ಶಾಲಾ ದುರಸ್ತಿ; ಗ್ರಾಮಸ್ಥರ ಇಚ್ಛಾಶಕ್ತಿಯೇ ಆಸ್ತಿ

•ಶಿಕ್ಷಕರ ಕರೆಗೆ ಓಗೊಟ್ಟ ದ್ಯಾಮಾಪುರ•ವಂತಿಗೆಯಿಂದ ಸೋರುವ ಮಾಳಿಗೆ ರಿಪೇರಿ

Team Udayavani, Aug 20, 2019, 9:39 AM IST

huballi-tdy-3

ಕಲಘಟಗಿ: ದ್ಯಾಮಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಮೇಲ್ಛಾವಣಿಯನ್ನು ಗ್ರಾಮಸ್ಥರ ಸಹಾಯಧನದಿಂದ ರಿಪೇರಿ ಮಾಡುತ್ತಿರುವುದು.

ಕಲಘಟಗಿ: ನೆರೆ ಪರಿಹಾರಕ್ಕಾಗಿ ಪರಿತಪಿಸುತ್ತಿರುವ ಜನರೇ ಹೆಚ್ಚಿರುವ ಸಂದರ್ಭದಲ್ಲಿ ತಾಲೂಕಿನ ದ್ಯಾಮಾಪುರ ಗ್ರಾಮಸ್ಥರು ಶಿಕ್ಷಕ ವೃಂದದ ಕೋರಿಕೆಗೆ ಕಟ್ಟುಬಿದ್ದು ಸ್ವಂತ ವಂತಿಗೆಯಿಂದ ಸೋರುತ್ತಿರುವ ಸರ್ಕಾರಿ ಶಾಲಾ ಕೊಠಡಿ ರಿಪೇರಿಗೆ ಮುಂದಾಗಿ ಮಾದರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಸುರಿದ ನಿರಂತರ ಅಬ್ಬರದ ಮಳೆಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳಲ್ಲಿ ಒಂದು ಕೊಠಡಿ ಮೇಲ್ಛಾವಣಿಯ ತಗಡುಗಳು ಸಂಪೂರ್ಣ ಹಾಳಾಗಿ ಒಳಗಡೆ ನೀರಿನಿಂದಾವೃತವಾಗಿತ್ತು. ನೆರೆಯ ರಜೆ ಮುಗಿದು ಶಾಲೆ ಪುನಾರಂಭ ಗೊಂಡಾಗ ಮಕ್ಕಳನ್ನು ಅಲ್ಲಿ ಕೂಡ್ರಿಸಲಾಗದ ದುಸ್ಥಿತಿ ಇತ್ತು.

ಅದಾಗಲೇ ಬಂದ ಸ್ವಾತಂತ್ರ್ಯೋತ್ಸವಕ್ಕೆ ಪಾಲಕರನ್ನು ಹಾಗೂ ಗ್ರಾಮಸ್ಥರನ್ನೆಲ್ಲ ಆಮಂತ್ರಿಸಿದ ಮುಖ್ಯಾಧ್ಯಾಪಕಿ ಎಸ್‌.ಬಿ. ಗುಂಡೂರ ಹಾಗೂ ಹಿರಿಯ ಶಿಕ್ಷಕ ಎಸ್‌.ಬಿ. ಬಾರಕೇರ ಶಾಲಾ ಕಟ್ಟಡದ ದುಸ್ಥಿತಿಯ ಚಿತ್ರಣ ತೆರೆದಿಟ್ಟಿದ್ದಾರೆ. ಪರಿಹಾರಕ್ಕೆ ಮಾರ್ಗೋಪಾಯವನ್ನೂ ಹೇಳಿದ್ದಾರೆ. ಅದರ ಫಲಶೃತಿಯೇ ಇಂದು ಗ್ರಾಮಸ್ಥರೆಲ್ಲರೂ ಸರ್ಕಾರದ ನೆರವನ್ನು ನಿರೀಕ್ಷಿಸದೇ ತಮ್ಮ ಸ್ವಂತ ವಂತಿಗೆಯಿಂದ 50 ಸಾವಿರ ರೂ. ಸಂಗ್ರಹಿಸಿ ಕೊ ಠಡಿ ಮೇಲ್ಛಾವಣಿಗೆ ಹೊಸ ತಗಡು ಹಾಕಿ ದುರಸ್ತಿಗೊಳಿಸುತ್ತಿದ್ದಾರೆ.

ಅಧಿಕಾರಿಗಳ ಸ್ಪಂದನೆ ಅಷ್ಟಕ್ಕಷ್ಟೆ: 1ರಿಂದ 5ನೇ ತರಗತಿಯ ಶಾಲೆಯಲ್ಲಿ ಇರುವುದು ಇಬ್ಬರೇ ಶಿಕ್ಷಕರು. 36 ವಿದ್ಯಾರ್ಥಿಗಳಿದ್ದು, ಮೂರು ತರಗತಿ ಕೋಣೆಗಳಿವೆ. ಅದರಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಬಲಿಗಾಗಿ ಕಾಯುತ್ತಿರುವಂತಿದೆ. ಅಲ್ಲಿ ವರ್ಗವನ್ನು ನಡೆಸದಂತೆ ಗ್ರಾಮಸ್ಥರು ವರ್ಷಗಳ ಹಿಂದೆಯೇ ತಾಕೀತು ಮಾಡಿದ್ದಾರೆ. ಹಲವು ವರ್ಷಗಳಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವ ಯಾವುದೇ ಫಲಪ್ರದ ಕಾರ್ಯ ಜರುಗಿಲ್ಲ.

ಕೆಲ ದಿನಗಳ ಹಿಂದ ಸುರಿದ ಭಾರೀ ಮಳೆಯಿಂದಾಗಿ ಇದ್ದ ಇನ್ನೊಂದು ವರ್ಗದ ಕೋಣೆಯೂ ಸೋರುತ್ತಿರುವುದರಿಂದ ಜಲಾವೃತ್ತ ಗೊಂಡಿತ್ತು. ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿಯೇ ಪ್ರಸ್ತಾಪ ಮಾಡಿದ ಇಬ್ಬರೂ ಶಿಕ್ಷಕರು ಪ್ರಥಮದಲ್ಲಿ ತಮ್ಮ 2000 ರೂ. ದೇಣಿಗೆ ನೀಡಿದರು. ನಂತರ ಎಸ್‌ಡಿಎಂಸಿಯವರು ಹಾಗೂ ಗ್ರಾಮಸ್ಥರೆಲ್ಲರೂ ದೇಣಿಗೆ ಸಂಗ್ರಹಿಸಿ ಶಾಲಾ ಕೊಠಡಿ ದುರಸ್ತಿಗೆ ಮುಂದಾಗಿದ್ದಾರೆ.

ಮಾದರಿ ಶಿಕ್ಷಕರು: ಶಾಲೆಯ ಮುಖ್ಯಾಧ್ಯಾಪಕಿ ಎಸ್‌.ಬಿ. ಗುಂಡೂರ ಆದರ್ಶ ಶಿಕ್ಷಕಿಯಾಗಿದ್ದಾರೆ. ಪಾಲಕರ ಮನವೊಲಿಸಿ ಎರಡು ಸೆಟ್ ಬಣ್ಣದ ಟ್ರ್ಯಾಕ್‌ಶೂಟ್‌ನಲ್ಲಿ ಸರ್ಕಾರಿ ಶಾಲಾ ಮಕ್ಕಳು ಕಂಗೊಳಿಸುವಂತೆ ಮಾಡಿದ್ದಾರೆ. ಶಾಲೆ ಆವರಣವನ್ನು ಕೈತೋಟದಿಂದ ಪರಿಸರ ಪ್ರೇಮ ಹುಟ್ಟುವಂತೆ ಮಾಡಿದ್ದಾರೆ. ತಮ್ಮ ಸ್ವಂತ ಹಣ ವಿನಿಯೋಗಿಸಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಚಿಕ್ಕಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ಪ್ರೋತ್ಸಾಹ ನೀಡುತಿದ್ದಾರೆ.

ಶಾಲಾ ಮೇಲ್ಛಾವಣಿ ಸೋರುವಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲವಾಗಿತ್ತು. ತತ್‌ಕ್ಷಣ ಸರ್ಕಾರದಿಂದ ರಿಪೇರಿ ಅಸಾಧ್ಯದ ಮಾತು. ಆದ್ದರಿಂದ ಗ್ರಾಮದಲ್ಲಿ ಪಟ್ಟಿ ಹಾಕಿ ಸುಧಾರಣೆ ಮಾಡಬೇಕೆಂಬ ಶಿಕ್ಷಕಿ ಎಸ್‌.ಬಿ. ಗುಂಡೂರ ಅವರ ಅಭಿಲಾಷೆಗೆ, ನೆರವಾದ ಗ್ರಾಮಸ್ಥರಿಗೆ ಕೃತಜ್ಞರಾಗಿದ್ದೇವೆ. ಸರ್ಕಾರದ ಹಣ ಬಂದಾಗ ಮತ್ತೆ ಅಭಿವೃದ್ಧಿ ಕಾರ್ಯ ಮಾಡುತ್ತೇವೆ.•ವಸಂತ ಮಾಳಗಿ, ಎಸ್‌ಡಿಎಂಸಿ ಅಧ್ಯಕ್ಷ

•ಪ್ರಭಾಕರ ನಾಯಕ

ಟಾಪ್ ನ್ಯೂಸ್

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

8-

Hubli: ದಿಂಗಾಲೇಶ್ವರರು ಸ್ಪರ್ಧಿಸುತ್ತಿರುವ ಸಮಯ, ಜಾಗ ಸರಿಯಿಲ್ಲ: ಗುಣಧರನಂದಿ ಮಹಾರಾಜ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

L.S Polls: ನಮ್ಮದು ಧರ್ಮ ಯುದ್ಧ, ಧರ್ಮದ ಹಾದಿಯಲ್ಲೇ ಸಾಗುತ್ತೇವೆ: ದಿಂಗಾಲೇಶ್ವರ ಶ್ರೀ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.