ಮಳೆಪ್ಪಜ್ಜರ 6ನೇ ಜಾತ್ರಾ ಮಹೋತ್ಸವ

Team Udayavani, Apr 21, 2019, 12:17 PM IST

ಧಾರವಾಡ: ನರೇಂದ್ರ ಗ್ರಾಮದ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ 61ನೇ ಜಾತ್ರಾ ಮಹೋತ್ಸವ ಅಪಾರ ಭಕ್ತರ ಹರ್ಷೋದ್ಘಾರಗಳ ಮಧ್ಯೆ ಸಂಭ್ರಮದಿಂದ ಜರುಗಿತು.

ಗ್ರಾಮದೇವಿಗೆ ಉಡಿ ತುಂಬುವ ಕಾರ್ಯಕ್ರಮದ ಬಳಿಕ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ವೇ|ಮೂ| ದುಂಡಯ್ಯ ಸ್ವಾಮೀಜಿ ಹಾಗೂ ಧರ್ಮದರ್ಶಿ ಸಂಗಮೇಶ ಅಜ್ಜನವರ ಸಾನ್ನಿಧ್ಯದಲ್ಲಿ ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಬಾಳೆಹಣ್ಣು, ಕೊಬ್ಬರಿ, ಉತ್ತತ್ತಿಗಳನ್ನು ರಥದತ್ತ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಮಳೆಪ್ಪಜ್ಜನ ಮಠದ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಚಂದ್ರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ಈರಪ್ಪ ಗಂಟಿ, ಸದಸ್ಯರಾದ ಮಂಜುನಾಥ ತಿರ್ಲಾಪುರ, ಈಶ್ವರ ಗಾಣಿಗೇರ, ತಾಪಂ ಸದಸ್ಯ ಮಹಾವೀರ ಜೈನರ್‌, ಎಪಿಎಂಸಿ ಸದಸ್ಯ ಚನವೀರಗೌಡ ಪಾಟೀಲ ಇನ್ನಿತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಬೆಳಗಾವಿ: ಹನಿ ನೀರಿಗಾಗಿ ಪರಿತಪಿಸುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಕೊನೆಗೂ ನೀರು ಸಿಗುತ್ತಿದೆ. ಅದು ಮಹಾರಾಷ್ಟ್ರದ ಜಲಾಶಯಗಳಿಂದಲ್ಲ. ಒಂದೇ...

  • ಹುಬ್ಬಳ್ಳಿ: ಅದರಗುಂಚಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಶನಿವಾರ ಸಂಜೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀಸರು...

  • ಹುಬ್ಬಳ್ಳಿ: ಶಾಸ್ತ್ರೀಯ ನೃತ್ಯ ಪ್ರಕಾರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಮನ್ನಣೆ ಸಿಗುತ್ತಿದ್ದು, ನಮ್ಮ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುವುದು ಅವಶ್ಯವಾಗಿದೆ...

  • ಕಲಘಟಗಿ: ಇಂದಿನ ವೈಜ್ಞಾನಿಕ ಯುಗದಲ್ಲಿಯೂ ವಾಮಾಚಾರದಂತಹ ಮೂಢನಂಬಿಕೆ ಚಟುವಟಿಕೆಗೆ ಪಟ್ಟಣದಿಂದ 3 ಕಿಮೀ ಅಂತರದಲ್ಲಿರುವ ತುಮ್ರಿಕೊಪ್ಪ ಗ್ರಾಮದ ಸನಿಹದ ಬೇಗೂರ...

  • ಧಾರವಾಡ: ಮಳಿ-ಬೆಳಿ ಸಂಪೈತ್ರಿಪಾ..ಗುಡುಗು ಸಿಡ್ಲು ಭಾಳ ಐತ್ರಿಪಾ..ರಕ್ತದ ಕಾವಲಿ ಹರಿತೇತ್ರಿಪಾ..ನನ್ನ ತಂಗೀಗೆ ಐದು ವಾರಾ ಬಿಡ್ರಿಪಾ..ಹುಟ್ಟಿದ ಮಗೂಗೆ ಬಲಾ ಇಲ್ರಿಪಾ.. ಇದು...

ಹೊಸ ಸೇರ್ಪಡೆ