Udayavni Special

ಸರ್ಕಾರದ ಪರಿಹಾರಕ್ಕೆ ಸೇವಾ ಸಿಂಧು ಕೊಕ್ಕೆ

ಪರಿಹಾರ ಘೋಷಿಸಿ ಸಿಎಸ್‌ಸಿ ಬಂದ್‌ ಮಾಡಿಸಿದ ಸರ್ಕಾರ | ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ ­

Team Udayavani, Jun 4, 2021, 6:51 PM IST

img-20210603-wa0014

ವರದಿ: ದೀಪಕ್‌ ಹೆಗಡೆ ಜಡ್ಡಿಮನೆ

ಹುಬ್ಬಳ್ಳಿ: ಸಂಕಷ್ಟದಲ್ಲಿ ಒಂದು ಕೈಯಿಂದ ಪರಿಹಾರ ನೀಡಿದ ಸರ್ಕಾರ ಇನ್ನೊಂದು ಕೈಯಿಂದ “ಲಾಕ್‌’ ಮಾಡಿದೆ. ಅರ್ಹರು ಪರಿಹಾರ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದ್ದರೆ, ಕಟ್ಟುನಿಟ್ಟಿನ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆನ್‌ ಲೈನ್‌ ಸೆಂಟರ್‌ಗಳು, ಸಿಎಸ್‌ಸಿ ಕೇಂದ್ರದ ಬಾಗಿಲುಗಳಿಗೆ ಬೀಗ ಹಾಕಿದೆ. ಹೀಗಾಗಿ ಫಲಾನುಭವಿಗಳು ಪರದಾಡುವಂತಾಗಿದೆ.

ಸರ್ಕಾರದ ಭಾಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳು ಯಶಸ್ವಿಯಾಗಲು ಕಾಮನ್‌ ಸರ್ವಿಸ್‌ ಸೆಂಟರ್‌ (ಸಿಎಸ್‌ಸಿ) ಸೇವಾ ಸಿಂಧು ಪಾತ್ರ ಪ್ರಮುಖವಾಗಿದೆ.

ಈಗ ಸಾಮಾನ್ಯ ಜನತೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದೆ. ಕರ್ಫ್ಯೂ ಜಾರಿಯಾದಾಗಿನಿಂದ ಎಲ್ಲ ಸಿಎಸ್‌ಸಿ, ಸೇವಾ ಸಿಂಧು ಕಚೇರಿಗಳು ಬಾಗಿಲು ಹಾಕುವಂತಾಗಿದೆ. ಸರ್ಕಾರ ಹಲವು ವರ್ಗಗಳಿಗೆ ಆರ್ಥಿಕ ಸಹಾಯ ಘೋಷಣೆ ಮಾಡಿದೆ. ಆದರೆ, ಅದನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಸೇವಾ ಸಿಂಧು ಕಚೇರಿಗಳನ್ನೇ ಬಂದ್‌ ಮಾಡಿಸಿದೆ. ಹೀಗಾದರೆ ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್‌ ತಲುಪಿಸುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಫಲಾನುಭವಿಗಳು ಯಾರ್ಯಾರು?: ಮೊದಲ ಹಂತದ ಪ್ಯಾಕೇಜ್‌ನಲ್ಲಿ ಕಲಾವಿದರು, ಟ್ಯಾಕ್ಸಿ ಹಾಗೂ ಆಟೋ ಡ್ರೈವರ್‌, ಕಟ್ಟಡ ಕಾರ್ಮಿಕರು ಫಲಾನುಭವಿಗಳಾಗಿದ್ದಾರೆ. ತಲಾ ಮೂರು ಸಾವಿರ ರೂ. ಸಹಾಯಧನ ನೀಡುತ್ತಿದ್ದು, ಅರ್ಜಿ ಸಲ್ಲಿಕೆಗೆ ಜೂ.5 ಕೊನೆ ದಿನ. ಕಲಾವಿದರು, ಟ್ಯಾಕ್ಸಿ ಹಾಗೂ ಆಟೋ ಡ್ರೈವರ್‌ ಗಳು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯ. ಆದರೆ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರ ಖಾತೆಗೆ ಸಹಾಯಧನ ನೇರವಾಗಿ ಜಮಾ ಆಗಲಿದೆ. ಅವರು ಅರ್ಜಿ ಸಲ್ಲಿಸಬೇಕೆಂದಿಲ್ಲ. ಆದರೆ ಹೊಸದಾಗಿ ನೋಂದಣಿ ಮಾಡಿಸಲು, ರಿನಿವಲ್‌ ಮಾಡಲು ಆನ್‌ಲೈನ್‌ ಸೆಂಟರ್‌ಗಳತ್ತ ಮುಖ ಮಾಡಲೇಬೇಕಿದೆ. ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯವಿಲ್ಲ ಹೀಗಾಗಿ ಸರ್ಕಾರ ಸೇವಾಸಿಂಧು ಕೇಂದ್ರ ಆರಂಭಕ್ಕೆ ಅನುಮತಿ ನೀಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಸರ್ಕಾರದ ಇಬ್ಬಗೆ ನೀತಿ: ಎರಡು ವರ್ಷಗಳ ಹಿಂದೆ ಬ್ಯಾಡ್ಜ್ ನಿಯಮ ಸಡಿಲಿಕೆ ಮಾಡಿರುವ ಸಾರಿಗೆ ಇಲಾಖೆ, ಲೈಟ್‌ ಮೋಟಾರ್‌ ವೆಹಿಕಲ್‌ (ಎಲ್‌ಎಂವಿ) ಲೈಸೆನ್ಸ್‌ ಇದ್ದರೆ ವಾಣಿಜ್ಯ ವಾಹನಗಳನ್ನು ಓಡಿಸಬಹುದು ಎಂದು ನಿಯಮ ಜಾರಿಗೊಳಿಸಿತ್ತು. ಹೀಗಾಗಿ ಬಹುತೇಕರಲ್ಲಿ ಬ್ಯಾಡ್ಜ್ ಇಲ್ಲ. ಆದರೆ, ರಾಜ್ಯ ಸರ್ಕಾರ ಟ್ಯಾಕ್ಸಿ ಹಾಗೂ ಆಟೋ ಡ್ರೈವರ್‌ ಗಳಿಗೆ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿದ್ದು, ಅರ್ಜಿ ಸಲ್ಲಿಸುವಾಗ ಬ್ಯಾಡ್ಜ್ ಎಲ್‌ ಎಂವಿ(ಕ್ಯಾಬ್‌) ಎಂದು ಇಲ್ಲದ ಲೈಸೆನ್ಸ್‌ಗಳನ್ನು ತಿರಸ್ಕರಿಸಿದೆ.

ಟಾಪ್ ನ್ಯೂಸ್

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ದೆಹಲಿಗೆ ಹಾರಿದ ವಿಜಯೇಂದ್ರ: ಸಿಎಂ ಭೇಟಿಯಾದ ಭೂಪೇಂದ್ರ  ಯಾದವ್!’

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ಹೆದ್ದಾರಿ ಗುಣಮಟ್ಟ: ವೈಫ‌ಲ್ಯಕ್ಕೆ ಇನ್ನು  ಅಧಿಕಾರಿಗಳೂ ಹೊಣೆ

ಹೆದ್ದಾರಿ ಗುಣಮಟ್ಟ: ವೈಫ‌ಲ್ಯಕ್ಕೆ ಇನ್ನು  ಅಧಿಕಾರಿಗಳೂ ಹೊಣೆ

ಮಳೆಗಾಲದಲ್ಲಿ ಕರೆಂಟ್‌ ಉತ್ಪಾದಿಸುವ ಕೃಷಿಕ

ಮಳೆಗಾಲದಲ್ಲಿ ಕರೆಂಟ್‌ ಉತ್ಪಾದಿಸುವ ಕೃಷಿಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ದ.ಕ.: ಜು. 1ರಿಂದ ಸೀಮಿತ ಖಾಸಗಿ, ಸಿಟಿ ಬಸ್‌ ಸಂಚಾರ

ದ.ಕ.: ಜು. 1ರಿಂದ ಸೀಮಿತ ಖಾಸಗಿ, ಸಿಟಿ ಬಸ್‌ ಸಂಚಾರ

ಉಡುಪಿಯಲ್ಲಿ  ಬೆಳಗ್ಗೆ ಖರೀದಿಗೆ ಅವಕಾಶ

ಉಡುಪಿಯಲ್ಲಿ  ಬೆಳಗ್ಗೆ ಖರೀದಿಗೆ ಅವಕಾಶ

ತಾಳಿಪಾಡಿ ತೋಡಿನಲ್ಲಿ ಹೂಳು; ನೆರೆ ಭೀತಿ

ತಾಳಿಪಾಡಿ ತೋಡಿನಲ್ಲಿ ಹೂಳು; ನೆರೆ ಭೀತಿ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ದೆಹಲಿಗೆ ಹಾರಿದ ವಿಜಯೇಂದ್ರ: ಸಿಎಂ ಭೇಟಿಯಾದ ಭೂಪೇಂದ್ರ  ಯಾದವ್!’

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.