ನೌಕರಿ ನೆಪದಲ್ಲಿ ವಂಚನೆ; ನಕಲಿ ಟಿಸಿ ಸೆರೆ

Team Udayavani, Dec 7, 2019, 11:45 AM IST

ಹುಬ್ಬಳ್ಳಿ: ರೈಲ್ವೆ ಇಲಾಖೆಯಲ್ಲಿ ನೌಕರಿಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಟಿಸಿಯನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕು ಸುಣ್ಣದ ಗುಡ್ಡ, ಆಲಂಕಿ, ಹಿರೇನಗುಡಿಯ ಗಣೇಶ ಎನ್‌. ಹಳ್ಳೇರ ಎಂಬುವನೆ ಬಂಧಿತನಾಗಿದ್ದಾನೆ.

ರೈಲ್ವೆ ಇಲಾಖೆಯ ನಕಲಿ ಐಡಿ ಕಾರ್ಡ್‌ ಹೊಂದಿದ್ದ ಈತ ನಿರುದ್ಯೋಗಿ ಯುವಕ, ಯುವತಿಯರಿಗೆ ಕೊಂಕಣ ರೈಲ್ವೆ ಕಾರ್ಪೊರೇಶನ್‌ದಲ್ಲಿ ಮತ್ತು ನೈಋತ್ಯ ರೈಲ್ವೆಯಲ್ಲಿ ಗ್ರುಪ್‌ ಸಿ ಮತ್ತು ಡಿ ಹಾಗೂ ವಿವಿಧ ಕೆಲಸ ಕೊಡಿಸುವುದಾಗಿ ನಂಬಿಸಿ ಅವರಿಂದ ಮುಂಗಡವಾಗಿ 10-15ಸಾವಿರ ರೂ. ಇಸಿದುಕೊಂಡು, ನಂತರ ತನ್‌ ಮೊಬೈಲ್‌ ಸ್ವೀಚ್‌ ಆಫ್‌ ಮಾಡುತ್ತಿದ್ದ. ಅಲ್ಲದೆ ಕೊಂಕಣ ರೈಲ್ವೆಯ ನಕಲಿ ಸೀಲ್‌ ಉಪಯೋಗಿಸಿ ಯುವಕ, ಯುವತಿಯರಿಗೆ ನಕಲಿ ನೇಮಕಾತಿ ಆದೇಶ ಪತ್ರ ನೀಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯ ಡಿವೈಎಸ್‌ಪಿ ಬಿ.ಬಿ. ಪಾಟೀಲ, ಸಿಪಿಐ ಜೆ.ಎಂ. ಕಾಲಿಮಿರ್ಚಿ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಾಲಂ ಹುಸೇನ್‌, ಆರ್‌ಪಿಎಫ್‌ ಇನ್‌ ಸ್ಪೆಕ್ಟರ್‌ ಸಂಜಯ ಕಾರೆಕರ ನೇತೃತ್ವದಲ್ಲಿ ಸಿಬ್ಬಂದಿಯು ಶುಕ್ರವಾರ ಕಾರ್ಯಾಚರಣೆ ನಡೆಸಿ, ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಟಿಸಿ ಎಂದು ತಿರುಗಾಡುತ್ತಿದ್ದ ಗಣೇಶನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತನು ನೌಕರಿ ಕೊಡಿಸುವುದಾಗಿ ರಾಜ್ಯದ ವಿವಿಧ ಪ್ರದೇಶಗಳ ಸುಮಾರು 20ಕ್ಕೂ ಅಧಿಕ ನಿರುದ್ಯೋಗಿಗಳಿಂದ ಹಣ ವಸೂಲಿ ಮಾಡಿದ್ದ ಎಂದು ತಿಳಿದುಬಂದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ