Udayavni Special

ವಿದ್ಯುತ್‌ ಮಿತ ಬಳಕೆಗೆ ಆದ್ಯತೆ ನೀಡಿ

•ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆ•ತಾಳ್ಮೆ ಕಳೆದುಕೊಳ್ಳದೆ ಸಿಬ್ಬಂದಿಗೆ ಸಹಕರಿಸಲು ಮನವಿ

Team Udayavani, Jul 27, 2019, 8:12 AM IST

hubali-tdy-3

ಹುಬ್ಬಳ್ಳಿ: ಅಂಚಟಗೇರಿಯಲ್ಲಿ ಹೆಸ್ಕಾಂ ಗ್ರಾಮೀಣ ವಿಭಾಗದಿಂದ ಆಯೋಜಿಸಿದ್ದ ಗ್ರಾಹಕರ ಜಾಗೃತಿ ಸಭೆಯನ್ನು ಗಣ್ಯರು ಉದ್ಘಾಟಿಸಿದರು.

ಹುಬ್ಬಳ್ಳಿ: ಪರಸ್ಪರ ಸಹಕಾರದಿಂದಲೇ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ ಎಂದು ಹೆಸ್ಕಾಂ ಗ್ರಾಮೀಣ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಕಿರಣಕುಮಾರ ಬಿ. ಹೇಳಿದರು.

ಅಂಚಟಗೇರಿಯಲ್ಲಿ ಹೆಸ್ಕಾಂ ಗ್ರಾಹಕರ ಜಾಗೃತಿ ಸಭೆಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ವಿದ್ಯುತ್‌ ಎಲ್ಲರಿಗೂ ಬೇಕು. ವಿದ್ಯುತ್‌ ಇಲ್ಲದೆ ಯಾವ ಕೆಲಸವೂ ಇಲ್ಲ ಎನ್ನುವ ಹಂತದಲ್ಲಿ ಇದ್ದೇವೆ. ವಿದ್ಯುತ್‌ ಮಿತಬಳಕೆ ಎಲ್ಲರ ಮೂಲ ಉದ್ದೇಶವಾಗಬೇಕು. ಮಳೆಗಾಲದಲ್ಲಿ ವಿದ್ಯುತ್‌ ಸಮಸ್ಯೆ ಆಗಬಾರದು, ವಿದ್ಯುತ್‌ ಅವಘಡಗಳು ಸಂಭವಿಸಬಾರದು ಎಂದು ಹೆಸ್ಕಾಂ ಸಿಬ್ಬಂದಿ ಹಗಲಿರುಳು ಸೇವೆಯಲ್ಲಿರುತ್ತಾರೆ. ಗ್ರಾಮದಲ್ಲಿ ಅಪಾಯಕಾರಿ ಸ್ಥಳಗಳಿದ್ದರೆ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತದೆ. ಇಲಾಖೆ ಕಣ್‌ತಪ್ಪಿನಿಂದ ಯಾವುದಾದರು ಸ್ಥಳ ಬಿಟ್ಟು ಹೋಗಿದ್ದರೆ ತಿಳಿಸಿದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಹೆಸ್ಕಾಂ ಗ್ರಾಹಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ 1912ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಅಲ್ಲಿ 24/7 ಕಾರ್ಯನಿರ್ವಹಣೆ ತಂಡ ಸದಾ ಸಿದ್ಧವಿರುತ್ತದೆ. ಮಳೆಗಾಲದಲ್ಲಿ ಲೈನ್‌ ಫಾಲ್rಗಳು ಕಂಡುಬಂದ ಸ್ಥಳಗಳನ್ನು ಗುರುತಿಸಿ ನಂತರ ಕೆಲಸ ಮಾಡಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳುವ ಗ್ರಾಹಕರು ಸಹಾಯವಾಣಿಗಳಿಗೆ ಸತತ ಕರೆ ಮಾಡಲು ಆರಂಭಿಸುತ್ತಾರೆ. ಇದರಿಂದ ಫಾಲ್r ಇರುವ ಲೈನ್‌ ಪರಿಶೀಲನೆ ನಡೆಸಲು ಸಿಬ್ಬಂದಿಗೆ ಸೂಚನೆ ನೀಡಲು ಅವಕಾಶ ನೀಡದಂತಹ ಸ್ಥಿತಿ ಅನುಭವಿಸುತ್ತೇವೆ. ಆದ್ದರಿಂದ ಗ್ರಾಹಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದರು.

ವಾಸುದೇವ ಮಾತನಾಡಿ, ಗ್ರಾಮದಲ್ಲಿ ಬರುವ ಕಾರವಾರ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡವಾಗಿ ವಿದ್ಯುತ್‌ ತಂತಿಗಳು ಇವೆ. ರಸ್ತೆಯ ಪಕ್ಕದಲ್ಲಿಯೇ ವಿದ್ಯುತ್‌ ಪರಿವರ್ತಕ(ಟಿಸಿ) ಇದ್ದು, ಅದನ್ನು ಸರಿಪಡಿಸಿ ಎಂದು ಮನವಿ ಮಾಡಿದರು.

ಅಂಚಟಗೇರಿ ಗ್ರಾಪಂ ಅಧ್ಯಕ್ಷ ಬಸವರಾಜ ಬಿಡ್ನಾಳ ಮಾತನಾಡಿದರು. ಗ್ರಾಮದ ಸರಕಾರಿ ಶಾಲೆ ವಿದ್ಯಾರ್ಥಿಗಳಾದ ಉಮಾ ಬಣಕಾರ, ಚೈತ್ರಾ ಕುದರಿ ವಿದ್ಯುತ್‌ ಬಳಕೆ ಕುರಿತು ಭಾಷಣ ಮಾಡಿದರು. ಗ್ರಾಪಂ ಉಪಾಧ್ಯಕ್ಷೆ ನೀಲಮ್ಮ ಗಾಣಿಗೇರ, ಭೀಮಣ್ಣ ವಾಲಿಕಾರ, ತಾಜುದ್ದೀನ್‌ ಬರದೂರ, ಅಮೀರಖಾನ್‌ ಚಂದನಮಟ್ಟಿ, ನೀಲಮ್ಮ ಮತ್ತಿಹಳ್ಳಿ, ಮಲ್ಲಪ್ಪ ಮೊರಬದ, ಬಸಮ್ಮ, ಮಂಜುಳಾ ಮೊದಲಾದವರಿದ್ದರು. ಸರಕಾರಿ ಶಾಲೆ ವಿದ್ಯಾರ್ಥಿಗಳಾದ ಯಶೋಧಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಹೆಸ್ಕಾಂ ಗ್ರಾಮೀಣ ವಿಭಾಗದ ಡಿ.ಜಿ. ಪಾಟೀಲ ನಿರೂಪಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

ಮಿತಿ ಮೀರಿದ ಮಿಡತೆ ಹಾವಳಿ ; ಏಳು ರಾಜ್ಯಗಳಿಗೆ ವ್ಯಾಪಿಸಿದ ಹಾನಿಕಾರಕ ಕೀಟಗಳು

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾದ, ಲಾಕ್‌ಡೌನ್‌ ನಾಲ್ಕನೇ ಚರಣ

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

ಕಾರ್ಮಿಕರಿಂದ ಶುಲ್ಕ ಕೇಳ್ಬೇಡಿ ; ಸುಪ್ರೀಂ ಮಧ್ಯಾಂತರ ಆದೇಶ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉದ್ಯೋಗ “ಖಾತ್ರಿ’ ನಿರೀಕ್ಷೆಯಲ್ಲಿ ಅನ್ನದಾತ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಉಡುಪಿ: ಶ್ರೀಕೃಷ್ಣ ದರ್ಶನ ಸದ್ಯಕ್ಕಿಲ್ಲ

ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ

ಪಂಚ ರಾಜ್ಯಗಳ ಮಾರ್ಗ ನಿರ್ಬಂಧ; ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಈ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪರೀಕ್ಷೆ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಪರೀಕ್ಷೆ

ಕೂಲಿ ಪಾವತಿಸುವ ಕಾರ್ಯ ತ್ವರಿತಗೊಳಿಸಿ : ಶೆಟ್ಟರ

ಕೂಲಿ ಪಾವತಿಸುವ ಕಾರ್ಯ ತ್ವರಿತಗೊಳಿಸಿ : ಶೆಟ್ಟರ

ಮಾವು ಬೆಳೆಗಾರರು-ಮಾರಾಟಗಾರರಿಗೆ ಕೋವಿಡ್ ಕಹಿ

ಮಾವು ಬೆಳೆಗಾರರು-ಮಾರಾಟಗಾರರಿಗೆ ಕೋವಿಡ್ ಕಹಿ

ಸ್ವಸಹಾಯ ಸಂಘಗಳು, ಬ್ಯಾಂಕಿನವರು ಸಾಲ ಕಟ್ಟುವಂತೆ ಪೀಡಿಸುವಂತಿಲ್ಲ: ಸಚಿವ ಶೆಟ್ಟರ್

ಸಾಲಗಾರರಿಗೆ ಸ್ವಸಹಾಯ ಸಂಘಗಳು, ಬ್ಯಾಂಕಿನವರು ಸಾಲ ಕಟ್ಟುವಂತೆ ಪೀಡಿಸುವಂತಿಲ್ಲ

ಶ್ರಮಿಕ ರೈಲುಗಳಲ್ಲಿ 2.33 ಲಕ್ಷ ಕಾರ್ಮಿಕರು ಪ್ರಯಾಣ

ಶ್ರಮಿಕ ರೈಲುಗಳಲ್ಲಿ 2.33 ಲಕ್ಷ ಕಾರ್ಮಿಕರು ಪ್ರಯಾಣ

MUST WATCH

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

ಹೊಸ ಸೇರ್ಪಡೆ

vidhanasabha-bsy

ವಿಧಾನಸಭಾಧ್ಯಕ್ಷರಿಗೆ ಪರಮೋಚ್ಛ ಅಧಿಕಾರವಿರಲಿ

ಮುದಗಲ್ಲ ಕ್ವಾರಿಗೂ ಕೋವಿಡ್ ಕಂಟಕ

ಮುದಗಲ್ಲ ಕ್ವಾರಿಗೂ ಕೋವಿಡ್ ಕಂಟಕ

psi-nemakaati

ಪಿಎಸ್‌ಐ ನೇಮಕಾತಿ 2 ವರ್ಷ ವಯೋಮಿತಿ ವಿನಾಯಿತಿ

ಬಾಂದಾರ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ

ಬಾಂದಾರ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ

keluvvarilla

ಕೇಳುವವರಿಲ್ಲ ಸೋಂಕಿತೆ ಕುಟುಂಬದವರ ಕಷ್ಟ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.