- Monday 16 Dec 2019
ಹಣ ದ್ವಿಗುಣ ಆಮಿಷ; 80 ಲಕ್ಷ ಟೋಪಿ
Team Udayavani, Jun 19, 2019, 2:23 PM IST
ಹುಬ್ಬಳ್ಳಿ: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಕಲಘಟಗಿಯ ಸುರಭಿ ಟ್ರೇಡರ್ಸ್ ಮಾಲೀಕರು ಸುಮಾರು 80 ಲಕ್ಷ ರೂ. ವಂಚಿಸಿದ್ದಾರೆ. ಇದರಿಂದ ಮನನೊಂದು ನನ್ನ ಪತಿ ಡೆತ್‌ನೋಟ್ ಬರೆದಿಟ್ಟು ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ವಂಚಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಂಚನೆಗೊಳಗಾದ ಲಕ್ಷ್ಮೀ ಮೇಟಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆ ಮಾಡಿರುವ ಕುರಿತು 2017 ಆಗಸ್ಟ್‌ನಲ್ಲಿ ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ನಂತರ ಈ ದೂರನ್ನು ಧಾರವಾಡ ಆರ್ಥಿಕ ವಿಭಾಗಕ್ಕೆ ವರ್ಗಾಯಿಸಲಾಯಿತು. ಈ ಕುರಿತು ಸಾಕಷ್ಟು ಬಾರಿ ಎಸ್ಪಿ ಕಚೇರಿ ಅಲೆದರೂ ನಮಗೆ ನ್ಯಾಯ ದೊರೆಯಲಿಲ್ಲ. ವಂಚನೆ ಮಾಡಿದ ಆರೋಪಿಗಳನ್ನು ಬಂಧಿಸಿ ನಮ್ಮ ಹಣ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ನನ್ನ ಪತಿ ದ್ಯಾಮಣ್ಣ ಮೇಟಿ ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಕರಾಗಿದ್ದು, ಸುರಭಿ ಟ್ರೇಡರ್ಸ್ ಮಾಲೀಕರಾದ ಫಹೀದ್ ನುಚ್ಚಿಕದನ ಮತ್ತು ಇಲಿಯಾಸ್ ನುಚ್ಚಿಕದನ ಅವರು ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿದ್ದರು. ಅವರನ್ನು ನಂಬಿ ನನ್ನ ಪತಿ ತಾವು ಹಾಗೂ ತಮ್ಮ ಸ್ನೇಹಿತರಿಂದ ಸುಮಾರು 80.78 ಲಕ್ಷ ರೂ. ತೊಡಗಿಸಿದ್ದರು. ಸ್ನೇಹಿತರಾದ ಶರಣಪ್ಪ ಹಾಗೂ ಲಿಂಗಯ್ಯ ಎನ್ನುವ ಶಿಕ್ಷಕರು ನೇರವಾಗಿ ಹಣದ ವ್ಯವಹಾರ ಮಾಡಿದ್ದಾರೆ. ಇದಕ್ಕೆ ನನ್ನ ಪತಿ ಯಾವುದೇ ಜವಾಬ್ದಾರಿಯಿಲ್ಲ. ಆದರೆ ಇವರಿಬ್ಬರು ನನ್ನ ಪತಿಗೆ ಕಿರುಕುಳ ನೀಡಿ ನಿಮ್ಮ ಭರವಸೆ ಮೇಲೆ ಹಣ ತೊಡಗಿಸಿದ್ದೇವೆ ಎಂದು ಚೆಕ್ ಪಡೆದು ಚೆಕ್‌ಬೌನ್ಸ್ ಕೇಸ್ ದಾಖಲು ಮಾಡಿ ಹಿಂಸೆ ನೀಡಿದ್ದಾರೆ ಎಂದು ಹೇಳಿದರು.
ಹಣ ಕಳೆದುಕೊಂಡ ನಮಗೆ ಪೊಲೀಸರಿಂದಲೂ ನ್ಯಾಯ ಸಿಗಲಿಲ್ಲ. ಅಲ್ಲದೇ ಸ್ನೇಹಿತರಿಂದ ಮಾನಸಿಕ ಕಿರುಕುಳ ಹಾಗೂ ಚೆಕ್‌ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ ತಿರುಗಾಟದಿಂದ ನನ್ನ ಪತಿ ಮನನೊಂದು 2019 ಮಾ. 30ರಂದು ಡೆತ್‌ನೋಟ್ ಬರೆದಿಟ್ಟು ಯಾದಗಿರಿ ಮನೆಯಿಂದ ನಾಪತ್ತೆಯಾಗಿದ್ದಾರೆ. ನನ್ನ ಪತಿಯನ್ನು ಹುಡುಕಿಕೊಡುವಂತೆ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಲಕ್ಷ್ಮೀ ಕಣ್ಣೀರಿಟ್ಟರು.
ಈ ಹಿಂದೆ ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ನನ್ನ ಪತಿಯನ್ನು ಬಂಧಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದರು. ಒಂದು ದಿನದ ನಂತರ ನಮ್ಮೊಂದಿಗೆ ಫೋನ್ ಮೂಲಕ ಮಾತನಾಡಲು ಅವಕಾಶ ನೀಡಿದ್ದರು. ಈ ಎಲ್ಲ ಘಟನೆಗಳಿಗೆ ಕಾರಣವಾಗಿರುವ ಸುರಭಿ ಟ್ರೇಡರ್ನ ಮಾಲೀಕರನ್ನು ಬಂಧಿಸಿ ಹಣ ಕೊಡಿಸುವ ಕೆಲಸ ಪೊಲೀಸರು ಮಾಡಬೇಕು. ಪ್ರಮುಖವಾಗಿ ನಮ್ಮ ಮನೆಯವರು ಸುರಕ್ಷಿತವಾಗಿ ವಾಪಸ್ ಬರಬೇಕು. ನಿತ್ಯವೂ ಎರಡು ಮಕ್ಕಳು ಅಪ್ಪ ಯಾವಾಗ ಬರುತ್ತಾರೆ ಎಂದು ಅಳುತ್ತಿದ್ದಾರೆ. ದಯವಿಟ್ಟು ಪೊಲೀಸರು ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಈ ವಿಭಾಗದಿಂದ ಇನ್ನಷ್ಟು
-
ಹುಬ್ಬಳ್ಳಿ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತ ಅವರು ನಗರದಲ್ಲಿ ಸ್ಮಾರ್ಟ್ಸಿಟಿ...
-
ಹುಬ್ಬಳ್ಳಿ: ಬಿಆರ್ಟಿಎಸ್ ರಸ್ತೆ ಹಾಗೂ ಕೇಂದ್ರ ರಸ್ತೆ ನಿಧಿಯಡಿ (ಸಿಆರ್ಎಫ್) ನಿರ್ಮಿಸಲಾದ ರಸ್ತೆಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು 10 ದಿನಗಳಲ್ಲಿ...
-
ಹುಬ್ಬಳ್ಳಿ: ಭಾರತದಲ್ಲಿನ ಕೆಲವೊಂದು ಅಂಗವಿಕಲ ಮಕ್ಕಳ ಶಾಲೆಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸೇವಾ ಯುಕೆ ಸಂಸ್ಥೆ ಆಯೋಜಿಸಿರುವ ರಿಕ್ಷಾ ರನ್ ಅಭಿಯಾನದ ತಂಡ...
-
ಹುಬ್ಬಳ್ಳಿ: ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿದ್ದ ಬಸವ ವನ ಬಳಿಯಿರುವ ಪಾಲಿಕೆಯ ಈಜುಕೊಳವೀಗ ನವೀಕೃತಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಸ್ಮಾರ್ಟ್ಸಿಟಿ...
-
ಧಾರವಾಡ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸತತ ಅಧ್ಯಯನ ಅಗತ್ಯ ಎಂದು ಎಸಿಪಿ ಎಂ.ಎನ್. ರುದ್ರಪ್ಪ ಹೇಳಿದರು. ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ...
ಹೊಸ ಸೇರ್ಪಡೆ
-
ನಾಗರಾಜ ತೇಲ್ಕರ್ ದೇವದುರ್ಗ: ಪಟ್ಟಣದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರದ ಕಟ್ಟಡಕ್ಕಾಗಿ 20 ಎಕರೆ ಭೂಮಿ ಕಾಯ್ದಿರಿಸಿದ್ದರೂ, ಕಟ್ಟಡಕ್ಕೆ...
-
ಹೈದರಾಬಾದ್ ಮತ್ತು ಉತ್ತರ ಪ್ರದೇಶದ ಉನ್ನಾವ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಗಳು ದೇಶವನ್ನು ತಲ್ಲಣಗೊಳಿಸಿವೆ. ಮಹಾನಗರಗಳಲ್ಲಿ...
-
ಬಾಗಲಕೋಟೆ: ದೇಶದ ಅತ್ಯುನ್ನತ ಭದ್ರತಾ ಪಡೆ, ಗಣ್ಯಾತಿಗಣ್ಯರಿಗೆ ಭದ್ರತೆ ಒದಗಿಸುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಗೆ (ರಾಷ್ಟ್ರೀಯ ಭದ್ರತಾ ಪಡೆ) ಮುಧೋಳ ನಾಯಿ...
-
ಶಿವಯ್ಯ ಮಠಪತಿ ಚಡಚಣ: ಕರ್ನಾಟಕ-ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕಟ್ಟಕಡೆಯ ಶಿರನಾಳ ಗ್ರಾಮದ ಬಡ ಜನರು ಸ್ವಂತ ಜಾಗವಿಲ್ಲದೇ ಸರಕಾರಿ ಗೋಮಾಳಿನ ಕತ್ತಲಿನಲ್ಲೇ...
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ಯೂನಿರ್ವಸಿಟಿ ವಿದ್ಯಾರ್ಥಿಗಳು ಮತ್ತು ಪೊಲೀಸರ...