ಕಳೆ ಕಟ್ಟದ ಜಾನುವಾರು ಮೇಳ

Team Udayavani, Jan 19, 2020, 10:46 AM IST

ಧಾರವಾಡ: ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ವೀಕ್ಷಕರ ಸಂಖ್ಯೆಯೂ ತೀರಾ ಕಡಿಮೆ ಇತ್ತು. ಶನಿವಾರ ದಿನ ಮಾಜಿ ಸಚಿವ ವಿನಯ್‌ ಕುಲಕರ್ಣಿ ಒಡೆತನದ ವಿನಯ್‌ ಡೈರಿಯ ಜಾನುವಾರುಗಳು ಮೇಳಕ್ಕೆ ಮೆರಗು ತಂದಿವೆ. ವಿವಿಧ ತಳಿಯ ಹೋರಿಗಳು, ಎಚ್‌ಎಫ್‌ ತಳಿಯ ಆಕಳು, ಮುರ್ರಾ ತಳಿಯ ಕೋಣ ಮತ್ತು ಎಮ್ಮೆಗಳ ಪ್ರದರ್ಶನ ಆಕರ್ಷಕವಾಗಿದೆ.

ಮೇಳಕ್ಕೆ ವಾಹನದ ಮೂಲಕ ಜಾನುವಾರು ತರುವ ಕೆಲಸ ಶನಿವಾರ ಸಂಜೆವರೆಗೆ ಸಾಗಿತ್ತು. ಹೀಗಾಗಿ ರವಿವಾರ ದಿನದಂದು ಜಾನುವಾರು ಪ್ರದರ್ಶನಕ್ಕೆಪೂರ್ಣ ಪ್ರಮಾಣದಲ್ಲಿ ಜಾನುವಾರು ಲಭ್ಯವಾಗಲಿವೆ. ನಾನಾ ತಳಿಯ ಕುದುರೆ, ಆಕಳು, ಹೋರಿ, ಎತ್ತುಗಳು ಜಾನುವಾರು ಪ್ರದರ್ಶನದಲ್ಲಿ ಗಮನ ಸೆಳೆದವು.

ಆರೋಗ್ಯಕರ ಹಾಲು ನೀಡುವುದರ ಜೊತೆಗೆ ಕಷ್ಟದ ಕೆಲಸಗಳಿಗೆ ಹೆಸರುವಾಸಿ ಆಗಿರುವ ರಾಜಸ್ಥಾನದ ಕಾಂಕ್ರೇಜ್‌ ತಳಿಯ ಹೋರಿ, ಆಕಳು ಹಾಗೂ ಆಂಧ್ರಪ್ರದೇಶದ ಓಗೋಲ್‌ ಜಿಲ್ಲೆಯ ಓಗೋಲ್‌ ತಳಿಯ ಎತ್ತುಗಳು ಈ ಸಲದ ವಿಶೇಷತೆ. ಈ ತಳಿಯ ಆಕಳು ನೋಡಲು ಆಕರ್ಷಕವಾಗಿದ್ದರೆ ಎತ್ತುಗಳಂತೂ ದಷ್ಟ-ಪುಷ್ಟವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ವಿನಯ್‌ ಡೈರಿಯಲ್ಲಿ ಇರುವ ಓಗೋಲ್‌ ತಳಿಯ ಎರಡು ಹೋರಿಗಳನ್ನು 3 ವರ್ಷಗಳ ಹಿಂದೆ 4 ಲಕ್ಷ ಕೊಟ್ಟು ತಂದಿದ್ದು, ಈಗಂತೂ ಎಲ್ಲರ ಗಮನ ಸೆಳೆದಿವೆ.

ಮೇಕೆ ತಳಿಗಳ ಹವಾ: ಜಮುನಾಪಾರಿ, ತೋತಾಪುರಿ, ಸಿರೋಹಿ, ಬಿಟಲ್‌, ಸೋಜತ್‌ ತಳಿಯ ಮೇಕೆಗಳು ಜಾನುವಾರು ಮೇಳದಲ್ಲಿ ಗಮನ ಸೆಳೆಯುತ್ತಿದ್ದು, ಈ ಪೈಕಿ ಸಿರೋಹಿ ಈ ಸಲದ ವಿಶೇಷತೆ. ರಾಜಸ್ಥಾನದ ಮೂಲದ ಈ ತಳಿ ಹಾಲು ಮತ್ತು ಮಾಂಸದ ಉತ್ಪಾದನೆಗೆ ಹೆಸರುವಾಸಿ. ಮೈಬಣ್ಣ ತಿಳಿ ಕಂದು, ಕಡುಗೆಂಪಾಗಿದ್ದು, ಕಿವಿಗಳು ದೊಡ್ಡದಾಗಿವೆ. ಬಾಲ ಚಿಕ್ಕವಿದ್ದು, ಮೇಲಕ್ಕೆ ತಿರುಗಿಸಿಕೊಂಡಿದೆ. ಒಂದು ಬಾರಿ 2-3 ಮರಿಗಳಿಗೆ ಜನ್ಮ ನೀಡುವ ಸಾಮರ್ಥಯವಿರುವ ಈ ತಳಿಯ ಮೇಕೆಯು ದಿನಕ್ಕೆ 3-4 ಲೀಟರ್‌ ಹಾಲು ನೀಡುತ್ತದೆ. ಇನ್ನೂ ಮಾಂಸವು 30 ರಿಂದ 50 ಕೆಜಿ ಲಭ್ಯ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕಲಘಟಗಿ: ಸಹ್ಯಾದ್ರಿ ಬೆಟ್ಟಗಳ ಅಂಚಿನಲ್ಲಿರುವ ಕಲಘಟಗಿ ಪಟ್ಟಣ ತನ್ನದೆಯಾದ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇಲ್ಲಿನ ದಪ್ಪ ಅಕ್ಕಿ, ಇಟ್ಟಿಗೆ, ಕಟ್ಟಿಗೆ ತೊಟ್ಟಿಲು,...

  • ಹುಬ್ಬಳ್ಳಿ: ಡಿಎನ್‌ಎ ಆಧಾರಿತ ಪೌರತ್ವಕ್ಕೆ ಆಗ್ರಹಿಸಿ ಪೌರ ಕಾರ್ಮಿಕರು ರಕ್ತದ ಮಾದರಿಗಳನ್ನು ಪರೀಕ್ಷೆಗೆ ನೀಡುವ ಮೂಲಕ ವಿನೂತನವಾಗಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಪೌರತ್ವ...

  • ಹುಬ್ಬಳ್ಳಿ: ಶಿವಸಂಸ್ಕೃತಿಯನ್ನು ಎತ್ತಿಹಿಡಿದಿರುವ ವೀರಭದ್ರ ದೇವರ ಅವತಾರದ ಹಿಂದೆ ಶಿಷ್ಟರ ರಕ್ಷಣೆ ಮತ್ತು ದುಷ್ಟರ ನಿಗ್ರಹದ ಸಂದೇಶ ಅಡಗಿದೆ. ಅಧರ್ಮವನ್ನು...

  • ಹುಬ್ಬಳ್ಳಿ: ವಿಶ್ವ ಶಾಂತಿ, ಸೌಹಾರ್ದತೆಗಾಗಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಶ್ವಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ವೃದ್ಧರೊಬ್ಬರು ಸೈಕಲ್‌ ಮುಖಾಂತರ...

  • ಧಾರವಾಡ: ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ಎಂಟು ದಿನದೊಳಗಾಗಿ ನೆರೆಹಾನಿ ಮರು ಸಮೀಕ್ಷೆ ಮಾಡದಿದ್ದಲ್ಲಿ ಉಗ್ರ ಹೊರಾಟ ಮಾಡಲಾಗುವುದು...

ಹೊಸ ಸೇರ್ಪಡೆ