ನದಿ ನೀರಿನ ಮಟ್ಟ ಮಾಪಕ ಅಳವಡಿಕೆ

ರೈಲ್ವೆ ಸೇತುವೆಗಳಲ್ಲಿನ ನೀರಿನ ಮಟ್ಟ ನಿಯಮಿತ ಮೇಲ್ವಿಚಾರಣೆ

Team Udayavani, Jun 25, 2020, 10:28 AM IST

ನದಿ ನೀರಿನ ಮಟ್ಟ ಮಾಪಕ ಅಳವಡಿಕೆ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಮಲಪ್ರಭಾ ಮತ್ತು ಕೃಷ್ಣಾ ನದಿಗಳ ನೀರಿನ ಮಟ್ಟ ಅಳೆಯುವಿಕೆ ಹಾಗೂ ಅಪಾಯ ಸ್ಥಿತಿ ಮುನ್ಸೂಚನೆ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಸಾಧನ ಅಳವಡಿಸಿದ್ದು, ಇದು ನದಿಗಳ ನೀರಿನ ಮೇಲ್ವಿಚಾರಣೆಗೆ ಸಹಕಾರಿ ಆಗಲಿದೆ.

ರೈಲ್ವೆ ಸೇತುವೆಗಳಲ್ಲಿನ ನೀರಿನ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ನೀರಿನ ಮಟ್ಟ ಗರಿಷ್ಠ ಮಿತಿ ತಲುಪಿದಾಗ ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಅದು ಅಗತ್ಯವಾಗಿರುತ್ತದೆ. ಇದುವರೆಗೆ ನದಿಯ ನೀರಿನ ಮಟ್ಟವನ್ನು ಸಾಮಾನ್ಯವಾಗಿ ಸೇತುವೆಯ ಕಟ್ಟೆಗಳಲ್ಲಿ ಹಾಕಿದ ಗುರುತುಗಳಿಗೆ ಸಂಬಂಧಿಸಿ ಮ್ಯಾನುವೆಲ್‌ ರೂಪದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಮಳೆಗಾಲ ಸಂದರ್ಭದಲ್ಲಿ ನಿರಂತರವಾಗಿ ನದಿಯ ನೀರಿನ ಮಟ್ಟವನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಇಂಟಲಿಜೆಂಟ್‌ ಫಿಲ್ಡ್‌ ಡಿವೈಸ್‌ನೊಂದಿಗೆ ಸಾಧ್ಯವಿದೆ.

ಇದು ನದಿಮಟ್ಟದ ದತ್ತಾಂಶವನ್ನು ಕೇಂದ್ರ ಸ್ಥಾನದಲ್ಲಿರುವ ಸರ್ವರ್‌ ಗೆ ರವಾನಿಸುತ್ತದೆ. ನೈಋತ್ಯ ರೈಲ್ವೆ ವಲಯ ನದಿನೀರಿನ ಮಟ್ಟ ಮೇಲ್ವಿಚಾರಣೆ ಮಾಡಲು ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಪ್ರಮುಖ ಎರಡು ಸೇತುವೆಗಳಾದ ಲೋಡಾ-ಮಿರಜ್‌ ವಿಭಾಗದ ಗುಂಜಿ ಮತ್ತು ಖಾನಾಪುರ ರೈಲ್ವೆ ನಿಲ್ದಾಣ ನಡುವಿನ ಮಲಪ್ರಭಾ ನದಿಯ ಸೇತುವೆ ನಂ.44 ಹಾಗೂ ಕುಡಚಿ ಮತ್ತು ಉಗಾರ ಖುರ್ದ ರೈಲ್ವೆ ನಿಲ್ದಾಣ ನಡುವಿನ ಕೃಷ್ಣಾ ನದಿಯ ಸೇತುವೆ ನಂ.184ರಲ್ಲಿ ನದಿ ಮಟ್ಟದ ಮೇಲ್ವಿಚಾರಣೆ ಸಾಧನಗಳನ್ನು ಸ್ಥಾಪಿಸಿದೆ. ಮಳೆಗಾಲದಲ್ಲಿ ವಿಶೇಷವಾಗಿ ಮಳೆ ನೀರು ಹಿಡಿಯುವ ಪ್ರದೇಶಗಳಲ್ಲಿ, ಹೆಚ್ಚುವರಿ/ ಹಠಾತ್‌ ನೀರಿನ ಹರಿವು ಅಥವಾ ಪ್ರವಾಹ ಪ್ರಮಾಣ ಮೇಲ್ವಿಚಾರಣೆ ಮಾಡಲು ಈ ಸಾಧನಗಳು ಸುರಕ್ಷಿತ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತವೆ.

ಈ ಸಾಧನದ ಸ್ಥಾಪನೆಯಿಂದ ನದಿನ ಮಟ್ಟದಲ್ಲಿನ ನೀರನ್ನು ಯಾವುದೇ ಸಮಯದಲ್ಲೂ ಸರಳವಾಗಿ ಇಂಟರ್‌ನೆಟ್‌ ಬ್ರೌಸರ್‌ ಮೂಲಕ ಮೇಲ್ವಿಚಾರಣೆ ಮಾಡಬಹುದು. ಆ ಮೂಲಕ ನದಿ ನೀರಿನ ನಿಯಮಿತ ಮಟ್ಟ, ಅಪಾಯದ ಮಟ್ಟ ಇಲ್ಲವೆ ಹೆಚ್ಚಿನ ಪ್ರವಾಹ ಮಟ್ಟ ಸೇರಿದಂತೆ ಇನ್ನಿತರೆ ಮಿತಿಗಳ ಆಧಾರದ ಮೇಲೆ ಬಳಕೆದಾರರಿಗೆ ಎಸ್‌ಎಂಎಸ್‌ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಯಾವುದೇ ಆತಂಕಕಾರಿ ಸ್ಥಿತಿಯನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಯ ಮೊಬೈಲ್‌ ಫೋನ್‌ಗೆ ಕೇಂದ್ರ ಸರ್ವರ್‌ ರಚಿಸಿದ ಎಸ್‌ಎಂಎಸ್‌ ಮೂಲಕ ತಿಳಿಸಲಾಗುತ್ತದೆ. ಆಗ ಅಧಿಕಾರಿ ಸಮಸ್ಯೆ ಸರಿಪಡಿಸಲು ಮತ್ತು ಅಗತ್ಯ ನಿರ್ಧಾರ ಕೈಗೊಳ್ಳಲು ತಕ್ಷಣ ಕ್ರಮ ತೆಗೆದುಕೊಳ್ಳಬಹುದು. ತಲಾ 10ಲಕ್ಷ ರೂ. ವೆಚ್ಚದಲ್ಲಿ ಈ ನೀರಿನ ಮಟ್ಟದ ಮೇಲ್ವಿಚಾರಣಾ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ.

ಪಿಸಿಇ ವಿಜಯ ಅಗರವಾಲ ಮಾರ್ಗದರ್ಶನದಲ್ಲಿ ಸಿಪಿಡಿ/ಬಿಡಬ್ಲ್ಯೂ ಕೌಶಲ ಕಿಶೋರ ನೇತೃತ್ವದಲ್ಲಿ ಎಸ್‌ಡಬ್ಲ್ಯೂಆರ್‌ ನ ಸೇತುವೆ ಸಂಸ್ಥೆ ಈ ಕೆಲಸ ಕೈಗೊಂಡಿದೆ. ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸ್ವತ್ತುಗಳು ಮತ್ತು ತಡೆಸಾಧನಗಳ ಮೇಲ್ವಿಚಾರಣೆ, ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆ ಸೇತುವೆಗಳ ಸುರಕ್ಷಿತ ನಿರ್ವಹಣೆಗೆ ರೈಲ್ವೆ ಇಂಜನಿಯರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನೈಋತ್ಯ ರೈಲ್ವೆಯ ಜಿಎಂ ಎ.ಕೆ.ಸಿಂಗ್‌ ಹೇಳಿದ್ದಾರೆ.

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.