ಜನ್ಮದಿನದಂದೇ ನೇತ್ರದಾನಕ್ಕೆ ಶಾಸಕರ ನೋಂದಣಿ


Team Udayavani, Nov 17, 2021, 1:03 PM IST

ಜನ್ಮದಿನದಂದೇ ನೇತ್ರದಾನಕ್ಕೆ ಶಾಸಕರ ನೋಂದಣಿ

ಧಾರವಾಡ: ಶಾಸಕ ಅಮೃತ ದೇಸಾಯಿ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಹಾಗೂ ಗೆಳೆಯರ ಬಳಗದಿಂದ ತಾಲೂಕಿನ ನರೇಂದ್ರ ಗ್ರಾಮದ ಬಳಿಯ ಶ್ರೀ ಸಾಯಿ ಕೆ.ಬಿ.ಎನ್‌. ಕಲ್ಯಾಣ ಮಂಟಪದಲ್ಲಿ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಶಿಬಿರವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಪುನೀತ್‌ರಾಜಕುಮಾರ್‌ ನೇತ್ರದಾನದಿಂದ ಪ್ರೇರಣೆ ಪಡೆದಿರುವ ಶಾಸಕ ಅಮೃತ ದೇಸಾಯಿ ಅವರು, ತಮ್ಮ ಪತ್ನಿ ಸಮೇತ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸಿದರು.

ನಟ ಪುನೀತ್‌ ರಾಜಕುಮಾರ್‌ ನಿಧನದ ಬಳಿಕವೂ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ. ನಾವು ಮಾಡುವ ನೇತ್ರದಾನದಿಂದ ಬೇರೆಯವರು ಕೂಡ ದೃಷ್ಟಿ ಪಡೆಯಲಿದ್ದಾರೆ. ಈ ಕಾರಣದಿಂದ ನೇತ್ರದಾನ ಮಾಡುತ್ತಿರುವುದಾಗಿ ಶಾಸಕ ಅಮೃತ ದೇಸಾಯಿ ಹೇಳಿದರು. ಇದಾದ ಬಳಿಕ ಶಿಬಿರದಲ್ಲಿ 210 ಜನರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರೆ, 71 ಜನ ರಕ್ತದಾನ ಮಾಡಿದರು.

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿ, ಚುನಾಯಿತ ಪ್ರತಿನಿ ಧಿಗಳು ನಿರಂತರ ಜನರ ಮಧ್ಯದಲ್ಲಿದ್ದು ಕೆಲಸ ನಿರ್ವಹಿಸಿದಾಗಲೇ ಹೆಚ್ಚಿನ ಗೌರವ ಸಿಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣವನ್ನು ಜನಪ್ರತಿನಿ ಧಿಗಳು ಬೆಳೆಸಿಕೊಳ್ಳಬೇಕು. ಆಗ ಜನರಿಂದ ಮನ್ನಣೆ ಮತ್ತು ಸೂಕ್ತ ಬೆಂಬಲ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಅಮೃತ ದೇಸಾಯಿ ಅವರು ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸಗಳು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಾನುರಾಗಿಯಾಗಿದ್ದಾರೆ ಎಂದರು.

ಅಮೃತ ದೇಸಾಯಿ ಗೆಳೆಯರ ಬಳಗದ ಅಧ್ಯಕ್ಷ ರುದ್ರಪ್ಪ ಅರಿವಾಳ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಸ್‌. ಆರ್‌. ರಾಮನಗೌಡರ ಮತ್ತು ಡಾ| ವಿ.ಎಂ. ದೇಶಪಾಂಡೆ ಅವರನ್ನು ಸತ್ಕರಿಸಲಾಯಿತು. ಮಾಜಿ ಶಾಸಕ ಎ.ಬಿ. ದೇಸಾಯಿ, ಅಶೋಕ್‌ ದೇಸಾಯಿ, ಪ್ರಿಯಾ ದೇಸಾಯಿ, ಕೆಎಂಎಫ್‌ ಅಧ್ಯಕ್ಷ ಶಂಕರ ಮುಗದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಜಿಪಂ ಸದಸ್ಯರಾದ ತವನಪ್ಪ ಅಷ್ಟಗಿ, ಪ್ರೇಮಾ ಕೊಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ಚೆನವೀರಗೌಡ ಪಾಟೀಲ, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ, ಶಂಕರ ಶೇಳಕೆ, ಗಣ್ಯರಾದ ಶಶಿಮೌಳಿ ಕುಲಕರ್ಣಿ, ನಾಗರಾಜ ಗಾಣಿಗೇರ, ಶಿವಾನಂದ ದೇಶನೂರ, ಅಡಿವೆಪ್ಪ ಹೊನ್ನಪ್ಪನವರ, ಕಲ್ಲಪ್ಪ ಹಟ್ಡಿ, ಎಚ್‌.ಡಿ. ಪಾಟೀಲ, ಸಂಭಾಜಿ ಜಾಧವ ಇದ್ದರು. ರಾಷ್ಟೋತ್ಥಾನ ರಕ್ತ ನಿ ಧಿಯವರು ರಕ್ತದಾನ ಮತ್ತು ಡಾ| ಎಂ.ಎಂ. ಜೋಶಿ ನೇತ್ರ ಸಂಶೋಧನಾ ಟ್ರಸ್ಟ್‌ನ ಸಿಬ್ಬಂದಿ ನೇತ್ರದಾನ ನಡೆಸಿಕೊಟ್ಟರು.

ಜಿಲ್ಲಾ ಕೆಡಿಪಿ ಸದಸ್ಯ ನಾಗನಗೌಡ ಪಾಟೀಲ ಸ್ವಾಗತಿಸಿದರು. ಗ್ರಾಮೀಣ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೊಮಾರ ದೇಸಾಯಿ ನಿರೂಪಿಸಿದರು. ಸುನೀಲ ಮೋರೆ ವಂದಿಸಿದರು.

ಟಾಪ್ ನ್ಯೂಸ್

India Maharajas lost match against World Giants in legends league

ಬ್ರೆಟ್ ಲಿ ಯಾರ್ಕರ್ ಗೆ ಮಣಿದ ಮಹಾರಾಜರು ಕೂಟದಿಂದ ಔಟ್; ನಮನ್-ಪಠಾಣ್ ಹೋರಾಟ ವ್ಯರ್ಥ; ವಿಡಿಯೋ

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

ಕಿಮ್ಸ್‌ ರಾಜ್ಯದ ಅತಿ ದೊಡ್ಡ ಆಸ್ಪತ್ರೆ: ಶಶಿಧರ ಮಾಡ್ಯಾಳ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

ವಾರ್ಡ್‌ಗಳ ಸ್ವಚ್ಛತೆಗೆ ಒತ್ತು ನೀಡಿ: ಶಾಸಕ ಅಬ್ಬಯ್ಯ

ಪಠ್ಯದೊಂದಿಗೆ ನೀತಿ ಪಾಠ ಬೋಧಿಸಿ: ಮನ್ನಿಕೇರಿ

ಪಠ್ಯದೊಂದಿಗೆ ನೀತಿ ಪಾಠ ಬೋಧಿಸಿ: ಮನ್ನಿಕೇರಿ

ರಾಜಕೀಯ ಲಾಭಕ್ಕಾಗಿ ನೇತಾಜಿ ಹೆಸರು ಬಳಕೆ: ಆಲ್ದಳ್ಳಿ

ರಾಜಕೀಯ ಲಾಭಕ್ಕಾಗಿ ನೇತಾಜಿ ಹೆಸರು ಬಳಕೆ: ಆಲ್ದಳ್ಳಿ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

India Maharajas lost match against World Giants in legends league

ಬ್ರೆಟ್ ಲಿ ಯಾರ್ಕರ್ ಗೆ ಮಣಿದ ಮಹಾರಾಜರು ಕೂಟದಿಂದ ಔಟ್; ನಮನ್-ಪಠಾಣ್ ಹೋರಾಟ ವ್ಯರ್ಥ; ವಿಡಿಯೋ

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.