ಆರ್ಥಿಕ ತಜ್ಞ ಡಾ| ಅಂಬೇಡ್ಕರ್ : ಡಾ| ಅಜಿತ್
Team Udayavani, Apr 15, 2021, 7:45 PM IST
ಧಾರವಾಡ: ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಭಾರತ ದೇಶ ಕಂಡ ಆದರ್ಶ ವ್ಯಕ್ತಿ, ಮಾನವತಾವಾದಿ ಹಾಗೂ ಒಳ್ಳೆಯ ಆರ್ಥಿಕ ತಜ್ಞರೂ ಆಗಿದ್ದರೆಂದು ಡಾ|ಅಜಿತ್ ಪ್ರಸಾದ ಹೇಳಿದರು. ಇಲ್ಲಿನ ಜೆಎಸ್‌ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಭಾರತರತ್ನ ಡಾ| ಅಂಬೇಡ್ಕರ್ ಜನ್ಮ ದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಡಾ|ಅಂಬೇಡ್ಕರ್ ಸರ್ವರಿಗೂ ಸಮಾನತೆ ನೀಡುವಲ್ಲಿ ಅತ್ಯಧಿ ಕ ಶ್ರಮವಹಿಸಿ ಅಸ್ಪಶ್ಯತೆ ಹೋಗಲಾಡಿಸಲು ಹೋರಾಟ ಮಾಡಿದ್ದರು. ಸಾಮಾಜಿಕ ಪ್ರಜಾಪ್ರಭುತ್ವದ ಪರಿಕಲ್ಪನೆ ಇಟ್ಟುಕೊಂಡು ಸಂವಿಧಾನ ರಚಿಸಿದ್ದರು. ಹಿಂದುಳಿದ ವರ್ಗಗಳನ್ನು ಮೇಲೆತ್ತುವ ವಿಚಾರವಾಗಿ ಸಂವಿಧಾನ ಮೂಲಕ ಕಾಯ್ದೆಗಳನ್ನು ಜಾರಿಗೆ ತಂದರು ಎಂದರು.
ಭಾರತ ದೇಶ ಜಾತಿ-ಜಾತಿಗಳ ವೈಷಮ್ಯದಿಂದ, ತಾರತಮ್ಯದಿಂದ, ಅಸಮಾನತೆಯಿಂದ ಬಳಲುತ್ತಿದ್ದಾಗ ದೇಶಕ್ಕೆ ಆಶಾಕಿರಣವಾಗಿ ಬಂದವರು ಡಾ|ಬಿ.ಆರ್. ಅಂಬೇಡ್ಕರ್ ಎಂದರು. ಹಿಂದುಳಿದವರು ವಿದ್ಯಾಭ್ಯಾಸ ಮಾಡುವುದೇ ಕಷ್ಟದ ಸಮಯದಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ತಾನು ಪಟ್ಟ ಕಷ್ಟವನ್ನು ಸಮಾಜದ ಕೆಳಸ್ತರದ ಜನ ಪಡಬಾರದೆಂದು ಹೋರಾಟ ಮಾಡಿ ಅವರಿಗೆ ದೊರಕಬೇಕಾದ ಸವಲತ್ತುಗಳನ್ನು ದೊರಕಿಸಿಕೊಟ್ಟ ಧೀಮಂತ ವ್ಯಕ್ತಿ ಎಂದರು.
ಜಿನೇಂದ್ರ ಕುಂದಗೋಳ, ನವೀನ ಬಡಿಗೇರ, ಜ್ಯೋತಿ ಅಕ್ಕಿ, ಬಿ.ಜೆ ಕುಂಬಾರ, ಶ್ರೀಕಾಂತ ರಾಗಿಕಲ್ಲಾಪೂರ, ವಿಭಾ ಮುಗಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಡಾ|ಸೂರಜ ಜೈನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೆನಡಿಯನ್ ಮಾಸ್ಟರ್’ ಟೆನಿಸ್: ಕ್ವಾರ್ಟರ್ ಫೈನಲ್ ಗೆ ನಿಕ್ ಕಿರ್ಗಿಯೋಸ್
ಯುಎಇ ಇಂಟರ್ನ್ಯಾಶನಲ್ ಕ್ರಿಕೆಟ್ ಲೀಗ್: ಮೈ ಎಮಿರೇಟ್ಸ್ ಟಿ 20 ತಂಡ ಘೋಷಣೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್ಐಎ