Udayavni Special

ಮಳೆರಾಯಾ, ಇನ್ನೆಷ್ಟು ಸುರಿಯುವೆ ಮಾರಾಯಾ


Team Udayavani, Oct 21, 2019, 10:39 AM IST

huballi-tdy-2

ಅಳ್ನಾವರ: ಸತತ ಮಳೆಗೆ ಸಮೀಪದ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಮತ್ತೆ ಉಕ್ಕಿ ಹರಿಯುತ್ತಿದ್ದು, ಅಪಾಯದ ಮುನ್ಸೂಚನೆ ಎದುರಾಗಿದೆ. ಕಳೆದೆರಡು ತಿಂಗಳ ಹಿಂದೆ ಜನತೆಯಲ್ಲಿ ಉಂಟಾಗಿದ್ದ ಆತಂಕ ಮತ್ತು ಅಪಾಯದ ಕಹಿ ಅನುಭವವನ್ನು ಮರೆಯುವ ಮೊದಲೇ ಮತ್ತೂಮ್ಮೆ ವರುಣ ತನ್ನ ಆರ್ಭಟ ಶುರು ಮಾಡಿದ್ದು, ಒಂದೆರಡು ದಿವಸಗಳಿಂದ ಸುರಿಯುತ್ತಿರುವ ಹಿಂಗಾರು ಮಳೆ ಭಯ ಹುಟ್ಟಿಸಿದೆ. ಆಗಸ್ಟ್‌ನಲ್ಲಿ ಹುಲಿಕೇರಿ ಕೆರೆ ತುಂಬಿ ಒಡೆಯುವ ಭೀತಿಯಲ್ಲಿಯೇ ಜನ ಹಗಲಿರುಳು ಕಾಲ ಕಳೆಯುವಂತಾಯಿತು.

ಅಳ್ನಾವರ ಪಟ್ಟಣದ ಕೆಲವೊಂದು ಬಡಾವಣೆಯ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಅಂದಿನ ಭಯದ ವಾತಾವರಣ ಮತ್ತೂಮ್ಮೆ ಎದುರಾಗುವ ಸ್ಥಿತಿ ನಿರ್ಮಾಣವಾಗಿದ್ದು, ಕೆರೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಕೆರೆಯ ಕೋಡಿ ತುಂಬಿ ಹರಿದು ಗೋಡೆ ಸಂಪೂರ್ಣ ಕುಸಿಯುವ ಹಂತಕ್ಕೆ ಬಂದಾಗ ಮಳೆ ನಿಂತಿದ್ದರಿಂದ ಜನರು ಆತಂಕದಿಂದ ಹೊರಗೆ ಬಂದಿದ್ದರು. ಈಗ ಪುನಃ ಕೋಡಿ ತುಂಬಿ ಹರಿಯುತ್ತಿರುವುದರಿಂದ ಒಡೆಯುವ ಕೊನೆಯ ಹಂತದಲ್ಲಿರುವ ಗೋಡೆ ಕುಸಿಯುವ ಸಂಭವ ಹೆಚ್ಚಾಗಿದೆ. ನೀರಿನ ರಭಸವನ್ನು ತಡೆಯಲು ಗೋಡೆಯ ಹಿಂಬದಿಯಲ್ಲಿ ಮಣ್ಣು ತುಂಬಿದ ಚೀಲಗಳನ್ನು ಇಡಲಾಗಿದೆ.

ಆದರೂ ಅದನ್ನು ಮೀರಿ ನೀರು ಎತ್ತರಕ್ಕೆ ಬಂದಿರುವುದರಿಂದ ಮತ್ತೇನೋ ಅಪಾಯ ಕಾದಿದೆ ಎನ್ನುವ ವಾತಾವರಣ ಜನರಲ್ಲಿ ಮೂಡಿದೆ. ಗೋಡೆಯ ಕೆಳ ಭಾಗದಲ್ಲಿ ಭೂಮಿ ಸಡಿಲಗೊಂಡಿದ್ದು ಯಾವುದೇ ಸಮಯದಲ್ಲಿ ಕುಸಿಯಬಹುದಾಗಿದೆ. ಈಡೇರದ ಭರವಸೆ: ಆಗಸ್ಟ್‌ ತಿಂಗಳಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಹುಲಿಕೇರಿಗೆ ಭೇಟಿ ಕೊಟ್ಟಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ

ಜಗದೀಶ ಶೆಟ್ಟರ, ಶಾಸಕ ಸಿ.ಎಂ. ನಿಂಬಣ್ಣವರ ಜಿಲ್ಲಾಧಿಕಾರಿ ದೀಪಾ ಚೋಳನ್‌ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸನ್ನದ್ಧವಾಗಿದೆ. ಮಳೆ ನಿಂತ ಮೇಲೆ ಕೆರೆಯ ಸಂಪೂರ್ಣ ಸುಧಾರಣೆಗೆ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇನ್ನುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎನ್ನುವ ಮಾಹಿತಿ ದೊರೆತಿದೆ.

ಮುನ್ನೆಚ್ಚರಿಕೆ: ಮಳೆ ಮೂನ್ಸೂಚನೆ ಅರಿತ ನೀರಾವರಿ ಇಲಾಖೆ ಅಧಿಕಾರಿಗಳು ಇಂದಿರಮ್ಮನ ಕೆರೆಯ ಗೇಟ್‌ ಗಳನ್ನು ತೆರೆದಿದ್ದು, ನೀರು ಹೊರಗೆ ಬಿಡಲಾಗುತ್ತಿದೆ. ಆದರೂ ಕೆರೆಯಲ್ಲಿ ಹಿನ್ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಈ ಭಾಗದ ಸುತ್ತಲಿನ ಪ್ರದೇಶಗಳಲ್ಲಿ ಸತತವಾಗಿ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳ ಕೊಳ್ಳಗಳೆಲ್ಲ ತುಂಬಿಕೊಂಡು ಅಪಾಯದ ಮಟ್ಟ ತಲುಪಿವೆ.

ಎಲ್ಲೆಡೆ ಮಳೆ ಮತ್ತೆ ಪ್ರಾರಂಭವಾಗಿದ್ದು ನಾಗರಿಕರು ಅದರಲ್ಲೂ ಮುಖ್ಯವಾಗಿ ಹಳ್ಳ ಮತ್ತು ಕೆರೆಯ ಅಕ್ಕಪಕ್ಕದಲ್ಲಿ ವಾಸಿಸುವವರು ಜಾಗರೂಕರಾಗಿರಬೇಕು. ಅ ಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇಟ್ಟು ಯಾವುದೇ ತುರ್ತು ಸಂದರ್ಭದಲ್ಲಿಯೂ ಕಾರ್ಯ ಪ್ರವೃತ್ತರಾಗಲಿದ್ದು, ಜನರು ಭಯ ಪಡುವ ಅಗತ್ಯವಿಲ್ಲ. ಹಿಂದಿನ

ಮಳೆಯಿಂದ ಹಾನಿಗೊಳಗಾದ ರಸ್ತೆಗಳು, ಸೇತುವೆಗಳ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಾನಿಗೊಳಗಾದರೈತರಿಗೂ ಹೆಚ್ಚಿನ ಪರಿಹಾರ ಕೊಡಿಸಲು ಒತ್ತಾಯಿಸುತ್ತೇನೆ. ಸಿ.ಎಂ. ನಿಂಬಣ್ಣವರ, ಶಾಸಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ

ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ

ಪಕ್ಷ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಶ್ರೀರಾಮುಲು

ಪಕ್ಷ ಹೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ: ಶ್ರೀರಾಮುಲು

ಶ್ವೇತಭವನದ ಎದುರು ಭುಗಿಲೆದ್ದ ಹಿಂಸಾಚಾರ, ಗುಪ್ತ ಬಂಕರ್ ನಲ್ಲಿ ರಕ್ಷಣೆ ಪಡೆದ ಟ್ರಂಪ್!

ಶ್ವೇತಭವನದ ಎದುರು ಭುಗಿಲೆದ್ದ ಹಿಂಸಾಚಾರ, ಗುಪ್ತ ಬಂಕರ್ ನಲ್ಲಿ ರಕ್ಷಣೆ ಪಡೆದ ಟ್ರಂಪ್!

ಕೋವಿಡ್ ಕಾರಣದಿಂದ ದೇವಸ್ಥಾನಗಳಿಗೆ 600 ಕೋಟಿ ನಷ್ಟ; ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೋವಿಡ್ ಕಾರಣದಿಂದ ದೇವಸ್ಥಾನಗಳಿಗೆ 600 ಕೋಟಿ ನಷ್ಟ; ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಅತಹತ್ಯೆ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಆತ್ಮಹತ್ಯೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ನಿರ್ವಹಣೆಗೆ ಗೃಹ ಇಲಾಖೆಯಿಂದ ಎಲ್ಲ ಕ್ರಮ: ಸುರೇಶ್‌ ಕುಮಾರ್

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ನಿರ್ವಹಣೆಗೆ ಗೃಹ ಇಲಾಖೆಯಿಂದ ಎಲ್ಲ ಕ್ರಮ: ಸುರೇಶ್‌ ಕುಮಾರ್

ಖನ್ನತೆಯಿಂದ ದೂರವಾಗಲು ಗಿಡಮೂಲಿಕೆ ಔಷಧ

ಖನ್ನತೆಯಿಂದ ದೂರವಾಗಲು ಗಿಡಮೂಲಿಕೆ ಔಷಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂಬಾಕು ವಿರುದ್ಧ ಜನ ಜಾಗೃತಿ ಅಗತ್ಯ: ದೀಪಾ

ತಂಬಾಕು ವಿರುದ್ಧ ಜನ ಜಾಗೃತಿ ಅಗತ್ಯ: ದೀಪಾ

ನಾಲ್ಕು ಸಾವಿರ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆ

ನಾಲ್ಕು ಸಾವಿರ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಣೆ

ಪಾಲಿಕೆ ಒಡೆತನದ ಕಟ್ಟಡಗಳ ಮೇಲೆ ಶೀಘ್ರ ಸೌರ ಘಟಕ

ಪಾಲಿಕೆ ಒಡೆತನದ ಕಟ್ಟಡಗಳ ಮೇಲೆ ಶೀಘ್ರ ಸೌರ ಘಟಕ

ಇಂದಿನಿಂದ ನ್ಯಾಯಾಲಯ ಕಲಾಪ ಪುನರಾರಂಭ

ಇಂದಿನಿಂದ ನ್ಯಾಯಾಲಯ ಕಲಾಪ ಪುನರಾರಂಭ

ಕೋವಿಡ್ ಸಂಕಷ್ಟಕ್ಕೆ ಪ್ರದೀಪ ಶೆಟ್ಟರ ಸ್ಪಂದನೆ

ಕೋವಿಡ್ ಸಂಕಷ್ಟಕ್ಕೆ ಪ್ರದೀಪ ಶೆಟ್ಟರ ಸ್ಪಂದನೆ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

01-June-23

ಕೋವಿಡ್ ಮುಂಜಾಗ್ರತೆ ಅಗತ್ಯ

01-June-22

ಹೊಟ್ಟೆಗೆ ರೊಟ್ಟಿ ಖಾತ್ರಿಪಡಿಸಿದ ರಟ್ಟೆ ಶಕ್ತಿ !

ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಗಳು

ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಗಳು

01-June-21

ಸಮಸ್ಯೆಗೆ ಸ್ಪಂದಿಸಲು ಸೂಚನೆ

ಕನಕಾಚಲಪತಿ ಯಾತ್ರಾ ನಿವಾಸದಲ್ಲಿ ರಕ್ತದಾನ

ಕನಕಾಚಲಪತಿ ಯಾತ್ರಾ ನಿವಾಸದಲ್ಲಿ ರಕ್ತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.