ಚಿನ್ನಾಭರಣಗಳಿಗೆ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ; ಆರೋಪಿ ಬಂಧನ
Team Udayavani, Dec 18, 2020, 9:00 PM IST
ಹುಬ್ಬಳ್ಳಿ: ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಹಾಕಿ, ಪಾಲಿಷ್ ಮಾಡಿಕೊಡುವುದಾಗಿ ನಂಬಿಸಿ ಮೋಸಮಾಡುತ್ತಿದ್ದ ವಂಚಕನೊಬ್ಬನನ್ನು, ಇಲ್ಲಿನ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಸುನಿಲ ಪತ್ತಾರ ಬಂಧಿತ ಆರೋಪಿ. ಆತನಿಂದ 20 ಲಕ್ಷ ರೂ. ಮೌಲ್ಯದ 330 ಗ್ರಾಂ ಚಿನ್ನಾಭರಣ ಹಾಗೂ 3.56 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ವಂಚಕನ ಬಗ್ಗೆ ಸಾರ್ವಜನಿಕರು ದೂರು ನೀಡಿದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ, ದಾಳಿ ನಡೆಸಿ ಚಿನ್ನಾಭರಣ ಸಮೇತ ಸುನಿಲನನ್ನು ಬಂಧಿಸಲಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಐಸಿಎಂಆರ್ ಮುಖ್ಯಸ್ಥ ಬಲರಾಮ್ ಗೆ ಕೋವಿಡ್ 19 ಸೋಂಕು ದೃಢ, ಏಮ್ಸ್ ಗೆ ದಾಖಲು
ವೈದ್ಯರ ಮೇಲೆ ಹಲ್ಲೆ
ಮಾಸ್ಕ್ ಧರಿಸದ್ದರಿಂದ ಕೋವಿಡ್ ಪರೀಕ್ಷೆಗೆ ಮುಂದಾದ ವೈದ್ಯರ ಮೇಲೆ ಮೂವರು ಮಹಿಳೆಯರು ಹಲ್ಲೆ ಮಾಡಿದ ಘಟನೆ, ಶುಕ್ರವಾರ (ಡಿ.18) ಸಂಜೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಾಸ್ಕ್ ಹಾಕಿಕೊಳ್ಳದಿದ್ದ ಮಹಿಳೆಗೆ ವೈದ್ಯರು ಕೋವಿಡ್ ತಪಾಸಣೆ ಮಾಡಲು ಹೋದಾಗ ನಿರಾಕರಿಸಿದ್ದಾರೆ ಮತ್ತು ತಮ್ಮ ಮೊಬೈಲ್ ನಂಬರ್ ನೀಡಲು ಹಿಂದೇಟು ಹಾಕಿ, ವೈದ್ಯೆ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಉಪನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸೆಸ್ ಹೆಚ್ಚಳ ವಿರೋಧಿಸಿ ಡಿ. 21ರಂದು ರಾಜ್ಯಾದ್ಯಾಂತ ಎಪಿಎಂಸಿ ಬಂದ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444