ನರೇಂದ್ರ ಮೋದಿ ಸಾಧನೆಯಿಂದ ಬಲಿಷ್ಠ ಭಾರತ

Team Udayavani, Apr 9, 2019, 10:30 AM IST

ಹುಬ್ಬಳ್ಳಿ: ಚೀನಾ ದೇಶಕ್ಕೂ ಎದುರುತ್ತರ ನೀಡುವಷ್ಟು ಭಾರತ ಬಲಿಷ್ಠವಾಗಿ ಬೆಳೆದಿದೆ. ಇದು ಅರವತ್ತೆಂಟರ ಭಾರತ ಅಲ್ಲ, ಹದಿನೆಂಟರ ಮೋದಿ ಭಾರತ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ನವಲಗುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ಸಿನವರು ಸೈನಿಕರ ಕೈ ಕಟ್ಟಿಹಾಕುವ ಕೆಲಸ ಮಾಡುತ್ತಾರೆ. ದೇಶದಲ್ಲೀಗ ಭಯೋತ್ಪಾದನೆ ನಿಗ್ರಹವಾಗಲು ಸೈನಿಕರಿಗೆ ಕೊಟ್ಟ ವಿಶೇಷ ಅಧಿಕಾರ ಕಾರಣವಾಗಿದ್ದು, ಸದೃಢ ದೇಶಕ್ಕೆ ಮೋದಿ ಅವಶ್ಯಕ ಎಂದು ಹೇಳಿದರು. ಅಣ್ಣಿಗೇರಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಮೋದಿಯವರು ಮತ್ತೆ ಪ್ರಧಾನಿಯಾಗಲು ಸರಳ ಹಾಗೂ ಪ್ರಾಮಾಣಿಕ ಸಂಸದರಾಗಿರುವ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ರಾಜಶೇಖರ ಕಂಪ್ಲಿ, ನಿಂಗಪ್ಪ ಮಾಯಣ್ಣವರ, ಷಣ್ಮುಖ ಗುರಿಕಾರ, ಎಚ್‌.ಕೆ. ಪಾಟೀಲ ಇನ್ನಿತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ