Udayavni Special

ಯುದ್ಧ ಕಾಲದಲ್ಲಿ ಜೆಡಿಎಸ್‌ನಿಂದ ಮತ್ತೂಮ್ಮೆ ಶಸ್ತ್ರತ್ಯಾಗ


Team Udayavani, Oct 24, 2020, 1:05 PM IST

huballi-tdy-2

ಹುಬ್ಬಳ್ಳಿ: ರಣರಂಗದಲ್ಲಿ ಯುದ್ಧ ಶುರುವಾದ ಸಂದರ್ಭದಲ್ಲಿ ಶಸ್ತ್ರತ್ಯಾಗ ಮಾಡಿದ ರೀತಿಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‌ ವರ್ತಿಸಿದೆ. ಮತದಾನ ಮೂರು ದಿನ ಇರುವಾಗ ಅಭ್ಯರ್ಥಿ ನಿವೃತ್ತಿಗೊಳಿಸಿ, ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿ ಗೊಂದಲ ಮೂಡಿಸಿದೆ. ಈ ನಿರ್ಣಯದ ಕುರಿತಾಗಿ ರಾಜಕೀಯವಾಗಿ ಅನೇಕ ಮಾತು-ಶಂಕೆಗಳು ಕೇಳಿ ಬರತೊಡಗಿವೆ.

ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಒಂದು ವರ್ಷದ ಮೊದಲೇ ಅಭ್ಯರ್ಥಿಯನ್ನಾಗಿ ಶಿವಶಂಕರ ಕಲ್ಲೂರ ಅವರನ್ನು ಜೆಡಿಎಸ್‌ ಘೋಷಣೆ ಮಾಡಿತ್ತು. ಕಲ್ಲೂರು ನಾಮಪತ್ರ ಸಲ್ಲಿಸಿ ಪ್ರಚಾರದಲ್ಲೂ ತೊಡಗಿದ್ದರು. ಮತದಾನ ಇನ್ನೇನು ಮೂರ್‍ನಾಲ್ಕು ದಿನ ಇದೆ ಎನ್ನುವಾಗಲೇ ವರಿಷ್ಠರು ಪಕ್ಷದ ಬೆಂಬಲ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಎಂದು ಘೋಷಿಸುವ ಮೂಲಕ, ಸ್ವತಃ ಪಕ್ಷದ ಅಭ್ಯರ್ಥಿಗೆ ಶಾಕ್‌ ನೀಡಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ತಾತ್ಸಾರ ತೋರುತ್ತ ಬಂದಿರುವ ಜೆಡಿಎಸ್‌, ಪಶ್ಚಿಮ ಪದವೀಧರ ಕ್ಷೇತ್ರದ ವಿಚಾರದಲ್ಲೂ ಅದೇ ಮನೋಭಾವನೆ ಮುಂದುವರಿಸಿದಿದೆಯೇ, ಪಕ್ಷದ ಅಧಿಕೃತ ಅಭ್ಯರ್ಥಿ ಕಣದಲ್ಲಿದ್ದರೂ ಅಭ್ಯರ್ಥಿಯ ಗಮನಕ್ಕೂ ತಾರದೆ ಏಕಾಏಕಿಯಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವಮೂಲಕ ತಪ್ಪು ಸಂದೇಶ ರವಾನೆ ಮಾಡುವ ಕೆಲಸ ಮಾಡಿದೆ ಎಂಬುದು ಕೆಲವರ ಅನಿಸಿಕೆ.

ಈ ಹಿಂದೆಯೂ ವಿಜಯಪುರ ಜಿಲ್ಲೆಯ ವಿಜುನಗೌಡಪಾಟೀಲರಿಗೆ ವಿಧಾನಪರಿಷತ್ತಿಗೆ ಅಭ್ಯರ್ಥಿಯಾಗುವುದಾಗಿ ಹೇಳಿ ಕೊನೆ ಗಳಿಗೆಯಲ್ಲಿ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿಸಿದ್ದರ ಬಗ್ಗೆ ಆಕ್ರೋಶ ಸ್ಫೋಟಗೊಂಡಿತ್ತು. ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಉತ್ತರ ಕರ್ನಾಟಕದ ಕೆಲವು ಕಡೆಗಳಲ್ಲಿ ಅಭ್ಯರ್ಥಿಯಾಗಿಸುವುದಾಗಿ ಹೇಳಿ ಕೊನೆ ಗಳಿಗೆಯಲ್ಲಿ ಬೇರೆಯವರಿಗೆ ಬಿ ಫಾರಂ ನೀಡಿದ್ದ ಪ್ರಕರಣಗಳು ಇದ್ದು, ಇದೀಗ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಒಂದು ವರ್ಷದ ಮೊದಲೇ ತಾವೇ ಘೋಷಿಸಿದ್ದ ಅಭ್ಯರ್ಥಿ ಕಣದಿಂದ ಬಲವಂತವಾಗಿ ನಿವೃತ್ತಿಗೊಳ್ಳುವಂತೆ ಮಾಡಲಾಗಿದೆ.

ರಾಜಕೀಯ ಲೆಕ್ಕಾಚಾರವೇ?: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವುದರ ಹಿಂದೆ ಪಕ್ಷದ ವರಿಷ್ಠರ ರಾಜಕೀಯ ಲೆಕ್ಕಾಚಾರವಿದೆ. ವಿನಾಕಾರಣ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ಜೆಡಿಎಸ್‌ ಮೂಲಗಳ ಸಮಜಾಯಿಷಿ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ಪಶ್ಚಿಮ ಪದವೀಧರ ಕ್ಷೇತ್ರದ ಮಾಹಿತಿ ಪಡೆದು, ಕಳೆದ ನಾಲ್ಕೈದು ದಿನಗಳಿಂದಲೇ ಕ್ಷೇತ್ರ ವ್ಯಾಪ್ತಿಯ ಪಕ್ಷದ ನಾಯಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ.

ಪಕ್ಷದ ಅಭ್ಯರ್ಥಿಗೆ ನಿರೀಕ್ಷಿತ ಮಟ್ಟದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಸಾಧ್ಯವಾಗದಿರುವುದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಅತ್ಯಂತ ಕಡಿಮೆ ಮತ ಪಡೆದರೆ ಉತ್ತರದಲ್ಲಿ ಪಕ್ಷಕ್ಕೆ ನೆಲೆ ಇಲ್ಲ ಎಂಬ ಅನಿಸಿಕೆಗೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಬಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಕಾಂಗ್ರೆಸ್‌ ಮತಬುಟ್ಟಿಗೆ ಕೈ ಹಾಕಲಿದ್ದು, ಇದು ಬಿಜೆಪಿಗೆ ಲಾಭ ತಂದುಕೊಡಬಲ್ಲದ್ದಾಗಿದೆ ಎಂಬುದು ಕೆಲವರ ಅನಿಸಿಕೆಯಾದರೂ, ಜೆಡಿಎಸ್‌ ಮೂಲಗಳು ಇದನ್ನು ಒಪ್ಪಲು ತಯಾರಿಲ್ಲ. ಬದಲಾಗಿ ಬಸವರಾಜ ಗುರಿಕಾರಗೆ ಗೆಲುವಾಗಲಿದೆ ನೋಡುತ್ತಿರಿ ಎನ್ನುತ್ತಿವೆ. ಹೀಗಾಗಿ ಕಾರ್ಯಕರ್ತರಲ್ಲಿ ಸಣ್ಣ ಅಸಮಾಧಾನ ಉಂಟಾಗಿದೆ.

ಹೊರಟ್ಟಿ ಮೂಲಕ ಮನವರಿಕ : ಶಿವಶಂಕರ ಕಲ್ಲೂರ ಅವರಿಗೆ ವಾಸ್ತವ ಸ್ಥಿತಿ ಹಾಗೂ ಯಾವ ಕಾರಣಕ್ಕೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮುಂಚಿತವಾಗಿ ತಿಳಿಸದೆ, ನಿರ್ಣಯ ಕೈಗೊಂಡ ನಂತರದಲ್ಲಿ ಮನವೊಲಿಕೆ ಕಾರ್ಯ ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಹೊರಟ್ಟಿ ಅವರ ಮೂಲಕ ಮನವರಿಕೆ ಕಾರ್ಯ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರಿಕಾರಗೆ ಬಲ : ಜೆಡಿಎಸ್‌ ನಾಯಕರು ಕೈಗೊಂಡ ನಿರ್ಧಾರದಿಂದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬಲ ಬಂದಂತಾಗಿದೆ. ಗುರಿಕಾರ ಅವರ ಬೆಂಬಲಿಗರೆಂದರೆ ಹೆಚ್ಚಿನವರು ಶಿಕ್ಷಕರು ಹಾಗೂ ನೌಕರರು. ಚುನಾವಣೆ ಪ್ರಚಾರದಲ್ಲಿ ಅವರು ಪಾಲ್ಗೊಳ್ಳಬಹುದೇ ವಿನಃ ಮತಗಟ್ಟೆ ಏಜೆಂಟರಾಗಲು ಬರುವುದಿಲ್ಲ. ಜೆಡಿಎಸ್‌ ಬೆಂಬಲದಿಂದಾಗಿ ಎಲ್ಲ ಮತಗಟ್ಟೆಗಳಿಗೂ ಏಜೆಂಟರು ಸುಲಭವಾಗಿ ಸಿಕ್ಕಂತಾಗಿದೆ ಎಂದು ಹೇಳಲಾಗುತ್ತಿದೆ.

 

-ಅಮರೇಗೌಡ ಗೋನವಾರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

GST

ಆಧಾರ್‌ ದೃಢೀಕರಿಸದಿದ್ರೆ ಭೌತಿಕ ಪರಿಶೀಲನೆ

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಚಾಮರಾಜನಗರ: ದೇವಾಲಯಗಳಲ್ಲಿನ್ನು ಸಂಸ್ಕೃತದೊಡನೆ ಕನ್ನಡ ಮಂತ್ರಘೋಷ!

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ

ಬಿಸಿಯೂಟ ಸ್ಥಗಿತ: ಖುದ್ದು ವಿಚಾರಣೆಗೆ ಹಾಜರಾಗಲು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜನವರಿ ಅಂತ್ಯಕ್ಕೆ ಕಾರ್ಗೋ ಟರ್ಮಿನಲ್‌ ಕಾರ್ಯಾರಂಭ

ಜನವರಿ ಅಂತ್ಯಕ್ಕೆ ಕಾರ್ಗೋ ಟರ್ಮಿನಲ್‌ ಕಾರ್ಯಾರಂಭ

ಮೀಸಲಾತಿಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಇಷ್ಟಲಿಂಗ ಕಳುಹಿಸಿ ಪ್ರತಿಭಟನೆ

ಮೀಸಲಾತಿಗೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಇಷ್ಟಲಿಂಗ ಕಳುಹಿಸಿ ಪ್ರತಿಭಟನೆ

ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು, ಮೂರಕ್ಕೇರಿದ ಸಾವಿನ ಸಂಖ್ಯೆ

ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು, ಮೂರಕ್ಕೇರಿದ ಸಾವಿನ ಸಂಖ್ಯೆ

ಹೊಸ ಮಗ್ಗುಲಿನತ್ತ ಜನತಾ ಬಜಾರ್‌

ಹೊಸ ಮಗ್ಗುಲಿನತ್ತ ಜನತಾ ಬಜಾರ್‌

ಹುಬ್ಬಳ್ಳಿ : ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ ಸಿಬ್ಬಂದಿಗಳು

ಹುಬ್ಬಳ್ಳಿ :ದಯವಿಟ್ಟು ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ! ಪೊಲೀಸ್ ಸಿಬ್ಬಂದಿಗಳ ಮನವಿ

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

ನಿರ್ಣಾಯಕ ಹೋರಾಟ: ಭಾರೀ ಬೆಲೆ ತೆರಬೇಕಾಗುತ್ತದೆ: ರೈತರ ಎಚ್ಚರಿಕೆ

GST

ಆಧಾರ್‌ ದೃಢೀಕರಿಸದಿದ್ರೆ ಭೌತಿಕ ಪರಿಶೀಲನೆ

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಬಡರಾಷ್ಟ್ರಗಳಿಗೆ ಭಾರತ ಲಸಿಕೆ ಸಂಗ್ರಾಹಕ ಗಿಫ್ಟ್

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಣಿಪಾಲ: ಬೆಂಕಿ ಅವಘಡ; ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.