ಕೋವಿಡ್ ಆತಂಕದ ಮಧ್ಯೆ ರಂಗೇರಿದ ಹೋಳಿ


Team Udayavani, Mar 30, 2021, 11:46 AM IST

ಕೋವಿಡ್ ಆತಂಕದ ಮಧ್ಯೆ ರಂಗೇರಿದ ಹೋಳಿ

ಧಾರವಾಡ: ಕೋವಿಡ್‌ನ‌ 2ನೇ ಅಲೆಯ ಆತಂಕದಮಧ್ಯೆಯೂ ಹೋಳಿ ಹಬ್ಬವನ್ನು ಸೋಮವಾರಸಂಭ್ರಮದಿಂದ ಆಚರಿಸಲಾಯಿತು.

ಕಳೆದ ವರ್ಷ ಕೋವಿಡ್ ಭೀತಿಯಿಂದ ಹಬ್ಬಕಳೆಗುಂದಿತ್ತು. ಅದಕ್ಕೂ ಹಿಂದಿನ ವರ್ಷ ಕಿಲ್ಲರ್‌ಕಟ್ಟಡ ದುರಂತದಿಂದ ಹೋಳಿ ಸಂಭ್ರಮವೇ ಮಾಯವಾಗಿತ್ತು. ಇದೀಗ ಕೋವಿಡ್‌ ಅಲೆಯ 2ನೇಆತಂಕ ಜೋರಾಗಿದ್ದರೂ ಇದಕ್ಕೆ ಮಣೆ ಹಾಕದ ಜನರು ಹಬ್ಬವನ್ನು ಮತ್ತಷ್ಟು ಜೋರಾಗಿಯೇ ಆಚರಿಸಿದ್ದಾರೆ.

ಕಳೆದ ವರ್ಷದ ಕೊರೊನಾ ಭೀತಿಯಿಂದ ಹಬ್ಬದಾಟಕ್ಕೆ ಹಿಂದೇಟು ಹಾಕಿದ್ದ ಜನತೆ ಬಹುತೇಕ ಅರಿಶಿಣಪುಡಿ, ಪರಿಸರ ಸ್ನೇಹಿಯ ಬಣ್ಣದಾಟಕ್ಕೆ ಜನತೆ ಮೊರೆಹೋಗಿತ್ತು. ಆದರೆ ಕೋವಿಡ್‌ ಭಯ ಮನಸ್ಸಿನಿಂದದೂರ ಆಗಿದೆಯೋ ಅಥವಾ ನಿರ್ಲಕ್ಷéವೋ ಗೊತ್ತಿಲ್ಲ ಧಾರಾನಗರಿ ಜನತೆ ಹಾಗೂ ಗ್ರಾಮೀಣ ಭಾಗದಜನರು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳಿಗೆ ಗುಡ್‌ಬೈ ಸಡಗರ-ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ಧಾರವಾಡ ಶಹರ ವ್ಯಾಪ್ತಿಯಲ್ಲಿ ಬೆಳಿಗ್ಗೆ ವಿವಿಧ ಬಡಾವಣೆ, ಕಾಲೋನಿಗಳಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣನನ್ನು ದಹಿಸಲಾಯಿತು. ಮನೆ, ವಟಾರದಲ್ಲಿ ಪಿಚಕಾರಿ ಹಿಡಿದ ಚಿಣ್ಣರಿಂದ ಶುರುವಾದ ಓಕುಳಿ ಮಧ್ಯಾಹ್ನವರೆಗೆ ನಡೆಯಿತು. ಯುವಕರು ಪೀಪಿ-ತುತ್ತೂರಿ ಊದುತ್ತಕಂಡ ಕಂಡವರಿಗೆಲ್ಲ ಗುಲಾಲು ಎರಚಿ ಸಂಭ್ರಮಿಸಿದರು. ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತಮೆರವಣಿಗೆ ನಿಷೇಧಿ ಸಿದ್ದರೂ, ವಿವಿಧೆಡೆ ಪ್ರತಿಷ್ಠಾಪಿಸಿದ ರತಿ-ಮನ್ಮಥರ ಮೂರ್ತಿಗಳ ಮೆರವಣಿಗೆ ನಡೆಯಿತು. ಬ್ಯಾಂಡ್‌, ಹಲಿಗೆ ರಿಂಗಣ ಮೆರಗು ತಂದಿತು.

ಬಣ್ಣದಾಟದ ಓಕುಳಿಯಿಂದ ಆದಷ್ಟು ದೂರವಿದ್ದ ಕೆಲಯುವಕರು ತಮ್ಮ ಅಜ್ಞಾತ ತಾಣಗಳಲ್ಲಿ ಎಣ್ಣೆ ಹೊಡೆದುತಾವಷ್ಟೇ ಪರಸ್ಪರ ಹೋಳಿ ಆಚರಿಸಿದರು. ಯುವತಿಯರುಮಾತ್ರ ಈ ಸಲವೂ ಕಾಲೋನಿ, ಬಡಾವಣೆಗಳಲ್ಲಿ ಓಕುಳಿಆಡಿ ಸಂಭ್ರಮಿಸಿದರು. ಡಿಜೆಗಳ ನಿಷೇಧವಿದ್ದರಿಂದಸಂಗೀತ ಕಾರಂಜಿಗಳು ಮಾಯವಾಗಿದ್ದವು. ಆದರೆಕೆಲವು ಕಡೆ ಮನೆಯ ಮುಂದೆಯೇ ಕಾರಂಜಿ ನಿರ್ಮಿಸಿ,ಧ್ವನಿವರ್ಧಕ ಅಳವಡಿಸಿ ಯುವಕ-ಯುವತಿಯರುಸಂಗೀತಕ್ಕೆ ಹೆಜ್ಜೆ ಹಾಕಿದರು. ಮ್ಯಾದಾರ ಓಣಿ, ಬೂಸಪ್ಪಚೌಕ ಹಾಗೂ ಗಣೇಶ ನಗರದಲ್ಲಿ ಹಿಂದೂ-ಮುಸ್ಲಿಂಗೆಳೆಯರು ಒಗ್ಗಟ್ಟಿನಿಂದ ಹೋಳಿ ಹಬ್ಬ ಆಚರಿಸಿದ್ದು ವಿಶೇಷವಾಗಿತ್ತು.

ನಗರದ ಆಯುರ್ಧಾಮದಲ್ಲಿ ಡಾ|ಮಹಾಂತಸ್ವಾಮಿ ಹಿರೇಮಠ ಅವರು ಮಕ್ಕಳಿಗೆ ನೈಸರ್ಗಿಕ ಬಣ್ಣ ತಯಾರುಮಾಡುವ ಬಗೆ ಹೇಳಿ ಕೊಟ್ಟು, ಆ ಬಣ್ಣಗಳಿಂದ ಓಕುಳಿಆಡುವಂತೆ ಮಾಡಿದರು. ಇದರ ಜತೆಗೆ ಪರಿಸರ ಸ್ನೇಹಿಕಲಾವಿದ ಮಂಜುನಾಥ ಹಿರೇಮಠ ಅವರ ನೇತೃತ್ವದಲ್ಲಿಅವರ ಬಡಾವಣೆಯಲ್ಲೂ ಅರಿಶಿಣ, ಕುಂಕುಮದಬಣ್ಣಗಳಿಂದ ಬಣ್ಣದಾಟವಾಡಿ ಸಂಭ್ರಮಿಸಲಾಯಿತು.ಕೆಲ ವ್ಯಕ್ತಿಗಳು ಗಾಜಿನ ಬಣ್ಣ, ಕಪ್ಪ ಬಣ್ಣ, ಯರೆಎಣ್ಣೆ, ವಾರನೀಸ್‌ ಇತ್ಯಾದಿ ರಾಸಾಯನಿಕ ಮಿಶ್ರಿತಬಣ್ಣ ಬಳಸಿ ಓಕುಳಿ ಆಡಿದರು. ಹಾಸ್ಟೆಲ್‌, ಪಿಜಿಗಳಲ್ಲಿಯುವತಿಯರು, ವಟಾರಗಳಲ್ಲೂ ಕೂಡ ಅಜ್ಜಿಯರು ಬಣ್ಣದಲ್ಲಿ ಮಿಂದೆದ್ದರು.

ಮರಾಠಾ ಕಾಲೋನಿ, ಬೂಸಗಲ್ಲಿ, ಗಾಂಧಿಚೌಕ,ಕಾಮನಕಟ್ಟಿ, ಮ್ಯಾದಾರ ಓಣಿ, ಮುರುಘಾಮಠ,ಮಟ್ಟಿಪ್ಲಾಟ್‌, ಹೊಸ ಎಪಿಎಂಸಿ ಬಳಿಯ ವಿಜಯನಗರ,ಬೆಂಡಿಗೇರಿ ಓಣಿ,ಯಾಲಕ್ಕಿ ಶೆಟ್ಟರ ಕಾಲೋನಿ,ಗೌಳಿಗಲ್ಲಿಯಲ್ಲೂ ಸಂಭ್ರಮದಿಂದ ಆಚರಿಸಲಾಯಿತು.ಬೆಳಗ್ಗೆಯಿಂದ ನಗರದ ವಿವಿಧ ಓಣಿಯಲ್ಲಿ ಕಾಮದಹನದ ಮೂಲಕ ಆರಂಭಗೊಂಡ ಬಣ್ಣದಾಟದ ಹೋಳಿಹಬ್ಬಕ್ಕೆ ಸಂಜೆ ವೇಳೆಗೆ ಮುರುಘಾಮಠದ ಕಾಮದಹನ ಮೂಲಕ ತೆರೆ ಎಳೆಯಲಾಯಿತು. ಬಣ್ಣದಾಟ ನಿಮಿತ್ತ ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಬೈಕ್‌ ಮೇಲೆ ಹೊರಟಿದ್ದ ಯುವಕ ಬಿದ್ದು ಮೃತಪಟ್ಟಿದ್ದು ಹಾಗೂ ಜಗಳಾಟದಲ್ಲಿ ತೊಡಗಿದ್ದ ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದುಬಿಟ್ಟರೆ ಸಂಜೆಯವರೆಗೂಯಾವುದೇ ಅಹಿತಕರ ಘಟನೆ ನಡೆಯದೇಬಣ್ಣದಾಟ ಬಹುತೇಕ ಶಾಂತಿಯುತವಾಗಿ ನಡೆಯಿತು.ಸಣ್ಣಪುಟ್ಟ ವ್ಯಾಪಾರ, ಕಿರಾಣಿ-ತರಕಾರಿ ವ್ಯಾಪಾರರಂಗಪಂಚಮಿ ನಿಮಿತ್ಯ ಸೋಮವಾರ ಬಹುತೇಕಉದ್ಯಮ ಸ್ಥಗಿತಗೊಂಡಿತ್ತು. ಹೋಟೆಲ್‌ ಬಂದ್‌ನಿಂದಊಟೋಪಚಾರಕ್ಕೆ ಹಲವರು ಪರದಾಡಿದರು.

ಇನ್ನು ಕೆಲ ಗ್ರಾಮಗಳಲ್ಲಿ ಯುವಕರು ಟ್ರ್ಯಾಕ್ಟರ್‌ನಲ್ಲಿನಡಿ.ಜೆ.ಸೌಂಡ್‌ಗಳಿಗೆ ಜನಪದ ಹಾಡುಗಳನ್ನು ಹಾಕಿ ಡಾನ್ಸ್‌ಮಾಡುವ ದೃಶ್ಯ ಕಂಡು ಬಂತು. ಇನ್ನು ಕೆಲ ಕಡೆಗಳಲ್ಲಿ ಯುವಕರು ಮಾವಿನ ತೋಟಕ್ಕೆ ತೆರಳಿ ಮದ್ಯಪಾನ ಗೋಷ್ಠಿಗಳಲ್ಲಿ ಭಾಗಿಯಾಗಿದ್ದು ಗೋಚರಿಸಿತು.ಇನ್ನುಳಿದಂತೆ ಹೋಳಿಗೆ ಊಟ, ಕೆಲ ಕಡೆಗಳಲ್ಲಿ ಜೂಜಾಟದಲ್ಲಿ ಹಳ್ಳಿಗರು ಭಾಗಿಯಾಗಿದ್ದು ಕಂಡು ಬಂತು. ಕೆಲವು ಹಳ್ಳಿಗಳಲ್ಲಿ ಕಾಮ ದಹನಕ್ಕೆ ಕುಳ್ಳು ಮತ್ತು ಕಟ್ಟಿಗೆ ಬದಲು ಟೈರ್‌ ಬಳಸಿದ್ದು ಕಂಡು ಬಂತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.