Udayavni Special

ಸೌಲಭ್ಯ ಪಾವತಿ ಬಾಕಿ; ಮತ್ತೆ ಬಸ್‌ ಏರಲು ನಿವೃತ್ತರ ಹಿಂದೇಟು


Team Udayavani, Apr 13, 2021, 11:23 AM IST

ಸೌಲಭ್ಯ ಪಾವತಿ ಬಾಕಿ; ಮತ್ತೆ ಬಸ್‌ ಏರಲು ನಿವೃತ್ತರ ಹಿಂದೇಟು

ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಮೊರೆಹೋಗಿದ್ದು, ಓರ್ವ ನಿವೃತ್ತನೌಕರ ಕೂಡ ಕರ್ತವ್ಯಕ್ಕೆ ಬರಲುಮುಂದೆ ಬಂದಿಲ್ಲ. ನಿವೃತ್ತಿನಂತರದ ಆರೋಗ್ಯ ಸಮಸ್ಯೆಒಂದೆಡೆಯಾದರೆ, ನಿವೃತ್ತರಿಗೆ ಆರ್ಥಿಕ ಸೌಲಭ್ಯ ಪಾವತಿ ಮಾಡದಿರುವುದು ಹಿಂದೇಟಿಗೆ ಕಾರಣವಾಗಿದೆ.

62 ವರ್ಷ ಮೀರದ ನಿವೃತ್ತ ಚಾಲಕ,ನಿರ್ವಾಹಕರು ಕರ್ತವ್ಯಕ್ಕೆ ಆಹ್ವಾನ ನೀಡಲಾಗಿತ್ತು.ದಿನಕ್ಕೆ ಚಾಲಕರಿಗೆ 800, ನಿರ್ವಾಹಕರಿಗೆ 700ರೂ. ನೀಡುವುದಾಗಿ ಸೂಚಿಸಲಾಗಿತ್ತು. ಆದರೆಮೂರ್‍ನಾಲ್ಕು ದಿನ ಕಳೆದರೂ ಒಬ್ಬನಿವೃತ್ತ ನೌಕರ ಕೂಡ ಸೇವೆಗೆಬರಲು ಒಪ್ಪಿಗೆ ಸೂಚಿಸಿಲ್ಲ. 2019ರ ಅಕ್ಟೋಬರ್‌ನಿಂದ ಈಚೆಗೆ ನಿವೃತ್ತರಾಗಿರುವ ಸಿಬ್ಬಂದಿಗೆ ಸಂಸ್ಥೆಯಿಂದ 92ಕೋಟಿ ರೂ. ಗ್ರಾಚ್ಯುಟಿ, 118ಕೋಟಿ ರೂ. ರಜೆ ನಗದೀಕರಣ ಕೊಡುವುದು ಬಾಕಿಯಿದೆ  ಎನ್ನಲಾಗಿದೆ.

ಇನ್ನೂ ಚಾಲನೆ ಸಂದರ್ಭದಲ್ಲಿ ಏನಾದರೂ ಅಪಘಾತಗಳಾದರೆ ನಿವೃತ್ತಿಯ ನಂತರಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎನ್ನುವ ಅಳುಕು ನಿವೃತ್ತರದ್ದಾಗಿದೆ. ಕಳೆದ ಎರಡುವರ್ಷಗಳ ಈಚೆಗೆ ಸಂಸ್ಥೆಯಲ್ಲಿ ಸುಮಾರು 550 ಚಾಲಕ, ನಿರ್ವಾಹಕರು ನಿವೃತ್ತರಾಗಿದ್ದಾರೆ.

ತುದಿಗಾಲಿನಲ್ಲಿ: ಶಿಸ್ತು ಪ್ರಕರಣಗಳಲ್ಲಿ ಸೇವೆಯಿಂದ ವಜಾಗೊಂಡವರು ಕರ್ತವ್ಯಕ್ಕೆಬರಲು ತುದಿಗಾಲಲ್ಲಿದ್ದಾರೆ. ತಮ್ಮ ಮೇಲಿರುವಪ್ರಕರಣಗಳನ್ನು ರದ್ದುಗೊಳಿಸುವುದಾದರೆಬರುವುದಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಕಾನೂನು ತೊಡಕು ಇರುವುದರಿಂದಅಸಾಧ್ಯವಾಗಿದೆ. ದಿನಗೂಲಿ ಆಧಾರದ ಮೇಲೆಬರುವಂತೆ ಸೂಚನೆ ನೀಡಲಾಗಿದೆ.ತರಬೇತಿ ಸಿಬ್ಬಂದಿ ಆಗಮನ: ನಾಲ್ಕು ದಿನಗಳಹಿಂದೆ ಸುಮಾರು 280 ತರಬೇತಿ ಸಿಬ್ಬಂದಿಗೆಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್‌ನೀಡಲಾಗಿತ್ತು. ಹೀಗಾಗಿ 110 ಸಿಬ್ಬಂದಿ ಕರ್ತವ್ಯಕ್ಕೆಆಗಮಿಸಿದ್ದಾರೆ. ಆದರೆ ಬಂದವರಲ್ಲಿ 20 ಸಿಬ್ಬಂದಿಮಾತ್ರ ಚಾಲನಾ ಸಿಬ್ಬಂದಿಯಾಗಿದ್ದಾರೆ. ಇನ್ನೂ ಕೆಲವರಿಗೆ ನೋಟಿಸ್‌ ನೀಡಲಾಗುತ್ತಿದೆ.

ಕದ ತಟ್ಟುತ್ತಿರುವ ಅಧಿಕಾರಿಗಳು: ತಮ್ಮ ವಿಭಾಗವ್ಯಾಪ್ತಿಯಲ್ಲಿ ಬಸ್‌ಗಳ ಕಾರ್ಯಾಚರಣೆಗೆ ಅಧಿಕಾರಿಗಳ ಗುರಿ ನೀಡಲಾಗಿದೆ. ಹೀಗಾಗಿ ಕೆಲಅಧಿಕಾರಿಗಳು ಬೆಳಗಿನ ಜಾವವೇ ನೌಕರರ ಮನೆಬಾಗಿಲು ತಟ್ಟಿ ಕರೆದುಕೊಂಡು ಹೋಗುತ್ತಿದ್ದಾರೆ.ಗ್ರಾಮಗಳಿಗೆ ಹೋಗಿ ಚಾಲನಾ ಸಿಬ್ಬಂದಿಯನ್ನುಕರೆದುಕೊಂಡು ಬಂದು ಬಸ್‌ ಹತ್ತಿಸುತ್ತಿದ್ದಾರೆ. ಇನ್ನೂವಿವಿಧ ಪ್ರಕರಣಗಳಲ್ಲಿ ಅಮಾನತುಗೊಂಡಿರುವಸಿಬ್ಬಂದಿ ಮನವೊಲಿಸಿ ಬಸ್‌ಗಳನ್ನು ಹತ್ತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಿವೃತ್ತರಾದರೂ ಅವರ ಕರ್ತವ್ಯ ಪ್ರಶ್ನಿಸುವಂತಿಲ್ಲ. ಸಂಸ್ಥೆ ಮೇಲಿನ ಸ್ವಾಭಿಮಾನ, ಸಾಮರ್ಥ್ಯ ಇದ್ದವರುಕರ್ತವ್ಯಕ್ಕೆ ಹೋಗಬಹುದು. ಇತರೆ ಇಲಾಖೆ ನಿವೃತ್ತರಂತೆಚಾಲಕ-ನಿರ್ವಾಹಕರಲ್ಲ. ಅವರ ಸಾಮರ್ಥ್ಯದ ಮೇಲೆಸಂಸ್ಥೆಗೆ ಲಾಭವೋ, ನಷ್ಟವೋ ಎಂಬುದನ್ನು ಅಲ್ಲಿನ ಆಡಳಿತವರ್ಗ ನಿರ್ಧರಿಸಬೇಕು.ಆರ್‌.ಎಸ್‌. ಸುಖಸಾರೆ, ನಿವೃತ್ತ ಮುಖ್ಯ ಕಾನೂನಾಧಿಕಾರಿ, ಸಾರಿಗೆ ಇಲಾಖೆ

ನಿವೃತ್ತ ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ನಷ್ಟದ ಹೆಸರಲ್ಲಿ ಸತಾಯಿಸುತ್ತಿದ್ದಾರೆ. ಯಾವುದೇಕಾರಣಕ್ಕೂ ನಿವೃತ್ತ ನೌಕರರು ಕರ್ತವ್ಯಕ್ಕೆ ಹೋಗಬಾರದು.ಹಾಲಿ ನೌಕರರ ಹೋರಾಟಕ್ಕೆ ನಮ್ಮ ಬೆಂಬಲವಿದೆ. –ಎಚ್‌.ಜಿ. ಕೊಪ್ಪದ, ವಾಕರಸಾಸಂ ನಿವೃತ್ತ ನೌಕರರ ಸಂಘ

 

-ಹೇಮರಡ್ಡಿ ಸೈದಾಪುರ

ಟಾಪ್ ನ್ಯೂಸ್

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ವಿಚಾರ : ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ

ಲಾಕ್‌ಡೌನ್ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ ಹೇಳಿಕೆ

Delhi Highcourt

ರಾಜಕೀಯ ನಾಯಕರ ತನಿಖೆ ಪ್ರಕರಣ : ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

362712kpl-1 (1)

ಸೋಂಕಿತರ ಸೇವೆಯಲ್ಲಿ ನಿರತ “ಸಲೀಂ’’

Now CoWIN portal will have Hindi and 14 regional languages by next week

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

fಗಹಜಹಗ್ದೆರತಗವಚಷ

ಸಸಿಹಿತ್ಲುವಿಗೆ 50 ಕೋಟಿ. ರೂ. ವಿಶೇಷ ಪ್ಯಾಕೇಜ್ ಘೋಷಿಸಿ : ಅಭಯಚಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cats

ಪುಣ್ಯಾತ್ಮರ ಮಣ್ಣಿಗೂ ಬಿಡದ ಪಾಪಿ ಕೋವಿಡ್

ಕುವೈತ್ ನಿಂದ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಕುವೈತ್ ನಿಂದ ಧಾರವಾಡಕ್ಕೆ 75 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ: ಸಚಿವ ಪ್ರಹ್ಲಾದ್ ಜೋಶಿ

304215alnavar3

ಧಾರವಾಡ: ತೌಕ್ತೇ ಆರ್ಭಟ; ಜಿಟಿಜಿಟಿ ಮಳೆ ಸಂಕಟ

ಹುಬ್ಬಳ್ಳಿ: 12 ಜನರಲ್ಲಿ ಪತ್ತೆಯಾದ ಬ್ಲಾಕ್ ಫಂಗಸ್ 

ಹುಬ್ಬಳ್ಳಿ: 12 ಜನರಲ್ಲಿ ಪತ್ತೆಯಾದ ಬ್ಲ್ಯಾಕ್ ಫಂಗಸ್ 

ನಿವೃತ್ತ ನೌಕರರಿಗೆ 5.20ಲಕ್ಷ ರೂ. ವಂಚನೆ

ನಿವೃತ್ತ ನೌಕರರಿಗೆ 5.20ಲಕ್ಷ ರೂ. ವಂಚನೆ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

17-15

ಸುಡುಗಾಡು ಸಿದ್ಧರ ಸಂಕಷ್ಟಕ್ಕೆ ಸ್ಪಂದಿಸಲು ಮನವಿ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

17-14

ರೈಸ್‌ಮಿಲ್‌ ಮಾಲೀಕರ ಸಂಘದಿಂದ ಔಷಧ ಕಿಟ್‌ ದೇಣಿಗೆ

17-13

ಸೋಂಕಿತ ಮೃತರಿಗೆ ಗೌರವದ ವಿದಾಯ

17-12

ಸರ್ಕಾರದ ನಿರ್ಲಕ್ಷ್ಯವೇ ಕೋವಿಡ್ ಹೆಚ್ಚಳಕ್ಕೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.