Udayavni Special

ಸಂಪೂರ್ಣ ಲಾಕ್‌ಗೆ ಜನರಿಂದ ಉತ್ತಮ ಸ್ಪಂದನೆ

ಜನಸಂಚಾರ ಎಂದಿಗಿಂತ ವಿರಳ! ­ನಿಯಮ ಪಾಲಿಸಿದರೆ ಸೋಂಕು ನಿಯಂತ್ರಣ ಸರಳ! ­ತಪ್ಪಿದರೆ ಭವಿಷ್ಯ ಮತ್ತಷ್ಟು ಕರಾಳ

Team Udayavani, May 23, 2021, 5:39 PM IST

22alnavar1

ಹುಬ್ಬಳ್ಳಿ: ಜಿಲ್ಲೆಯಲ್ಲಿ ಎರಡು ದಿನಗಳ ಸಂಪೂರ್ಣ ಲಾಕ್‌ಡೌನ್‌ ಮೊದಲ ದಿನವಾದ ಶನಿವಾರ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳನ್ನು ಬಿಟ್ಟರೆ ಮಿಕ್ಕೆಲ್ಲ ಅಂಗಡಿ, ಮಳಿಗೆಗಳು ಮುಚ್ಚಿದ್ದವು.

ಬೆಳಗ್ಗೆ 6ರಿಂದ 8 ಗಂಟೆವರೆಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು ಹಾಗೂ ತರಕಾರಿ ಖರೀದಿಗೆ ಅವಕಾಶ ನೀಡಿದ್ದು, 7:30 ಗಂಟೆಯಿಂದಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ ಎಲ್ಲವನ್ನು ಬಂದ್‌ ಮಾಡಿಸಿದರು.

ಶುಕ್ರವಾರ ಎಲ್ಲ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಶನಿವಾರ ಹಾಗೂ ರವಿವಾರದ ಲಾಕ್‌ ಡೌನ್‌ ಕುರಿತು ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದರು. ಜನರು ಕೂಡಾ ಇದಕ್ಕೆ ಸ್ಪಂದಿಸುವ ಮೂಲಕ ಮನೆಯಲ್ಲಿ ಉಳಿದಿರುವುದು ಕಂಡು ಬಂದಿತು. ಡಿಸಿಪಿ ರೌಂಡ್ಸ್‌: ಪೊಲೀಸ್‌ ಇಲಾಖೆ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು, ಡಿಸಿಪಿ ಕೆ.ರಾಮರಾಜನ್‌ ನಗರ ಪ್ರದಕ್ಷಿಣೆ ಹಾಕುವ ಮೂಲಕ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿರುವುದು ಕಂಡುಬಂತು.

ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಉಪಾಹಾರ, ಊಟ ಲಭಿಸಿರುವ ಕುರಿತು ಮಾಹಿತಿ ಪಡೆದ ಅವರು ಎಲ್ಲರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು. ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪೊಲೀಸ್‌ ತಪಾಸಣೆ ಬಿಗಿಗೊಳಿಸಲಾಗಿತ್ತು. ಅನಗತ್ಯ ಹಾಗೂ ಸುಳ್ಳು ಹೇಳಿ ಸಂಚರಿಸುತ್ತಿರುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಿದ್ದಲ್ಲದೆ ವಾಹನಗಳನ್ನು ಸೀಜ್‌ ಮಾಡಿದರು.

ಬಿಕೋ ಎನ್ನುತ್ತಿರುವ ರಸ್ತೆಗಳು: ಸದಾ ವಾಹನಗಳಿಂದ ಗಿಜಿಗಿಡುತ್ತಿದ್ದ ನಗರದ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಚನ್ನಮ್ಮ ವೃತ್ತ, ನೀಲಿಜಿನ್‌ ರಸ್ತೆ, ಕೇಶ್ವಾಪುರ ರಸ್ತೆ, ವಿದ್ಯಾನಗರ, ಗೋಕುಲ ರಸ್ತೆ, ಹೊಸೂರ ವೃತ್ತ, ಸ್ಟೇಶನ್‌ ರಸ್ತೆ, ಕೊಪ್ಪಿಕರ ರಸ್ತೆ, ಪಿಬಿ ರಸ್ತೆ ಸೇರಿದಂತೆ ನಗರದ ಎಲ್ಲ ರಸ್ತೆಗಳು ಜನ ಹಾಗೂ ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ.

ಸಾಮಾಜಿಕ ಅಂತರ ಮರೆತರು: ಗೋಕುಲ ರಸ್ತೆ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಹಾಕುವ ಪ್ರಕ್ರಿಯೆಗೆ ಚಾಲನೆ ಹಿನ್ನೆಲೆಯಲ್ಲಿ 45 ವರ್ಷದೊಳಗಿನ ಸಿಬ್ಬಂದಿ ಆಗಮಿಸಿದ್ದರು. ಆದರೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ನಿಂತಿದ್ದರು. ಜೊತೆಗೆ ನಾನು ಮೊದಲು, ನೀನು ಮೊದಲು ಎನ್ನುವಂತೆ ವರ್ತಿಸಿದ್ದು ಕಂಡುಬಂದಿತು.

ಟಾಪ್ ನ್ಯೂಸ್

Maharashtra: Former minister Sunil Deshmukh quits BJP, joins Congress on Rahul Gandhi’s birthday

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

The world health organization says new species of coronavirus are spreading across the world data are available variant concern virus origin

ಕೋವಿಡ್ ಹೊಸ ರೂಪಾಂತರಿ ‘ಲಾಂಡಾ’ 29 ದೇಶಗಳಲ್ಲಿ ಪತ್ತೆ : ವಿಶ್ವ ಆರೋಗ್ಯ ಸಂಸ್ಥೆ

ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ.ಶಿವಕುಮಾರ್ ಆಗ್ರಹ

ನೀರಾವರಿ ಇಲಾಖೆ ಅವ್ಯವಹಾರಗಳ ತನಿಖೆಗೆ ಜಂಟಿ ಸದನ ಸಮಿತಿ ರಚನೆಗೆ ಡಿ.ಕೆ.ಶಿವಕುಮಾರ್ ಆಗ್ರಹ

ಕೋವಿಡ್ ಇಳಿಮುಖ: ತೆಲಂಗಾಣದಲ್ಲಿ ಜೂ.20ರಿಂದ ಲಾಕ್ ಡೌನ್ ನಿರ್ಬಂಧ ಸಂಪೂರ್ಣ ತೆರವು

ಕೋವಿಡ್ ಇಳಿಮುಖ: ತೆಲಂಗಾಣದಲ್ಲಿ ಜೂ.20ರಿಂದ ಲಾಕ್ ಡೌನ್ ನಿರ್ಬಂಧ ಸಂಪೂರ್ಣ ತೆರವು

ಮೋದಿಯವರ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ದ ಅಷ್ಟೇ: ಸಿದ್ದರಾಮಯ್ಯ

ಮೋದಿಯವರ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ದ ಅಷ್ಟೇ: ಸಿದ್ದರಾಮಯ್ಯ

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆ ಬರೆದ ಶಫಾಲಿ ವರ್ಮಾ

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಾಖಲೆ ಬರೆದ ಶಫಾಲಿ ವರ್ಮಾ

Udayavani Vitla News

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಲಾರಿ: ಚಾಲಕ ಅಪಾಯದಿಂದ ಪಾರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid vaccination

ಲಸಿಕೆ ವಿರುದ್ಧ ಪ್ರತಿಪಕ್ಷಗಳ ಅಪಪ್ರಚಾರ

ಖಾಸಗಿ ಶಾಲೆ ಶಿಕ್ಷಕಿಗೆ ನರೇಗಾದಡಿ ಕೂಲಿ ಕೆಲಸ!

d್ಗಹಜಹಗ್ದ್ಗಹಜ

ನರೇಗಾ ಯೋಜನೆ ಸದ್ಬಳಕೆಯಾಗಲಿ : ಸಿಇಒ

ಸದ್ಗಹಜಹಗ್ದಸಅಸದ್ಗಹ

ಲಿಂಗರಾಜಪ್ಪ  ಅಪ್ಪ ಮನೆಗೆ ತೆರಳಿ ಖಂಡ್ರೆ ಸಾಂತ್ವಾನ

‌ಕದ್ರಾ ಅಣೆಕಟ್ಟಿನಿಂದ 5500 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ

‌ಕದ್ರಾ ಅಣೆಕಟ್ಟಿನಿಂದ 16627 ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ

MUST WATCH

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

ಹೊಸ ಸೇರ್ಪಡೆ

Maharashtra: Former minister Sunil Deshmukh quits BJP, joins Congress on Rahul Gandhi’s birthday

ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಮಹಾರಾಷ್ಟ್ರದ ಮಾಜಿ ಸಚಿವ ಸುನಿಲ್ ದೇಶ್ ಮುಖ್..!

fಗಹಜಕಲಕಜಹಗ್ದಸ

ಗೋವಾ ಬಿಜೆಪಿ ಸರ್ಕಾರ ಜನತೆಯ ಪ್ರೀತಿ ಕಳೆದುಕೊಂಡಿದೆ : ದಿನೇಶ್ ಗುಂಡೂರಾವ್

covid vaccination

ಲಸಿಕೆ ವಿರುದ್ಧ ಪ್ರತಿಪಕ್ಷಗಳ ಅಪಪ್ರಚಾರ

ಖಾಸಗಿ ಶಾಲೆ ಶಿಕ್ಷಕಿಗೆ ನರೇಗಾದಡಿ ಕೂಲಿ ಕೆಲಸ!

ಅಸೆರತಯತರೆಡೆರತಯುಯತರೆತಯು

ಸದಾನಂದಗೌಡರಿಗೆ ಅವಮಾನ ಮಾಡುವ ಕೆಲಸವನ್ನು ವಿರೋಧ ಪಕ್ಷ ಮಾಡಿದೆ : ಕಟ್ಟಾ ಸುಬ್ರಹ್ಮಣ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.