ಸ್ಲಂಗಳ ನೋಂದಣಿ ಪತ್ರ ನೀಡಲು ಆಗ್ರಹ

Team Udayavani, Jun 20, 2019, 9:25 AM IST

ಧಾರವಾಡ: ಡಿಸಿ ಕಚೇರಿ ಎದುರು ಸ್ಲಂ ಜನಾಂದೋಲನ ಕರ್ನಾಟಕ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಅವಳಿ ನಗರದಲ್ಲಿ ಇರುವ ಸ್ಲಂಗಳ ಮನೆಗಳನ್ನು ಅಘೋಷಿತ ಸ್ಲಂಗಳೆಂದು ಘೋಷಿಸಿ ನೋಂದಣಿ ಪತ್ರ ನೀಡುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ಕರ್ನಾಟಕ ಕೊಳಗೇರಿ ನಿವಾಸಿಗಳ ಹಿತಾಭಿವೃದ್ಧಿ ಸಂಘದಿಂದ ನಗರದ ಡಿಸಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಸ್ಲಂಗಳ ನಿವಾಸಿಗಳಿಗೆ ನೋಂದಣಿ ಪತ್ರ ನೀಡುವುದರ ಜೊತೆಗೆ ಸ್ಲಂನಲ್ಲಿ ವಾಸಿಸುವ ಮನೆಗಳನ್ನು ತೆರವು ಮಾಡುತ್ತಿರುವ ಕಾರ್ಯಚರಣೆ ತಡೆ ಹಿಡಿಯಬೇಕು. ಆಹಾರ ಪಡಿತರಕ್ಕೆ ಬಯೋಮೆಟ್ರಿಕ್‌ ಬೆರಳಚ್ಚು ನೀಡುವುದನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಲಾಯಿತು.

ರಸೂಲ ಎಂ.ನದಾಫ್‌, ವಿನೋದ ಗೌಳಿ, ಅಶೋಕ ಭಂಡಾರಿ, ಮಾರುತಿ ಶಿರೊಳದವರ, ಎಸ್‌.ಆರ್‌.ಬಡಿಗೇರ, ಸತೀಶ ಇಲಕಲ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ