ಮೋದಿಗೆ ಆದ್ಯತಾ ಕಾರ್ಯ ನೆನಪು

Team Udayavani, May 24, 2019, 10:08 AM IST

ಧಾರವಾಡ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದಕ್ಕೆ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್‌.ವಿ. ದೇಶಪಾಂಡೆ ಅವರು ಕೇಂದ್ರದಲ್ಲಿ ಬರುವ ನೂತನ ಸರ್ಕಾರ ಕೈಗೊಳ್ಳಬೇಕಾದ ಕೆಲ ಆದ್ಯತಾ ಕೆಲಸಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಈ ಬಗ್ಗೆ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಚಿವರು, ಕೈಗಾರಿಕಾ ಉತ್ಪಾದನೆ ದೇಶದ ಜಿಡಿಪಿಯಲ್ಲಿ ಶೇ.30 ಪಾಲು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ತಯಾರಿಕಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರ ಫಲವಾಗಿ ದೇಶದಲ್ಲಿ ಯುವ ಜನರಿಗೆ ಉದ್ಯೋಗವಿಲ್ಲದಂತಾಗಿ ದೇಶದ ಆರ್ಥಿಕ ಅಭಿವೃದ್ಧಿಗೂ ಮಾರಕವಾಗಿ ಪರಿಣಮಿಸಿ ಜಿಡಿಪಿ ನಿರೀಕ್ಷಿತ ಬೆಳವಣಿಗೆ ತಲುಪಿಲ್ಲ ಎಂದು ಹೇಳಿದ್ದಾರೆ.

ದೇಶದ ನಿರುದ್ಯೋಗ ದರ ಶೇ.6.1 ಇದ್ದು, ಇದು ಕಳೆದ 4 ದಶಕಗಳಲ್ಲೇ ಅತ್ಯಧಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಯಾರಿಕಾ ವಲಯದ ಜವಳಿ, ಆಟಿಕೆಗಳು, ಸೇವಾ ವಲಯ, ಇತ್ಯಾದಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಆದ್ಯತೆ ನೀಡುವುದರ ಜೊತೆಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ತಾಂತ್ರಿಕತೆಯು ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣವಾದರೂ ಹಳೆಯ ಶ್ರಮಿಕ ಕೌಶಲ್ಯ ಬಲಕ್ಕೆ ಆಧುನಿಕ ಕೌಶಲ್ಯವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯ. ಅಲ್ಲದೇ, ಹೊಸ ತಾಂತ್ರಿಕ ಕೌಶಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಅವಶ್ಯಕತೆ ಇದೆ ಎಂಬುದನ್ನು ಪತ್ರದಲ್ಲಿ ಸಚಿವರು ವಿವರಿಸಿದ್ದಾರೆ.

ಪ್ರತಿ ವರ್ಷವೂ ರೈತ ಸಮುದಾಯ ಕೃಷಿ ಕ್ಷೇತ್ರ ಉತ್ತಮಗೊಳ್ಳುವುದೆಂದು ಸರ್ಕಾರಗಳತ್ತ ಮುಖ ಮಾಡಿ ಭರವಸೆಯಿಂದ ಕಾಯುತ್ತಿದೆ. ಆದರೆ ಸರ್ಕಾರದ ಯೋಜನೆಗಳು ಜಾರಿಯಾಗುವಲ್ಲಿ ಸೋಲುತ್ತಿವೆ. ಇದರ ಬಗ್ಗೆ ಮರು ಪರಿಶೀಲನೆ ಅಗತ್ಯವಾಗಿ ಆಗಬೇಕಾಗಿದೆ. ಗ್ರಾಮೀಣ ಭಾರತದಲ್ಲಿ ಕೃಷಿಯನ್ನು ಒಂದು ಆಕರ್ಷಕ, ಲಾಭದಾಯಕ ಉದ್ಯೋಗವನ್ನಾಗಿಸುವಲ್ಲಿ ಯೋಚಿಸಬೇಕಿದೆ ಎಂದು ತಿಳಿಸಿದ್ದಾರೆ.

ಜಿಎಸ್‌ಟಿಯನ್ನು ಮರುಪರಿಶೀಲಿಸುವ ಅಗತ್ಯ ಒತ್ತಿ ಹೇಳಿರುವ ಸಚಿವರು, ಈಗಿರುವ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಿ ಸುಲಭ ಸ್ಲ್ಯಾಬ್‌ಗಳನ್ನು ಪರಿಚಯಿಸುವ ಮೂಲಕ ಸುಗಮ ರೀತಿಯಲ್ಲಿ ಬೃಹತ್‌ ಮೊತ್ತದ ತೆರಿಗೆ ಸಂಗ್ರಹಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.

ಬರ, ಪ್ರವಾಹ, ಭೂಕಂಪ ಮುಂತಾದ ಅನಾಹುತಗಳು ಆಗಿಂದಾಗ್ಗೆ ದೇಶದಲ್ಲಿ ಸಂಭವಿಸುತ್ತಿದ್ದು, ಎಲ್ಲ ರಾಜ್ಯಗಳು ಬರ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿವೆಯೇ ಹೊರತು ಶಾಶ್ವತ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ. ಈ ನಿಟ್ಟಿನಲ್ಲಿ ನದಿ ಜೋಡಣೆ, ನದಿ ಹರಿವಿನ ಬದಲಾವಣೆ, ಜಲ ಮೂಲಗಳ ರಕ್ಷಣೆ, ಅಂತರ್‌ ಸಂಪರ್ಕ, ಜಲ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಂತಹ ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ದೂರದೃಷ್ಟಿಯಿಂದ ಆಲೋಚಿಸಿ ಆದ್ಯತೆ ಮೇಲೆ ಕ್ರಮ ವಹಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಸಚಿವರು ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಮುಂಬರುವ ವರ್ಷಗಳಲ್ಲಿ ಪ್ರವಾಹ ಮತ್ತು ಬರಗಾಲದಂತಹ ದುರಂತಗಳು ಹೆಚ್ಚುತ್ತಲೇ ಹೋಗುವ ಅನಿವಾರ್ಯತೆಗೆ ನಾವು ತಲುಪಿದ್ದೇವೆ ಎಂದು ಕೃಷಿ ವಿವಿ ಹವಾಮಾನ...

  • ಹುಬ್ಬಳ್ಳಿ: ಜ್ಞಾನಕ್ಕೆ ಇನ್ನೊಂದು ಹೆಸರೇ ಶ್ರೀ ನಿಜಗುಣ ಶಿವಯೋಗಿಗಳು ಎಂದರೆ ತಪ್ಪಾಗಲಾರದು ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ...

  • ಹುಬ್ಬಳ್ಳಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೃಹತ್‌ ಸೇಬು ಹಣ್ಣಿನ ಹಾಗೂ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ...

  • ಅಮರೇಗೌಡ ಗೋನವಾರ ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾಣೆ ಇಲಾಖೆಯಿಂದ ಒಪ್ಪಿಗೆ ದೊರೆತಿದೆ ಎಂಬ ಸಂತಸ...

  • ಹುಬ್ಬಳ್ಳಿ: ಕಿಮ್ಸ್‌ ಮುಖ್ಯ ದ್ವಾರ ಮುಂಭಾಗದ ಮಹಾತ್ಮಾ ಗಾಂಧೀಜಿ ಪುತ್ಥಳಿ ಸಮೀಪದ ಬಸ್‌ ನಿಲ್ದಾಣ ಪಕ್ಕ ಬಿಆರ್‌ಟಿಎಸ್‌ ಸ್ವಾಧೀನದ ಜಾಗದಲ್ಲಿರುವ ಕಟ್ಟಡ ಹಾಗೂ...

ಹೊಸ ಸೇರ್ಪಡೆ