ಸಿದ್ದರಾಮಯ್ಯನವರೇ ನಿಮ್ಹಾನ್ಸ್‌ಗೆ ದಾಖಲಾಗಲಿ

Team Udayavani, May 16, 2019, 1:14 PM IST

ಹುಬ್ಬಳ್ಳಿ: ಕೇವಲ 78 ಸ್ಥಾನ ಪಡೆದುಕೊಂಡು ನಾನೇ ಸಿಎಂ ಅಂತಿರೋ ಸಿದ್ದರಾಮಯ್ಯನಿಗೆ ಮೆದುಳು ಸರಿ ಇಲ್ಲ. ಅವರೇ ನಿಮ್ಹಾನ್ಸ್‌ ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಇಂಗಳಗಿಯಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಅಧಿಕಾರ ಮಾತ್ರ ಲೆಕ್ಕ, ಅವರಿಗೆ ಪಕ್ಷಗಳು ಲೆಕ್ಕಕ್ಕಿಲ್ಲ. ಸಿದ್ದರಾಮಯ್ಯನಿಗೆ ಮೆದುಳು ಇಲ್ಲ, ನಾಲಿಗೆಯೂ ಇಲ್ಲ. ಅವರೇ ಹೋಗಿ ನಿಮ್ಹಾನ್ಸ್‌ ಸೇರಿಕೊಳ್ಳಲಿ ಎಂದರು.

ಬರದ ಚಿಂತೆ ಇಲ್ಲ: ಉಪಚುನಾವಣೆ ಇಡೀ ರಾಜ್ಯದಲ್ಲಿರುವ ಬರವನ್ನು ಮುಚ್ಚಿ ಹಾಕಿದೆ. ಧಾರವಾಡ ಅಷ್ಟೇ ಅಲ್ಲದೇ ಇಡೀ ರಾಜ್ಯದಲ್ಲಿಯೇ ಬರ ಇದ್ದರೂ ಒಬ್ಬರು ಕೂಡಾ ಕ್ಯಾರೇ ಎನ್ನುತ್ತಿಲ್ಲ. ಜಿಲ್ಲೆಗೊಬ್ಬರು ಉಸ್ತುವಾರಿ ಸಚಿವರನ್ನು ಮಾಡಿದ್ದರೂ ನಮ್ಮ ಜಿಲ್ಲೆ ಯಾವುದು ಎಂಬುದನ್ನೇ ಮರೆತು ಹೋಗಿದ್ದಾರೆ. ಅಧಿಕಾರಿಗಳಿಗೆ ಸಚಿವರಿಗೆ ಯಾರೊಬ್ಬರಿಗೂ ಬರದ ಚಿಂತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಮೇಶ ಜಾರಕಿಹೊಳಿ ಪಕ್ಷ ಬಿಡುತ್ತೇನೆ ಎಂದು ಹೇಳಿದ್ದು, ಅವರ ಹೇಳಿಕೆಯನ್ನೇ ನಾನು ಪುನರಾವರ್ತಿಸಿದ್ದೇನೆ ಎಂದರು.

ಡಿಕೆಶಿಗೆ ವಿಶ್‌: ಕುಂದಗೋಳ ತಾಲೂಕಿನ ಕುಬಿಹಾಳದಲ್ಲಿ ಮಾಧ್ಯಮಗಳ ಮೂಲಕ ಡಿ.ಕೆ. ಶಿವಕುಮಾರ ಅವರ ಜನ್ಮದಿನಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಶುಭ ಕೋರಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ