ನನಸಾಗುವುದೇ ಪ್ರತ್ಯೇಕ ಮನಪಾ ಕನಸು?

ಯೋಜನೆಗಳ ಸೌಲಭ್ಯ ಪಡೆಯಲು ಪರಸ್ಪರ ಕಚ್ಚಾಟ ಶುರುವಾಗಬಹುದು.

Team Udayavani, Apr 11, 2022, 5:38 PM IST

ನನಸಾಗುವುದೇ ಪ್ರತ್ಯೇಕ ಮನಪಾ ಕನಸು?

ಧಾರವಾಡ: ಹುಬ್ಬಳ್ಳಿ ಲಕ್ಷ್ಮೀಪುರವಾದರೆ ಧಾರವಾಡ ಸರಸ್ವತಿಪುರ. ಹುಬ್ಬಳ್ಳಿ ವಾಣಿಜ್ಯನಗರಿಯಾದರೆ, ಧಾರವಾಡ ಸಾಂಸ್ಕೃತಿಕ ನಗರಿ. ಹುಬ್ಬಳ್ಳಿ ಹೂಬಳ್ಳಿಯಿಂದ ಬಂದಿದ್ದರೆ, ಧಾರವಾಡ ದ್ವಾರವಾಟದಿಂದ ಬಂದಿದ್ದು. ಒಟ್ಟಿನಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅವಳಿನಗರಗಳಾಗಿ ಒಟ್ಟಾಗಿ ಈವರೆಗೂ ಅಭಿವೃದ್ಧಿ ಹೊಂದಿದ್ದರಲ್ಲಿ ಎಳ್ಳಷ್ಟೂ ದೋಷವಿಲ್ಲ.

ಸಾಂಸ್ಕೃತಿಕ ಹೊಂದಾಣಿಕೆ ದೃಷ್ಟಿಯಿಂದ ನೋಡುವುದಾದರೆ ಹುಬ್ಬಳ್ಳಿ-ಧಾರವಾಡ ಸಂಗ್ಯಾ-ಬಾಳ್ಯಾ ಇದ್ದಂತೆ. ಮುಂಬೈ ಸರ್ಕಾರದಲ್ಲಿ ಕಿತ್ತೂರು ಕರ್ನಾಟಕ ಭಾಗದ ಡೈನಾಮಿಕ್‌ ರಾಜಕೀಯ ಮುಖಂಡರು, ಶಿಕ್ಷಣ ತಜ್ಞರನ್ನು ಹೊಂದಿದ್ದ ಹುಬ್ಬಳ್ಳಿ-ಧಾರವಾಡ ಪಟ್ಟಣಗಳು ಆರ್ಥಿಕ ಮತ್ತು ಶಿಕ್ಷಣ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಪಾಲಿನ ಹಕ್ಕನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು.

ಸ್ವಾತಂತ್ರ್ಯ ನಂತರ ಮತ್ತು ಕರ್ನಾಟಕ ಏಕೀಕರಣದ ನಂತರ ರಾಜಧಾನಿ ರಾಜ್ಯದ ದಕ್ಷಿಣದ ತುತ್ತ ತುದಿಗೆ ಜರಿದಾಗಲೂ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ ನಿರಾಸೆಯಾಗಿದ್ದು ಸತ್ಯ. ಉತ್ತರ ಕರ್ನಾಟಕ ಭಾಗದ ವಾಣಿಜ್ಯ, ವಹಿವಾಟು, ಆರ್ಥಿಕತೆ, ಸಾಂಸ್ಕೃತಿಕ ಕೊಡುಕೊಳ್ಳುವಿಕೆಗೆ ಕೇಂದ್ರಶಕ್ತಿಯಾಗಿ ನಿಂತಿದ್ದ ಈ ಎರಡು ನಗರಗಳನ್ನು ಒಟ್ಟುಗೂಡಿಸಿ 1962ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಡಿ. ಜತ್ತಿ ಅವರು ಅವಳಿನಗರ ಪಾಲಿಕೆ ರಚಿಸಿದರು.

ಇದೀಗ ಅವಳಿನಗರ ಪಾಲಿಕೆಯಿಂದಲೂ ಅಭಿವೃದ್ಧಿ ಮರೀಚಿಕೆಯಾಗುತ್ತಿದ್ದು, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯಾಗಬೇಕು ಎನ್ನುವ ಕೂಗು ಎದ್ದಿದೆ. ಅಭಿವೃದ್ಧಿ ದೃಷ್ಟಿಯಿಂದ ಮತ್ತು ಹೆಚ್ಚಿನ ಅನುದಾನದ ದೃಷ್ಟಿಯಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ಒಳಪಡುವುದು ಸೂಕ್ತ ಎನ್ನುತ್ತಿದ್ದಾರೆ ಜಿಲ್ಲೆಯ ಆರ್ಥಿಕ ತಜ್ಞರು ಮತ್ತು ಸಾಮಾಜಿಕ ಚಿಂತಕರು.

ಧಾರವಾಡಕಿದೆಯೇ ಅರ್ಹತೆ?
ಧಾರಾನಗರಿ ಕಳೆದ ಹತ್ತು ವರ್ಷಗಳಲ್ಲಿ ಶೇ.30 ವಿಸ್ತೀರ್ಣ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಶಿಕ್ಷಣದ ಹೈಟೆಕ್‌ ವ್ಯವಸ್ಥೆ ಇಲ್ಲಿ ವಾಣಿಜ್ಯದ ಸ್ವರೂಪ ಪಡೆದುಕೊಂಡಿದ್ದು, ಲಕ್ಷ ಲಕ್ಷ ವಿದ್ಯಾರ್ಥಿಗಳು ಓದಲು ಬರುತ್ತಿದ್ದಾರೆ. ಮೂರು ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಟ್ರಸ್ಟ್ ಗಳು, ಆಹಾರ ಉದ್ಯಮಗಳು, ಆಸ್ಪತ್ರೆಗಳು, ವ್ಯಾಪಾರ-ವಹಿವಾಟು, ಹೈಟೆಕ್‌ ಮಹಲ್‌ ಗಳು ತಲೆ ಎತ್ತುತ್ತಿವೆ. ಇದೀಗ ಧಾರವಾಡ ಕಿತ್ತೂರಿನ ಅಗಸೆ ವರೆಗೂ ತನ್ನ ಬಾಹುಗಳನ್ನು ಚಾಚುತ್ತಿದ್ದು, ಹೈಕೋರ್ಟ್‌, ಬೇಲೂರು ಕೈಗಾರಿಕೆ ಪ್ರದೇಶ, ಬಿಎಂಐಸಿ, ಟಾಟಾ ಕಂಪನಿ, ಐಐಟಿ, ಐಐಐಟಿಯಂತಹ ದೊಡ್ಡ ದೊಡ್ಡ ಸಂಸ್ಥೆಗಳನ್ನು ಮಡಿಲಲ್ಲಿಟ್ಟುಕೊಂಡಿದೆ.

ಸದ್ಯಕ್ಕೆ 5 ಲಕ್ಷ ಜನಸಂಖ್ಯೆ ದಾಟಿದ್ದು, ನರೇಂದ್ರ, ಚಿಕ್ಕಮಲ್ಲಿಗವಾಡ, ಮನಗುಂಡಿ, ಮನಸೂರು ಸೇರಿದಂತೆ ಧಾರವಾಡದ ವ್ಯಾಪ್ತಿಗೆ ಆಗಲೇ ಸೇರ್ಪಡೆಯಾಗುವಂತೆ ಬೆಳೆದು ನಿಂತಿರುವ ಹಳ್ಳಿಗಳನ್ನು ಹೊಸ ಪಾಲಿಕೆಗೆ ಸೇರ್ಪಡೆ ಮಾಡಿಕೊಂಡರೆ ಖಂಡಿತ ಧಾರವಾಡ ಮಹಾನಗರ ಪಾಲಿಕೆಯಾಗುತ್ತದೆ ಎನ್ನುವುದು ಹೋರಾಟಗಾರರ ಅಭಿಮತ. ಸದ್ಯಕ್ಕೆ ಮಹಾನಗರ ಪಾಲಿಕೆಯಾಗಲು ಇರುವ ಎಲ್ಲಾ ಅರ್ಹತೆಗಳು ಈ ಅವಳಿನಗರ ಎರಡಕ್ಕೂ ಇವೆ.

5 ಲಕ್ಷ ಜನಸಂಖ್ಯೆ, 5 ಕೋಟಿ ರೂ. ಆಡಳಿತ ವೆಚ್ಚ, ಪಾಲಿಕೆಗೆ ತೆರಿಗೆ ಮತ್ತು ಆದಾಯ ರೂಪದಲ್ಲಿ ಸಾಕಷ್ಟು ಹಣ ಪೂರೈಸುವ ಕೈಗಾರಿಕೆ ಪ್ರದೇಶ, ವ್ಯಾಪಾರ-ವಹಿವಾಟು, ವಾಣಿಜ್ಯ ಚಟುವಟಿಕೆಗಳು ಧಾರವಾಡದಲ್ಲಿ ಕೂಡ ಅಭಿವೃದ್ಧಿಯಾಗಿದೆ. ಸದ್ಯಕ್ಕೆ ಸರ್ಕಾರದಿಂದ ಅವಳಿನಗರ ಪಾಲಿಕೆಗೆ ವಾರ್ಷಿಕ 300 ಕೋಟಿ ರೂ. ಗೂ ಅಧಿಕ ಮೊತ್ತದ ಬಜೆಟ್‌ ಮಂಡನೆ ಮಾಡುವ ಶಕ್ತಿ ಬಂದಿದೆ. 100 ಕೋಟಿ ರೂ. ನಗರೋತ್ಥಾನ ಯೋಜನೆಯ ಅನುದಾನ ಲಭ್ಯವಾಗುತ್ತಿದೆ. ಹೀಗಿರುವಾಗ ಧಾರವಾಡ ಪ್ರತ್ಯೇಕವಾಗುವುದೇ ಸೂಕ್ತ ಎನ್ನುತ್ತಿದ್ದಾರೆ.

ಹೋರಾಟಕ್ಕೆ ಸ್ಥಳೀಯರ ಬೆಂಬಲ
ಬರುವ ಅನುದಾನದಲ್ಲಿ ಸಿಂಹಪಾಲು ಹುಬ್ಬಳ್ಳಿ ಪಾಲಾಗುತ್ತಿದೆ. ಜನರ ಸಮಸ್ಯೆಗಳನ್ನು ಈಗಿರುವ ಹುಬ್ಬಳ್ಳಿ ಕೇಂದ್ರಿತ ಆಡಳಿತ ವ್ಯವಸ್ಥೆಯಲ್ಲಿ ಸರಿಯಾಗಿ ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಸ್ಮಾರ್ಟ್‌ ಸಿಟಿ ಸೇರಿ ಹೆಚ್ಚಿನ ಮತ್ತು ಅತ್ಯಧಿಕ ಅನುದಾನಗಳು ಹುಬ್ಬಳ್ಳಿ ಪಾಲಾಗುತ್ತಿವೆ. ಈವರೆಗೂ ಅತ್ಯಧಿಕ ಬಾರಿ ಮೇಯರ್‌ ಪಟ್ಟ ಹುಬ್ಬಳ್ಳಿ ಸದಸ್ಯರಿಗೆ ಲಭಿಸಿದೆ ಎನ್ನುವ ಮಾತುಗಳಿಂದ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಸ್ಥಳೀಯರ ಏಕಮುಖ ಬೆಂಬಲ ಲಭಿಸುತ್ತಿದೆ. ಪ್ರತ್ಯೇಕ ಮಹಾನಗರ ಪಾಲಿಕೆಯಿಂದಲೇ ಧಾರವಾಡದ ಸಮಗ್ರ ಅಭಿವೃದ್ಧಿ ಸಾಧ್ಯ ಎಂಬ ಕೂಗು ಹೋರಾಟಗಾರರಿಂದ ಶುರುವಾಗಿದೆ. ಆದರೆ ಈ ಕನಸು ನನಸಾಗಲು ಸಾಕಷ್ಟು ಸಮಯ ಬೇಕಾಗಬಹುದು.

ಅನುಕೂಲತೆಗಳೇನು?
 ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಅನುದಾನ ಲಭ್ಯತೆ
 ಎರಡು ನಗರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ವೇಗ ಸಿಕ್ಕುತ್ತದೆ.
 ಆಡಳಿತ ವಿಕೇಂದ್ರೀಕರಣದಿಂದ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ಸಾಧ್ಯ.
 ಕಾರ್ಪೊರೇಷನ್‌ಗಳ ವಿಶೇಷ ಅನುದಾನ, ಯೋಜನೆಗಳ ಅನುಕೂಲತೆ.

ಅನಾನುಕೂಲತೆಗಳೇನು ?
 ಭಾವನಾತ್ಮಕವಾಗಿ ಸಂಗ್ಯಾ-ಬಾಳ್ಯಾನಂತಿದ್ದ ಅವಳಿ ನಗರ ಎರಡಾಗುತ್ತವೆ.
 ಬೃಹತ್‌ ಮಹಾನಗರ ಪಾಲಿಕೆಯಾಗುವ ಅವಕಾಶ ಕೈ ತಪ್ಪಬಹುದು.
 ಯೋಜನೆಗಳ ಸೌಲಭ್ಯ ಪಡೆಯಲು ಪರಸ್ಪರ ಕಚ್ಚಾಟ ಶುರುವಾಗಬಹುದು.

ದಶಕದ ಹಿಂದಿನ ಕೂಗು
ಹುಬ್ಬಳ್ಳಿಯಿಂದ ಧಾರವಾಡ ಮಹಾನಗರ ಬೇರ್ಪಡಿಸಿ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕು ಎನ್ನುವ ಕೂಗು ಮೊದಲು ಶುರುವಾಗಿದ್ದು ಮಾಜಿ ಮೇಯರ್‌ ಪಾಂಡುರಂಗ ಪಾಟೀಲ ಅವರಿಂದ. 2005ರಲ್ಲಿಯೇ ಈ ಕುರಿತು ಪಾಂಡುರಂಗ ಪಾಟೀಲರು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಮಾಡುವುದು ಸೂಕ್ತ ಎಂದಾಗ ಧಾರವಾಡದ ಎಚ್‌ಡಿಎಂಸಿ ಸದಸ್ಯರೆಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಆಡಳಿತ ಮತ್ತು ಅಧಿಕಾರ ಎರಡೂ ವಿಕೇಂದ್ರೀಕರಣ ವಾಗಬೇಕು. ಅಂದಾಗ ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯಲು ಸಾಧ್ಯ. ಭಾವನಾತ್ಮಕ ವಿಚಾರಗಳನ್ನು ಆಡಳಿತದಲ್ಲಿ ತರಬಾರದು. ಕೇಂದ್ರೀಕೃತ ವ್ಯವಸ್ಥೆ ಸದಾ ಜಡವಾಗುತ್ತಲೇ ಹೋಗುತ್ತದೆ. ವಿಕೇಂದ್ರೀಕರಣದಲ್ಲಿ ಇದನ್ನು ತಡೆಯಬಹುದು.
ಡಾ| ಪಾಂಡುರಂಗ ಪಾಟೀಲ,
ಮಾಜಿ ಮೇಯರ್‌, ಹು-ಧಾ ಮನಪಾ

ಹು-ಧಾ ಎರಡೂ ಒಂದೇಯಾದರೂ ಅಭಿವೃದ್ಧಿ ದೃಷ್ಟಿಯಿಂದ ಸಿಂಹಪಾಲು ಹುಬ್ಬಳ್ಳಿ ಪಾಲಾಗುತ್ತಿದೆ. ಆಡಳಿತ, ಜನರ ಸಮಸ್ಯೆಗಳ ನಿವಾರಣೆ ಕಷ್ಟವಾಗುತ್ತಲೇ ಇದೆ. ಪ್ರತ್ಯೇಕ ಪಾಲಿಕೆಯಿಂದ ಹುಬ್ಬಳ್ಳಿಗೂ ಅನುಕೂಲವಾಗುತ್ತದೆ.
ಶಂಕರ ಹಲಗತ್ತಿ, ಸಾಮಾಜಿಕ ಹೋರಾಟಗಾರ

ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ದೃಷ್ಟಿಯಿಂದ ಖಂಡಿತವಾಗಿಯೂ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಅಗತ್ಯವಿದೆ. ಈ ಹೋರಾಟ ತೀವ್ರ ಸ್ವರೂಪ ಪಡೆಯುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಧಾರವಾಡ ಅಸ್ಮಿತೆಗಾಗಿ ಪ್ರತ್ಯೇಕ ಮಹಾನಗರ ಪಾಲಿಕೆ ಅನಿವಾರ್ಯ.
ವೆಂಕಟೇಶ ಮಾಚಕನೂರು, ಹೋರಾಟಗಾರ

ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.