
12 ದಿನವಾದರೂ ಪತ್ತೆಯಾಗದ ಹಂತಕರ ಸುಳಿವು
ನ.10ರಂದು ರೈಲಿನಲ್ಲಿ ನಡೆದಿದ್ದ ಆಂಧ್ರ ವ್ಯಕ್ತಿ ಬರ್ಬರ ಹತ್ಯೆ; ತೃತೀಯ ಲಿಂಗಿಗಳ ಕೈವಾಡ ಶಂಕೆ
Team Udayavani, Nov 23, 2022, 12:56 PM IST

ಹುಬ್ಬಳ್ಳಿ: ಗುಂತಕಲ್ಲ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನಲ್ಲಿ ನ. 10ರಂದು ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಬರ್ಬರ ಹತ್ಯೆ ಮಾಡಿದ್ದ ಹಂತಕರ ಸುಳಿವು ಇನ್ನೂ ರೈಲ್ವೆ ಪೊಲೀಸರಿಗೆ ಪತ್ತೆಯಾಗಿಲ್ಲ.
ನೇಕಾರಿಕೆ ಮಾಡಿಕೊಂಡಿದ್ದ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆ ಅದೋನಿ ಗ್ರಾಮದ ಹನುಮಾನ ನಗರ ನಿವಾಸಿ ಆಂಜನೇಯ ಲಕ್ಷ್ಮಣ ಸಾಂದೋಪ (50) ಎಂಬುವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ನ. 10ರಂದು ಗುಂತಕಲ್-ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೇಶಲ್ (07338) ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿಕೊಂಡು ಬರುತ್ತಿದ್ದ ಇವರನ್ನು ಹಂತಕರು ರಾತ್ರಿ ಚಾಕುವಿನಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದರು.
ಹತ್ಯೆಗೆ ಸಂಬಂಧಿಸಿ ಪ್ರತ್ಯೇಕ ಎರಡು ತಂಡಗಳಲ್ಲಿ ತನಿಖೆ ನಡೆಸುತ್ತಿರುವ ರೈಲ್ವೆ ಪೊಲೀಸ್ ತನಿಖಾಧಿಕಾರಿಗಳು ಕೊಲೆಯಾದ ಆಂಜನೇಯ ಅವರ ನಿವಾಸಕ್ಕೂ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅವರ ಕುಟುಂಬದ ಮೂಲಗಳ ಪ್ರಕಾರ ಇವರೊಂದಿಗೆ ವೈಯಕ್ತಿಕವಾಗಿ ಯಾರ ದ್ವೇಷ, ಹಗೆತನ ಇರಲಿಲ್ಲ. ಯಾರು ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದು ನಮಗೂ ತಿಳಿಯುತ್ತಿಲ್ಲವೆಂದು ಹೇಳುತ್ತಿದ್ದಾರೆಂದು ತಿಳಿದುಬಂದಿದೆ.
ತನಿಖಾ ತಂಡ ಈಗಾಗಲೇ ಅದೋನಿಯಿಂದ ಬಳ್ಳಾರಿ ಹಾಗೂ ಗುಂತಕಲ್ಲದಿಂದ ಹುಬ್ಬಳ್ಳಿ ವರೆಗಿನ ಮಾರ್ಗಮಧ್ಯದಲ್ಲಿನ ಎಲ್ಲ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಹಾಗೂ ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆದರೆ ಇದುವರೆಗೂ ಹಂತಕರ ಕುರಿತು ಖಚಿತ ಸುಳಿವು ದೊರೆತಿಲ್ಲ ಹಾಗೂ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಹೇಳಲಾಗುತ್ತಿದೆ.
ಟಿಕೆಟ್ ಪಡೆದಿರಲಿಲ್ಲ?: ಆಂಜನೇಯ ಅವರು ತಮ್ಮ ಮಗಳನ್ನು ಭೇಟಿಯಾಗಲೆಂದು ಹುಬ್ಬಳ್ಳಿಗೆ ಬರುವಾಗ ಅದೋನಿಯಿಂದ ಬಳ್ಳಾರಿಗೆ ಬಸ್ಸಿನಲ್ಲಿ ಬಂದಿದ್ದಾರೆ. ಬಳ್ಳಾರಿಯಿಂದ ಹುಬ್ಬಳ್ಳಿಗೆ ಗುಂತಕಲ್ಲ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಆಗಮಿಸುತ್ತಿದ್ದರು. ಆದರೆ ಇವರು ಬಳ್ಳಾರಿಯಿಂದ ರೈಲು ಹತ್ತುವಾಗ ಟಿಕೆಟ್ ತೆಗೆದುಕೊಳ್ಳದೆ ಅವಸರದಲ್ಲಿ ಹಾಗೇ ರೈಲು ಹತ್ತಿ ಬಂದಿರಬಹುದು ಎನ್ನಲಾಗುತ್ತಿದೆ.
ಏಕೆಂದರೆ ತನಿಖಾಧಿಕಾರಿಗಳ ತಂಡವು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸಿದಾಗ ಆಂಜನೇಯ ಅವರು ಅಂದು ಟಿಕೆಟ್ ಕೌಂಟರ್ ಬಳಿಯೇ ಕಾಣಿಸಿಕೊಂಡಿಲ್ಲ ಎನ್ನಲಾಗುತ್ತಿದೆ.
ತೃತೀಯ ಲಿಂಗಿಗಳ ಕೃತ್ಯ?: ಆಂಜನೇಯ ಅವರು ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅದೇ ಬೋಗಿಯಲ್ಲಿದ್ದ ತೃತೀಯ ಲಿಂಗಿಗಳ ನಡುವೆ ಯಾವುದೋ ವಿಷಯವಾಗಿ ತಕರಾರು ನಡೆದಿರಬಹುದು. ಇದೇ ಸಿಟ್ಟು ಇರಿಸಿಕೊಂಡು ಅವರು ಕೊಲೆಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜವಳಿ ವೈಭವದ ಕೊನೆ ಕುರುಹು ನೆಲಸಮ; 100 ಅಡಿಗೂ ಎತ್ತರದ ಮಿನಾರ್ ನೆಲಸಮ

ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪ, ಹೇಳಿಕೆಗಳಿಗೆ ಇತಿಮಿತಿ ಇರಬೇಕು: ಜಗದೀಶ್ ಶೆಟ್ಟರ್

ಜ.30 ರಂದು ಎಚ್.ಡಿ.ಕುಮಾರಸ್ವಾಮಿ ಸರಕಾರದ ಚಳಿ ಬಿಡಿಸಲಿದ್ದಾರೆ: ಸಂಪತ್ ಕುಮಾರ್

ವಿದ್ಯೆ ಪ್ರಕೃತಿಗೆ ಗೌರವ ನೀಡುವ ಪ್ರಕ್ರಿಯೆಯಾಗಲಿ; ಡಾ| ರಾಜೇಂದ್ರ ಸಿಂಗ್

ಡಾ.ರಾಜೇಂದ್ರ ಚೆನ್ನಿ, ಡಾ.ಜಿನದತ್ತ ದೇಸಾಯಿಗೆ ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

“ಮಗುವನ್ನು ಉಳಿಸಲು ಆಗುವುದಿಲ್ಲ.. ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ನಾರೀಶಕ್ತಿಗೆ ಜೈಕಾರ: ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ “ನಾರಿ’

ಅ-19 ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ನ್ಯೂಜಿಲೆಂಡ್ ಉಪಾಂತ್ಯ