ಡಾ|ಅಂಬೇಡ್ಕರ್‌ ಶ್ರೇಷ್ಠ ಮಾನವತಾವಾದಿ: ಪ್ರಸಾದ ಅಬ್ಬಯ್ಯ

Team Udayavani, Apr 15, 2021, 7:36 PM IST

15-3

ಹುಬ್ಬಳ್ಳಿ: ವಿಶ್ವಕಂಡ ಶ್ರೇಷ್ಠ ಮಾನವತಾವಾದಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸಾಮಾಜಿಕ ಕ್ರಾಂತಿಯ ಸಂಕೇತವಾಗಿದ್ದಲ್ಲದೇ, ತಳ ಸಮುದಾಯ ಜನರ ಶೋಷಣೆ ನಿವಾರಣೆಗೆ ನಿರಂತರ ಹೋರಾಡಿ ಅವರ ಬದುಕಿಗೆ ನೈಜ ಅರ್ಥ ಕೊಟ್ಟ ಕ್ರಾಂತಿಕಾರಕ ಶಿಲ್ಪಿಯಾಗಿದ್ದರು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಡಾ|ಬಿ.ಆರ್‌.ಅಂಬೇಡ್ಕರ್‌ ಅವರ 130ನೇ ಜಯಂತ್ಯುತ್ಸವ ನಿಮಿತ್ತ ಬುಧವಾರ ಸ್ಟೇಶನ್‌ ರಸ್ತೆಯ ಡಾ|ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಜಯಂತಿ ದೇಶದ ಜನತೆಗೆ ರಾಷ್ಟ್ರೀಯ ಹಬ್ಬದಂತಾಗಿದೆ. ಶೋಷಿತ, ತಳಸಮುದಾಯ ಜನರು ಇಂದಿಗೂ ಆರಾಧ್ಯ ದೈವ ಎಂದು ಪೂಜಿಸುವ ಶ್ರೇಷ್ಠ ವ್ಯಕ್ತಿ ಅವರಾಗಿದ್ದಾರೆ. ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಅಂದಿನ ಕಾಲದಲ್ಲಿ ಎಸ್ಸಿ-ಎಸ್ಟಿ- ಒಬಿಸಿ ಸಮುದಾಯವನ್ನು ಅವರು ರಕ್ಷಿಸಿದಂತೆ ಇಂದು ಅವರು ಬರೆದುಕೊಟ್ಟ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತಿದೆ ಎಂದರು. ಹಿಂದೂ ಕೋಡ್‌ ಬಿಲ್‌ ಮುಖಾಂತರ ಸ್ತ್ರೀಯರಿಗೆ ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಡಿದ ಅವರು, ಕ್ಯಾಬಿನೇಟ್‌ನಲ್ಲಿ ಆ ಮಸೂದೆ ಬಿದ್ದು ಹೋದಾಗ ವಿಷಯಾಧಾರಿತವಾಗಿ ರಾಜಿನಾಮೆ ನೀಡಿ ಹೊರ ಬಂದ ಏಕೈಕ ರಾಜತಾಂತ್ರಿಕ ಆಗಿದ್ದಾರೆ. ಮಹಿಳೆಯರಿಗೆ ಮತದಾನ, ರಾಜಕೀಯ ಹಕ್ಕುಗಳೊಂದಿಗೆ ಎಲ್ಲ ಕ್ಷೇತ್ರದಲ್ಲೂ ಸಮಾನತೆಯ ಹಕ್ಕು ನೀಡಿದ್ದಾರೆ.

ದೇಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಭೂಮಿ ರಾಷ್ಟ್ರೀಕರಣವಾಗಬೇಕೆಂದು ಅವರು ಕನಸು ಕಂಡಿದ್ದರು. ಆದರೆ, ಇಂದು ಅವೆಲ್ಲ ಖಾಸಗೀಕರಣಗೊಳ್ಳುತ್ತಿವೆ. ಇದರಲ್ಲಿ ಪರೋಕ್ಷವಾಗಿ ನಮ್ಮ ಮೀಸಲಾತಿ ಕಸಿಯುವ ಹುನ್ನಾರ ಅಡಗಿದೆ ಎಂದರು. ದೇಶದಲ್ಲಿ ಇಂತಿಷ್ಟೇ ಅವ ಧಿಗೆ ಮೀಸಲಾತಿ ಎಂಬನಿ ರ್ದಿಷ್ಟ ಕಾಲಮಿತಿಯಿಲ್ಲ. ದೇಶದಲ್ಲಿ ಎಲ್ಲಿಯವರೆಗೆ ಸಾಮಾಜಿಕ ಪಿಡುಗು, ಅಸಮಾನತೆ, ಶೋಷಣೆ, ಜಾತಿ ವ್ಯವಸ್ಥೆ ನಿವಾರಣೆಯಾಗುವುದಿಲ್ಲವೋ ಅಲ್ಲಿವರೆಗೂ ಮೀಸಲಾತಿ ಇದ್ದೆ ಇರುತ್ತದೆ ಎಂದು ಪ್ರತಿಪಾದಿಸಿದರು.

ಮುಖಂಡರಾದ ಸದಾನಂದ ಡಂಗನವರ, ವೆಂಕಟೇಶ ಮೇಸ್ತ್ರೀ, ಯಮನೂರು ಜಾಧವ, ಯಮನೂರು ಗುಡಿಹಾಳ, ದಶರಥ ವಾಲಿ, ವಿಜನಗೌಡ ಪಾಟೀಲ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ಪ್ರಭು ಪ್ರಭಾಕರ, ಚೇತನ ಹಿರೇಕೆರೂರ, ಗಣೇಶ ದೊಡ್ಡಮನಿ, ಮಾರುತಿ ದೊಡ್ಡಮನಿ ಇನ್ನಿತರರಿದ್ದರು.

ಟಾಪ್ ನ್ಯೂಸ್

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.