ಅಭಿವೃದ್ಧಿ ವಿಚಾರದಲ್ಲಿ ಆಪ್‌ನ ಅಗ್ರೆಸಿವ್‌ ತಗ್ಗಿಲ್ಲ, ತಗ್ಗುವುದೂ ಇಲ


Team Udayavani, Aug 28, 2017, 5:08 PM IST

Manish-Sisodia-600.jpg

ಹುಬ್ಬಳ್ಳಿ: ‘ಆಮ್‌ ಆದ್ಮಿ ಪಕ್ಷದ ಸಮಾಜಮುಖೀ ಚಿಂತನೆಯ ವೇಗ ತಗ್ಗಿಲ್ಲ. ಅಭಿವೃದ್ಧಿ ವಿಚಾರದಲ್ಲಿ ನಮ್ಮ ಅಗ್ರೆಸಿವ್‌ ನೀತಿ ಮುಂದುವರಿದಿದೆ. ಅಭಿವೃದ್ಧಿಯ ಸೂಕ್ಷ್ಮತೆ ಅರಿಯದವರಿಂದ ಆಪ್‌ ಸರಕಾರದ ವಿರುದ್ಧ ಇಲ್ಲಸಲ್ಲದ ಗೂಬೆ ಕೂರಿಸುವ ಕಾರ್ಯ ನಡೆಯುತ್ತಿದೆ. ಆದರೆ, ದಿಲ್ಲಿಯಲ್ಲಿ ಉತ್ತಮ ಭವಿಷ್ಯದ ದೃಷ್ಟಿಯಿಂದ ಭದ್ರ ಬುನಾದಿ ಹಾಕುವುದರಲ್ಲಿ ಆಪ್‌ ಕಾರ್ಯೋನ್ಮುಖವಾಗಿದೆ.’ – ಹೀಗೆ, ಎಎಪಿ ಸಾಧನೆ ಹಾಗೂ ದಿಲ್ಲಿ ಸರಕಾರದ ಕಾರ್ಯ ವಿಧಾನವನ್ನು ವ್ಯಾಖ್ಯಾನಿಸಿದವರು ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಶ್‌ ಸಿಸೋಡಿಯಾ.

ಆಪ್‌ ಸರಕಾರದ ಅಭಿವೃದ್ಧಿ ಚಿಂತನೆ, ರೈತಪರ ಕಾಳಜಿ, ಎಎಪಿ ಮುಂದಿನ ಹೆಜ್ಜೆ, ಪ್ರಧಾನಿ ನರೇಂದ್ರ ಮೋದಿ ಸರಕಾರದ ನಡೆ, ದೇಶಪಾಂಡೆ ಪ್ರತಿಷ್ಠಾನದ ಸಾಧನೆ ಕುರಿತಾಗಿ ಸಿಸೋಡಿಯಾ ಅವರು ‘ಉದಯವಾಣಿ’ಯೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ನೈಜ ಅಭಿವೃದ್ಧಿಗೆ ಒತ್ತು: ಕೇವಲ ಕಟ್ಟಡಗಳನ್ನು ಕಟ್ಟಿ ಅದೇ ನೈಜ ಅಭಿವೃದ್ಧಿ ಎಂದು ಮುಗಿಲೆತ್ತರಕ್ಕೆ ಬಿಂಬಿಸುವುದು ನಮ್ಮಿಂದಾಗದು. ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಸೃಷ್ಟಿ, ರೈತರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕೆ ನಮ್ಮ ಮೊದಲಾದ್ಯತೆ. ದಿಲ್ಲಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಹೆಜ್ಜೆ ಇರಿಸಲಾಗಿದೆ. ಮುಖ್ಯವಾಗಿ ಬಡ-ಮಧ್ಯಮ ವರ್ಗಗಳವರಿಗೆ ಅತ್ಯುತ್ತಮ ಹಾಗೂ ಕೈಗೆಟಕುವ ದರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ದೊರೆಯಬೇಕೆಂದು ಹಲವು ಸುಧಾರಣೆ, ಪ್ರಯೋಗ ಹಾಗೂ ಹೊಸತನಗಳಿಗೆ ನಾಂದಿ ಹಾಡಲಾಗಿದೆ.

ಆಮ್‌ ಆದ್ಮಿಯ ವೇಗ ತಗ್ಗಿದೆ ಎಂಬುದು ಕೆಲವರ ಆರೋಪ ಇರಬಹುದು. ಆದರೆ, ಅದು ವಾಸ್ತವ ಅಲ್ಲ. ನಿರೀಕ್ಷೆಯಂತೆ ದಿಲ್ಲಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಅಭಿವೃದ್ಧಿ ಹಾಗೂ ಚಿಂತನೆಯಲ್ಲಿ ನಾವೆಂದೂ ರಾಜಿ ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದೂ ಇಲ್ಲ.

ರೈತರು ಸತ್ತರೆ ಜಗತ್ತು ಬದುಕೀತೆ?: ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವುದಕ್ಕೆ ಮೊದಲಾದ್ಯತೆ ದೊರೆಯಬೇಕಿದೆ. ರೈತರು ಆತ್ಮಹತ್ಯೆ ಮಾಡುತ್ತ ಸಾಗಿದರೆ ಕೃಷಿ ಉಳಿಯುವುದಾದರೂ ಹೇಗೆ? ಕೃಷಿ ಇಲ್ಲವೆಂದಾದರೆ ದಿಲ್ಲಿ ಸೇರಿ ಇನ್ನಿತರ ನಗರಗಳು, ಜಗತ್ತು ಬದುಕುಳಿಯಲು ಸಾಧ್ಯವೇ? ಈ ಸತ್ಯವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ. ಕೃಷಿ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ದಿಲ್ಲಿಯಲ್ಲಿ ರೈತರಿಗೆ ದೇಶದಲ್ಲೇ ಅತಿ ಹೆಚ್ಚು ಪರಿಹಾರ ನೀಡಿದ್ದೇವೆ. ಅದೇ ರೀತಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪಡೆದ ಭೂ ಸ್ವಾಧೀನಕ್ಕೆ ಹೆಚ್ಚಿನ ಪರಿಹಾರ ನೀಡಿದ್ದೇವೆ.

ದೇಶಪಾಂಡೆ ಪ್ರತಿಷ್ಠಾನ ಕರ್ನಾಟಕದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳು ಮಾದರಿಯಾಗಿವೆ. ಕೃಷಿ ವಿಚಾರದಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನಲ್ಲಿ ಕೈಗೊಂಡ ಕೃಷಿ ಹೊಂಡಗಳ ಅಭಿಯಾನ ನಿಜಕ್ಕೂ ಅದ್ಭುತ ಕೆಲಸ. ರೈತರಿಗೆ ಮಹತ್ವದ ಸಹಕಾರಿ ಯೋಜನೆ ಇದು. ದೇಶಪಾಂಡೆ ಪ್ರತಿಷ್ಠಾನದ ಕೌಶಲ ಅಭಿವೃದ್ಧಿ, ನವೋದ್ಯಮ, ಶಿಕ್ಷಣ, ಆರೋಗ್ಯ ಇನ್ನಿತರ ಕ್ಷೇತ್ರಗಳ ಸುಧಾರಣೆಯ ಪ್ರಯೋಗ ಹಾಗೂ ಯಶೋಗಾಥೆಗಳನ್ನು ದಿಲ್ಲಿಯಲ್ಲಿ ಅಳವಡಿಸಲು ನಾವು ಉತ್ಸುಕರಾಗಿದ್ದೇವೆ. ಅದರ ಅಂಗವಾಗಿಯೇ ಇದು ನನ್ನ ಅಧ್ಯಯನ ಪ್ರವಾಸವಾಗಿದೆ.

ಯಾವುದೇ ಅನುಮಾನ ಬೇಡ. ಜನರ ಮಧ್ಯದಲ್ಲಿದ್ದು, ಅಭಿವೃದ್ಧಿ-ಸುಧಾರಣೆಯ ವೇಗ ತಗ್ಗದಂತೆ, ಸಾಮಾನ್ಯ ಜನರೊಟ್ಟಿಗೆ ಕಾರ್ಯ ನಿರ್ವಹಿಸುವ ನಮ್ಮ ಉದ್ದೇಶ ಖಂಡಿತವಾಗಿಯೂ ಮುಂದುವರಿಯಲಿದೆ. ‘ಪಂಜಾಬ್‌ ವಿಧಾನಸಭೆ ಹಾಗೂ ದಿಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಮತದಾರರು ನಮ್ಮನ್ನು ಸೋಲಿಸಿಲ್ಲ ಬದಲಾಗಿ ಎಲೆಕ್ಟ್ರಾನಿಕ್‌ ಮತ ಯಂತ್ರಗಳು (ಇವಿಎಂ)ನಮ್ಮನ್ನು ಸೋಲಿಸಿವೆ’ ಎಂಬುದು ಸಿಸೋಡಿಯಾ ಅನಿಸಿಕೆ.

ಮೋದಿಯದ್ದು ಒಡೆದಾಳುವ ನೀತಿ..
ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದ ಬಗ್ಗೆ ಹೇಳುವುದಕ್ಕೇನಿದೆ? ಅವರದ್ದೇನಿದ್ದರೂ ಒಡೆದಾಳುವ ನೀತಿ. ಜನರಿಗೆ ಗೊತ್ತಾಗದ ರೀತಿಯಲ್ಲಿ ಇದನ್ನು ಸಾಕಾರಗೊಳಿಸುತ್ತ ಮೋದಿಯವರು ಮುನ್ನಡೆದಿದ್ದಾರೆ. ಹಲವು ವಿಚಾರಗಳಲ್ಲಿ ದೇಶದಲ್ಲಿ ಗೊಂದಲ ಸೃಷ್ಟಿಸುವ, ಅದರಲ್ಲಿಯೇ ಸಮಾಜ ಹಾಗೂ ಭಾವನೆಗಳನ್ನು ಒಡೆಯುವ ಮೂಲಕ ನಮ್ಮದೇನಿದ್ದರೂ ಯಶಸ್ವಿ ಆಡಳಿತದ ಸರಕಾರವೆಂದು ಬಿಂಬಿಸುತ್ತ ಸಾಗಿದ್ದಾರೆ ಎಂದು ಮನೀಶ್‌ ಸಿಸೋಡಿಯಾ ಹೇಳಿದರು.

– ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Kichha Sudeep met dk shivakumar

ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?

air india

ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್

NIA

ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ

1-sadsdasd

ಅದಾನಿ ಗ್ರೂಪ್ ವಿಚಾರದಲ್ಲಿ ಸಂಸತ್ ಉಭಯ ಸದನದಲ್ಲಿ ಕೋಲಾಹಲ

1-saddasd

ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kichha Sudeep met dk shivakumar

ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?

4-belagavi

ನಿನ್ನೆ‌ ರಾತ್ರಿಯೇ ಅಮಿತ್ ಶಾ ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ ರಮೇಶ ಜಾರಕಿಹೊಳಿ

thumb-2

ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಂ ರಾಜೀನಾಮೆ ವದಂತಿ

tdy-40

ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ

TDY-26

ಟ್ರಾಫಿಕ್‌ ದಂಡ ಪಾವತಿಗೆ ಭರ್ಜರಿ ರಿಯಾಯಿತಿ

MUST WATCH

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

ಹೊಸ ಸೇರ್ಪಡೆ

Kichha Sudeep met dk shivakumar

ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?

air india

ಏರ್ ಇಂಡಿಯಾ ವಿಮಾನದ ಇಂಜಿನ್ ನಲ್ಲಿ ಬೆಂಕಿ; ತುರ್ತು ಲ್ಯಾಂಡಿಂಗ್

ಬೈಂದೂರು:ಒತ್ತಿನೆಣೆ ಅಪಾಯಕಾರಿ ತಿರುವಿಗೆ ಮುಕ್ತಿ ಎಂದು?

ಬೈಂದೂರು:ಒತ್ತಿನೆಣೆ ಅಪಾಯಕಾರಿ ತಿರುವಿಗೆ ಮುಕ್ತಿ ಎಂದು?

NIA

ಮುಂಬಯಿಯಲ್ಲಿ ತಾಲಿಬಾನ್ ದಾಳಿ: ಎನ್ ಐಎಗೆ ಬೆದರಿಕೆ ಮೇಲ್

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

ಬೆಳ್ತಂಗಡಿ; ಜಿಲ್ಲೆಯಲ್ಲಿಯೇ ಪ್ರಥಮ ಮಲಿನ ನೀರು ಶುದ್ಧೀಕರಣ ಘಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.