ಪೇಢಾನಗರಿಯಲ್ಲಿ ಹಣ್ಣುಗಳ ರಾಜನ ಹಬ್ಬ ಆರಂಭ


Team Udayavani, May 26, 2019, 9:53 AM IST

hubali-tdy-3…

ಧಾರವಾಡ: ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರಾಟ ನಿಗಮ ಹಾಗೂ ಜಿಪಂ ಸಹಯೋಗದಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ಕೂಡ ಲಭಿಸಿದೆ.

ಜಿಲ್ಲೆಯ ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ವಿಧಾನದಿಂದ ಮಾಗಿಸಿದ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮಾವು ಮೇಳ ಮಾವು ಪ್ರಿಯರ ಗಮನ ಸೆಳೆಯುವಂತೆ ಮಾಡಿದೆ. ಬೆಳಗ್ಗೆಯೇ ಮೇಳ ಚಾಲನೆ ಪಡೆದುಕೊಂಡರೂ ಸಂಜೆ 4 ಗಂಟೆಗೆ ಜಿಪಂ ಸಿಇಓ ಡಾ| ಬಿ.ಸಿ. ಸತೀಶ ಅಧಿಕೃತ ಚಾಲನೆ ನೀಡಿದರು. ಇವರಿಗೆ ಅಪರ ಜಿಲ್ಲಾಧಿಕಾರಿ ಡಾ| ಸುರೇಶ ಇಟ್ನಾಳ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಹಾಪಕಾಮ್ಸ್‌ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ ಸಾಥ್‌ ನೀಡಿದರು. ಬಳಿಕ ಮಾವು ಮಳಿಗೆಗಳಿಗೆ ಭೇಟಿ ನೀಡಿ ಹಣ್ಣಿನ ರುಚಿ ಕೂಡ ಸವಿದರು.

ದರ ನಿಗದಿ ಪದ್ಧತಿಗೆ ತಿಲಾಂಜಲಿ: ಪ್ರತಿ ಸಲ ಮೇಳದಲ್ಲಿ ಮಾವಿನ ತಳಿಯ ಅನುಸಾರವಾಗಿ ತೋಟಗಾರಿಕೆ ಇಲಾಖೆಯೇ ದರ ನಿಗದಿ ಮಾಡಿ, ಆ ದರಪಟ್ಟಿ ಅನುಸಾರ ಮಾವು ಬೆಳೆಗಾರರು ಮಾರಾಟ ಮಾಡಬೇಕಿತ್ತು. ಆದರೆ ಈ ಸಲ ತೋಟಗಾರಿಕೆ ಇದಕ್ಕೆ ತಿಲಾಂಜಲಿ ಹಾಕಿದೆ. ತಳಿ ಅನುಸಾರ ದರ ನಿಗದಿ ಮಾಡುವುದರಿಂದ ನಷ್ಟ ಆಗುತ್ತಿದೆ ಎಂಬ ಬೆಳೆಗಾರರ ಮಾತಿಗೆ ತೋಟಗಾರಿಕೆ ಇಲಾಖೆ ಮಣೆ ಹಾಕಿದೆ. ಬೆಳೆಗಾರರು ಹಾಗೂ ಗ್ರಾಹಕರ ಮಧ್ಯೆಯೇ ದರ ಹೊಂದಾಣಿಕೆ ನಡೆಯುತ್ತಿದೆ. ಹೀಗಾಗಿ ವಿವಿಧ ತಳಿಯ ಮಾವಿನ ಹಣ್ಣುಗಳು ಡಜನ್‌ಗೆ 100 ರಿಂದ 400 ರೂ.ವರೆಗೂ ಮಾರಾಟ ಆಗುತ್ತಲಿವೆ.

8-10 ಬಗೆಯ ಹಣ್ಣು ಖರೀದಿಗೆ; 78 ತಳಿ ಹಣ್ಣು ಪ್ರದರ್ಶನಕ್ಕೆ

60ಕ್ಕೂ ಹೆಚ್ಚು ಮಳಿಗೆಗಳಲ್ಲಿ 8-10 ಬಗೆಯ ತಳಿಯ ಹಣ್ಣಿಗಳು ಮಾರಾಟಕ್ಕೆ ಇದ್ದು, ಗ್ರಾಹಕರು ಮೇಳಕ್ಕೆ ಆಗಮಿಸಿ ಈ ಹಣ್ಣಿನ ರುಚಿ ಸವಿಯಬಹುದು. ಇನ್ನೂ ಮಾವು ಪ್ರದರ್ಶನದಲ್ಲಿ ಶುಗರ್‌ ಬೇಬಿ, ಪೆದ್ದರಸಂ, ಸಕ್ಕರೆ ಗುಟ್ಟಲಿ, ಮಲ್ಲಿಕಾ, ಆಪೂಸ್‌, ಮಂಟಪ, ಅಡಿಕೆ ಮಾವು, ಲಾಗ್ರಾ, ಇಸ್ರೇಲ್ನ ಹೊಸ ತಳಿ ಸೇರಿದಂತೆ 78 ಬಗೆಯ ಮಾವಿನ ಹಣ್ಣುಗಳನ್ನು ನೋಡಿ ಆನಂದಿಸಬಹುದು. ಅಷ್ಟೇಯಲ್ಲಿ ದೇಶಿ ತಳಿಯ ಮಾವುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಜೊತೆಗೆ ಸಸ್ಯ ಸಂತೆಯೂ ಗಮನ ಸೆಳೆದಿದೆ.
ಜಿಲ್ಲೆಯಲ್ಲಿ ಶೇ.5ರಿಂದ 10 ಮಾವು ಉತ್ಪಾದನೆ ಈ ಸಲ ಕಡಿಮೆ ಆಗಿದೆ. ಆದರೂ ಮೇಳಕ್ಕೆ ಭರಪೂರ ಮಾವಿನ ಬಗೆ ಬಗೆಯ ಹಣ್ಣುಗಳು ಬಂದಿದ್ದು, ಧಾರವಾಡ ಅಷ್ಟೇ ಅಲ್ಲದೆ ಬೆಳಗಾವಿ, ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಮಾವು ಬೆಳೆಗಾರರೂ ಪಾಲ್ಗೊಂಡಿದ್ದಾರೆ. ಈ ಸಲ 2 ಕೋಟಿ ರೂ. ವಹಿವಾಟು ಆಗುವ ನಿರೀಕ್ಷೆ ಇದೆ. ಭರ್ಜರಿ ಆಗಿ ಮಾರಾಟ ಆಗುವ ಉತ್ತಮ ಹಣ್ಣಿನ ತಳಿಗೆ ಬಹುಮಾನ ಸಹ ನೀಡಲಾಗುವುದು. -ಡಾ| ರಾಮಚಂದ್ರ ಮಡಿವಾಳ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
ಈ ಹಿಂದಿನ ಎರಡು ವರ್ಷದ ಮಾವು ಮೇಳದಲ್ಲಿ ಭರ್ಜರಿ ವ್ಯಾಪಾರ ಆಗಿತ್ತು. ಆದರೆ ಈ ಸಲ ಹಣ್ಣಿನ ಇಳುವರಿಯೇ ಕಡಿಮೆ ಆಗಿದೆ. ನಮ್ಮ ತೋಟದ 66 ಮಾವಿನ ಮರಗಳ ಪೈಕಿ 10 ಮರಗಳು ಹಣ್ಣೇ ನೀಡಿಲ್ಲ. ಈಗಿರುವ ಹಣ್ಣುಗಳನ್ನು ತೆಗೆದುಕೊಂಡು ಒಳ್ಳೆ ಬೆಲೆ ಸಿಗುವ ನಿರೀಕ್ಷೆಯಲ್ಲಿ ಬಂದಿದ್ದೇವೆ. –ಚೆನ್ನಮ್ಮ, ವ್ಯಾಪಾರಸ್ಥೆ, ಜೊಗೆಯಲ್ಲಾಪುರ
ಮೊದಲ ದಿನ 1759 ಡಜನ್‌ ಮಾರಾಟ; 3 ಲಕ್ಷ ರೂ. ವಹಿವಾಟು

ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ 1759 ಡಜನ್‌ ಹಣ್ಣು ಮಾರಾಟ ಆಗಿದ್ದು, ಅಂದಾಜು 3 ಲಕ್ಷ ರೂ.ಗಿಂತ ಹೆಚ್ಚು ವಹಿವಾಟು ಆಗಿದೆ. ಬೆಳಗ್ಗೆ 8ರಿಂದ ಸಂಜೆ 8 ಗಂಟೆವರೆಗೆ ಮೇಳ ನಡೆಯಲಿದೆ. ರವಿವಾರ ಮಾವು ಪ್ರಿಯರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೇ 26ರಿಂದ ಮೇ 30ರ ವರೆಗೆ ಒಟ್ಟು ಐದು ದಿನಗಳ ಕಾಲ ಮೇಳ ನಡೆಯಲಿದ್ದು, ಒಂದು ವೇಳೆ ರೈತರಿಂದ ಬೇಡಿಕೆ ಬಂದರೆ ಮತ್ತೆರಡು ದಿನ ವಿಸ್ತರಿಸಿ ಒಟ್ಟು 7 ದಿನಗಳ ಕಾಲ ಮೇಳ ನಡೆಯುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.