ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣ: ತಪ್ಪಿತಸ್ಥರ ವಿರುದ್ಧಕ್ರಮಕ್ಕೆ ಪ್ರಕಾಶ ರಾಠೋಡ ಆಗ್ರಹ


Team Udayavani, May 26, 2021, 4:39 PM IST

Untitled-1

ವಿಜಯಪುರ : ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗ್ರಾಮವೊಂದರಲ್ಲಿ ದಲಿತ ವರ್ಗದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಕುರಿತು ದಾಖಲಾಗಿರುವ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರರಾದ ಮೇಲ್ಮನೆ ಸದಸ್ಯ ಪ್ರಕಾಶ ರಾಠೋಡ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಪ್ರಕರಣದಲ್ಲಿ ಯುವಕನ ಹೆಸರನ್ನು ಬಾಲಕಿಯರ ಪೊಷಕರು ದಿ.:14-5-2021ರಂದು ನೀಡಿರುವ ದೂರು ದಾಖಲಿಸಿದ್ದಾರೆ. ಇಬ್ಬರು ಬಾಲಕಿಯವರು ಕಣ್ಮರೆಯಾಗಿ, ನಂತರ ಶವವಾಗಿ ಪತ್ತೆಯಾಗಿದ್ದಾರೆ.  ಸದರಿ ಕೃತ್ಯ ಮಯಾ೯ದೆ ಹತ್ಯೆ ಎಂದು ಮೇಲ್ನೊಟಕ್ಕೆ ಕಂಡುಬಂದಿದೆ. ಐದಾರು  ತಿಂಗಳಿಂದ ಬಾಲಕಿಯೊಬ್ಬಳ ಹಿಂದೆ ಬಿದ್ದಿದ್ದ ಆರೋಪಿಯೊಬ್ಬ ಪ್ರೀತಿಸುವಂತೆ ಪೀಡಿಸಿ, ಕಿರುಕುಳ ನೀಡಿರುವುದು ಕಂಡುಬಂದಿದೆ. ಪದೇ ಪದೇ ಈ ರೀತಿ ಘಟನೆ ನಡೆಯುತ್ತಿರುವುದರಿಂದ, ಸದರಿ ವಿಷಯವನ್ನು ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಮತ್ತು ಸದರಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಉಡುಪಿ : ಎಪಿಎಂಸಿ ಪ್ರಾಂಗಣದಲ್ಲಿ ಬುಧವಾರ ನಡೆಯುತ್ತಿದ್ದ ವಾರದ ಸಂತೆ ರದ್ದು

ಇದೇ ವಿಷಯವಾಗಿ ಬುಧವಾರ ಪೊಲೀಸ್  ಮಹಾನಿದೇ೯ಶಕ ಹಾಗೂ ಪೊಲೀಸ್ ಮಹಾನಿರೀಕ್ಷರನ್ನು ತಾವು ಕಾಂಗ್ರೆಸ್ ಮುಖಂಡರಾದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ಸೈಯದ್  ನಾಸೀರ್  ಹುಸೈನ್ ಅವರೊಂದಿಗೆ ಭೇಟಿಯಾಗಿ ದೂರು ನೀಡಿದ್ದಾಗಿ ಪ್ರಕಾಶ ರಾಠೋಡ ತಿಳಿಸಿದ್ದಾರೆ.

ಇದಲ್ಲದೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕೂಡ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಎಸ್ಪಿ ಅವರು ಭರವಸೆ ನೀಡಿದ್ದಾರೆ.

ಪೊಲೀಸ್ ಅಧೀಕ್ಷಕರು ಈ ಬಗ್ಗೆ ಸೂಕ್ತ ಕ್ರಮಕೈಗೊಂಡು, ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡುವುದಾಗಿಯೂ ಆಶ್ವಾಸನೆ ನೀಡಿದ್ದಾರೆ.

ಇದೇ ಸಂದಭ೯ದಲ್ಲಿ ಮೇಲ್ಮನೆ ಸದಸ್ಯ ಪ್ರಕಾಶ ರಾಠೋಡ  ವಿಜಯಪುರ ಜಿಲ್ಲೆಯ ಪೊಲೀಸ್  ಅಧೀಕ್ಷಕರೊಂದಿಗೆ ಮತ್ತು ಬಸವನ   ಬಾಗೇವಾಡಿಯ ಸಿಪಿಐ ಅವರೊಂದಿಗೆ‌ ಮಾತನಾಡಿದಾಗ ತಪ್ಪಿತಸ್ಥರ ವಿರುದ್ಧ ನಿಷ್ಪಕ್ಷಪಾತ ಕ್ರಮ ಕೈಗೊಂಡು ತಪ್ಪಿತಸ್ಥರ  ವಿರುದ್ಧ ದೌಜ೯ನ್ಯ ಕೃತ್ಯ ಕ್ರಮ ತೆಗೆದುಕೊಳ್ಳುವ ಆಶ್ವಾಸನೆ ನೀಡಿದ್ದಾಗಿ ಮೇಲ್ಮನೆ ಸದಸ್ಯ ಪ್ರಕಾಶ ರಾಠೋಡ  ತಿಳಿಸಿದ್ದಾರೆ ರುತ್ತಾರೆ.

ಟಾಪ್ ನ್ಯೂಸ್

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

rain

ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಸುಳ್ಯ: ಲೈಂಗಿಕ ದೌರ್ಜನ್ಯ;  ಯುವಕನ ಬಂಧನ

ಸುಳ್ಯ: ಲೈಂಗಿಕ ದೌರ್ಜನ್ಯ; ಯುವಕನ ಬಂಧನ

1-asdsad

ನಿರುದ್ಯೋಗದಿಂದ ಆತ್ಮಹತ್ಯೆ; ಆತ್ಮಾವಲೋಕನ ಮಾಡಿಕೊಳ್ಳಬೇಕು: ಡಿ.ಕೆ ಶಿವಕುಮಾರ್

ಹಿಜಾಬ್ ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್

ಹಿಜಾಬ್, ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

ಮಕ್ಕಳನ್ನು ಬರಮಾಡಿಕೊಳ್ಳಲು ಶಾಲೆಗಳು ಅಣಿ

5

ಜನಪರ ಚರ್ಚೆಗಳಿಂದ ಕಲಾಪ ದೂರ

4

ಜೀವನಶೈಲಿ ಸರಿದಾರಿಗೆ ತರುವ ಕೆಲಸವಾಗಲಿ

3

ಪಾಲಿಕೆಗೆ ಕಳಚಿತು ಜಾಹೀರಾತು ಬಾಕಿ ಉರುಳು

2

ಅಸತ್ಯ ಸತ್ಯವನ್ನು ಆಡಳಿತ ಮಾಡಲು ಹೊರಟಿದೆ: ಬೊಮ್ಮಾಯಿ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

ಮಧ್ಯಪ್ರದೇಶ: ಮಿಷನರಿ ಶಾಲೆಗಳ ಮೇಲೆ ನಿಗಾ

rain

ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ ಎಚ್ಚರಿಕೆ ; ರೆಡ್ ಅಲರ್ಟ್

1-asdadas

ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.