ರಾಹುಲ್‌ರನ್ನು ಪ್ರಧಾನಿ ಮಾಡಲು ಕುಲಕರ್ಣಿ ಗೆಲ್ಲಿಸಿ: ಅನಿಲಕುಮಾರ

Team Udayavani, Apr 9, 2019, 10:16 AM IST

ಕಲಘಟಗಿ: ಜಾರಿಯಾಗಬೇಕಿದೆ ಎಂದರು. ಸಂಸದ ಪ್ರಹ್ಲಾದ ಜೋಶಿ ಅವರು ವಾಜಪೇಯಿ, ಮೋದಿ ಹಾಗೂ ಯಡಿಯೂರಪ್ಪನವರ ಗಾಳಿಯಲ್ಲಿ ಮೂರು ಅವಧಿಗೆ ಚುನಾಯಿತರಾದರೂ ಜನಪರ ಅಭಿವೃದ್ಧಿ ಕೆಲಸಗಳತ್ತ ಗಮನ ಹರಿಸದ ಕಾರಣ ಈ ಬಾರಿ ಮತದಾರರು ಬದಲಾವಣೆ ಬಯಸಿದ್ದು ವಿನಯ ಕುಲಕರ್ಣಿ ಗೆಲುವು ಶತಸಿದ್ಧ ಎಂದು ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಹೇಳಿದರು.
ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರೈತ ವರ್ಗದ ಕುಟುಂಬದಲ್ಲಿ ಬೆಳೆದು ಬಂದಿರುವ ಮಾಜಿ
ಸಚಿವ ವಿನಯಕುಲಕರ್ಣಿ ಅವರು ತಮ್ಮ ಸೇವಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಿದ್ದಾರೆ. ಈ ಬಾರಿ ಕೇಂದ್ರದಲ್ಲಿ ರಾಹುಲ್‌ ಗಾಂಧಿ ಯವರ ನೇತೃತ್ವದ ಕಾಂಗ್ರೆಸ್‌ ಸರಕಾರ ಸ್ಥಾಪಿಸಲು ಧಾರವಾಡ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರ ಗೆಲುವಿಗೆ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದರು.
ತಾಲೂಕಾಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಸ್‌. ಆರ್‌. ಪಾಟೀಲ, ವೈ.ಬಿ. ದಾಸನಕೊಪ್ಪ, ರಜನಿಕಾಂತ ಬಿಜವಾಡ, ವೃಷಭೇಂದ್ರ ಪಟ್ಟಣಶೆಟ್ಟಿ, ಶಂಕರಗಿರಿ ಬಾವನವರ, ಮಂಜುನಾಥ ಧನಿಗೊಂಡ, ಮೈನುದ್ದೀನ್‌ ಕಾಶೀಮನವರ, ಎಸ್‌.ಎನ್‌. ರಾಯನಾಳ, ಅಣ್ಣಪ್ಪ ಓಲೇಕಾರ, ಗುರು ಬೆಂಗೇರಿ, ಹನುಮಂತ ಕಾಳೆ, ಹನುಮಂತ ಚವರಗುಡ್ಡ, ಬಾಬು ಅಂಚಟಗೇರಿ, ವೆಂಕಟೇಶ ಬಂಡಿವಡ್ಡರ, ಶಾಂತಲಿಂಗ ಬೇರುಡಗಿ, ಕಲ್ಲಯ್ಯ ಹಿರೇಮಠ, ಬಾಳು ಖಾನಾಪುರ, ಸುಧಿರ ಬೋಳಾರ, ಆನಂದ ದೊಡಮನಿ ಇದ್ದರು.
ಜೆಡಿಎಸ್‌ ತಾಲೂಕಾ ವೀಕಕರ ನೇಮಕ 
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ತಾಲೂಕುವಾರು ಚುನಾವಣಾ ವೀಕ್ಷಕರನ್ನು ನೇಮಿಸಲಾಗಿದೆ. ಕಲಘಟಗಿಗೆ ಡಿ.ಜಿ. ಜಂತ್ಲಿ, ಮಲ್ಲಪ್ಪ ರೋಣದ, ಮಾರುತಿ ಹಿಂಡಸಗೇರಿ, ಭೀಮಪ್ಪ ಕಸಾಯಿ; ಕುಂದಗೋಳಕ್ಕೆ ಶಿವಶಂಕರ ಕಲ್ಲೂರ, ಶಂಕ್ರಪ್ಪ ಗಾಣಿಗೇರ, ಅಬ್ಟಾಸ ದೇವರುಡು, ಆರೂಢಪ್ಪ ಕಾತರಕಿ; ನವಲಗುಂದಕ್ಕೆ ರುದ್ರಪ್ಪ ಹೊಸೂರ, ದೇವರಾಜ ಕಂಬಳಿ, ಶಂಕರ ದೊಡ್ಡಮನಿ, ಬಸವರಾಜ ನಾಯ್ಕರ; ಧಾರವಾಡ ಗ್ರಾಮಾಂತರಕ್ಕೆ ಫ‌ಹೀಮ ಕಂಟ್ರಾಕ್ಟರ, ವೀರನಗೌಡ ಮರಿಗೌಡ್ರ, ಚಿದಂಬರ ನಾಡಗೌಡ, ರಾಜು ಸಂಕರೆಡ್ಡಿ, ಬಸವರಾಜ ಸಗರದ ಅವರನ್ನು ನೇಮಿಸಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಗೆಲುವಿಗೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ