Udayavni Special

ಕಾಣೆಯಾದ ಯುವತಿ ಪ್ರಿಯಕರನ ಜತೆ ಮದುವೆಯಾಗಿ ಪ್ರತ್ಯಕ್ಷ

­ಮನೆಬಿಟ್ಟು ಹೋಗಿ ವಿವಾಹವಾದ ಪ್ರೇಮಿಗಳು­ಠಾಣೆಯಲ್ಲಿ ಪಾಲಕರ ಸಮಕ್ಷಮ ಶುಭ ಹಾರೈಕೆ

Team Udayavani, Jun 28, 2021, 4:39 PM IST

27hub-22

ಹುಬ್ಬಳ್ಳಿ: ಮಗಳು ಕಾಣೆಯಾಗಿದ್ದಾಳೆಂದು ದೂರು ಕೊಟ್ಟಿದ್ದ ಪಾಲಕರಿಗೆ ಮರುದಿನ ಮದುವೆಯಾಗಿ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಘಟನೆ ಗೋಕುಲ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗೋಕುಲ ಕುರ್ಡಿಕೇರಿ ಓಣಿಯ 21 ವರ್ಷದ ಶಿಲ್ಪಾ ಎಂ. ಕುರಿ ಜೂ. 25ರಂದು ಬೆಳಗ್ಗೆ ಮನೆಯಲ್ಲಿ ಯಾರಿಗೂ ಹೇಳದೆ ಕಾಣೆಯಾಗಿದ್ದಳು. ಈ ಕುರಿತು ಅವರ ತಂದೆ ಮಹಾದೇವಪ್ಪ ಅವರು ಗೋಕುಲ ರಸ್ತೆ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಅದರನ್ವಯ ಠಾಣೆಯ ಇನ್ಸ್‌ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಮತ್ತು ಸಿಬ್ಬಂದಿ ಯುವತಿಯ ಮೊಬೈಲ್‌ ಕಾಲ್‌ ಡಿಟೇಲ್ಸ್‌ ಆಧಾರದ ಮೇಲೆ ಪತ್ತೆ ಹಚ್ಚಿದ್ದಾರೆ. ಆಗ ತಾನು ಮಂಜುನಾಥ ಬಿ. ಉಣಕಲ್‌ ಎಂಬಾತನೊಂದಿಗೆ ಮದುವೆ ಆಗಿದ್ದೇನೆ. ನಮಗೆ ರಕ್ಷಣೆ ಕೊಡಿ ಎಂದು ಕೇಳಿದ್ದಾರೆ.

ಇನ್ಸ್‌ಪೆಕ್ಟರ್‌ ಕಾಲಿಮಿರ್ಚಿ ಅವರು ಯುವತಿ ಮತ್ತು ಯುವಕನ ಪಾಲಕರಿಗೆ ವಿಷಯ ತಿಳಿಸಿ, ಅವರನ್ನು ಠಾಣೆಗೆ ಕರೆಯಿಸಿದ್ದಾರೆ. ಇವರಿಬ್ಬರು ವಯಸ್ಸಿಗೆ ಬಂದವರಾಗಿದ್ದು, ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಅವರ ಇಚ್ಛೆಯಂತೆ ಇರಲು ಬಿಡಿ. ಯಾವುದೇ ತಕರಾರು ಮಾಡಬೇಡಿ ಎಂದು ತಿಳಿವಳಿಕೆ ನೀಡಿ, ಅವರ ಸಮಕ್ಷಮದಲ್ಲೇ ಇಬ್ಬರಿಗೂ ಶುಭ ಹಾರೈಸಿ ಕಳುಹಿಸಿದ್ದಾರೆ.

ಶಿಲ್ಪಾ ಮತ್ತು ಮಂಜುನಾಥ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಒಬ್ಬರಿಗೊಬ್ಬರು ಪರಿಚಿತರಾಗಿ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮಂಜುನಾಥನು ಕೆಲ ತಿಂಗಳಿನಿಂದ ತಾಲೂಕಿನ ಗಂಗಿವಾಳ ಗ್ರಾಮದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ. ಶಿಲ್ಪಾ ಮತ್ತು ಮಂಜುನಾಥ ಮನೆಬಿಟ್ಟು ಹೋಗಿ ಈಗ ಮದುವೆ ಮಾಡಿಕೊಂಡು ಬಂದು ಪೊಲೀಸರ ಭದ್ರತೆಯಲ್ಲಿ ಪಾಲಕರ ಎದುರು ಪ್ರತ್ಯಕ್ಷವಾಗಿದ್ದಾರೆ.

ಟಾಪ್ ನ್ಯೂಸ್

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಇನ್ನು  ಸಂಪುಟ ಕಸರತ್ತು

ಇನ್ನು  ಸಂಪುಟ ಕಸರತ್ತು

meri-kom

ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ

ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ 

ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ 

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರ

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಆಗಸ್ಟ್‌  ಪ್ರಥಮ ವಾರದಲ್ಲಿ ಮರು ಆರಂಭ ನಿರೀಕ್ಷೆ

ಆಗಸ್ಟ್‌  ಪ್ರಥಮ ವಾರದಲ್ಲಿ ಮರು ಆರಂಭ ನಿರೀಕ್ಷೆ

ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌

ಜುಲೈಯಲ್ಲಿ ದಾಖಲೆಯ 113ಕ್ಕೂ ಅಧಿಕ ಕರೆ ಸ್ವೀಕರಿಸಿದ ಚೈಲ್ಡ್‌ಲೈನ್‌

ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಹೊಸ ಟೆಂಡರ್‌ಗೆ ಪಾಲಿಕೆ ನಿರ್ಧಾರ

ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಹೊಸ ಟೆಂಡರ್‌ಗೆ ಪಾಲಿಕೆ ನಿರ್ಧಾರ

MUST WATCH

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

udayavani youtube

ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ :ಸಿದ್ದುಗೆ ಬಿಜೆಪಿ ತಿರುಗೇಟು

udayavani youtube

ರಾಷ್ಟ್ರೀಯ ಪ್ರಾಣಿಯಾಗಿದ್ದ ಸಿಂಹವನ್ನು ಹುಲಿ ಹಿಂದಿಕ್ಕಿದ್ದು ಹೇಗೆ ?

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

ಹೊಸ ಸೇರ್ಪಡೆ

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಆಧಾರ್‌ ಕಾರ್ಡ್‌ ಸಿಕ್ಕಿಲ್ಲ: ಅಂಗವಿಕಲ ವೇತನವೂ ಇಲ್ಲ: ಅಂಗವಿಕಲ ಯುವತಿಯ ಅಳಲು

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಪರ್ತಗಾಳಿ ಪೀಠಕ್ಕೆ ವಿದ್ಯಾವಂತ ಯುವ ಸನ್ಯಾಸಿ

ಇನ್ನು  ಸಂಪುಟ ಕಸರತ್ತು

ಇನ್ನು  ಸಂಪುಟ ಕಸರತ್ತು

meri-kom

ಮೇರಿ ಕೋಮ್ ಎಂಬ ‘ಫೈಟಿಂಗ್ ಸ್ಪಿರಿಟ್’ಗೆ ವಿದಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.