ರೈಲ್ವೆ ಸೇವೆ ಖಾಸಗಿ ಪಾಲಾಗುವ ಅಪಾಯ

Team Udayavani, Nov 16, 2019, 11:02 AM IST

ಹುಬ್ಬಳ್ಳಿ: ರೈಲ್ವೆ ಸೇವೆಯನ್ನು ಖಾಸಗೀಕರಣಗೊಳಿಸಿರುವ ಕೇಂದ್ರ ಸರಕಾರದ ನಿರ್ಣಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಇಡೀ ರೈಲ್ವೆ ಸೇವೆ ಖಾಸಗಿಯವರ ಪಾಲಾಗುವುದರಲ್ಲಿ ಎರಡು ಮಾತಿಲ್ಲ ಎಂದು ಅಖೀಲ ಭಾರತ ರೈಲ್ವೆ ಕಾರ್ಮಿಕ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ ಮಿಶ್ರಾ ಹೇಳಿದರು.

ಗದಗ ರಸ್ತೆಯ ನೈಋತ್ಯ ರೈಲ್ವೆ ಮಜ್ದೂರ್‌ ಸಂಘದ 15ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹಿಂದೆ ಹೊಸ ಪಿಂಚಣಿ ಯೋಜನೆ ವಿರುದ್ಧ ಎಚ್ಚೆತ್ತುಕೊಳ್ಳದ ಕಾರಣ ಇಂದು ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಆರಂಭದಲ್ಲಿ ಇದರ ತೀವ್ರತೆ ಅರಿಯದಿದ್ದರೂ ದೀರ್ಘಾವಧಿಯಲ್ಲಿ ಇದರ ಕೆಟ್ಟ ಪರಿಣಾಮ ಊಹಿಸಲು ಸಾಧ್ಯವಿಲ್ಲ. ಇದೀಗ ರೈಲ್ವೆ ಸೇವೆಯನ್ನು ಖಾಸಗಿಯವರಿಗೆ ವಹಿಸುತ್ತಿರುವುದು ಕೂಡ ಮುಂದೊಂದು ದಿನ ದೊಡ್ಡ ಪ್ರಮಾಣದ ಸಂಕಷ್ಟ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಕಾರ್ಮಿಕರು ಈ ಬಗ್ಗೆ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಟಕ್ಕೆ ಸಿದ್ಧರಾಗಬೇಕು ಎಂದರು.

ಆರಂಭದಲ್ಲಿ 150 ರೈಲುಗಳು, 50 ನಿಲ್ದಾಣಗಳನ್ನು ಖಾಸಗಿಯವರಿಗೆ ನೀಡಲಾಗಿದೆ. ಖಾಸಗಿಯವರಿಗೆ ನೀಡಿದ ರೈಲುಗಳು ಲಾಭದಲ್ಲಿ ನಡೆಯುತ್ತಿವೆ ಎಂದು ಜನರನ್ನು ನಂಬಿಸುವ ಕೆಲಸ ಸರಕಾರದಿಂದ ನಡೆಯುತ್ತಿದೆ. ವಾಸ್ತವಾಂಶ ಹಾಗೂ ಸರಕಾರದ ಹಿಂದಿನ ಉದ್ದೇಶಗಳನ್ನು ಜನರಿಗೆ ಹಾಗೂ ಕಾರ್ಮಿಕರಿಗೆ ತಿಳಿಸುವ ಕೆಲಸ ಆಗಬೇಕು. ಜನರ ತೆರಿಗೆ ಹಣ ಸೇವೆಯ ಹೆಸರಲ್ಲಿ ಖಾಸಗಿಯವರ ಪಾಲಾಗಲಿದೆ. ಕಾರ್ಮಿಕ ಒಕ್ಕೂಟದ ಅನಿಸಿಕೆಗಳನ್ನು ಧಿಕ್ಕರಿಸಿ ರೈಲ್ವೆ ಆಡಳಿತ ಮಂಡಳಿ ಹಾಗೂ ಕೇಂದ್ರ ಸರಕಾರ ಇಂತಹ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಜನ ವಿರೋಧಿಯಾಗಿದೆ ಎಂದು ಹೇಳಿದರು.

ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಮಾತನಾಡಿ, ರೈಲ್ವೆ ಸೇವೆಯಲ್ಲಿ ಪ್ರಮುಖವಾಗಿ ಸುರಕ್ಷತೆಗೆ ಮೊದಲ ಒತ್ತು ನೀಡಲಾಗುತ್ತಿದೆ. ಅಧಿಕಾರ ಸ್ವೀಕರಿಸಿದ ನಂತರ ಹಲವು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಕಾರ್ಯಗಳಿಗೆ ಇಲ್ಲಿನ ಸಂಘಟನೆ ಸಹಕಾರ ನೀಡುತ್ತಿದೆ ಎಂದರು.

ಕಾರ್ಯಾಗಾರದಿಂದ ಸಂಘದ ಕಚೇರಿವರೆಗೂ ಮೆರವಣಿಗೆ ನಡೆಯಿತು. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗದಿಂದ ಆಗಮಿಸಿದ್ದ ನೌಕರರು ಪಾಲ್ಗೊಂಡಿದ್ದರು. ನೈಋತ್ಯ ರೈಲ್ವೆ ವಲಯ ಮಜ್ದೂರ್‌ ಸಂಘದ ಅಧ್ಯಕ್ಷ ಆರ್‌.ಆರ್‌. ನಾಯಕ, ಖಜಾಂಚಿ ವಿ.ಬಿ. ಚಾರಖಾನಿ, ಆಲ್ಬರ್ಟ್‌ ಡಿಕ್ರೂಜ್‌ ಇನ್ನಿತರರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ