Hubli; ಚಿನ್ನಾಭರಣ ಅಂಗಡಿ ಕಳ್ಳತನ ಪ್ರಕರಣ: ಐವರ ಬಂಧನ, 77 ಲಕ್ಷ ರೂ ಮೌಲ್ಯದ ಆಭರಣ ವಶ
Team Udayavani, Sep 5, 2024, 12:17 PM IST
ಹುಬ್ಬಳ್ಳಿ: ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಚಿನ್ನಾಭರಣ ಅಂಗಡಿ ಕಳ್ಳತನದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, 77 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಇಲ್ಲಿನ ಕೇಶ್ವಾಪುರ ಠಾಣೆಯ ವ್ಯಾಪ್ತಿಯ ರಮೇಶ ಮುಂಭಾಗದಲ್ಲಿರುವ ಶ್ರೀ ಭುವನೇಶ್ವರಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನವಾಗಿತ್ತು. ಕಳ್ಳತನವಾಗಿರುವ ಚಿನ್ನಾಭರಣಗಳಲ್ಲಿ 780 ಗ್ರಾಂ ಚಿನ್ನ, 23.3 ಕೆಜಿ ಮೌಲ್ಯದ ಬೆಳ್ಳಿ ಆಭರಣ, ಕಳ್ಳತನ ಕೃತ್ಯಕ್ಕೆ ಬಳಸಿದ ಕಟರ್, ಗ್ಯಾಸ್ ಕಟ್ಟರ್ ಹಾಗೂ 10 ಸಾವಿರ ನಗದು ಹಣ ಸೇರಿದಂತೆ 77 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂರು ತಂಡಗಳ ಪರಿಶ್ರಮ: ಪ್ರಕರಣಕ್ಕೆ ಸಂಬಂಧಿಸಿದಂತೆ ಫರಾನ್ ಶೇಖ್, ಮುಖೇಶ್, ಫಾತೀಮಾ ಶೇಖ್, ಅಫ್ತಾಬ್ ಅಹ್ಮದ್ ಶೇಖ್, ತಲತ್ ಶೇಖ್ ಎಂಬುವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಇನ್ನೊಂದೆರಡು ಆರೋಪಿಗಳ ಬಂಧನ ಹಾಗೂ ಚಿನ್ನಾಭರಣ ಜಪ್ತಿ ಮಾಡಬೇಕಾಗಿದೆ. ಪ್ರಕರಣದ ಪತ್ತೆಗೆ ವಿವಿಧ ಇನ್ಸಪೆಕ್ಟರ್, ಪಿಎಸ್ಐ, ಸಿಬ್ಬಂದಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿತ್ತು. ಸತತ ಒಂದೂವರೆ ತಿಂಗಳ ಪರಿಶ್ರಮದಿಂದಾಗಿ ದೊಡ್ಡ ಪ್ರಕರಣ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸೆಮಿಸ್ಟರ್ ಪರೀಕ್ಷೆಯಲ್ಲಿ ಫೈಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹ*ತ್ಯೆ
Hubli: ಸಿಜೆಐ ಮನೆಗೆ ಪ್ರಧಾನಿ ಹೋಗಬಾರದೆಂಬ ನಿಯಮ ಇದೆಯೇ?: ಪ್ರಹ್ಲಾದ ಜೋಶಿ
“Arvind Kejriwal ರೀತಿ ಭಂಡತನ ತೋರದೆ ಸಿದ್ದು ರಾಜೀನಾಮೆ ನೀಡಲಿ’: ಕೆ.ಎಸ್. ಈಶ್ವರಪ್ಪ
Eshwarappa: ಬಿಜೆಪಿಯಲ್ಲಿ ಎಲ್ಲಾ ಸರಿಯಾದರೆ ಶೀಘ್ರ ಪಕ್ಷಕ್ಕೆ ಮರಳುವೆ: ಕೆ.ಎಸ್.ಈಶ್ವರಪ್ಪ
Hubli; ಸರಕಾರದ ತುಷ್ಟೀಕರಣದ ನೀತಿಯಿಂದ ನಾಗಮಂಗಲ ಗಲಭೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Ramanagara: ಎಚ್‌ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ
Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು
BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ
South Asia ಆ್ಯತ್ಲೆಟಿಕ್ಸ್ : ರಿಲೇಯಲ್ಲಿ ಭಾರತಕ್ಕೆ ಚಿನ್ನ
Valmiki Corporation Scam ಯತ್ನಾಳ್, ಜಾರಕಿಹೊಳಿ ನೇತೃತ್ವದ ತಂಡ ರಾಜಭವನಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.