ಕೇಂದ್ರ ಸರ್ಕಾರದ ವಿರುದ್ಧ ಆರ್‌ಕೆಎಸ್‌ನಿಂದ ಪ್ರತಿಭಟನೆ

Team Udayavani, Oct 23, 2019, 8:16 AM IST

ಧಾರವಾಡ: ಕೇಂದ್ರ ಸರಕಾರವು ಆರ್‌ ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಂತೆ ಆಗ್ರಹಿಸಿ ಆರ್‌ಕೆಎಸ್‌ ಜಿಲ್ಲಾ ಸಮಿತಿ ವತಿಯಿಂದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಭಾರತದ ರೈತರಿಗೆ ಮರಣಶಾಸನವಾದ ಆರ್‌ಸಿಇಪಿ ಒಪ್ಪಂದದಿಂದ ಹೊರಬಂದು ಹಾಲು ಉತ್ಪನ್ನಗಳ ಮುಕ್ತ ವ್ಯಾಪಾರ ಒಪ್ಪಂದ ತಿರಸ್ಕರಿಸಬೇಕು. ಇದರೊಂದಿಗೆ ಹಾಲು ಉತ್ಪಾದಕರಿಗೆ ಹೆಚ್ಚಿನ ಸಬ್ಸಿಡಿ ನೀಡಿ ದೇಶದಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಲಾಯಿತು. ಆರ್‌ಕೆಎಸ್‌ ರಾಜ್ಯ ಖಜಾಂಚಿ ವಿ. ನಾಗಮ್ಮಾಳ್‌ ಮಾತನಾಡಿ, ಕೃಷಿ ಉತ್ಪನ್ನಗಳನ್ನೂ ಒಳಗೊಂಡಿರುವಂತಹ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ-ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಅಂಕಿತ ಹಾಕಲು ಮುಂದಾಗಿದೆ. ಕೃಷಿ-ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ರೈತ-ಕೃಷಿಕಾರ್ಮಿಕರ ಪಾಲಿಗೆ ಈ ಒಪ್ಪಂದವು ಮರಣ ಶಾಸನವಾಗಲಿದೆ.

ಈ ಒಪ್ಪಂದ ಜಾರಿಯಾದರೆ ವಿದೇಶಿ ಕೃಷಿ ಹಾಗೂ ಡೈರಿ ಉತ್ಪನ್ನಗಳು ದೇಶದ ಮಾರುಕಟ್ಟೆಗೆ ಮುಕ್ತವಾಗಿ ಲಗ್ಗೆ ಹಾಕಲಿವೆ. ಇದರಿಂದ ನಮ್ಮ ದೇಶದ ಕೃಷಿ ಮಾರುಕಟ್ಟೆಯಲ್ಲಿ ನಮ್ಮರೈತರ ಉತ್ಪನ್ನಗಳ ಮಾರಾಟಕ್ಕೆ ಹೊಡೆತ ಬೀಳಲಿದೆ ಎಂದು ಆರೋಪಿಸಿದರು.

ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಿ ಪಶುಸಂಗೋಪನಾ ಇಲಾಖೆಯನ್ನು ಬಲಪಡಿಸಬೇಕು. ಈ ಮೂಲಕ ಹಾಲು ಒತ್ಪಾದಕರಿಗೆ ಹೆಚ್ಚಿನ ಸಬ್ಸಿಡಿ ನೀಡಿ ದೇಶದಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಲಕ್ಷ್ಮಣ ಜಡಗನ್ನವರ, ಶರಣು ಗೋನವಾರ, ಅಲ್ಲಾವುದ್ದಿನ್‌ ಅಡ್ಲಿ, ಎ.ಎಫ್‌.ಪುರದನ್ನವರ, ಐ.ಬಿ. ನಾಡಿಗೇರ, ಪಿ.ಜಿ. ಕುಲಕರ್ಣಿ ಇನ್ನಿತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಂದಾಗುತ್ತಿದ್ದಂತೆ ಆಂತರಿಕ ಭದ್ರತಾ ಪಡೆ (ಐಎಸ್‌ಡಿ) ಹಾಗೂ ಪೊಲೀಸ್‌ ಇಲಾಖೆಯಿಂದ ಹು-ಧಾ ಅವಳಿ ನಗರ...

  • ಕಲಘಟಗಿ: ಈಚೆಗೆ ಪಟ್ಟಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ತಾಲೂಕಿನ ಸುಮಾರು 800 ಜನ ನಿರುದ್ಯೋಗಿ ವಿದ್ಯಾವಂತರು ಉದ್ಯೋಗಕ್ಕೆ ಭಾಜನ ರಾಗಿದ್ದಾರೆ. ಅದೇ ರೀತಿ ತಾಲೂಕಿನ...

  • ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಕಿಶನ್‌ಗಡ ಹಾಗೂ ಶಿರಡಿಗೆ ವಿಮಾನಯಾನ ಸೇವೆ ಆರಂಭಿಸಬೇಕೆಂದು ಕೋರಿ ಆಲ್‌ ಇಂಡಿಯಾ ಜೈನ್‌ ಯುತ್‌ ಫೆಡರೇಶನ್‌ ವತಿಯಿಂದ ಸಂಸದೀಯ...

  • ಹುಬ್ಬಳ್ಳಿ: ನೆರೆಯಿಂದ ಹಾನಿಗೊಳಗಾದ ಇಲ್ಲಿನ ಸಿದ್ದಲಿಂಗೇಶ್ವರ ಕಾಲೋನಿಯ ಪ್ರಮುಖ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗಿದ್ದು, ಜನರು ನಿತ್ಯ ಓಡಾಡಲು ಸಂಕಷ್ಟ...

  • ಹುಬ್ಬಳ್ಳಿ: ಕಟ್ಟಡ ಶಿಥಿಲಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ವಿಜಯ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ಒನ್‌ (ಹು-ಧಾ ಒನ್‌) ನಾಗರಿಕ ಸೇವಾ ಕೇಂದ್ರ...

ಹೊಸ ಸೇರ್ಪಡೆ