Udayavni Special

ಬೆಣಚಿ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

ಗ್ರಾಮದ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣ

Team Udayavani, Oct 2, 2019, 10:08 AM IST

huballi-tdy-3

ಅಳ್ನಾವರ: ಪ್ರತಿಶತ 80 ಕರ ವಸೂಲಿ ಮತ್ತು ಪ್ರತಿ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿದ ಸಾಧನೆಗೈದ ಬೆಣಚಿ ಗ್ರಾಮವು “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ.

ಧಾರವಾಡದಿಂದ 30 ಕಿ.ಮೀ. ಅಂತದಲ್ಲಿರುವ ಬೆಣಚಿ ಗ್ರಾಪಂ ಈ ಹಿಂದೆ ಅರವಟಗಿ ಮಂಡಳ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿತ್ತು. 1994ರಲ್ಲಿ ಸ್ವತಂತ್ರ ಗ್ರಾಪಂ ಆಗಿ ಅಸ್ತಿತ್ವಕ್ಕೆ ಬಂದಿದೆ. ಬೆಣಚಿ ಗ್ರಾಪಂ ಎರಡು ಕಂದಾಯ ಗ್ರಾಮಗಳು ಹಾಗೂ ಎರಡು ಬೆಚರಾಕ ಗ್ರಾಮಗಳನ್ನು ಒಳಗೊಂಡಿದ್ದು, 2011ರ ಜನಗಣತಿ ಪ್ರಕಾರ 3,509 ಜನಸಂಖ್ಯೆ ಹೊಂದಿದೆ.

ಈ ಗ್ರಾಮದಲ್ಲಿ ಸುಮಾರು 690 ಕುಟುಂಬಗಳು ವಾಸಿಸುತ್ತಿದ್ದು, ಹೆಚ್ಚು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಪ್ರಾಥಮಿಕ ಹಂತದಿಂದ ಹತ್ತನೇಯ ತರಗತಿವರೆಗೆ ಶೈಕ್ಷಣಿಕ ಸೌಲಭ್ಯ ಒಳಗೊಂಡಿದ್ದು, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಹೊಂದಿದೆ. ತೆರಿಗೆ ವಸೂಲಿಯಲ್ಲಿ ಮುಂಚೂಣಿಯಲ್ಲಿರುವ ಬೆಣಚಿ ಗ್ರಾಪಂ ಶೇ.80ಕ್ಕೂ ಅಧಿಕ ಪ್ರಮಾಣದಲ್ಲಿ ತೆರಿಗೆ ಸಂಗ್ರಹಣೆ ಮಾಡಿದ್ದು, ಪ್ರತಿ ಕುಟುಂಬ ಶೌಚಾಲಯ ಹೊಂದಿದೆ. ಬಯಲು ಶೌಚ ಮುಕ್ತ ಗ್ರಾಮವಾಗಿದ್ದು ವಿಶೇಷ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಆನಂದ ಕೆಂಚಣ್ಣವರ, ಗ್ರಾಪಂ ಅಧ್ಯಕ್ಷೆ ಅಮೀನಾಬೇಗಂ ನದಾಫ್‌ ಅವರ ಮುಂದಾಳತ್ವದಲ್ಲಿ ಉಪಾಧ್ಯಕ್ಷ ಪ್ರಕಾಶ ಕುಣಕಿಕೊಪ್ಪ, ಸದಸ್ಯರಾದ , ಮಹಾದೇವ ಗೋದಗೇರಿಕರ, ರುಕ್ಮವ್ವ ದುಬ್ಬನಮರಡಿ, ರಹಿಮಾನಸಾಬ ದೊಡಮನಿ, ಸುವರ್ಣಾ ಬೈಲೂರ, ರೇಖಾ ಹರಿಜನ, ಜಗದೀಶ ಜಗತಾಪ ಮತ್ತು ಇತರೆ ಸಿಬ್ಬಂದಿಗಳ ಸಹಕಾರದಲ್ಲಿ ಗ್ರಾಮದ ಅಭಿವೃದ್ಧಿ ಸಾಧಿಸಿದ್ದಾರೆ.

ಇಂದು ಪ್ರಶಸ್ತಿ ಪ್ರದಾನ: ಉತ್ತಮ ಆಡಳಿತ, ಗ್ರಾಮಸ್ಥರ ಪಾಲ್ಗೊಳ್ಳುವಿಕೆ, ಮೂಲ ಸೌಕರ್ಯಗಳನ್ನು ಒದಗಿಸುವಿಕೆ, ಸರ್ಕಾರಿ ಯೋಜನೆಗಳ ಸದ್ಬಳಕೆ, ಆರ್ಥಿಕ ಸುಧಾರಣೆ ಎಲ್ಲವನ್ನು ಗಮನಿಸಿ ನೀಡಲಾಗುತ್ತಿರುವ “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಬೆಣಚಿ ಗ್ರಾಪಂ ಪಾತ್ರವಾಗಿದೆ. ಅ.2ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ವಿತರಿಸಲಾಗುತ್ತದೆ. ಗ್ರಾಮ ಪಿಡಿಒ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸದಸ್ಯರು ಮತ್ತು ಸಿಬ್ಬಂದಿಯವರ ಸಹಕಾರದಲ್ಲಿ ಸ್ವತ್ಛತೆ ನೈರ್ಮಲೀಕರಣ ಜೊತೆಗೆ ಕರ ವಸೂಲಿಯಲ್ಲಿ ಉತ್ತಮ ಪ್ರಗತಿಸಾಧಿಸಲು ಸಾಧ್ಯವಾಗಿದೆ. ಗಾಂಧಿಗ್ರಾಮ ಪುರಸ್ಕಾರ ಪಡೆಯುವುದು ಹೆಮ್ಮೆಯ ಸಂಗತಿ. ಆನಂದ ಕೆಂಚನ್ನವರ, ಬೆಣಚಿ ಪಿಡಿಒ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ವಾಕಿಂಗ್ ಹೋದವರಿಗೆ ಕಾರು ಡಿಕ್ಕಿ: ಇಬ್ಬರು ಮಹಿಳೆಯರು ಸಾವು, ಓರ್ವ ಮಹಿಳೆ ಗಂಭೀರ

ಇಂದು ಬೆಂಗಳೂರು ಮಂಗಳೂರು ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಇಂದು ಮಂಗಳೂರಿನಿಂದ ಬೆಂಗಳೂರಿಗೆ ಮಾತ್ರ ವಿಮಾನ ಸಂಚಾರ! ಮುಂಬೈ, ಚೆನ್ನೈ ಸಂಚಾರ ರದ್ದು

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಉಡುಪಿ.ಉಚಿತ ಸಿಟಿ ಬಸ್ ಸೇವೆಗೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ಹಾಕಿ ಲೆಜೆಂಡ್, ತ್ರಿವಳಿ ಒಲಿಂಪಿಕ್ ಚಿನ್ನದ ಪದಕವೀರ ಬಲ್ಬೀರ್ ಸಿಂಗ್ ನಿಧನ

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ವಿಜಯಪುರ: ಬೆಂಗಳೂರು ಬಸ್ ಗಳು ಫುಲ್, ಇತರೆ ಕಡೆಗೆ ಡಲ್

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಕಲ್ಪತರು ನಾಡು ತುಮಕೂರಿನಲ್ಲಿ ಕೋವಿಡ್ 19 ಗೆ ಮತ್ತೊಂದು ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

Huballi-tdy-7

ಪ್ರಮುಖ ನಾಲಾಗಳ ಸ್ವಚ್ಛತೆಗೆ ಮುಂದಾದ ಪಾಲಿಕೆ

ಹುಬ್ಬಳ್ಳಿಯಲ್ಲಿ ಬಹುತೇಕ ಸ್ತಬ್ಧ

ಹುಬ್ಬಳ್ಳಿಯಲ್ಲಿ ಬಹುತೇಕ ಸ್ತಬ್ಧ

ಕೋವಿಡ್  ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

ಕೋವಿಡ್ ಜಾಗೃತಿ: ಟಿಬೆಟಿಯನ್ನರ ಸಾರ್ಥಕ ಸೇವೆ

ನರೇಗಾ ಕೆಲಸ; ಹಿರಿಯ ನಾಗರಿಕರಿಗೂ ಅವಕಾಶ

ನರೇಗಾ ಕೆಲಸ; ಹಿರಿಯ ನಾಗರಿಕರಿಗೂ ಅವಕಾಶ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಬೇಸಿಗೆ ಬಾಯಾರಿಕೆ ತಣಿಸಿದ ಬ್ಯಾರೇಜ್‌

ಬೇಸಿಗೆ ಬಾಯಾರಿಕೆ ತಣಿಸಿದ ಬ್ಯಾರೇಜ್‌

ಮಾತೃ ಇಲಾಖೆಗೆ ಸಿಬ್ಬಂದಿ ವಾಪಸ್‌ ಕರೆಸಲು ಸಹಕಾರಿ ಸಚಿವರ ಪತ್ರ

ಮಾತೃ ಇಲಾಖೆಗೆ ಸಿಬ್ಬಂದಿ ವಾಪಸ್‌ ಕರೆಸಲು ಸಹಕಾರಿ ಸಚಿವರ ಪತ್ರ

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

ಶಿವಮೊಗ್ಗ: ಕೋವಿಡ್ ನಿಂದ ಗುಣಮುಖರಾದ ನಾಲ್ವರು ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆ

25-May-2

ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆ ಆಗರ

ನೂರು ದಿನದಲ್ಲಿ ಹತ್ತು ಸಾಧನೆ

ನೂರು ದಿನದಲ್ಲಿ ಹತ್ತು ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.