ಕವಿವಿ: ಕೋವಿಡ್ ನಿಂದ ತಡೆಹಿಡಿದ ಎಲ್ಲಾ ಪರೀಕ್ಷೆಗಳಿಗೆ ದಿನಾಂಕ ನಿಗದಿ

Team Udayavani, Jul 21, 2021, 12:53 PM IST

ಕವಿವಿ: ಕೋವಿಡ್ ನಿಂದ ತಡೆಹಿಡಿದ ಎಲ್ಲಾ ಪರೀಕ್ಷೆಗಳಿಗೆ ದಿನಾಂಕ ನಿಗದಿ

ಧಾರವಾಡ: ಕೋವಿಡ್ 2ನೇ ಆಲೆ ಹಾಗೂ ಸಾರಿಗೆ ಬಸ್ ಮುಷ್ಕರದಿಂದ ಮುಂದೂಡಲ್ಪಟ್ಟಿದ್ದ 2020 -21 ನೇ ಸಾಲಿನ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ಪರೀಕ್ಷೆಗಳನ್ನು ಯುಜಿಸಿ ಮಾರ್ಗಸೂಚಿ ಹಾಗೂ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನಗಳನ್ವಯ ಸಪ್ಟೆಂಬರ್ ಅಂತ್ಯದೊಳಗೆ ಪೂರ್ತಿಗೊಳಿಸಲು ವಿಶ್ವವಿದ್ಯಾಲಯ ನಿರ್ಧರಿಸಲಾಗಿದೆ ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 26 ರಿಂದ ವಿವಿ ಆವರಣ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಲ್ಲಿ ಬೋಧಕ ತರಗತಿಗಳು (ಆಫ್ಲೈನ್) ಆರಂಭವಾಗಲಿವೆ. ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದುಕೊಂಡು ತರಗತಿಗಳಿಗೆ ಕೋವಿಡ್ ನಿಯಮ ಪಾಲನೆಯೊಂದಿಗೆ ಹಾಜರಾಗಲು ಸೂಚಿಸಲಾಗಿದೆ ಎಂದರು.

2020-21 ನೇ ಸಾಲಿನ ಈಗಾಗಲೇ ಮುಂದೂಡಲ್ಪಟ್ಟ ಸ್ನಾತಕ, ಸ್ನಾತಕೋತ್ತರ ಮತ್ತು ಡಿಪ್ಲೋಮಾ ಪದವಿಗಳ ಬೆಸ (1,3,5) ಇತ್ಯಾದಿ) ಸೆಮಿಸ್ಟರ್ ಪರೀಕ್ಷೆಗಳನ್ನು ಆಗಸ್ಟ16ರಿಂದ ನಡೆಸಲಾಗುವುದು. ಈ ಹಿಂದೆ ನಿರ್ಣಯಿಸಿದ್ದ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷಾ ವಿಧಾನವನ್ನು ಕೈಬಿಡಲಾಗಿದೆ. ಬದಲಾಗಿ ಪ್ರಶ್ನೆಗಳು ಹಿಂದಿನ ಪದ್ಧತಿಯಂತೆ ವಿವರಣಾತ್ಮಕ ಉತ್ತರ ಬರೆಯುವ ವಿಧಾನದಲ್ಲಿ ಇರುತ್ತವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ಶ್ರೀರಾಮುಲುಗೆ ಹೈಕಮಾಂಡ್ ಬುಲಾವ್: ಏನಿದು ಹೊಸ ಟ್ವಿಸ್ಟ್?

ಪದವಿಯ ಅಂತಿಮ ವರ್ಷದ ಅಂತಿಮ ಸೆಮಿಸ್ಟರ್ (ಮೂರು ವರ್ಷದ ಪದವಿಗೆ 6ನೇ ಸೆಮಿಸ್ಟರ್‌, ನಾಲ್ಕು ವರ್ಷದ ಪದವಿಗೆ 8ನೇ ಸೆಮಿಸ್ಟರ್) ಪರೀಕ್ಷೆಗಳನ್ನು ನಡೆಸಿ, ನಂತರ ಪ್ರಸ್ತುತ ಸಾಲಿನ ಮಧ್ಯಂತರ ಸಮ ಸಮಸ್ಟರ್‌ (2, 4 ಇತ್ಯಾದಿ) ಫಲಿತಾಂಶವನ್ನು (ಯುಜಿಸಿ 2020ರ ನಿಯಮಗಳನ್ನು ಅನುಸರಿಸಿ) ಪ್ರಕಟಿಸಲು ನಿರ್ಧರಿಸಲಾಗಿದೆ. ಸಮ ಸೆಮಿಸ್ಟರ್‌ಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 15 ರಿಂದ ಅಂತಿಮ ಸೆಮಿಸ್ಟರ್‌ಗಳಿಗೆ ವಿವರಣಾತ್ಮಕ ಉತ್ತರ ಬರೆಯುವ ವಿಧಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಪರೀಕ್ಷೆಗಳು ಜರುಗಲಿವೆ ಎಂದರು.

ಮಧ್ಯಂತರ ಸಮ ಸೆಮಿಸ್ಟರ್‌ಗಳಿಗೆ ಸಂಬಂಧಿಸಿದಂತೆ ಆ ಸೆಮಿಸ್ಟರ್ ಗಳ ಅಂತರಿಕ ಅಂಕಗಳು ಹಾಗೂ ಹಿಂದಿನ ಸೆಮಿಸ್ಟರ್‌ ನ ಅಂಶಗಳ ಆಧಾರದ ಮೇಲೆ (ಯುಜಿಸಿ 20200 ನಿಯಮಗಳನ್ವಯ) ಪಲಿತಾಂಶ ಪ್ರಕಟಿಸಲಾಗುವುದು. ಸ್ನಾತಕೋತ್ತರ ಹಂತದಲ್ಲಿ 2ನೇ ಸೆಮಿಸ್ಟರ್ ಅವಧಿಯ ಪರೀಕ್ಷೆ ರದ್ದುಪಡಿಸಲಾಗಿದ್ದು, ಕೇವಲ ಆಂತರಿಕ ಅಂಕ ಮತ್ತು ಹಿಂದಿನ ಸೆಮಿಸ್ಟರ್‌ಗಳ ಅಂಕಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಅಂತಿಮ ಸೆಮಿಸ್ಟರ್‌ಗಳಿಗೆ ಬರುವ ಸಪ್ಟೆಂಬರ 15 ರಿಂದ ಪರೀಕ್ಷೆಗಳು ಪಾರಂಭವಾಗಲಿವೆ.  2021-22ರ ಶೈಕ್ಷಣಿಕ ಸಾಲಿನ ಎಲ್ಲಾ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳು ಬರುವ ಅಕ್ಟೋಬರ್ ಒಂದರಿಂದ ಪ್ರಾರಂಭಗೊಳ್ಳಲಿದೆ ಎಂದರು.

ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳಲ್ಲಿ ಕೋವಿಡ್ ನಿಯಮಾನುಸಾರ ಮುಂಜಾಗ್ರತಾ ಕ್ರಮ ಜರುಗಿಸಲು ಸೂಚಿಸಿಲಾಗಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಲಸಿಕೆ ಪಡೆದು ತರಗತಿಗಳಿಗೆ ಸೂಚಿಸಲಾಗಿದೆ. 108 ಲಕ್ಷ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ‘ಲಸಕೀಕರಣದಲ್ಲಿ ಶೇಕಡಾ 98ರಷ್ಟು ಪ್ರಗತಿ ಸಾಧನೆಯಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ.ಹನುಮಂತಪ್ಪ, ಕೆ.ಟಿ., ಮೌಲ್ಯಮಾಪನ ಕುಲಸಚಿವರ ಡಾ.ಎಚ್. ನಾಗರಾಜ ಇದ್ದರು.

ಟಾಪ್ ನ್ಯೂಸ್

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ವಿಧೇಯಕ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಪಶ್ಚಿಮ ಬಂಗಾಳದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ನಾರಾಯಣ ದೇವನಾಥ್‌ ನಿಧನ

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌; ಐವರು ನಕ್ಸಲರ ಹತ್ಯೆ

ಛತ್ತೀಸ್‌ಗಡ: ಪ್ರತ್ಯೇಕ ಎನ್‌ಕೌಂಟರ್‌; ಐವರು ನಕ್ಸಲರ ಹತ್ಯೆ

ವಿಚ್ಛೇದನ ಹಾದಿಯಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಚಿರಂಜೀವಿ ಪುತ್ರಿ ಶ್ರೀಜಾ?

ವಿಚ್ಛೇದನ ಹಾದಿಯಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಚಿರಂಜೀವಿ ಪುತ್ರಿ ಶ್ರೀಜಾ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಒಇಉಯತರಗಬ

ಬಾರದ ಕೋವಿಡ್‌ ರಿಸ್ಕ್ ಭತ್ಯೆ: ಶುಶ್ರೂಷಕರಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ

ಚ್ಗಹಜಕಜಹಗ್ದ

60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಲಸಿಕೆ

ರತಯುಇಒಪೊಇಉಯತರ

ಮೂರು ಕಡೆ ಶುಶ್ರೂಷಾ ಕೇಂದ್ರ ಆರಂಭ

ಜಾತಿವಾದಿಗಳನ್ನು ಟೀಕಿಸಿದ್ದ ಚಂಪಾ:ಡಾ| ಪಾಟೀಲ

ಜಾತಿವಾದಿಗಳನ್ನು ಟೀಕಿಸಿದ್ದ ಚಂಪಾ:ಡಾ| ಪಾಟೀಲ

ಸ್ಮಾರ್ಟ್‌ ಸಿಟಿಯಲ್ಲಿ ಇನ್ನು ಸೈಕಲ್‌ ಸವಾರಿ : ಪ್ರಾಯೋಗಿಕವಾಗಿ 8 ನಿಲ್ದಾಣಗಳು ಸಜ್ಜು

ಸ್ಮಾರ್ಟ್‌ ಸಿಟಿಯಲ್ಲಿ ಇನ್ನು ಸೈಕಲ್‌ ಸವಾರಿ : ಪ್ರಾಯೋಗಿಕವಾಗಿ 8 ನಿಲ್ದಾಣಗಳು ಸಜ್ಜು

MUST WATCH

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

udayavani youtube

ನಿಷೇಧದ ನಡುವೆಯೂ ರಥೋತ್ಸವ : ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲ

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

ಹೊಸ ಸೇರ್ಪಡೆ

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಪ್ರೊ ಕಬಡ್ಡಿ: ಪಾಟ್ನಾಗೆ ಶಾಕ್‌ ನೀಡಿದ ದಬಾಂಗ್‌ ದಿಲ್ಲಿ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ವಿಧೇಯಕ

ಬಜೆಟ್‌ ಅಧಿವೇಶನಕ್ಕಿಲ್ಲ ಬಹು ನಿರೀಕ್ಷಿತ ಕ್ರಿಪ್ಟೋ ಕರೆನ್ಸಿ ನಿಯಂತ್ರಣ ವಿಧೇಯಕ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಜಾಗತಿಕ ತೈಲ ದರ ಭಾರೀ ಏರಿಕೆ; ದೇಶದಲ್ಲಿ ಯಥಾಸ್ಥಿತಿ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಎಲ್ಲ ಶಾಲಾ ಕಾಲೇಜುಗಳಲ್ಲಿ ಸುಭಾಷಚಂದ್ರ ಭೋಸ್‌ರ 125 ನೇ ಜಯಂತಿ ಆಚರಣೆ: ಸಿಎಂ

ಜಕಲಕಜಹಗ್ದಸ

ರೈತನಿಗೆ ಮಾಜಿ ಶಾಸಕರಿಂದ ಧನಸಹಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.