ಕೋವಿಡ್ ವಿರುದ್ಧ ಸಮರಕ್ಕೆ ಸಂಘ ಶಕ್ತಿ
ಆರೆಸ್ಸೆಸ್‌ನಿಂದ ಕೇರ್ ಸೆಂಟರ್, ರಕ್ತ-ಪ್ಲಾಸ್ಮಾ ದಾನ ಶಿಬಿರಮನೆ -ಮನೆಗೆ ತೆರಳಿ ಧೈರ್ಯ ತುಂಬುವ ಕಾರ್ಯ
Team Udayavani, May 19, 2021, 1:50 PM IST
ವರದಿ: ಅಮರೇಗೌಡ ಗೋನವಾರ
ಹುಬ್ಬಳ್ಳಿ: ಕೋವಿಡ್ ಸಂಕಷ್ಟದಲ್ಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜನರ ನೆರವಿಗೆ ಧಾವಿಸಿದೆ. ಕೋವಿಡ್ ಕೇರ್ ಸೆಂಟರ್, ರಕ್ತ-ಪ್ಲಾಸ್ಮಾ ದಾನ ಶಿಬಿರ, ಆಹಾರಧಾನ್ಯ-ಊಟ ವಿತರಣೆ ಮೂಲಕ ಸಾರ್ಥಕ ಸೇವೆಯಲ್ಲಿ ತೊಡಗಿದೆ.
ಸೇವಾಭಾರತಿ ಟ್ರಸ್ಟ್, ಆರೋಗ್ಯ ಭಾರತಿ, ರಾಷ್ಟ್ರೀಯ ಸೇವಿಕಾ ಸಮಿತಿ ಹಾಗೂ ಸ್ವಯಂ ಸೇವಕರ ಪಡೆಯೊಂದಿಗೆ ಉತ್ತರ ಕರ್ನಾಟಕದ ನಗರ, ಪಟ್ಟಣ, ಹಳ್ಳಿ ಎನ್ನದೆ ಮನೆ -ಮನೆಗೆ ಜಾಗೃತಿ, ಪರಿಹಾರ, ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದೆ. ಸೋಂಕಿತರು, ರೋಗಲಕ್ಷಣ ಇರುವವರ ಆರೈಕೆಯಲ್ಲಿ ತೊಡಗಿದೆ. ಕೋವಿಡ್ ಎರಡನೇ ಅಲೆ ಎಲ್ಲರ ನಿರೀಕ್ಷೆ ಮೀರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ-ಐಸೋಲೇಷನ್‌ಗೆ ಉತ್ತರ ಕರ್ನಾಟಕದ ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಬೀದರ, ಸೇಡಂ, ಬಳ್ಳಾರಿ, ರಾಯಚೂರು, ಬೆಳಗಾವಿ ಸೇರಿದಂತೆ ಒಟ್ಟು 10 ಕೇಂದ್ರಗಳನ್ನು ಆರಂಭಿಸಿದೆ.
ಹುಬ್ಬಳ್ಳಿಯಲ್ಲಿ 80, ಬೆಳಗಾವಿಯಲ್ಲಿ 50 ಜನ, ವಿಜಯಪುರದಲ್ಲಿ 50, ಕಲಬುರಗಿಯಲ್ಲಿ 50 ಹಾಗೂ ಬೀದರನಲ್ಲಿ 50, ಸೇಡಂನಲ್ಲಿ 50 ಜನ, ಬಳ್ಳಾರಿಯಲ್ಲಿ 50 ಹಾಗೂ ರಾಯಚೂರಿನಲ್ಲಿ 60 ಜನ ಸಾಮರ್ಥ್ಯದ ಕೇಂದ್ರ ತೆರೆಯಲಾಗಿದೆ. ಬೆಳಗಾವಿಯಲ್ಲಿ 30 ಜನ ಸಾಮರ್ಥ್ಯದ ಐಸೋಲೇಷನ್ ಕೇಂದ್ರ ಮತ್ತು ಸವದತ್ತಿಯಲ್ಲಿ 50 ಜನ ಸಾಮರ್ಥ್ಯದ ಕೋವಿಡ್ ಕೇರ್ ಕೇಂದ್ರ ಆರಂಭಿಸಲಾಗಿದೆ.
ಸಹಾಯವಾಣಿ-ವಿವಿಧ ನೆರವು: ಕೋವಿಡ್ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಆರ್‌ಎಸ್ ಎಸ್ ಪ್ರೇರಿತ ಸೇವಾಭಾರತಿ ಟ್ರಸ್ಟ್‌ನಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಮಾಹಿತಿ ಕೇಂದ್ರ ಆರಂಭಿಸಲಾಗಿದೆ. ಸೋಂಕಿತರು, ರೋಗಲಕ್ಷಣ ಉಳ್ಳವರಿಗೆ ವೈದ್ಯರ ನೆರವು, ಆಸ್ಪತ್ರೆ ಸೇರಿ ಇತ್ಯಾದಿ ಮಾಹಿತಿ ನೀಡುವ ಕಾರ್ಯ ಮಾಡಲಾಗುತ್ತಿದೆ. ಸಹಾಯವಾಣಿ ಆರಂಭಿಸಿದ್ದು, ಬರುವ ಕರೆಗಳಿಗೆ ಮಾಹಿತಿ ನೀಡುವ, ನೋವಿಗೆ ಸ್ಪಂದಿಸುವ, ನೆರವಿಗೆ ಧಾವಿಸುವ ಕೆಲಸದಲ್ಲಿ ತೊಡಗಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ 129 ಗ್ರಾಮಗಳ ಪೈಕಿ 112 ಗ್ರಾಮಗಳಿಗೆ ದೂರವಾಣಿ ಮೂಲಕ ಜಾಗೃತಿ ಹಾಗೂ ಇನ್ನಿತರೆ ಮಾಹಿತಿ ನೀಡಲಾಗಿದೆ.
ರಕ್ತ-ಪ್ಲಾಸ್ಮಾ ದಾನ ಶಿಬಿರ: ಹುಬ್ಬಳ್ಳಿ, ಕಲಬುರಗಿ, ಸವದತ್ತಿ, ರಾಯಚೂರು, ಬಳ್ಳಾರಿ, ಚಿತ್ತಾಪುರ, ಯಾದಗಿರಿ, ಶಿಗ್ಗಾವಿ ಸೇರಿದಂತೆ ಉತ್ತರದ ವಿವಿಧ ಕಡೆ ರಕ್ತ-ಪ್ಲಾಸ್ಮಾ ದಾನ ಶಿಬಿರ ಆಯೋಜಿಸಲಾಗಿದ್ದು, ಸಾವಿರಾರು ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಆನ್‌ಲೈನ್ ಮೂಲಕ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ, ಹಳ್ಳಿ-ಹಳ್ಳಿಗಳಿಗೆ ತೆರಳಿ ಸ್ವಯಂ ಸೇವಕರು ಕರಪತ್ರ ಹಂಚಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಭಿಕ್ಷುಕರಿಗೆ ಊಟ ನೀಡಿದ್ದರೆ, ಬಳ್ಳಾರಿಯಲ್ಲಿ ಐಸೋಲೇಷನ್‌ನಲ್ಲಿದ್ದವರಿಗೆ ಊಟ-ಔಷ ಧ, ಬಳ್ಳಾರಿಯ ವಿಮ್ಸ್‌ನಲ್ಲಿ ಆರೋಗ್ಯ ಭಾರತಿಯಿಂದ ರೋಗಿಗಳಿಗೆ ವಾರಕ್ಕೆ ಮೂರು ದಿನ ಊಟ ನೀಡಿದರೆ, ಬೀದರನ ಬಿಮ್ಸ್‌ನಲ್ಲಿ ಸೋಂಕಿತರ ಸಂಬಂ ಧಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಾಯಚೂರಿನಲ್ಲಿ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೆ ಚಹಾ-ಬಿಸ್ಕೆಟ್ ನೀಡಿಕೆ, ಬಳ್ಳಾರಿ, ಸಿರಗುಪ್ಪಾದಲ್ಲಿ 225 ಜನರಿಗೆ ಆಯುರ್ವೇದ ಔಷಧ ನೀಡಲಾಗಿದೆ. ಧಾರವಾಡದಲ್ಲಿ ಟೆಲಿ ಮೆಡಿಸನ್ ಸೇವೆ ಆರಂಭಿಸಿದ್ದರೆ, ಹುಬ್ಬಳ್ಳಿಯಲ್ಲಿ 40 ಜನ ಸ್ವಯಂ ಸೇವಕರು ಸರತಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 17 ಜನ ಸ್ವಯಂ ಸೇವಕರ ತಂಡ ರಚಿಸಲಾಗಿದೆ. ಹುಬ್ಬಳ್ಳಿ ಕೋವಿಡ್ ಕೇರ್ ಕೇಂದ್ರದಲ್ಲಿ ಅಗ್ನಿಹೋತ್ರ ಕೈಗೊಳ್ಳಲಾಗುತ್ತಿದೆ. ವಿವಿಧ ಕಡೆ ಲಸಿಕೆ ಕೇಂದ್ರಗಳಲ್ಲಿ ಸ್ವಯಂ ಸೇವಕರು ಸೇವೆ ಸಲ್ಲಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಳ್ಳಾಲದಲ್ಲಿ ಮಳೆ ಅವಾಂತರ: 20ಕ್ಕೂ ಅಧಿಕ ಮನೆಗಳು ಜಲಾವೃತ; ಮನೆಗೆ ಮರ ಬಿದ್ದು ಹಾನಿ
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ
ವಿಟ್ಲ: ಸಾರಡ್ಕ ಬಳಿ ಗುಡ್ಡ ಕುಸಿತ: ಕರ್ನಾಟಕ-ಕೇರಳ ಸಂಚಾರ ಬಂದ್
ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಯುತ್ತಿದೆ ಕುಪ್ಪೆಪದವು ರಿಕ್ಷಾ ಪಾರ್ಕ್
ವಿರೋಧದ ನಡುವೆ ಪ್ರೇಮ ವಿವಾಹ: ಗ್ರಾ,.ಪಂ ಸದಸ್ಯನ ಬರ್ಬರ ಕೊಲೆ
MUST WATCH
ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್
ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು
ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ
ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು
ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!
ಹೊಸ ಸೇರ್ಪಡೆ
ಹಿಂದೂ ದೇವತೆಗಳ ಫೋಟೋಗಳಿರುವ ಪೇಪರ್ ಪ್ಯಾಕ್ ನಲ್ಲಿ ಕೋಳಿ ಮಾಂಸ ಮಾರಾಟ, ವ್ಯಕ್ತಿ ಬಂಧನ
ಉಳ್ಳಾಲದಲ್ಲಿ ಮಳೆ ಅವಾಂತರ: 20ಕ್ಕೂ ಅಧಿಕ ಮನೆಗಳು ಜಲಾವೃತ; ಮನೆಗೆ ಮರ ಬಿದ್ದು ಹಾನಿ
ಭಾರತದಲ್ಲಿ 24ಗಂಟೆಯಲ್ಲಿ 13,086 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಹೆಚ್ಚಳ
ಅಂಡಾರು: ಈಡೇರಬೇಕಾದ ಬೇಡಿಕೆಗಳು ಹಲವಾರು
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ; ಕೊಚ್ಚಿ ಹೋದ ಬಾಲಕಿ: 3 ತಾಲೂಕಿನಲ್ಲಿ ರಜೆ ಘೋಷಣೆ