ವಿದ್ಯಾರ್ಥಿಗಳಿಗೆ ಕಾಯುತ್ತಿರುವ ಹಾಸ್ಟೆಲ್‌ಗಳು
Team Udayavani, Nov 27, 2020, 3:20 PM IST
ಹುಬ್ಬಳ್ಳಿ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಹಾಸ್ಟೆಲ್‌ಗಳನ್ನು ಮದುವಣಗಿತ್ತಿಯಂತೆ ಸಿದ್ಧಪಡಿಸಿ ದಾಖಲಾತಿಗೆ ಮುಂದಾಗಿದ್ದರೂ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಗೆ ಆಗಮಿಸಲು ಮನಸ್ಸು ಮಾಡುತ್ತಿಲ್ಲ.
ಕೋವಿಡ್-19 ನಂತರದಲ್ಲಿ ಪದವಿ, ಸ್ನಾತಕೋತ್ತರ, ವೃತ್ತಿಪರ, ತಾಂತ್ರಿಕ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನ.17ರಿಂದ ತರಗತಿಗಳನ್ನು ಸರ್ಕಾರ ಆರಂಭಿಸಿದೆ. ಇದಕ್ಕೆ ಪೂರಕವಾಗಿ ಅಂದಿನಿಂದಲೇ ಹಾಸ್ಟೆಲ್ ಗಳ ಪುನರಾರಂಭಗೊಂಡಿವೆ.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಸಜ್ಜಗೊಳಿಸಲಾಗಿದೆ.
ಮೂರು ಇಲಾಖೆಯಿಂದ ಜಿಲ್ಲೆಯಲ್ಲಿ ಸುಮಾರು 3000 ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 65 ಹಾಸ್ಟೆಲ್‌ಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಕಳೆದ 10 ದಿನಗಳಿಂದ ಮೂರು ಇಲಾಖೆಯ ಹಾಸ್ಟೆಲ್‌ಗಳಲ್ಲಿ ಶೇ.20 ವಿದ್ಯಾರ್ಥಿಗಳು ದಾಖಲಾಗಿಲ್ಲ.
ಇದನ್ನೂ ಓದಿ:ಡಿಸೆಂಬರ್ ಮೊದಲ ವಾರ ಸಂಜು ಬಾಬಾ ಎಂಟ್ರಿ
ತೊಲಗಿಲ್ಲ ಭೀತಿ: ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಕೋವಿಡ್-19 ಕುರಿತ ಆತಂಕ ಕಡಿಮೆಯಾಗಿಲ್ಲ. ಹಾಸ್ಟೆಲ್ ಗೆ ದಾಖಲಾಗುವ 72 ಗಂಟೆ ಮುನ್ನ ಕೋವಿಡ್-19 ಪರೀಕ್ಷೆಗೊಳಗಾಗಿ ನೆಗೆಟಿವ್ ವರದಿ ತರಬೇಕು ಎನ್ನುವ ನಿಯಮದಿಂದ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕಾಲೇಜುಗಳ ಹಾಜರಾತಿ ಕಡ್ಡಾಯಗೊಳಿಸದಿರುವುದು ಹಾಗೂ ಆನ್‌ಲೈನ್ ಕ್ಲಾಸ್‌ಗಳಿಗೆ ಆದ್ಯತೆ ನೀಡಿರುವುದು ಹಾಸ್ಟೆಲ್ ಪ್ರವೇಶಕ್ಕೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ದಿನ ಕಳೆದಂತೆ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಅಧಿಕಾರಿಗಳಲ್ಲಿದೆ.
ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳೇನು? :
-ಹಾಸ್ಟೆಲ್ ಪ್ರವೇಶ ದ್ವಾರ ಹಾಗೂ ಊಟದ ಕೋಣೆಯಲ್ಲಿ ಸ್ಯಾನಿಟೈಸರ್ ದ್ರಾವಣ
-ಊಟದ ಕೋಣೆ ಸೇರಿದಂತೆ ಇನ್ನಿತರೆ ಕಡೆ ಬಿಸಿ ನೀರು ಪೂರೈಕೆ
-ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸೀಮಿತ ಮಂಚ
-ಥರ್ಮಲ್ ಸ್ಕ್ಯಾನಿಂಗ್ ಮತ್ತು ತುರ್ತು ವೈದ್ಯಕೀಯ ಸೇವೆ
-ಸೋಂಕಿನ ಲಕ್ಷಣ ಕಂಡು ಬಂದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
-ಹಾಸ್ಟೆಲ್, ಹಾಸಿಗೆ ಸ್ವತ್ಛತೆಗೆ ಆದ್ಯತೆ-ಶುಚಿ ರುಚಿ ಆಹಾರಕ್ಕೆಒತ್ತು
-ಸೋಡಿಯಂ ಹೈಪೋಕ್ಲೋರೈಡ್‌ನಿಂದ ಎರಡೆರಡು ಬಾರಿ ಸ್ಯಾನಿಟೈಸ್
ಹಾಸ್ಟೆಲ್ ಹಾಗೂ ಕೊಠಡಿಗಳ ಹಂಚಿಕೆ ಶೇ.50ಕ್ಕೆ ಸೀಮಿತ
ಕಾಲೇಜುಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಹಾಸ್ಟೆಲ್ ಆರಂಭಕ್ಕೆ ಸೂಚನೆ ನೀಡಿದ್ದು, ಸ್ವತ್ಛತೆ ಹಾಗೂ ಕೋವಿಡ್ -19 ತಡೆ ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ. ದಿನ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. -ಆರ್.ಎನ್. ಪುರುಷೋತ್ತಮ ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ
-ಹೇಮರಡ್ಡಿ ಸೈದಾಪುರ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಂಚವಾರ್ಷಿಕ ಯೋಜನೆಯಾಯ್ತು ಈಜುಕೊಳ : ಕುಂಟುತ್ತಲೇ ಸಾಗಿರುವ ಕಾಮಗಾರಿ
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಐದು ವರ್ಷ ಜೈಲು ಶಿಕ್ಷೆ
ಬೈಪಾಸ್ ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಟೋಲ್ಗೇಟ್ಗೆ ಮುತ್ತಿಗೆ, ಪೊಲೀಸರ ಜತೆ ಚಕಮಕಿ
ಸಚಿವ ಸುಧಾಕರ್ ಕಾರು ತಡೆದು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು
ಲಸಿಕೆಯ ಬಗ್ಗೆ ಯಾವುದೇ ಆತಂಕ ಬೇಡ: ಸಚಿವ ಡಾ. ಕೆ.ಸುಧಾಕರ್
MUST WATCH
ಹೊಸ ಸೇರ್ಪಡೆ
ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಪದಗ್ರಹಣ: ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್
ಕಾಂಗ್ರೆಸ್ ಶಾಸಕಿ ಕೀಳುಮಟ್ಟದ ವರ್ತನೆ ಖಂಡನೀಯ – ಕ್ಯಾಪ್ಟನ್ ಕಾರ್ಣಿಕ್ ಖಂಡನೆ
‘ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್’ ಆರಂಭ: ಸ್ಮಾರ್ಟ್ ಪೋನ್ ಗಳಿಗೆ 40% ಡಿಸ್ಕೌಂಟ್ !
ಮoಡ್ಯ: ಸ್ಫೋಟಕ ಸಾಗಿಸುತ್ತಿದ್ದ ಇಬ್ಬರ ಬಂಧನ
ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ