ಬಂಧಿಖಾನೆ ಕೈದಿಗಳು ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಕಥೆ, ಕವನ, ಚುಟುಕು ಕವನಗಳನ್ನು ಬರೆಯುವುದರಿಂದ ಅವರ ಮಾನಸಿಕ ಪರಿವರ್ತನೆ ಆಗಿ ಜೀವನದಲ್ಲಿ ಆಶಾಭಾವ ಮೂಡುತ್ತದೆ. ಇದಲ್ಲದೇ ಕೈದಿಗಳಿಗೆ ಮಠ, ಮಂದಿರ, ಚರ್ಚ್‌, ದೇವರಮೂರ್ತಿ, ಶಿವಲಿಂಗ ಮುಂತಾದವುಗಳನ್ನು ಮಾಡಲು ಅವಕಾಶ ನೀಡುವುದರಿಂದ ಅವರಲ್ಲಿ ಆಧ್ಯಾತ್ಮ, ಧ್ಯಾನ ಮತ್ತು ಸಮಾಜದ ಬಗ್ಗೆ ಒಲವು ಮೂಡುತ್ತದೆ ಎಂದು ಹೇಳಿದರು.

ಕೈದಿಗಳಲ್ಲಿ ಕೀಳರಿಮೆ ಉಂಟಾಗಿ ಅವರಲ್ಲಿ ಜಿಗುಪ್ಸೆ, ನಿರಾಶಾಭಾವ ಮೂಡುವ ಸಾಧ್ಯತೆ ಇರುತ್ತದೆ. ಅವರ ಸುಧಾರಣೆಗಾಗಿ ಜೈಲುವಾಸದ ಶಿಕ್ಷೆ ನೀಡಿದರೂ ಸಹ, ಅವರಲ್ಲಿ ಜೀವನದ ಹೊಸ ಆಶಾಭಾವ ಮೂಡಲು ಸೃಜನಾತ್ಮಕವಾದ ಕ್ರಿಯಾಶೀಲ ಕಾರ್ಯಚಟುವಟಿಕೆಗಳಲ್ಲಿ ಅವರಿಗೆ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು.

ಅವರ ಆಸಕ್ತಿ ಕ್ಷೇತ್ರಗಳಲ್ಲಿ ಮುಕ್ತವಾಗಿ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ ಬಾಬುಮಾತನಾಡಿ, ಕೈದಿಗಳು ರೂಪಿಸಿರುವ ಪ್ರತಿಯೊಂದು ಕರಕುಶಲ ವಸ್ತುಗಳು ಸುಂದರವಾಗಿವೆ. ಅವುಗಳಿಗೆ ಮಾರುಕಟ್ಟೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ| ಅನಿತಾ ಆರ್‌. ಮಾತನಾಡಿ, ಕಳೆದ ಒಂದು ತಿಂಗಳಿಂದ 5 ಜನ ಮಹಿಳಾ ಹಾಗೂ 15 ಜನ ಪುರುಷ ಕೈದಿಗಳು ಜೈಲು ಆವರಣದಲ್ಲಿ ಲಭ್ಯವಿರುವ ಅನುಪಯುಕ್ತ ಹಾಗೂ ಉಪಯೋಗಿಸಿ ಬಿಟ್ಟ ವಸ್ತುಗಳನ್ನು ಬಳಸಿ ವಿವಿಧ ರೀತಿಯ ಗೃಹೋಪಯೋಗಿ ಕರಕುಶಲ ವಸ್ತುಗಳನ್ನು ತಯಾರಿಸಿದ್ದಾರೆ. ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಅವರ ಆಸಕ್ತಿ, ಕಲೆಗಳನ್ನು ಪ್ರದರ್ಶಿಸಲು ಮುಕ್ತ ಅವಕಾಶ ನೀಡಿ, ವಸ್ತುಗಳನ್ನು ತಯಾರಿಸಲು ಅವರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಚಿಣ್ಣನ್ನವರ ಆರ್‌.ಎಸ್‌. ಸೇರಿದಂತೆ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಸಿಬ್ಬಂ ದಿ ಪಾಲ್ಗೊಂಡಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

ನಿರಾಳವಾಗಿದ್ದ ರಾಮನಗರದಲ್ಲಿ ಮೊದಲ ಕೋವಿಡ್-19 ಪ್ರಕರಣ ಪತ್ತೆ?

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

Huballi-tdy-7

ಪ್ರಮುಖ ನಾಲಾಗಳ ಸ್ವಚ್ಛತೆಗೆ ಮುಂದಾದ ಪಾಲಿಕೆ

ಹುಬ್ಬಳ್ಳಿಯಲ್ಲಿ ಬಹುತೇಕ ಸ್ತಬ್ಧ

ಹುಬ್ಬಳ್ಳಿಯಲ್ಲಿ ಬಹುತೇಕ ಸ್ತಬ್ಧ

ಕೋವಿಡ್  ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

ಕೋವಿಡ್ ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

ನರೇಗಾ ಕೆಲಸ; ಹಿರಿಯ ನಾಗರಿಕರಿಗೂ ಅವಕಾಶ

ನರೇಗಾ ಕೆಲಸ; ಹಿರಿಯ ನಾಗರಿಕರಿಗೂ ಅವಕಾಶ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ಸಂಡೇ ಲಾಕ್‌ಡೌನ್‌ಗೆ ಕಲಬುರಗಿ ಸ್ತಬ್ಧ

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಕೋವಿಡ್ : 2465 ಜನರ ಮೇಲೆ ತೀವ್ರ ನಿಗಾ

ಕೋವಿಡ್ : 2465 ಜನರ ಮೇಲೆ ತೀವ್ರ ನಿಗಾ

ರವಿವಾರದ ಲಾಕ್‌ಡೌನ್ : ಕಡಲಿಗಿಳಿಯದ ಮೀನುಗಾರರು

ರವಿವಾರದ ಲಾಕ್‌ಡೌನ್ : ಕಡಲಿಗಿಳಿಯದ ಮೀನುಗಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.