ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಸಂಪ್ರದಾಯ ಇಲ್ಲೂ ಆರಂಭಗೊಳ್ಳಲಿ

•ಡಾ| ಬಿ.ವಿ. ಶಿರೂರಗೆ ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ

Team Udayavani, May 27, 2019, 2:45 PM IST

hubali-tdy-4..

ಹುಬ್ಬಳ್ಳಿ: ವಿದೇಶಗಳಲ್ಲಿ ಲಿಂಗಾಯತರು ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಇಲ್ಲಿ ಕೂಡ ಲಿಂಗಾಯತರು ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವ ಸಂಪ್ರದಾಯ ಆರಂಭಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಮೂರುಸಾವಿರಮಠದ ಲಿಂ.ಡಾ| ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ|ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವುದರಿಂದ ಬಸವತತ್ವದ ಬಗ್ಗೆ ಅರಿಯಲು, ಸಮಾಜ ಒಗ್ಗಟ್ಟಾಗಲು, ಸಮಾಜ ಬಾಂಧವರ ನೋವು-ನಲಿವುಗಳನ್ನು ತಿಳಿಯಲು ಪೂರಕವಾಗುತ್ತದೆ ಎಂದರು.

ನಾನು ಅಮೆರಿಕ-ಆಸ್ಟ್ರೇಲಿಯಾದಲ್ಲಿ ನೆಲ ಮಹಡಿಯಲ್ಲಿ ಒಂದು ಬಸವೇಶ್ವರ ಫೋಟೋ ಇಟ್ಟುಕೊಂಡು ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನೋಡಿದ್ದೇನೆ. ಇದರಿಂದಾಗುವ ಅನುಕೂಲವನ್ನು ಮನಗಂಡಿದ್ದೇನೆ ಎಂದರು. ಇಲ್ಲಿನ ಮೂರುಸಾವಿರಮಠಕ್ಕೆ ದೊಡ್ಡ ಪರಂಪರೆಯಿದೆ. ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಮಠಕ್ಕೆ ಬರುತ್ತಾರೆ. ಈ ಮಠದ ಹಿರಿಮೆಯನ್ನು ಹೆಚ್ಚಿಸಿದವರು ಮೂಜಗಂ. ಸಮಾಜದಲ್ಲಿ ಸೌಹಾರ್ದತೆ ಮೂಡಿಸುವಲ್ಲಿ ಅವರು ಯತ್ನಿಸಿದರು. ವಚನ ಸಾಹಿತ್ಯಕ್ಕೆ ತ್ರಿಪದಿಗಳ ಕೊಡುಗೆ ನೀಡಿದ ಮೂಜಗಂ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಕನಿಷ್ಟ 10,000 ಜನರಾದರೂ ಸೇರುವಂತಾಗಬೇಕು. ಶ್ರೀ ಮಠದಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಯುವಕರಿಗೆ ಬಸವಣ್ಣನ ತತ್ವ ತಿಳಿಸುವುದು ಅವಶ್ಯವಿದ್ದು, ಡಾ| ಬಿ.ವಿ.ಶಿರೂರ ಬಸವ ಕೇಂದ್ರ ಮೂಲಕ ಮನೆ ಮನೆಗೆ ಬಸವತತ್ವ ಮುಟ್ಟಿಸುವ ಅಮೋಘ ಕೆಲಸ ಮಾಡುತ್ತಿದ್ದಾರೆಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ,ಮೂಜಗಂ ಅವರು ಬದ್ಧತೆ ಹೊಂದಿದ್ದರು. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುತ್ತಿದ್ದರು. ಅದು ಅವರ ಸದ್ಗುಣವಾಗಿತ್ತು. ಮಹಿಳಾ ವಿಶ್ವವಿದ್ಯಾಲಯ ಮಾಡಲು ಅವರಿಗೆ ಸಾಧ್ಯವಾಗದಿದ್ದರೂ ಮಹಿಳಾ ಮಹಾವಿದ್ಯಾಲಯ ಮಾಡಿ ಅದನ್ನು ಉತ್ತಮ ಕಾಲೇಜನ್ನಾಗಿ ರೂಪಿಸಿದರು ಎಂದರು. ಮೂರುಸಾವಿರಮಠ ಇನ್ನಷ್ಟು ಪ್ರಗತಿ ಸಾಧಿಸಬೇಕು. ಮಠದಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜ ಬಾಂಧವರೆಲ್ಲರೂ ಮಠವನ್ನು ಬೆಳೆಸಬೇಕು. ಮಠ ಮತ್ತೂಮ್ಮೆ ತನ್ನ ಮೆರಗು ಪಡೆಯುವಂತಾಗಬೇಕು ಎಂದರು.

ಮೂಜಗಂ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಡಾ|ಬಿ.ವಿ.ಶಿರೂರ ಮಾತನಾಡಿ, ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಸಾಹಿತ್ಯ ಸೇವೆ ಮಾಡಲು ಪ್ರೇರಣೆ ನೀಡಿದೆ. ವಚನ ಸಾಹಿತ್ಯ ಕ್ಷೇತ್ರದಲ್ಲಿ ನಾನು ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ಶರಣರ ವಚನಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಇನ್ನೂ ಭರದಿಂದ ನಡೆಯಬೇಕು ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿದರು. ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಇದ್ದರು.

ಹಿತಶತ್ರುಗಳ ಕಿರಿಕಿರಿಯಿಂದ ತೊಂದರೆ ಅನುಭವಿಸಿದ್ದ ಶ್ರೀ:

ಹಿತಶತ್ರುಗಳ ಕಿರಿಕಿರಿಯಿಂದಾಗಿಯೇ ಮೂರುಸಾವಿರಮಠದ ಹಿಂದಿನ ಜಗದ್ಗುರುಗಳಾದ ಗಂಗಾಧರ ರಾಜಯೋಗಿಂದ್ರ ಸ್ವಾಮೀಜಿ ಬೇಗನೇ ಇಹಲೋಕ ತ್ಯಜಿಸಿದರು. ಕಿರಿಕಿರಿ ಇಲ್ಲದಿದ್ದರೆ ಇನ್ನೂ 3-4 ವರ್ಷ ಬದುಕುತ್ತಿದ್ದರು. ಕೊನೆಗಾಲದಲ್ಲಿ ಅವರು ಹಿತಶತ್ರುಗಳ ಕಾಟದಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಮಠ ಕಟ್ಟಿದ್ದು ಅವರ ಹೆಗ್ಗಳಿಕೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಟಾಪ್ ನ್ಯೂಸ್

India will be ‘Congress Mukt Bharat’ by the time Rahul  reaches Kashmir

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

18

ನವರಾತ್ರಿ ಹಬ್ಬದ ಅಂಗವಾಗಿ ಬನ್ನಿಮಹಾಕಾಳಿಗೆ ಮಹಿಳೆಯರಿಂದ ವಿಶೇಷ ಮೌನ ವೃತ ಪೂಜೆ, ಆಚರಣೆ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

thumb actress dada saheb palke

ಬಾಲಿವುಡ್ ಹಿರಿಯ ನಟಿ ಆಶಾ ಪರೇಖ್ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್ಐ ಮಾಡುತ್ತಿದ್ದವು: ಈಶ್ವರಪ್ಪ

ಮಹಿಳಾ ಪತ್ರಕರ್ತೆಯ ಆ ಪ್ರಶ್ನೆಗೆ ಕೆರಳಿ ಅವಾಚ್ಯ ನಿಂದನೆ: ಖ್ಯಾತ ನಟನ ಬಂಧನ

ಪತ್ರಕರ್ತೆಯ “ಆ” ಪ್ರಶ್ನೆಗೆ ಕೆರಳಿ ಅವಾಚ್ಯವಾಗಿ ನಿಂದನೆ: ಖ್ಯಾತ ನಟನ ಬಂಧನ

ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂಥ ಸಂಶೋಧನೆಗಳಾಗಲಿ: ಸಿಎಂ ಬೊಮ್ಮಾಯಿ

ಭವಿಷ್ಯದ ಪೀಳಿಗೆ ಆರೋಗ್ಯಕರ ಜೀವನ ನಡೆಸುವಂಥ ಸಂಶೋಧನೆಗಳಾಗಲಿ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ಉತ್ತರ ಕರ್ನಾಟಕಕ್ಕಿದೆ ಸುಸ್ಥಿರ ಪ್ರವಾಸೋದ್ಯಮ ಸಾಮರ್ಥ್ಯ

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

15

ಸಿಬ್ಬಂದಿ ಕೊರತೆ ನೀಗಿಸಲು ಹೊಸ ಕಸರತ್ತು

14

ಬೇಡ್ತಿಕೊಳ್ಳದ ಬೇಲಿಗಳಲ್ಲಿ ಮೇಳೈಸಿದ ಜೀವವೈವಿಧ್ಯ

hubballi

ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

India will be ‘Congress Mukt Bharat’ by the time Rahul  reaches Kashmir

ರಾಹುಲ್ ಕಾಶ್ಮೀರ ತಲುಪುವ ವೇಳೆ ಭಾರತ ಕಾಂಗ್ರೆಸ್ ಮುಕ್ತವಾಗಿರಲಿದೆ: ಬಿಜೆಪಿ ವ್ಯಂಗ್ಯ

18

ನವರಾತ್ರಿ ಹಬ್ಬದ ಅಂಗವಾಗಿ ಬನ್ನಿಮಹಾಕಾಳಿಗೆ ಮಹಿಳೆಯರಿಂದ ವಿಶೇಷ ಮೌನ ವೃತ ಪೂಜೆ, ಆಚರಣೆ

mitra

ಮಿತ್ರ ಮಂಡಳಿ ಹೊಸ ಕನಸು

17

ಇಎಸ್‌ಐ ಆಸ್ಪತ್ರೆ ಸ್ಥಳಕ್ಕಾಗಿ ಅಲೆದಾಟ

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

2.5 ಕೋಟಿ ರೂ. ಕರೆಂಟ್ ಬಿಲ್ ಬಾಕಿ; ಕತ್ತಲಲ್ಲಿ ನಡೆಯುತ್ತಾ ಭಾರತ-ದ.ಆಫ್ರಿಕಾ ಪಂದ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.