ರಾಹುಲ್‌ ಗಾಂಧಿಗೆ ಬುದ್ಧಿ ಕಡಿಮೆ: ಜೋಶಿ

Team Udayavani, Apr 11, 2019, 10:19 AM IST

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷದ ಪ್ರಧಾನಿ ಆಕಾಂಕ್ಷಿಯಾಗಿರುವ ರಾಹುಲ್‌ ಗಾಂಧಿಯವರಿಗೆ ಬುದ್ಧಿ ಕಡಿಮೆಯಿದ್ದು, ಇನ್ನೂ ಪ್ರಬುದ್ಧರಾಗಬೇಕಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು.
ಕಲಘಟಗಿ ಹಾಗೂ ತಾಲೂಕಿನ ಆಲದಕಟ್ಟಿ ಗ್ರಾಮ ಸೇರಿದಂತೆ ವಿವಿಧೆಡೆ ಚುನಾವಣೆ ಪ್ರಚಾರ ನಡೆಸಿದ ಅವರು,
ರಾಹುಲ್‌ ಗಾಂಧಿಯವರು ಮತ್ತೂಬ್ಬರು ಬರೆದಿದ್ದನ್ನು ಓದುವುದು ಬಿಟ್ಟಿಲ್ಲ. ಅವರಿನ್ನೂ ಪ್ರಬುದ್ಧರಾಗಿಲ್ಲ. ಆದರೆ
ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರೇ ಮತ್ತೂಮ್ಮೆ ಪ್ರಧಾನಿಯಾಗಬೇಕು.
ಇದನ್ನು ಕಾಂಗ್ರೆಸ್ಸಿಗರೇ ಒಪ್ಪಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್‌ನವರಿಗೆ ಈ ದೇಶದ ರಕ್ಷಣೆ ಬೇಕಿಲ್ಲ. ಅವರಿಗೆ ಮುಖ್ಯವಾಗಿರುವುದು ಓಟ್‌ ಬ್ಯಾಂಕ್‌ ಮಾತ್ರ. ಕಾಂಗ್ರೆಸ್ಸಿನ
ಪ್ರಣಾಳಿಕೆ ಸಂಪೂರ್ಣ ಪಾಕ್‌ ಪರವಾಗಿದೆ. ಮತಕ್ಕಾಗಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾರೆ. ಆದರೆ ಈಗ
ಅಲ್ಪಸಂಖ್ಯಾತರು  ಪ್ರಜ್ಞಾವಂತರಾಗಿದ್ದಾರೆ ಎಂದು ಹೇಳಿದರು.
ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಅವರು ಪ್ರಧಾನಿಯಾಗಬೇಕಾದರೆ ಜೋಶಿ ಅವರಿಗೆ ಮತ ನೀಡಬೇಕು ಎಂದರು.
 ಮುಖಂಡರಾದ ನಿಂಗಪ್ಪ ಸುತಗಟ್ಟಿ, ಸುನಿತಾ ಮೇಲಿನಮನಿ, ಸದಾನಂದ ಚಿಂತಾಮಣಿ, ಸಿಬಿ ಹೊನ್ನಿಹಳ್ಳಿ
ಸಾಯಿ ಯಲ್ಲಾಪುರ, ಶಿವಲಿಂಗಣ್ಣ ಚಿಕ್ಕಣ್ಣವರ, ಶಂಕ್ರಯ್ಯ ಪೂಜಾರ, ಕಲ್ಲಪ್ಪ ನೀಲಕಂಠಗೌಡ ಪಾಟೀಲ, ಐ.ಸಿ. ಗೋಕುಲ, ನರೇಶ್‌ ಮಲಾ°ಡ್‌ ಇನ್ನಿತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ