ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್‌ -ಆಕ್ಸಿಜನ್‌ ಕೊರತೆ ಆಗದಂತೆ ನೋಡಿಕೊಳ್ಳಿ: ಶೆಟ್ಟರ

ಕೃತಕ ಅಭಾವ ಸೃಷ್ಟಿಸಿದರೆ ಶಿಕ್ಷೆಗೊಳಪಡಿಸಿ

Team Udayavani, Apr 18, 2021, 5:16 PM IST

gsddf

ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್‌ ಚುಚ್ಚುಮದ್ದು ಹಾಗೂ ಆಕ್ಸಿಜನ್‌ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಟಿಸುವವರನ್ನು ವಿಪತ್ತು ನಿರ್ವಹಣೆ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿನ ಮಹಾತ್ಮ ಗಾಂಧಿ  ಉದ್ಯಾನವನದಲ್ಲಿ ಶನಿವಾರ ನಡೆದ ಕೋವಿಡ್‌-19 ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೆಮಿಡಿಸಿವರ್‌ ಚುಚ್ಚುಮದ್ದು ಸಮಸ್ಯೆ ಎದುರಾಗದಂತೆ ಮುನ್ನೆಚರಿಕೆ ವಹಿಸಬೇಕು. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ನಿತ್ಯ ಸರಕಾರಕ್ಕೆ ಇಂಡೆಂಟ್‌ ಸಲ್ಲಿಸಿ ಪೂರೈಕೆ ಖಚಿತ ಪಡಿಸಿಕೊಳ್ಳಬೇಕು. ವೈದ್ಯಕೀಯ ಆಕ್ಸಿಜನ್‌ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಕೈಗಾರಿಕೆಗಳಿಗೆ ನಂತರ ಆದ್ಯತೆಯಲ್ಲಿ ಪೂರೈಸಬಹುದು. ಕೋವಿಡ್‌ ನಿಯಂತ್ರಣಕ್ಕಾಗಿ ವಿವಿಧ ಕಾರ್ಯಕ್ರಮಗಳಿಗೆ ಸರಕಾರ ವಿಧಿ ಸಿರುವ ಆದೇಶ ಪಾಲನೆ ಮಾಡಬೇಕು ಎಂದರು.

ಉತ್ತರ ಕರ್ನಾಟಕದ ಅನೇಕ ಭಾಗಗಳಿಂದ ಬರುವ ರೋಗಿಗಳಿಗೆ ಕಿಮ್‌ Õನಲ್ಲಿ ಉತ್ತಮ ಚಿಕಿತ್ಸೆ ನೀಡಿ ಗುಣಮುಖ ಪಡಿಸುತ್ತಿರುವುದರಿಂದ ಜನರಿಗೆ ಕಿಮ್ಸ್‌ ಬಗ್ಗೆ ಭರವಸೆ ಹೆಚ್ಚಾಗಿದೆ. ಎರಡನೇ ಅಲೆಯ ಸಂದರ್ಭದಲ್ಲಿಯೂ ಕಿಮ್ಸ್‌ ವೈದ್ಯರು ಉತ್ತಮ ಸೇವೆ ನೀಡಿ ಕೋವಿಡ್‌ ಆತಂಕ ದೂರ ಮಾಡಬೇಕು. ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆ, ಕೋವಿಡ್‌ ಕೇರ್‌ ಸೆಂಟರ್‌ ಗಳ ಸ್ಥಾಪನೆ, ಸಂಪರ್ಕ ಪತ್ತೆ, ತಪಾಸಣೆ, ಮತ್ತಿತರ ತಂಡಗಳನ್ನು ಮರುಸ್ಥಾಪಿಸಿ ಕ್ರಿಯಾಶೀಲಗೊಳಿಸಬೇಕು ಎಂದು ಹೇಳಿದರು. ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 1010 ಸಕ್ರಿಯ ಕೋವಿಡ್‌ ಪ್ರಕರಣಗಳಿವೆ. ಇದರಲ್ಲಿ 293 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತಲಾ ಶೇ.50 ಈ ರೋಗಿಗಳು ದಾಖಲಾಗಿದ್ದಾರೆ. ಉಳಿದ ಶೇ.70 ಸೋಂಕಿತರು ಮನೆಗಳಲ್ಲಿ ಪ್ರತ್ಯೇಕ ವಾಸವಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಆಯುಷ್‌ ಹಾಗೂ ಆರ್‌ಬಿಎಸ್‌ಕೆ ವೈದ್ಯರು ಸೂಕ್ತ ತಿಳಿವಳಿಕೆ ನೀಡುತ್ತಿದ್ದಾರೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ 467 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 483 ಸೇರಿ ಒಟ್ಟು 950 ರೆಮಿಡಿಸಿವರ್‌ ಚುಚ್ಚುಮದ್ದು ದಾಸ್ತಾನು ಇದೆ. ಕಿಮ್ಸ್‌ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಸಂಗ್ರಹವಿದೆ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಶೇ.50 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲು ಸೂಚಿಸಿದೆ. ಚಿಕಿತ್ಸಾ ಶುಲ್ಕ, ಒದಗಿಸುವ ಹಾಸಿಗೆಗಳ ಸಂಖ್ಯೆ ಪರಿಶೀಲಿಸಲು ಹಿರಿಯ ಅ ಧಿಕಾರಿಗಳನ್ನು ನೋಡಲ್‌ ಅಧಿ  ಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 116 ವೆಂಟಿಲೇಟರ್‌ಗಳು ಲಭ್ಯವಿವೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಸಾವಿನ ಪ್ರಮಾಣ ನೋಡಿದರೆ ದೇಶ ಹಾಗೂ ರಾಜ್ಯದಲ್ಲಿ ಸಾಕಷ್ಟು ಕಡಿಮೆಯಿದೆ. 1.3 ಸಾವಿನ ಪ್ರಮಾಣವಿದೆ. ಜಾಗೃತಿ ಮೂಡಿಸುವ ಕೆಲಸ ಆಗಲಿ. ಮಹಾನಗರ ಪಾಲಿಕೆ ಸ್ವತ್ಛತೆಗೆ ಹೆಚ್ಚು ಒತ್ತು ನೀಡಬೇಕು. ಚಿಕಿತ್ಸೆ, ಲಸಿಕೆ ಹಾಗೂ ಪರೀಕ್ಷೆಗೆ ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಎಚ್ಚರ ವಹಿಸಬೇಕು. ಯಾವೊಬ್ಬ ವ್ಯಕ್ತಿಯೂ ಚಿಕಿತ್ಸೆ ದೊರೆಯದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದೆಂದು ಅ ಧಿಕಾರಿಗಳಿಗೆ ಸೂಚಿಸಿದರು. ಶಾಸಕರಾದ ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಎಸ್‌.ಐ.ಚಿಕ್ಕನಗೌಡ್ರ, ಸವಿತಾ ಅಮರಶೆಟ್ಟಿ, ಈರಣ್ಣ ಜಡಿ, ನಾಗೇಶ ಕಲಬುರ್ಗಿ, ಜಿಪಂ ಸಿಇಒ ಡಾ|ಬಿ. ಸುಶೀಲಾ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಉಪವಿಭಾಗಾಧಿ ಕಾರಿ ಡಾ|ಬಿ. ಗೋಪಾಲಕೃಷ್ಣ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಕಿಮ್ಸ್‌ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ, ಡಾ|ಮಹೇಶ್‌, ಡಿಎಚ್‌ಒ ಡಾ|ಯಶವಂತ ಮದೀನಕರ್‌, ಡಾ| ಶಿವಕುಮಾರ ಮಾನಕರ್‌, ಡಾ|ಸುಜಾತಾ ಹಸವಿಮಠ, ಡಾ|ಶಶಿ ಪಾಟೀಲಲ್‌, ಡಾ|ಎಸ್‌. ಎಂ.ಹೊನಕೇರಿ, ತಹಶೀಲ್ದಾರ್‌ರಾದ ಶಶಿಧರ ಮಾಡ್ಯಾಳ ಹಾಗೂ ಪ್ರಕಾಶ ನಾಶಿ ಇನ್ನಿತರರಿದ್ದರು.

ಟಾಪ್ ನ್ಯೂಸ್

ಆದಾಯ ಮೀರಿ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಆದಾಯ ಮೀರಿ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ತಿರಂಗಾ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

ತಿರಂಗಾ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

1-adadada

40 ರ ಹರೆಯದಲ್ಲೂ ಕಮಾಲ್: 16 ವರ್ಷಗಳ ನಂತರ ಟಿಟಿ ಸಿಂಗಲ್ಸ್ ಚಿನ್ನ ಗೆದ್ದ ಶರತ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

train

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆದಾಯ ಮೀರಿ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಆದಾಯ ಮೀರಿ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ತಿರಂಗಾ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

ತಿರಂಗಾ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

1-wqwq-wwqe

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ

16

ಸುಶಿಕ್ಷಿತರಲ್ಲಿಯೇ ಹೆಚ್ಚುತ್ತಿದೆ ವರದಕ್ಷಿಣೆ ಪಿಡುಗು

ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ

ಮುನಿರತ್ನಗೆ ದೊಡ್ಡ ಇತಿಹಾಸವಿದೆ, ಅವರ ಬಗ್ಗೆ ಮಾತನಾಡುವುದಿಲ್ಲ: ಡಿಕೆ ಸುರೇಶ್ ವ್ಯಂಗ್ಯ

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

ಆದಾಯ ಮೀರಿ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಆದಾಯ ಮೀರಿ ಆಸ್ತಿ ಪ್ರಕರಣ: ಡಿಕೆಶಿ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

death

ಕುಣಿಗಲ್: ತಾವರೆ ಹೂವು ಕೀಳಲು ಹೋಗಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ತಿರಂಗಾ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

ತಿರಂಗಾ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

accident

ಕೊರಟಗೆರೆ : ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ಢಿಕ್ಕಿ: ವೃದ್ದ ಸಾವು

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

ಯುಜಿಸಿ-ಎನ್‌ಇಟಿ ಎರಡನೇ ಹಂತದ ಪರೀಕ್ಷೆ ದಿನಾಂಕ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.