ಬಸ್ ನಿಲ್ದಾಣಕ್ಕೆ ನೂರೆಂಟು ವಿಘ್ನ

ನಾಲ್ಕು ವರ್ಷವಾದರೂ ಮುಗಿಯುತ್ತಲೇ ಇಲ್ಲ ಕಾಮಗಾರಿ

Team Udayavani, Sep 22, 2019, 9:03 AM IST

huballi-tdy-2

ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ ನೀರಿನ ಸೆಲೆ ಉಕ್ಕುತ್ತಿದೆ. ಎರಡನೇ ಹಂತದ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸ್ವತ್ಛತೆ ದೇವರಿಗೆ ಪ್ರೀತಿ…

ಒಟ್ಟಿನಲ್ಲಿ ಹೈಟೆಕ್‌ ಸ್ವರೂಪದಲ್ಲಿ ಜಿಲ್ಲೆಯ ಪ್ರಯಾಣಿಕರಿಗೆ ನೆರವಾಗಬೇಕಿದ್ದ ಧಾರವಾಡದ ನೂತನ ಬಸ್‌ ನಿಲ್ದಾಣಕ್ಕೆ ಬಾಲಗ್ರಹ ಹಿಡಿದುಕೊಂಡಿದೆ. ಪ್ರಾಯೋಗಿಕ ಸಾರಿಗೆ ಸಂಚಾರ ಆರಂಭಗೊಂಡು ಒಂದು ವರ್ಷ ಗತಿಸುತ್ತ ಬಂದರೂ ನಿಲ್ದಾಣದ ಅಧಿಕೃತ ಉದ್ಘಾಟನೆ ಆಗುವ ಲಕ್ಷಣ ಕಾಣುತ್ತಿಲ್ಲ. 2014ರಲ್ಲಿ ಹಳೇ ಬಸ್‌ ನಿಲ್ದಾಣ ತೆರವುಗೊಳಿಸಿದ ಬಳಿಕ 2015ರಲ್ಲಿ ನೂತನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕರೂ ಈವರೆಗೂ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಕ್ತಾಯ ಆಗುತ್ತಲೇ ಇಲ್ಲ.

ಬಿಆರ್‌ಟಿಎಸ್‌ ಯೋಜನೆಯಡಿ 17.9 ಕೋಟಿ ರೂ.ನಲ್ಲಿ ಹೊಸ ರೂಪ ಪಡೆದಿರುವ ಧಾರವಾಡದ ಹಳೇ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 2018 ನ. 27ರಿಂದ ಪ್ರಾಯೋಗಿಕ ಬಸ್‌ ಸಂಚಾರಕ್ಕೆ ಚಾಲನೆ ದೊರೆತಿತ್ತು. ಇದಾದ ಬಳಿಕ 2-3 ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಅಧಿಕೃತ ಉದ್ಘಾಟನೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಈಗ ಪ್ರಾಯೋಗಿಕ ಸಂಚಾರ ಆರಂಭಗೊಂಡು ವರ್ಷವೇ ಗತಿಸುತ್ತಿದ್ದು, ಉದ್ಘಾಟನೆ ಇನ್ನೆಷ್ಟು ದಿನ? ಪೂರ್ಣ ಪ್ರಮಾಣದಲ್ಲಿ ಸಂಚಾರ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

758 ಸಲ ಬಸ್‌ಗಳ ನಿರ್ಗಮನ:  ನಿಲ್ದಾಣದಲ್ಲಿ ಉಪನಗರ ಸಾರಿಗೆಗಳ ಅಂಕಣ ಹಾಗೂ ಸಾಮಾನ್ಯ ಸಾರಿಗೆಗಳ ಅಂಕಣ ಎಂಬ ವಿಭಾಗವಿದೆ. ಉಪನಗರ ಸಾರಿಗೆಯಲ್ಲಿ 8 ಅಂಕಣ ನಿರ್ಮಾಣ ಮಾಡಿದ್ದರೆ, ಸಾಮಾನ್ಯ ಸಾರಿಗೆಯಲ್ಲಿ 6 ಅಂಕಣ ರೂಪಿಸಲಾಗಿದೆ. ಈ ಎಲ್ಲ ಅಂಕಣಗಳಲ್ಲಿ ಪ್ರತಿನಿತ್ಯ 758 ಸಲ ಬಸ್‌ಗಳ ನಿರ್ಗಮನ ಆಗುತ್ತಲಿದ್ದು, ಉಪನಗರ ಸಾರಿಗೆಯಲ್ಲಿ 506 ಹಾಗೂ ಗ್ರಾಮಾಂತರ ಸಾರಿಗೆಯಲ್ಲಿ 252 ಸಲ ಬಸ್‌ಗಳ ನಿರ್ಗಮನ ಆಗುತ್ತಲಿದೆ.

ಉಸ್ತುವಾರಿ ಸಚಿವರೇ, ಉದ್ಘಾಟನೆ ಯಾವಾಗ?: 2018 ನ. 27ರಂದು ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ್ದ ಸಚಿವ ಜಗದೀಶ ಶೆಟ್ಟರ, ಎರಡೂವರೆ ತಿಂಗಳೊಳಗೆ ನಿಲ್ದಾಣದ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಕೇಂದ್ರ ಸಚಿವರನ್ನು ಕರೆತಂದು ಅಧಿಕೃತವಾಗಿ ಉದ್ಘಾಟಿಸುವುದಾಗಿ ಹೇಳಿದ್ದರು. ಶಾಸಕ ಅರವಿಂದ ಬೆಲ್ಲದ ಅವರು ಸಹ 2-3 ತಿಂಗಳೊಳಗೆ ಸುಸಜ್ಜಿತ ನಿಲ್ದಾಣ ಸಾರ್ವಜನಿಕರಿಗೆ ಮುಕ್ತಗೊಳಿಸುವುದಾಗಿ ಹೇಳಿದ್ದರು. ಆದರೆ, ಇದನ್ನು ಹೇಳಿ ವರ್ಷ ಗತಿಸಲು ಬಂದರೂ ನಿಲ್ದಾಣ ಮಾತ್ರ ಉದ್ಘಾಟನೆ ಆಗಿಲ್ಲ. ಸದ್ಯ ಜಗದೀಶ ಶೆಟ್ಟರ ಅವರೇ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದು, ಆಸಕ್ತಿವಹಿಸಿ ನಿಲ್ದಾಣ ಉದ್ಘಾಟನೆಗೊಳ್ಳುವಂತೆ ಮಾಡಬೇಕಿದೆ.

ನಿಲ್ದಾಣದ ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನೂ ಸ್ವಲ್ಪ ಹೆಚ್ಚುವರಿ ಕೆಲಸಕ್ಕಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಇನ್ನೊಂದು ತಿಂಗಳೊಳಗೆ ಆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಳಿಕ ನಿಲ್ದಾಣದ ಅಧಿಕೃತ ಉದ್ಘಾಟನೆಯು ಬಿಆರ್‌ಟಿಎಸ್‌ ಯೋಜನೆಯ ಜೊತೆಗೆ ಆಗಲಿದೆ.-ಬಸವರಾಜ ಕೇರಿ, ಡಿಜಿಎಂ, ಬಿಆರ್‌ಟಿಎಸ್‌

ನೀರು ಸಂಗ್ರಹ ಕಾಟ: ಉದ್ಘಾಟನೆಗೂ ಮುನ್ನವೇ ನಿಲ್ದಾಣದ ತಳಮಹಡಿ ಪಾರ್ಕಿಂಗ್‌ನಲ್ಲಿ ನೀರು ಸಂಗ್ರಹ ಸಮಸ್ಯೆ ಎದುರಾಗಿದೆ. ಪಾರ್ಕಿಂಗ್‌ ಜಾಗದ ಕೆಳಗಡೆ ಬಾವಿಯ ಜಲಮೂಲ ಇದೆ ಎನ್ನಲಾಗುತ್ತಿದ್ದು, ಸಂಗ್ರಹಗೊಂಡ ನೀರನ್ನು ಹೊರಹಾಕುವ ಕೆಲಸ ಆಗುತ್ತಿದೆಯೇ ವಿನಃ ಸಮಸ್ಯೆ ನಿವಾರಣೆಯಾಗಿಲ್ಲ. ನೀರು ಸಂಗ್ರಹ ಸಮಸ್ಯೆ ನಿವಾರಣೆ ಹಾಗೂ ಶೌಚಾಲಯದ ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸಲು ಹೆಚ್ಚುವರಿ ಕೆಲಸ ಕೈಗೊಳ್ಳಬೇಕಾಗಿದೆ.

.ಶಶಿಧರ್‌ ಬುದ್ನಿ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Hubli; ಜೋಶಿ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಸ್ವಾಮೀಜಿ ಮುಂದಾಗಬಾರದು: ಯಡಿಯೂರಪ್ಪ

Hubli; ಜೋಶಿ ವಿರುದ್ಧ ಸ್ಪರ್ಧಿಸುವ ದುಸ್ಸಾಹಸಕ್ಕೆ ಸ್ವಾಮೀಜಿ ಮುಂದಾಗಬಾರದು: ಯಡಿಯೂರಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.