ಮಾವಿಗೆ ಬೆಂಕಿ ಸುರಿದ ಇಬ್ಬನಿ !ಇಬ್ಬನಿಗೆ ಕಮರಿದ ಆಲ್ಫೋನ್ಸೋ|

ಉದುರಿ ಬೀಳುತ್ತಿದೆ ಹೂವು-ಹೀಚು | ಶೇ.45 ಉತ್ಪಾದನೆ ಕುಸಿತ

Team Udayavani, Mar 5, 2021, 8:51 PM IST

Mango

ಧಾರವಾಡ: ಹತ್ತೇ ಮೀಟರ್‌ ದೂರದಲ್ಲಿದ್ದರೂ ಕಾಣದಷ್ಟು ದಟ್ಟವಾಗಿ ಬೀಳುತ್ತಿರುವ ಇಬ್ಬನಿ,ಇಬ್ಬನಿಗೆ ಕತ್ತರಿಸಿ ನೆಲಕ್ಕೆ ಬೀಳುತ್ತಿರುವ ಮಾವಿನ ಮಿಡಿ-ಹೂ-ಚಿಗುರು, ಚಿಗುರೆಲೆಗೂ ಬೆಂಬಿಡದಂತೆ ಕಾಡುತ್ತಿರುವ ಚುಕ್ಕಿರೋಗ. ಒಟ್ಟಿನಲ್ಲಿಮಾವಿಗೆ ತಂಪಾದ ಇಬ್ಬನಿಯಿಂದ ಮರ್ಮಾಘಾತ.

ಹೌದು, ಡಿಸೆಂಬರ್‌ ಮತ್ತು ಜನವರಿತಿಂಗಳಿಗೆ ಮುಂಚಿತವಾಗಿಯೇಉತ್ತಮವಾಗಿ ಹೂ ಬಿಟ್ಟು ಸೀಮೆಗೆಲ್ಲ ಹೂ ಬಾಣದಘಮ ಹರಡಿದ್ದ ಆಲ್ಫೋನ್ಸೋ ಮಾವಿಗೆ ಇದೀಗಇಬ್ಬನಿ ಆಘಾತ ನೀಡುತ್ತಿದೆ. ಕಳೆದ ಹತ್ತು ದಿನಗಳಿಂದ ಸತತವಾಗಿ ಬೀಳುತ್ತಿರುವ ಇಬ್ಬನಿಯಿಂದ ಮಾವಿನ ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿರುವ ಕಿರಿಮಿಡಿಗಳು ಕತ್ತರಿಸಿಕೊಂಡು ನೆಲಕ್ಕೆ ಬಿಳುತ್ತಿವೆ. ಮಾವಿನ ಹೂವಿನ ಪ್ರತಿ ಗೊಂಚಲಿನಲ್ಲಿ ಕನಿಷ್ಟ10ರಿಂದ 20 ಮಿಡಿಗಾಯಿಗಳು ನಿಲ್ಲಬೇಕು.ಅದರಲ್ಲಿ ಶೇ.50 ಗಾಳಿ ಮಳೆ, ಆಲಿಕಲ್ಲು ಇತ್ಯಾದಿಗೆ ಬಲಿಯಾದರೂ ಗೊಂಚಲಿಗೆ ಕನಿಷ್ಟ 5 ಕಾಯಿ ಉಳಿಯುವ ಲೆಕ್ಕಾಚಾರವಿರುತ್ತದೆ. ಆದರೆ ಇಬ್ಬನಿಯ ಹೊಡೆತಕ್ಕೆ ಈ ಹಂತದಲ್ಲಿಯೇ ಒಂದೊಂದು ಗೊಂಚಲಿನಲ್ಲಿ ಬರೀ ನಾಲ್ಕು ಹಿಚು ಮಿಡಿ ಮಾತ್ರ ಉಳಿದಿದ್ದು, ಮಾವು ಕೈಗೆಟಕುವ ಹೊತ್ತಿಗೆ ಇದರ ಉತ್ಪಾದನಾ ಪ್ರಮಾಣ ಶೇ.45ಕ್ಕಿಂತಲೂ ಕಡಿಮೆಪ್ರಮಾಣಕ್ಕೆ ಕುಸಿಯುವ ಸಾಧ್ಯತೆ ಇದೆ.

ಬೆಳೆಗಾರ-ದಲ್ಲಾಳಿ ಇಬ್ಬರಿಗೂ ಆತಂಕ: ಕಳೆದ ವರ್ಷದಕೊರೊನಾ ಲಾಕ್‌ಡೌನ್‌ ಮತ್ತು ಹಳದಿನೊಣದ ಬಾಧೆಯಿಂದಾಗಿ ಮುಂಬೈ, ಗೋವಾ ದಲ್ಲಾಳಿಗಳುಈ ವರ್ಷ ಮಾವಿನ ತೋಟಗಳನ್ನು ಖರೀದಿಸುವುದಕ್ಕೆ ಮೊದಲೇ ಹಿಂಜರಿಕೆಯಲ್ಲಿದ್ದರು. ಆದರೂಶೇ.50ಕ್ಕಿಂತಲೂ ಹೆಚ್ಚಿನ ತೋಟಗಳು ಕೊನೆ ಕ್ಷಣದಲ್ಲಿ ಸೇಲ್‌ಡೀಡ್‌ನ‌ ಮುಂಗಡ ಹಣ ಪಾವತಿ ಪದ್ಧತಿಯಡಿ ಮಾರಾಟವಾಗಿವೆ.ಇದೀಗ ಜಿಗಿರೋಗ, ಹವಾಮಾನ ವೈಪರಿತ್ಯ,ಇಬ್ಬನಿಯ ಕಾಟಕ್ಕೆ ದಲ್ಲಾಳಿಗಳು ಮತ್ತೆ ತೋಟಗಳಸ್ಥಿತಿ ನೋಡಲು ಕೂಡ ಬರುತ್ತಿಲ್ಲ. ಕಾಯಿ ಕಟ್ಟಿದರೆ ಮಾತನಾಡಿದ ಹಣ ಕೊಟ್ಟು ಒಯ್ಯುತ್ತೇವೆ. ಕಾಯಿಚೆನ್ನಾಗಿ ಹಿಡಿಯದೇ ಹೋದರೆ ಮುಂಗಡ ಹಣಕ್ಕೂ ನಾವು ಬರಲ್ಲ. ನಿಮ್ಮ ಕಾಯಿ ನಿಮ್ಮ ತೋಟ ನೀವೇ ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಆದರೆ ಮಾವಿನಗಿಡಗಳಿಗೆ ಸತತವಾಗಿ ರಾಸಾಯನಿಕ ಸಿಂಪರಣೆ ಮಾಡಲೇಬೇಕು. ಈವರೆಗೂ ಯಾರು ಮಾಡಿದ್ದಾರೋ ಅವರ ತೋಟಗಳಲ್ಲಿ ಇಬ್ಬನಿಯಿಂದ ಶೇ.25 ಮಾತ್ರಹಾನಿ ಸಂಭವಿಸುತ್ತದೆ. ಸಿಂಪರಣೆ ಮಾಡದೇ ಇರುವವರ ತೋಟಗಳಲ್ಲಿ ಶೇ.50 ಹೂ-ಹೀಚು ಕತ್ತರಿಸುವುದು ನಿಶ್ಚಿತ ಎನ್ನುತ್ತಿದ್ದಾರೆ ಮಾವು ತಜ್ಞರು.

2018-19ರಲ್ಲಿ ಧಾರವಾಡ ಜಿಲ್ಲೆಯಲ್ಲಿಯೇ ಅಂದಾಜು 150 ಕೋಟಿ ರೂ.ಗಳ ವಹಿವಾಟು ಒಟ್ಟುಮಾವಿನ ಸುಗ್ಗಿಯಲ್ಲಿ ನಡೆಯುತ್ತದೆ ಎಂದು ಮಾವು ಬೆಳೆಗಾರರ ಸಂಘ ಅಂದಾಜು ಮಾಡಿತ್ತು. ಒಂದು ಡಜನ್‌ ಹಣ್ಣಿಗೆ 500 ರೂ.ನಿಂದ 850ರವರೆಗೆ ಉತ್ತಮ ಗುಣಮಟ್ಟದ ಹಣ್ಣು ಮಾರಾಟವಾದರೆ, ಮಧ್ಯಮಮತ್ತು ದ್ವಿತೀಯ ದರ್ಜೆಯ ಹಣ್ಣುಗಳು 250 ರೂ.ಗಳಿಗೆ ಡಜನ್‌ನಂತೆ ಮಾರಾಟ ವಾಗುತ್ತವೆ. ಉಳಿದಿದ್ದು ಉಪ್ಪಿನಕಾಯಿ, ಜ್ಯೂಸ್‌ ಕಾರ್ಖಾನೆಗಳಿಗೂ ರವಾನೆಯಾಗುತ್ತದೆ. ಈ ವರ್ಷ ಇದು 50 ಕೋಟಿರೂ.ಗಳಿಗೂ ತಲುಪುವುದು ಕಷ್ಟವೇ ಎನ್ನುತ್ತಿದ್ದಾರೆ ಮಾವು ಬೆಳೆಗಾರರ ಸಂಘದವರು.

ಗಟ್ಟಿಯಾಗಿವೆ ದೇಶಿ ಮಾವು: ಆಲ್ಫೋನ್ಸೋ, ಕಲಮಿ,ಮಲ್ಲಿಕಾ ಸೇರಿದಂತೆ ಆಧುನಿಕ ಸಂಶೋಧಿತಹೈಬ್ರಿಡ್‌ ತಳಿಗಳಿಗೆ ಜಿಗಿರೋಗ ಬಹುಬೇಗಅಂಟಿಕೊಳ್ಳುತ್ತಿದೆ. ಅದಲ್ಲದೇ ಇವು ತೀವ್ರನಿರ್ವಹಣೆಗೂ ಒಳಪಡುತ್ತವೆ. ಹಳದಿ ನೊಣದಕಾಟಕ್ಕಂತೂ ಈ ಎರಡೂ ತಳಿಗಳು ಕಳೆದ ವರ್ಷಸಂಪೂರ್ಣ ನೆಲಕಚ್ಚಿ ಹೋಗಿದ್ದವು. ಆದರೆ ದೇಶಿತಳಿಗಳಾದ ಗುಟ್ಟಲಿ, ಸಕ್ಕರೆ ಗುಟ್ಟಲಿ, ಜೀರಿಗೆ ಮಾವು,ಹುಳಿಮಾವು, ಅಪ್ಪೆಮಿಡಿ, ಹೋಳಿಗೆ ಮಾವು, ಗುಂಗಮಾವು, ಬಾಳಮಾವು ಸೇರಿದಂತೆ ಹತ್ತಾರುತಳಿಗಳು ಇಬ್ಬನಿ, ಹಳದಿ ನೊಣದ ಕಾಟವಿದ್ದರೂಹೆಚ್ಚಿನ ಇಳುವರಿ ನೀಡುತ್ತಿವೆ.

ಬಸವರಾಜ ಹೊಂಗಲ್‌   

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.