Udayavni Special

ಜಿಗಳಿ ಕೆರೆ ಬಂಡು ಪುನರ್‌ ನಿರ್ಮಾಣ ಭರವಸೆ

Team Udayavani, Jun 21, 2021, 4:35 PM IST

20-kalaghatagi 1

ಕಲಘಟಗಿ: ಹಟಕಿನಾಳ ಗ್ರಾಮದ ಸಣ್ಣ ನೀರಾವರಿ ಇಲಾಖೆಯ ಜಿಗಳಿ ಕೆರೆಯ ಬಂಡು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಪುನರ್‌ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಲು ಪ್ರಸ್ತಾವನೆ ತಯಾರಿಸುವಂತೆ ಶಾಸಕ ಸಿ.ಎಂ. ನಿಂಬಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.

ಮೂರ್‍ನಾಲ್ಕು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಒಡ್ಡು ಒಡೆದಿರುವ ಹಟಕಿನಾಳದ ಜಿಗಳಿ ಕೆರೆಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅವರು ಮಾತನಾಡಿದರು. ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿರುವ ತಾಲೂಕಿನ 52 ಕೆರೆಗಳ ಭದ್ರತೆ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು. ಅಲ್ಲದೇ ಜಿಗಳಿ ಕೆರೆಯ ಸಂಪೂರ್ಣ ಬದುವಿನ ಪುನರ್‌ ನಿರ್ಮಾಣಕ್ಕೆ ಅವಶ್ಯಕ ಎಲ್ಲ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಶೀಘ್ರದಲ್ಲಿಯೇ ನಿರ್ಮಿಸಿ ಸಲ್ಲಿಸುವಂತೆ ಅಭಿಯಂತರಿಗೆ ಆದೇಶಿಸಿದರು.

ಸಣ್ಣ ನೀರಾವರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಎಚ್‌.ಟಿ.ನಟೇಶ ಹಾಗೂ ಕಿರಿಯ ಅಭಿಯಂತ ದುಗೇìಶಕುಮಾರ ಮಾಹಿತಿ ನೀಡಿ, ಸುಮಾರು 27 ಎಕರೆ ಪ್ರದೇಶ ವಿಸ್ತೀರ್ಣ ವ್ಯಾಪ್ತಿಯಲ್ಲಿ 8.43 ಎಂಸಿಎಫ್‌ಟಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಿಗಳಿ ಕೆರೆಯು 545 ಮೀಟರ್‌ ಉದ್ದದ ಬಂಡನ್ನು ಹೊಂದಿದೆ. ಕೆರೆ ಒಡಲು ಸಂಪೂರ್ಣ ತುಂಬಿದಲ್ಲಿ ನೂರಾರು ಎಕರೆ ಜಮೀನಿಗೆ ನೀರಾವರಿ ಮಾಡಬಹುದು. ಸುತ್ತಮುತ್ತಲಿನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಒಳಹರಿವು ಹೆಚ್ಚಿ ಕೆರೆಯ ಒಡ್ಡು ಒಡೆದಿದೆ. ಕೆರೆಯಲ್ಲಿ ಶೇಖರಣೆಯಾದ ನೀರು ಸಂಪೂರ್ಣ ಖಾಲಿಯಾಗಿದೆ ಎಂದು ವಿವರಿಸಿದರು.

ರೈತರ ಅಳಲು: ಜಿಗಳಿ ಕೆರೆಯ ಒಡ್ಡು ಒಡೆದು ಅಪಾರ ಪ್ರಮಾಣದಲ್ಲಿ ನೀರು ಹೊರಹೊಮ್ಮಿ ಜಮೀನಿಗೆ ನುಗ್ಗಿರುವುದರಿಂದ ತಗ್ಗು ಪ್ರದೇಶದಲ್ಲಿನ ಸುಮಾರು 20ರಿಂದ 25 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ಹಾಗೂ ಕಬ್ಬಿನ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಹಾನಿಯುಂಟಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಅದಕ್ಕೆ ಉತ್ತರಿಸಿದ ಶಾಸಕರು, ಬೆಳೆ ಹಾನಿ ಕುರಿತು ಸಮರ್ಪಕವಾದ ಯಾದಿಯನ್ನು ಕೃಷಿ ಹಾಗೂ ಕಂದಾಯ ಇಲಾಖೆಯವರು ತಕ್ಷಣ ತಯಾರಿಸಿ ರೈತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ತಹಶೀಲ್ದಾರ್‌ ಅಶೋಕ ಶಿಗ್ಗಾವಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಎನ್‌.ಎಫ್‌.ಕಟ್ಟೇಗೌಡರ ಅವರಿಗೆ ಸೂಚಿಸಿದರು.

ಶಾಸಕರ ಆಪ್ತಸಹಾಯಕ ಮಾರುತಿ ಹಂಚಿನಮನಿ, ಬಿಜೆಪಿ ಪ್ರಮುಖರಾದ ನಿಂಗಪ್ಪ ಸುತಗಟ್ಟಿ, ಯಲ್ಲಾರಿ ಶಿಂಧೆ, ಮಲ್ಲಯ್ಯಸ್ವಾಮಿ ಗುಡಿಮನಿ, ಕಂದಾಯ ಇಲಾಖೆಯ ಎಂ.ಕೆ. ಶಿಂಪಿ, ಗ್ರಾಮಸ್ಥರಾದ ಹೋಮಣ್ಣ ಕೂಡಲಗಿ, ಶಿವನಗೌಡ ದೊಡಮನಿ, ಪರಶುರಾಮ ಕೂಡಲಗಿ, ಶಂಕ್ರಯ್ಯ ಹಿರೇಮಠ, ಚನ್ನಬಸಯ್ಯ ಗುಡಿಮನಿ, ಗಂಗಯ್ಯ ದೊಡಮನಿ, ವಿಜಯಕುಮಾರ ಮಿರಾಶಿ, ಶಿವಾನಂದ ದೊಡಮನಿ, ಜಗದೀಶ ಹಿರೇಮಠ, ಸಿದ್ಧು ಗುಡಿಮನಿ ಇದ್ದರು. ­ಶಾಸಕರಿಂದ ಒಡ್ಡು ಒಡೆದ ಸ್ಥಳ ಪರಿಶೀಲನೆ­ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟಾಪ್ ನ್ಯೂಸ್

‘ನನಗೂ ಲವ್ವಾಗಿದೆ’ ರೆಕಾರ್ಡಿಂಗ್‌ ಆರಂಭ

‘ನನಗೂ ಲವ್ವಾಗಿದೆ’ ರೆಕಾರ್ಡಿಂಗ್‌ ಆರಂಭ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ben stokes

ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದ ಸ್ಟೋಕ್ಸ್‌!

ಬೆರಳೆಣಿಕೆ ಪ್ರದೇಶಗಳಲ್ಲಿ ಅಫ್ಘಾನ್‌ ಸೇನೆ ಮೇಲುಗೈ; ಸ್ನೇಹ ಅಣೆಕಟ್ಟು ಧ್ವಂಸಕ್ಕೆ ಯತ್ನ

ಬೆರಳೆಣಿಕೆ ಪ್ರದೇಶಗಳಲ್ಲಿ ಅಫ್ಘಾನ್‌ ಸೇನೆ ಮೇಲುಗೈ; ಸ್ನೇಹ ಅಣೆಕಟ್ಟು ಧ್ವಂಸಕ್ಕೆ ಯತ್ನ

ಮಲೆನಾಡಿನಲ್ಲಿ ದನಗಳ್ಳರ ಹಾವಳಿ: ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಎಸ್ಕೇಪ್!

ಮಲೆನಾಡಿನಲ್ಲಿ ದನಗಳ್ಳರ ಹಾವಳಿ: ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಎಸ್ಕೇಪ್!

ಸತತ 4ನೇ ದಿನವೂ ಹೆಚ್ಚಳ; ಭಾರತದಲ್ಲಿ ಕಳೆದ 24ಗಂಟೆಯಲ್ಲಿ 41,649 ಕೋವಿಡ್ ಪ್ರಕರಣ ಪತ್ತೆ

ಸತತ 4ನೇ ದಿನವೂ ಹೆಚ್ಚಳ; ಭಾರತದಲ್ಲಿ ಕಳೆದ 24ಗಂಟೆಯಲ್ಲಿ 41,649 ಕೋವಿಡ್ ಪ್ರಕರಣ ಪತ್ತೆ

ಶೆಟ್ಟರ್‌ ಸಿಟ್ಟು, ಹಿರಿಯರ ನಡೆ: ನೂತನ ಸಿಎಂ ಬೊಮ್ಮಾಯಿಗೆ ಸಂಕಟ

ಶೆಟ್ಟರ್‌ ಸಿಟ್ಟು, ಹಿರಿಯರ ನಡೆ: ನೂತನ ಸಿಎಂ ಬೊಮ್ಮಾಯಿಗೆ ಸಂಕಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fhjggfsdgf

2ರಂದು ರಕ್ತದಾನ ಶಿಬಿರ

ddfguh

ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ma

ಉನ್ನತ ಶಿಕ್ಷಣಕ್ಕೆ ಶಿಷ್ಯವೇತನದ ಬದಲು ಸರ್ಕಾರವೇ ಶುಲ್ಕ ಭರಿಸಲಿ

ಮಲೆನಾಡಿನಲ್ಲಿ ದನಗಳ್ಳರ ಹಾವಳಿ: ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಎಸ್ಕೇಪ್!

ಮಲೆನಾಡಿನಲ್ಲಿ ದನಗಳ್ಳರ ಹಾವಳಿ: ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಎಸ್ಕೇಪ್!

MUST WATCH

udayavani youtube

ಬೀಜವಿಲ್ಲದ ಲಿಂಬೆ ಹಣ್ಣಿನ ಕುರಿತ ಸಂಕ್ಷಿಪ್ತ ಮಾಹಿತಿ

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

ಹೊಸ ಸೇರ್ಪಡೆ

fhjggfsdgf

2ರಂದು ರಕ್ತದಾನ ಶಿಬಿರ

ddfguh

ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಿ

‘ನನಗೂ ಲವ್ವಾಗಿದೆ’ ರೆಕಾರ್ಡಿಂಗ್‌ ಆರಂಭ

‘ನನಗೂ ಲವ್ವಾಗಿದೆ’ ರೆಕಾರ್ಡಿಂಗ್‌ ಆರಂಭ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

ben stokes

ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದ ಸ್ಟೋಕ್ಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.