ಕುಕ್ಕುಟೋದ್ಯಮಕ್ಕೆ ಹೊಸ ಅತಿಥಿ

Team Udayavani, Dec 7, 2019, 11:28 AM IST

ಹುಬ್ಬಳ್ಳಿ: ಬಾಯ್ಲರ್‌ ಫಾರ್ಮ್ನಿಂದ ನಿರೀಕ್ಷಿತ ಮಟ್ಟದ ಲಾಭ ಸಿಗದಿದ್ದರಿಂದ ಹಲವು ಕೋಳಿಸಾಕಣೆದಾರರು ಹೊಸ ತಳಿಕಡಕನಾಥ ಕೋಳಿಬೆಳೆಸಲು ಆಸಕ್ತಿ ತೋರುತ್ತಿದ್ದಾರೆ.

ಹವಾಮಾನ ವೈಪರಿತ್ಯ, ರೋಗ ರುಜಿನದಿಂದ ಬಾಯ್ಲರ್‌ ಕೋಳಿಗಳ ಮೃತ್ಯು ದರ ಹೆಚ್ಚಾಗುತ್ತಿದ್ದರಿಂದ ಮಧ್ಯಪ್ರದೇಶದ ಸ್ಥಳೀಯ ತಳಿ ಕಡಕನಾಥ ತಳಿ ಕೋಳಿ ಬೆಳೆಸಲು ಮುಂದಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಜಾಬುವಾ ಜಿಲ್ಲೆಯಲ್ಲಿ ಆದಿವಾಸಿಗಳು ಇದನ್ನು ಬೆಳೆಸುತ್ತಿದ್ದು, ಮಧ್ಯಪ್ರದೇಶ ಸರಕಾರ ಕಡಕನಾಥ ಕೋಳಿ ಮಾಂಸ ಹಾಗೂ ಮೊಟ್ಟೆಯಲ್ಲಿನ ವಿಶೇಷತೆ ಪರಿಗಣಿಸಿ ಅದನ್ನು ವಿಸ್ತರಿಸಿ ರಾಜ್ಯಾದ್ಯಂತ ಪಸರಿಸಿತು. ಮಹಾರಾಷ್ಟ್ರ, ಗುಜರಾತ್‌, ಉತ್ತರ ಪ್ರದೇಶ ಮೊದಲಾದೆಡೆ ಕಡಕನಾಥ ತಳಿಯನ್ನೇ ಹೆಚ್ಚಾಗಿ ಬೆಳೆಸಲಾಗುತ್ತಿದ್ದು, ಈಗ ಕರ್ನಾಟಕದಲ್ಲಿಯೂ ಇದರ ಫಾರ್ಮ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಿದ್ದರೆ, ಇನ್ನು ಸಣ್ಣ ರೈತರು ಹಿತ್ತಲದಲ್ಲಿ ಸಾಕಣೆ ಮಾಡುತ್ತಿದ್ದಾರೆ.

ಬಳ್ಳಾರಿ, ಬೆಳಗಾವಿ, ವಿಜಯಪುರದಲ್ಲಿ ಇದರ ಪಾಲನೆ ಹೆಚ್ಚಾಗಿ ಕಂಡುಬರುತ್ತಿದೆ. ಹಿತ್ತಲ ಕೋಳಿಗಳಲ್ಲಿ ಸಾಮಾನ್ಯವಾಗಿ ಗಿರಿರಾಜ, ವನರಾಜ, ಸ್ವರ್ಣಧಾರಾ ಸಾಕಣೆ ಮಾಡಲಾಗುತ್ತದೆ. ನಾಟಿಕೋಳಿಗಿಂತ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದು, ಎಲ್ಲ ಹವಾಗುಣಕ್ಕೆ ಹೊಂದಿಕೊಳ್ಳುವುದು ಇದರ ವಿಶೇಷತೆ. ಇದಕ್ಕೆ ಬಾಯ್ಲರ್‌ ಕೋಳಿಯಂತೆ ಹೆಚ್ಚು ವ್ಯಾಕ್ಸಿನೇಶನ್‌ ಅವಶ್ಯಕತೆಯಿರಲ್ಲ. ನಾಟಿ ಕೋಳಿಗಳ ಬೆಳವಣಿಗೆ ನಿಧಾನ ಗತಿಯಲ್ಲಿರುತ್ತದೆ. ಅಲ್ಲದೇ ಅವುಗಳ ಮೊಟ್ಟೆಗಳ ಸಂಖ್ಯೆ ಕೂಡ ಕಡಿಮೆ. ನಾಟಿ ಕೋಳಿಗಳಂತೆಯೇ ಕಡಕನಾಥ ಕೋಳಿ ಬೆಳೆಸಬಹುದಾದ್ದರಿಂದ ಇವುಗಳ ಪಾಲನೆ ಬಗ್ಗೆ ಹಲವರು ಆಸಕ್ತಿ ವಹಿಸುತ್ತಿದ್ದಾರೆ. ನಗರದಲ್ಲಿ ಸ್ಥಳಿಯವಾಗಿ ಇದರ ಮಾರುಕಟ್ಟೆ ಇಲ್ಲ. ಇದರ ಚಿಕನ್‌ ಪರಿಚಯ ಜನರಿಗಿಲ್ಲ.

ಆದರೆ ಕಾಂಟ್ರಾಕ್ಟ್ಪದ್ಧತಿಯಲ್ಲಿ ಫಾರ್ಮಿಂಗ್‌ ಮಾಡುವವರು ಬ್ರಾಯ್ಲರ್‌ ಕಾಂಟ್ರಾಕ್ಟ್ ಫಾರ್ಮಿಂಗ್‌ನಂತೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ತತ್ತಿ ಹಾಗೂ ಕೋಳಿಗಳನ್ನು ನೀಡುತ್ತಿದ್ದಾರೆ. ಎರೆಟ್ಸ್‌ ಎಗ್ರೊ ಪ್ರೈವೇಟ್‌ ಲಿಮಿಟೆಡ್‌ ಸೇರಿದಂತೆ ಕೆಲವು ಸಂಸ್ಥೆಗಳು ಹಲವು ರೈತರಿಗೆ ಮರಿಗಳನ್ನು ನೀಡಿ ಅವುಗಳನ್ನುಬೆಳೆಸಿ ಮರಳಿ ಪಡೆದು ಹಣ ನೀಡುತ್ತಿದೆ. ಮರಿ ಬೆಳೆಸುವುದು, ತತ್ತಿ ಉತ್ಪಾದನೆ ಸೇರಿದಂತೆ ಹಲವು ಯೋಜನೆಗಳಿದ್ದು, ರೈತರು ತಮ್ಮಿಷ್ಟದ ಯೋಜನೆಯಡಿ ಕುಕ್ಕುಟ ಪಾಲನೆ ಮಾಡುತ್ತಿದ್ದಾರೆ. ಇನ್ನು ಕೆಲ ರೈತರು ಮಧ್ಯಪ್ರದೇಶದಿಂದ ಕಡಕನಾಥ ಮರಿಗಳನ್ನು ತಂದು ಬೆಳೆಸಿ ಸ್ಥಳಿಯವಾಗಿ ಮಾರ್ಕೆಟಿಂಗ್‌ ಮಾಡಿಕೊಳ್ಳುತ್ತಿದ್ದಾರೆ.

ಕಡಕ್‌ನಾಥ ವಿಶೇಷತೆ: ಕಪ್ಪು ಬಣ್ಣವೇ ಕಡಕನಾಥ ಕೋಳಿಯ ವಿಶೇಷತೆ. ಇದರ ರೆಕ್ಕೆಪುಕ್ಕ, ಕಾಲು, ಉಗುರು, ಚುಂಚು ಅಲ್ಲದೇ ಮಾಂಸವೂ ಕಪ್ಪು. ಆದ್ದರಿಂದ ಇದನ್ನು ಮಧ್ಯಪ್ರದೇಶದಲ್ಲಿ ಕಾಳಿಮಾಸಿಎಂದೇ ಕರೆಯಲಾಗುತ್ತದೆ. ಇದು ದೇಶಿ ತಳಿಯಂತೆಯೇ ಇರುತ್ತದೆ. ಇದನ್ನು ಕೂಡಿ ಹಾಕಿ ಬೆಳೆಸಬೇಕೆಂದಿಲ್ಲ, ಮುಕ್ತವಾಗಿ ಬಿಟ್ಟು ಸಾಕಬಹುದಾಗಿದೆ. ಅಲ್ಲದೇ ಇವುಗಳಿಗೆ ರೋಗಗಳು ಕಡಿಮೆ ಇರುವುದರಿಂದ ಸಾಕಣೆಗೆ ಕುಕ್ಕುಟೋದ್ಯಮಿಗಳು ಆಸಕ್ತಿ ತೋರುತ್ತಿದ್ದಾರೆ.

ಇದಕ್ಕಿದೆ ಔಷಧೀಯ ಗುಣ: ಔಷಧೀಯ ಗುಣದಿಂದಾಗಿ ಈ ಕೋಳಿಯ ಮಾಂಸ 700ರಿಂದ 800ರೂ. ಪ್ರತಿ ಕೆಜಿಗೆ ಬಿಕರಿಯಾದರೆ, ಮೊಟ್ಟೆ 20ರಿಂದ 40 ರೂ.ಗೆ ಮಾರಾಟವಾಗುತ್ತವೆ. ಕಡಕನಾಥ ಕೋಳಿ ಮಾಂಸದಲ್ಲಿ ಕಬ್ಬಿಣಾಂಶ ಹೆಚ್ಚಾಗಿದ್ದರಿಂದ ಇದು ಕಪ್ಪಾಗಿರುತ್ತದೆ. ಇದರಲ್ಲಿ ಆರೋಗ್ಯಕ್ಕೆ ಪೂರಕ ಅಂಶಗಳಿರುವುದರಿಂದ ಬೆಲೆ ಹೆಚ್ಚಾಗಿದೆ. ಇತರ ಕೋಳಿಗಳಿಗೆ ಹೋಲಿಸಿದರೆ

ಇದರಲ್ಲಿ ಪ್ರೋಟೀನ್‌ ಹೆಚ್ಚಾಗಿದ್ದು, ಕೊಬ್ಬು ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣ ಅತಿ ಕಡಿಮೆ ಇರುತ್ತದೆ. ಇದರ ಮಾಂಸದಲ್ಲಿ ಬಿ1, ಬಿ2, ಬಿ6 ಹಾಗೂ ಬಿ12 ಸಿ, ಇರುವುದು ವಿಶೇಷ. ಕ್ಯಾಲಿÏಯಂ, ಮೆಲೆನಿನ್‌ ಪ್ರಮಾಣ ಹೇರಳವಾಗಿದೆ. ಕಡಕನಾಥ ಚಿಕನ್‌ ರೋಗನಿರೋಧಕ ಗುಣ ಹೊಂದಿದೆ. ವಿವಿಧ ರಾಜ್ಯಗಳ ಕ್ರೀಡಾನಿಲಯಗಳಲ್ಲಿ ಕಡಕನಾಥ ಮೊಟ್ಟೆ ಹಾಗೂ ಚಿಕನ್‌ ನೀಡಲಾಗುತ್ತದೆ.

ಕಾನೂನು ಸಮರದಿಂದ ಮೂಲ ಹುಡುಕಾಟ!: ಕಡಕನಾಥ ಕೋಳಿಯ ಮೂಲದ ಬಗ್ಗೆ ಮಧ್ಯಪ್ರದೇಶ ಹಾಗೂ ಛತ್ತೀಸಗಡ ರಾಜ್ಯಗಳ ಮಧ್ಯೆ ಕಾನೂನು ಸಮರವೇ ನಡೆಯಿತು. ಕೊನೆಗೆ ಈ ತಳಿ ಮಧ್ಯಪ್ರದೇಶದ್ದೆಂದು ತೀರ್ಮಾನವಾಯಿತು. ನಂತರ ಕಡಕ್‌ನಾಥ ಕೋಳಿಯ ಮಹತ್ವ ಅರಿತ ಮಧ್ಯಪ್ರದೇಶ ಸರಕಾರ ಕೋಳಿಗಳ ಸಂಖ್ಯೆ ಹೆಚ್ಚಿಸಿತಲ್ಲದೇ ಇದರ ಮಾಂಸಮೊಟ್ಟೆಗೆ ರಾಜ್ಯದಲ್ಲಿ ಮಾರುಕಟ್ಟೆ ಒದಗಿಸಲು ಯೋಜನೆ ರೂಪಿಸಿತು. ರಾಜ್ಯಾದ್ಯಂತ ಫ್ರಾಂಚೈಸಿ ಮೂಲಕ ಚಿಕನ್‌ ಮಾರಾಟದ ಮಳಿಗೆಗಳನ್ನು ಆರಂಭಿಸಲಾಯಿತು. ಇದರ ಮಾರುಕಟ್ಟೆ ವಿಸ್ತರಿಸಿದ ನಂತರ ಇತರ ರಾಜ್ಯಗಳಲ್ಲಿ ಕಡಕ್‌ನಾಥ ಪಾಲನೆ ಹೆಚ್ಚಾಗುತ್ತಿದೆ.

ಬಹು ಲಾಭದಾಯಕ ಕೋಳಿ: ನಾನು ಕೆಲವು ವರ್ಷಗಳಿಂದ ಬಾಯ್ಲರ್‌ ಫಾರ್ಮ್ ಮಾಡುತ್ತಿದ್ದೆ. ಆದರೆ ಇದರಿಂದ ನಿರೀಕ್ಷಿತ ಲಾಭ ಸಿಗಲಿಲ್ಲ. ಆದ್ದರಿಂದ ಕಳೆದ 1 ವರ್ಷದಿಂದ ಕಡಕನಾಥ ಕೋಳಿ ಸಾಕಣೆ ಮಾಡುತ್ತಿದ್ದು, ಉತ್ತಮ ಆದಾಯ ಸಿಗುತ್ತಿದೆ. ಕಡಕನಾಥ ಕೋಳಿಗಳು ಮೊಟ್ಟೆಗಳನ್ನು ಮರಿ ಮಾಡಲ್ಲ. ನಾಟಿ ಕೋಳಿಗಳ ಬುಡಕ್ಕೆ ಕಡಕನಾಥ ಮೊಟ್ಟೆಗಳನ್ನಿಡುವುದರಿಂದ ಅವು ಮರಿ ಮಾಡಿ ಬೆಳೆಸುತ್ತವೆ. ಕಡಕನಾಥ ಕೋಳಿಯ ಮಹತ್ವ ಗೊತ್ತಿದ್ದವರು ಇದನ್ನು ಖರೀದಿಸುತ್ತಾರೆ. ನಾನು ಮೊಟ್ಟೆಗಳನ್ನು ಬೆಂಗಳೂರಿಗೆ ಕಳಿಸುತ್ತಿದ್ದೇನೆ. ಪ್ರತಿ ಮೊಟ್ಟೆಗೆ 38ರೂ. ಸಿಗುತ್ತಿದೆ. ಅಮೆಜಾನ್‌ನಲ್ಲಿ ಕಡಕನಾಥ ಮೊಟ್ಟೆ 80 ರೂ.ಗೊಂದರಂತೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಕುಕ್ಕುಟೋದ್ಯಮಿ ಉದಯ.

 

ವಿಶ್ವನಾಥ ಕೋಟಿ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಧಾರವಾಡ: ಹನಿ ನೀರನ್ನು ಪರಿಪೂರ್ಣವಾಗಿ ಬಳಸಿ, ನಿಗದಿತ ಸಮಯದಲ್ಲಿ ಅದನ್ನು ಹಣವಾಗಿ ಪರಿವರ್ತಿಸುವ ಕೃಷಿ ವಿಧಾನವನ್ನು ಜಗತ್ತಿಗೆ ಮಾದರಿಯಾಗಿ ಕೊಟ್ಟಿದ್ದು ಇಸ್ರೇಲ್‌...

  • ಹುಬ್ಬಳ್ಳಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಿನವಾದ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಯಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ...

  • ಧಾರವಾಡ: ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ವೀಕ್ಷಕರ ಸಂಖ್ಯೆಯೂ ತೀರಾ ಕಡಿಮೆ ಇತ್ತು....

  • ಧಾರವಾಡ: ದ್ರಾಕ್ಷಾರಸ ಮದಿರೆಯಾಗಿ ಮತ್ತೇರಿಸುವುದು ಇತಿಹಾಸದಲ್ಲಿತ್ತು. ಅದೇ ದ್ರಾಕ್ಷಾರಸ ವೈನ್‌ ಎಂಬ ಹೆಸರಿನೊಂದಿಗೆ ಆಧುನಿಕ ಜಗತ್ತಿನಲ್ಲಿ ಹೆಸರಾಗಿದೆ. ಇದೀಗ...

  • ಧಾರವಾಡ: ಕೃಷಿ ವಿಶ್ವವಿದ್ಯಾಲಯಗಳು ರೈತರ ಜೊತೆ ಕೃಷಿ ಅಭಿವೃದ್ಧಿಗೆ ಜಂಟಿ ಪ್ರಯೋಗ ಮಾಡುವುದು ಹಾಗೂ ಕೃಷಿ ಪದವೀಧರರು ಹೊಲಗಳಿಗೆ ಮರಳಿ ಆಧುನಿಕ ಕೃಷಿ ಮಾಡಿದರೆ...

ಹೊಸ ಸೇರ್ಪಡೆ