Udayavni Special

ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಆಚರಣೆ

 ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ | ರುದ್ರಾಭಿಷೇಕ, ಬಿಲ್ವಾರ್ಚನೆ | ಕಂಡುಬಾರದ ಹೆಚ್ಚಿನ ಜನದಟ್ಟಣೆ

Team Udayavani, Mar 12, 2021, 9:01 PM IST

Sidddarod

ಹುಬ್ಬಳ್ಳಿ: ನಗರದ ವಿವಿಧೆಡೆ ಮಹಾಶಿವರಾತ್ರಿ ಹಬ್ಬವನ್ನು ಜನರು ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ  ಆಚರಿಸಿದರು.

ಶಿವದೇವಾಯಲಗಳಲ್ಲಿ ವಿಶೇಷ ಪೂಜೆ ನೆರವೇರಿತು. ಆದರೆ ಈ ಬಾರಿ ಬಹುತೇಕ ಶಿವನ ದೇವಾಲಯಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರಲಿಲ್ಲ. ಬೆಳಗಿನ ಜಾವ 4 ಗಂಟೆಯಿಂದಲೇ ಜನರು ನಗರದಲ್ಲಿನ ಶಿವನ ದೇವಸ್ಥಾನಗಳಿಗೆ ತೆರಳಿ ಭಕ್ತಿಯಿಂದ ಶಿವಲಿಂಗಕ್ಕೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿಂದ  ಹಬ್ಬ ಆಚರಿಸಿದರು. ಕೋವಿಡ್‌-19 ಹಿನ್ನೆಲೆಯಲ್ಲಿ ಕೆಲ ದೇವಸ್ಥಾನದ ಆಡಳಿತ ಮಂಡಳಿಗಳು ಮುಂಚಿತವಾಗಿಯೇ ಮೂಲ ಶಿವಲಿಂಗಕ್ಕೆ ಸಾರ್ವಜನಿಕವಾಗಿ ಅಭಿಷೇಕ, ಪೂಜೆ-ಪುನಸ್ಕಾರಗಳು ಇರುವುದಿಲ್ಲ ಎಂದು ತಿಳಿಸಿದ್ದರಿಂದ ಜನದಟ್ಟಣೆ ಕಡಿಮೆ ಎನ್ನಲಾಗಿದೆ.

ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ಜನರು ಶಿವನ ದರ್ಶನ ಪಡೆದರು. ಮೂಲ ಲಿಂಗಕ್ಕೆ ಯಾವುದೇ ಅಲಂಕಾರವಿರಲಿಲ್ಲ. ಭಕ್ತರಿಗೆ ಒಳಗಡೆ ಪ್ರವೇಶ ನಿರ್ಬಂಧಿ  ಸಲಾಗಿತ್ತು. ಅಭಿಷೇಕ ಹಾಗೂ ಪೂಜೆಗಾಗಿ ಹೊರಾಂಗಣದಲ್ಲೇ ಶಿವಲಿಂಗ ವ್ಯವಸ್ಥೆ ಮಾಡಲಾಗಿತ್ತು. ಜನರು ಅದೇ ಶಿವಲಿಂಗಕ್ಕೆ ಅಭಿಷೇಕ ನೆರವೇರಿಸಿದರು.

ಪಾರಸ್ವಾಡಿ ಶ್ರೀ ಕಾಶಿ ವಿಶ್ವನಾಥ ಮಂದಿರದಲ್ಲಿ ಶಿವರಾತ್ರಿ ದಿನದಂದು ದರ್ಶನ ಪಡೆಯಲು ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ಆದರೆ ಈ ಬಾರಿ ಅಷ್ಟೊಂದು ದಟ್ಟಣೆ ಇರಲಿಲ್ಲ. ವಿಶ್ವನಾಥನಿಗೆ ಹೂವು ಹಾಗೂ ಪತ್ರೆಯ ಅಲಂಕಾರ ಆಕರ್ಷಣೀಯವಾಗಿತ್ತು. ಅದ್ಧೂರಿತನ ಇರಲಿಲ್ಲ. ಶಿವಪುರ ಕಾಲೋನಿಯ ಶಿವ ಮಂದಿರದಲ್ಲಿ ಒಂದಿಷ್ಟು ಜನಜಂಗುಳಿ ಇತ್ತು. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಕೋವಿಡ್‌-19 ಹಿನ್ನೆಲೆಯಲ್ಲಿ ಮನೆಯಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡಿಕೊಳ್ಳುವಂತೆ ಟ್ರಸ್ಟಿಗಳು ಸಲಹೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಆಗಮಿಸಿ ಶಿವನ ದರ್ಶನ ಪಡೆದರು.

ಶ್ರೀ ಸಿದ್ಧಾರೂಢ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.ಇಲ್ಲಿಯೂ ಒಳಗಿನ ಶಿವಲಿಂಗಕ್ಕೆ ಅಭಿಷೇಕಕ್ಕೆ ಅವಕಾಶ ನೀಡಿರಲಿಲ್ಲ. ಹೊರಗಡೆಯೇ ವ್ಯವಸ್ಥೆ ಮಾಡಲಾಗಿತ್ತು.ಬೆಂಗೇರಿಯ ಶಿವ ಮಂದಿರದಲ್ಲಿ ಜನರಿಗೆ ಒಳಗಡೆ ಅಭಿಷೇಕಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಮೂರುಸಾವಿರ ಮಠ: ಮೂರುಸಾವಿರ ಮಠದ ಸದ್ಭಕ್ತರಿಂದ ಶಿವರಾತ್ರಿ ಉತ್ಸವದ ನಿಮಿತ್ತ ಭಕ್ತರಿಂದ ಜಾಗರಣೆ ಕಾರ್ಯಕ್ರಮ ನಡೆಯಿತು. ನಗರದ ವಿವಿಧ ದೇವಸ್ಥಾನಗಳ ಆವರಣದಲ್ಲಿ ಶಿವರಾತ್ರಿ ಉತ್ಸವದ ನಿಮಿತ್ತ ಭಜನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಇಂಡಿ ಪಂಪ್‌ ವೃತ್ತ ಬಳಿಯ ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಅಶೋಕ ನಗರದ ಶಿವದೇವಸ್ಥಾನ, ಅಧ್ಯಾಪಕ ನಗರದಲ್ಲಿನ  ವಿಶ್ವನಾಥ ಕಲ್ಯಾಣಮಂಟಪ, ಬಮ್ಮಾಪುರ ಓಣಿಯ ಈಶ್ವರ ದೇವಸ್ಥಾನ, ಬೂಸಪೇಟೆ ಪರ್ವತಮಲ್ಲಯ್ಯ ದೇವಸ್ಥಾನ, ಘಂಟಿಕೇರಿ ಬಸವಣ್ಣ ದೇವಸ್ಥಾನ, ಗೋಕುಲ ರಸ್ತೆಯ ರವಿ ನಗರದ ಈಶ್ವರ ದೇವಸ್ಥಾನ, ನವನಗರದ ಈಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಶಿವರಾತ್ರಿ ಹಬ್ಬ ಆಚರಿಸಲಾಯಿತು.

ಟಾಪ್ ನ್ಯೂಸ್

fgdgfd

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಕೋವಿಡ್‍ಗೆ ಬಲಿ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಬಾಲಿವುಡ್‌ ನಟಿ ಅನುಷಾ ದಾಂಡೇಕರ್ – ಕರಣ್‌ ಕುಂದ್ರಾ ಬಾಂಧವ್ಯದಲ್ಲಿ ಬಿರುಕು

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

ಕೋವಿಡ್ ಹಿನ್ನೆಲೆ ರಾಹುಲ್‌ ಶಸ್ತ್ರ ತ್ಯಾಗ : ಚುನಾವಣಾ ರ‍್ಯಾಲಿ ರದ್ದುಗೊಳಿಸಿದ ಕೈ ನಾಯಕ

dthrtre

ಕೋವಿಡ್ ಪ್ರಕರಣಗಳ ಉಲ್ಬಣ : ತಮಿಳುನಾಡು-ಬಿಹಾರಿನಲ್ಲಿ ರಾತ್ರಿ ಕರ್ಫ್ಯೂ ಜಾರಿ

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ್ಗಹಹದಸ಻

ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ

ಷ್ಹತಗ್

ರೋಗ ನಿಯಂತ್ರಣಕ್ಕೆ ಸಹಕರಿಸಿ

17klr03

ಅಗ್ನಿಶಾಮಕ ದಳದಿಂದ 24×7 ಸೇವೆ

Deputy Superintendent’s Office seal down

ಉಪನೋಂದಣಾಧಿಕಾರಿ ಕಚೇರಿ ಸೀಲ್‌ ಡೌನ್‌

್ಹಗ್ದ್ದ

ಪರಿಸರ ಸಂರಕ್ಷಣೆಗೆ ಮುಂದಾಗಿ : ವೆಂಕನಗೌಡ

MUST WATCH

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

ಹೊಸ ಸೇರ್ಪಡೆ

fgdgfd

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ಮಾಪಕ ಅರ್ಜುನ್ ಮಂಜುನಾಥ್ ಕೋವಿಡ್‍ಗೆ ಬಲಿ

Hema Das 11

ಭಾರತದ ಕೀರ್ತಿ ಪತಾಕೆ ಹಾರಿಸಿದ ಹೆಮ್ಮೆಯ ಹಿಮಾದಾಸ್‌

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

ಎಟಿಎಂ ಮೇಲೆ ಹ್ಯಾಕರ್ಸ್ಗಳ ಕಳ್ಳಗಣ್ಣು : ಬ್ಯಾಂಕುಗಳಿಗೆ ಕೇಂದ್ರ ಎಚ್ಚರಿಕೆ

fcnbghfdghf

ಕೋವಿಡ್ ಎಫೆಕ್ಟ್ : 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದ ತಮಿಳುನಾಡು ಸರ್ಕಾರ

ಜ್ಗಹಹದಸ಻

ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.